ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಸಂಗೀತ ಕ್ಷೇತ್ರದಲ್ಲಿಯೂ ಗಣನೀಯ ಬದಲಾವಣೆಗಳಾಗಿವೆ. ಶಾಸ್ತ್ರೀಯ ಸಂಗೀತಗಾರರ ಮತ್ತು ಸಂಗೀತ ಪ್ರಿಯರ ಸಂಖ್ಯೆ ಹೆಚ್ಚಿದೆ ಎಂದು ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದ ಗುರುಪರಂಪರಾ ಸಂಗೀತ ಸಭಾವನ್ನು ಕುಂದಾಪುರದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು. ಕುಂದಾಪುರದಲ್ಲಿ ಶಾಸ್ತ್ರೀಯ ಸಂಗೀತದ ಪ್ರಜ್ಞೆ ತಡವಾಗಿ ಆರಂಭವಾಯಿತು. ’ಸಂಗೀತ ಭಾರತಿ’ ಸಂಸ್ಥೆಯ ಆರಂಭ ಮತ್ತು ಅದರ ಚಟುವಟಿಕೆಗಳು ಸೀಮಿತ ವರ್ಗವನ್ನು ಸೆಳೆದಿದೆ. ಸುದೀರ್ಘ ಹಿನ್ನೆಲೆಯ ಸನಾತನ ಕಲೆಯನ್ನು ನಮ್ಮ ಕಾಲದಲ್ಲಿ ಮುನ್ನಡೆಸಲು ಮತ್ತು ಮುಂದಿನ ತಲೆಮಾರಿಗೆ ದಾಟಿಸಲು ಅಷ್ಟು ಸಾಲದು. ಸಂಗೀತದ ಶಿಕ್ಷಣ, ಮತ್ತು ಕಾರ್ಯಕ್ರಮಗಳ ಆವರಣ ಇನ್ನಷ್ಟು ವಿಸ್ತಾರವಾಗಬೇಕು. ನಿರುಪಯುಕ್ತ ಮತ್ತು ಹಾನಿಕಾರಕ ಉಪಕರಣಗಳೊಂದಿಗೆ ಕಾಲಹರಣ ಮಾಡುವ ಯುವ ಪೀಳಿಗೆಯನ್ನು ಅದರಲ್ಲಿ ತೊಡಗಿಸಬೇಕು. ಕಲಿತು ವಿದ್ವಾಂಸರಾಗದಿದ್ದರೂ ಉತ್ತಮ ಶ್ರೋತೃಗಳಾಗಲು ಅಗತ್ಯವಿರುವ ಹಿನ್ನೆಲೆಯನ್ನು ಅವರು ಗಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಇಂದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ, ಬೈಂದೂರು: ಸಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿದ್ದು ಈ ಭಾರಿ ಅಧಿಕ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದರು. ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ಕೋಮುವಾದ ಪಕ್ಷವನ್ನು ಓಡಿಸಲು ಎರಡು ಪಕ್ಷಗಳು ಒಟ್ಟಾಗುವುದು ಅಗತ್ಯ. ಉಭಯ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಬೆಂಬಲಿಗರು ಸಂಪೂರ್ಣವಾಗಿ ಜೆಡಿಎಸ್ ಅಭ್ಯರ್ಥಿಯನ್ನೆ ಬೆಂಬಲಿಸಲಿದ್ದಾರೆ ಎಂದರು. ಮರಳು ಸಮಸ್ಯೆ ವಿರುದ್ಧ ಪ್ರತಿಭಟಿಸುವವರು ಯಾಕೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿಲ್ಲ. ಉಡುಪಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಚುನಾವಣಾ ರಾಜಕೀಯವೇ ಹೊರತು ಮತ್ತೇನಲ್ಲ. ಕೇಂದ್ರದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಬದಲಾವಣೆ ತರಲು ಅವಕಾಶವಿದ್ದರೂ ಬಿಜೆಪಿಗರು ಯಾಕೆ ಸುಮ್ಮನಿದ್ದಾರೆ. ಸಿಆರ್‌ಝಡ್ ವ್ಯಾಪ್ತಿ ಯಾಕೆ ಬದಲಿಸಲು ಸಾಧ್ಯವಿಲ್ಲ. ಇಷ್ಟೊಂದು ಜನ ಎಂಪಿಗಳಿದ್ದಾರಲ್ಲ ಏನು ಮಾಡುತ್ತಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಜೆಪಿ ಸರಕಾರವಿದ್ದಾಗ ಹಾಗೂ ಸಂಸದರಾಗಿದ್ದಾಗ ಬೈಂದೂರು ಕ್ಷೇತ್ರ ಮೂಲಭೂತ ಸೌಕರ್ಯ, ಮೀನುಗಾರರ ಸಮಸ್ಯೆ, ರೈಲ್ವೇ ಯೋಜನೆ, ರಾ.ಹೆ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಹೀಗೆ ಎಲ್ಲಾ ವಿಭಾಗದಲ್ಲಿಯೂ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದೆ. ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಪ್ರಧಾನಮಂತ್ರಿಗಳು ಬಿಜೆಪಿ ಹೆಬ್ಬಾಗಿಲನ್ನು ಮುಚ್ಚಿಸುವ ಮಾತುಗಳನ್ನಾಡುತ್ತಿದ್ದಾರೆ. ರಾಷ್ಟ್ರ ಭಕ್ತ ಸಂಘಟನೆಗಳ ಒಂದೆಡೆ ರಾಷ್ಟ್ರಭಕ್ತ ಸಂಘಟನೆ ಕಾರ್ಯಕರ್ತರ ಪರಿಶ್ರಮ ಮತ್ತು ಶಕ್ತಿ, ಇನ್ನೊಂದು ಕಡೆ ಮತದಾರರನ್ನು ಕೊಂಡುಕೊಂಡು ಮತ ಪಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜನರು ಸರಿಯಾದ ಉತ್ತರವನ್ನೇ ನೀಡಲಿದ್ದಾರೆ ಎಂದರು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ ಮೀನುಗಾರರಿಗೆ ಅಗತ್ಯವಾದ ಸೀಮೆಎಣ್ಣೆ ದೊರಕಿಸಿಕೊಡಲು ಕರಾವಳಿ ಶಾಸಕರೊಂದಿಗೆ ತೆರಳಿ ಹಲವಾರು ಭಾರಿ ಸಿ.ಎಂ ಹಾಗೂ ಮೀನುಗಾರಿಕಾ ಸಚಿವರಿಗೆ ಹಲವು ಭಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮತಗಳಿಸುವ ಒಂದೇ ಕಾರಣಕ್ಕೆ ಭಾವನಾತ್ಮಕ ವಿಚಾರವನ್ನಿಟ್ಟುಕೊಂಡು, ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡದೆ ಅಶಾಂತಿ ಎಬ್ಬಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ ವಿರುದ್ಧ ಧ್ವನಿ ಎತ್ತಬೇಕಾದ ಕರ್ತವ್ಯ ಸರಕಾರ ಮಾತ್ರವಲ್ಲದೇ ಜನಸಾಮಾನ್ಯರದ್ದೂ ಆಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿಯಲ್ಲಿ ಹಿಂದುತ್ವದ ಹೆಸರಿನಲ್ಲಿ ಸಂಘರ್ಷ ಮಾಡಿ ಜನಸಾಮಾನ್ಯರನ್ನು ಕಷ್ಟಕ್ಕೆ ಸಿಲುಕಿಸುವವರಿಗೆ ಬೆಂಬಲ ನೀಡಬೇಡಿ. ಎಲ್ಲರೂ ಧರ್ಮ ಪಾಲಿಸಬೇಕಾದ್ದೇ ಆ ವಿಚಾರದಲ್ಲಿ ನಾವೇನು ಕಡಿಮೆಯಿಲ್ಲ. ಅಭಿವೃದ್ಧಿಗಾಗಿ ಸರಕಾರ, ಪಕ್ಷದದ ವಿರುದ್ಧ ಧ್ವನಿ ಎತ್ತಿ ಆದರೆ ಧರ್ಮ ವಿಚಾರದಲ್ಲಿ ಹೊಡೆದಾಡಿಹೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಎರಡೂ ಪಕ್ಷಗಳ ನಾಯಕರ ಸಹಮತದೊಂದಿಗೆ ರಚಿಸಲಾಗಿದೆ. ಸರಕಾರ ಬೀಳುತ್ತೆ ಅಂತ ಬಿಜೆಪಿ ನಾಯಕರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಗವಾನ್ ಶ್ರೀಕೃಷ್ಣನ ಬದುಕು ಮತ್ತು ಉಪದೇಶ ಎರಡೂ ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಆತ ತನ್ನ ಬದುಕಿನಲ್ಲಿ ಮಾಡಿ ತೋರಿಸಿದ್ದನ್ನೇ ಗೀತೆಯಲ್ಲಿ ಉಪದೇಶಿಸಿದ್ದಾನೆ. ಭಗವದ್ಗೀತೆ ಶಾಸ್ತ್ರಗ್ರಂಥ ಮಾತ್ರವಲ್ಲ. ಅದು ಬದುಕಿನ ಪಠ್ಯ ಎಂಬುದನ್ನು ನೆನಪಿಟ್ಟುಕೊಟ್ಟು ಅಧ್ಯಯನ ನಡೆಸಬೇಕಿದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಅವರು ಗಂಗೊಳ್ಳಿ ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಿನಾದ ರಿ. ಗಂಗೊಳ್ಳಿ ಸಂಸ್ಥೆಯು ಕಾಶಿಮಠ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿವರ ಗುರುವಂದನಾ ಕಾರ್ಯಕ್ರಮದ ಭಾಗವಾಗಿ ಆಯೋಜಿಸಿದ್ದ ಜ್ಞಾನ ಗಂಗಾ-೨ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರವಚನ ನೀಡಿದರು. ಶ್ರೀಕೃಷ್ಣ ಜಗತ್ತಿನ ಮೊತ್ತಮೊದಲ ಶ್ರೇಷ್ಠ ಮನಶಾಸ್ತ್ರಜ್ಞ. ವ್ಯವಹಾರಶಾಸ್ತ್ರ, ನಿರ್ವಹಣಾಶಾಸ್ತ್ರಗಳಲ್ಲಿಯೂ ಭಗವದ್ಗೀತೆಯ ಸಾರವಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕೃಷ್ಣ ಪರಮಾತ್ಮ ಆರಾಧ್ಯ ದೈವವಾಗಿದ್ದಾನೆ. ಅಮೇರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ವ್ಯವಹಾರಶಾಸ್ತ್ರ ಹಾಗೂ ಮನಶಾಸ್ತ್ರ ಅಧ್ಯಯನಕ್ಕಾಗಿ ಭಗವದೀತೆಯನ್ನು ಕಡ್ಡಾಯ ಮಾಡಿದ್ದಾರೆ. ಕುಟುಂಬ, ಸಮಾಜ, ಉದ್ದಿಮೆ ಅಥವಾ ಸರಕಾರವನ್ನು ಸಸೂತ್ರವಾಗಿ ನಿಭಾಯಿಸಿಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮದ ರಸ್ತೆ ಹಾಗೂ ವಾರ್ಡ್‌ನ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿರುವ ಬಗ್ಗೆ ಆಕ್ರೋಶಗೊಂಡ ಮತದಾರರು ಲೋಕಸಭಾ ಉಪ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬಿಜೂರು ಗ್ರಾಮ ಪಂಚಾಯತ್‌ನ ೪ನೇ ವಾರ್ಡ್‌ನ ಗ್ರಾಮಸ್ಥರು ರವಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ರಾ.66ರಿಂದ ಬಿಜೂರು ಕಳಿಸಾಲ್ ಮೂಲಕ ೪ನೇ ವಾರ್ಡ್‌ನ ಶೆಟ್ರಕೇರಿಗೆ ಹೋಗುವ ರಸ್ತೆಯನ್ನು ೨೦ವರ್ಷಗಳಿಂದ ಡಾಮರು ಹಾಕಲಿಲ್ಲ, ಹಿಂದೆ ಹಾಕಿರುವ ಜಲ್ಲಿಕಲ್ಲುಗಳು ಕಿತ್ತುಹೋಗಿದ್ದು ಸಂಚರಿಸಲು ಜನರಿಗೆ ತೊಂದರೆ ಆಗುತ್ತಿದ್ದರು ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ರಸ್ತೆಗೆ ಬಿದಿ ದೀಪ ಅಳವಡಿಗೆ, ಸೂಕ್ತ ಚರಂಡಿ ವ್ಯವಸ್ಥೆ, ಹೈಗುಳಿ ಬನದ ಹತ್ತಿರ ಅಂಗನವಾಡಿ ಕೇಂದ್ರ ಬಳಿ ಶಿಥಿಲಗೊಂಡಿರುವ ನೀರಿನ ಟ್ಯಾಕ್ ತೆರವುಗೊಳಿಸದೇ ಹಾಗೆಯೇ ಉಳಿದಿದೆ. ಉಚಿತವಾಗಿ ಸಿಗುವ ಅಕ್ಕಿ ತರಲು ಸುಮಾರು ೨೦೦ ರೂ.ಖರ್ಚ ಮಾಡಬೇಕಿದ್ದು, ಇದಕ್ಕೆ ಪರಿಹಾರ ಸೇರಿದಂತೆ ವಾರ್ಡ್‌ನ ಅಭಿವೃದ್ಧಿಗೆ ಇದುವರೆಗೂ ಜನಪ್ರತಿನಿಧಿಗಳಿಂದ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಯಶಸ್ಸು ಎನ್ನುವುದು ನಾವು ಏನನ್ನು ಹೊಂದಿರುತ್ತೇವೆ ಎನ್ನುವುದನ್ನು ಅವಲಂಬಿಸಿರುವುದಿಲ್ಲ ಬದಲಾಗಿ ನಾವು ಹೇಗೆ ಬದುಕುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ನಾವು ಜೀವನದಲ್ಲಿ ಏನನ್ನಾದರು ಪಡೆಯುವ ಪ್ರಯತ್ನದಲ್ಲಿ ಜೀವಿಸುವುದನ್ನು ಮರೆಯಬಾರದು’ ಎಂದು ಅಂತರಾಷ್ಟ್ರೀಯ ಖ್ಯಾತಿಯ ಜೀವನಕೌಶಲ್ಯ ಗುರು ಗೌರ್ ಗೋಪಾಲ್ ದಾಸ್ ಹೇಳಿದರು. ಆಳ್ವಾಸ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ‍್ಸ್ ಕ್ಲಬ್-ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯಶಸ್ಸಿನ ರಹಸ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಯಶಸ್ಸಿನ ವ್ಯಾಖ್ಯಾನವು ಯಾವಾಗಲೂ ಬದಲಾಗುತ್ತಾ ಇರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಯಶಸ್ಸಿನ ವ್ಯಾಖ್ಯಾನವು ವಿಭಿನ್ನವಾಗಿರುತ್ತದೆ. ನಮ್ಮ ಪ್ರತಿಭೆ, ಸಾಮರ್ಥ್ಯ, ಕೌಶಲ್ಯ, ವ್ಯಕ್ತಿತ್ವವು ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದಿಲ್ಲ ಬದಲಾಗಿ ನಮ್ಮ ಮನೋಭಾವ, ಯೋಚನಾ ಲಹರಿಗಳು ನಮ್ಮನ್ನು ಯಶಸ್ಸಿನೆಡೆಗೆ ಮುನ್ನಡೆಸುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಇತರರ ಜೀವನದ ಬಗ್ಗೆ ಕುತೂಹಲಿಗಳಾಗಿರುವುದಿಲ್ಲ, ಬದಲಾಗಿ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಂಬುಲೆನ್ಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟದ ಮಣೂರಿನಲ್ಲಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಉತ್ತರಕನ್ನಡ ಮೂಲದವರು ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಮೂಲದ ಉಲ್ಲಾಸ್ ತಳೇಕರ್ ಅವರಿಗೆ ಅನಾರೋಗ್ಯವಿದ್ದ ಕಾರಣ, ಉಲ್ಲಾಸ್ ಜೊತೆ ಕುಟುಂಬಸ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಕೋಟ ಮಣೂರು ಸಮೀಪ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಅನ್ನು ಹಾರಿ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದೆ. ಆ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಆಂಬ್ಯುಲೆನ್ಸ್‌ಗೆ ಢಿಕ್ಕಿಯಾಗಿ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಾಧನಾ ಉಲ್ಲಾಸ್ ತಳೇಕರ್ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಮೂರು ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಕೋಟ ಪೊಲೀಸರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನನ್ನ ಮುಖವನ್ನೇ ನೊಡಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಹಗುರವಾಗಿ ಮಾತನಾಡಿದ್ದಾರಂತೆ. ಮುಖವನ್ನೇ ನೋಡದವರನ್ನು ಎರಡು ಮೂರು ಭಾರಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ರಾ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ಧರಾಮಯ್ಯರ ಜೊತೆ ಏಕವಚನದಲ್ಲಿ ಮಾತನಾಡುವಷ್ಟು ನನಗೆ ಅವರ ಜೊತೆ ಸಲಿಗೆ ಇಲ್ಲ. ಸಲಿಗೆ ಇದ್ದವರಲ್ಲಿ ಅವರು ಮಾತನಾಡಲಿ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇದು ಶೋಭೆಯಲ್ಲ. ಹಲವಾರು ಬಾರಿ ನಾನು ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ರು ನಾನು ಸೇರುವುದಿಲ್ಲ ಅಂತ ನೇರವಾಗಿ ಹೇಳಿದ್ದೆ. ನಾನು ಯಾರು ಅಂತ ಗೊತ್ತಿಲ್ಲದೆ ಅವರು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾದ್ರಾ? ನನ್ನ ವ್ಯಕ್ತಿತ್ವ ಗೊತ್ತಿಲ್ಲದೆ ಏನೂಂತ ಪಕ್ಷಕ್ಕೆ ಸೇರಿಸಲು ಮುಂದಾಗಿದ್ದರು ಸೊರಕೆ, ಪ್ರಮೋದ್ ಮಧ್ವರಾಜ್ , ಅಭಯಚಂದ್ರ ಜೈನ್ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದರು. ನಾನು ಯಾರು ಅಂತ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡಿದ್ರಾ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ನಾನು ರಾಜಕೀಯವಾಗಿಯೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು, ರಾಷ್ಟ್ರೀಯತೆ, ಭದ್ರತೆ, ಹಾಗೂ ಆಡಳಿತಾತ್ಮಕ ವಿಚಾರದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಇಟ್ಟುಕೊಂಡು ಈ ಭಾರಿಯ ಉಪಚುನಾವಣೆಯನ್ನು ಎದುರಿಸುತ್ತೇವೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶುಕ್ರವಾರ ಬೈಂದೂರಿನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಟ್ಟಿ, ಬಂದರು, ರಸ್ತೆ ಸೇರಿದಂತೆ ಲೋಕಸಭಾ ಸದಸ್ಯರ ಮೂಲಕ ಹತ್ತಾರು ಅಭಿವೃದ್ಧಿ ಕೆಲಸಗಳಾಗಿವೆ. ಈ ಭಾರಿಯೂ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರನ್ನು ಜನರು ಬೆಂಬಲಿಸಲಿದ್ದು ಗೆಲುವು ನಿಶ್ಚಿತ ಎಂದರು. ಕಾಂಗ್ರೆಸ್ ಪಕ್ಷಕ್ಕೆ ತನ್ನ ಚಿಹ್ನೆಯನ್ನೇ ಅಡವಿಡುವ ದುಸ್ಥಿತಿ ಬಂದಿರುವುದು ವಿಷಾದನೀಯ. ಈ ಬೆಳವಣಿಗೆ ಕೈ ಚಿಹ್ನೆಗೆ ಮತ ಹಾಕುವ ಜನಸಾಮಾನ್ಯರಿಗೆ ಆತಂಕ ತಂದೊಡ್ಡಿದೆ. ಜೆಡಿಎಸ್ ಜತೆಗೆ ಬಿಜೆಪಿಯೂ ೨೦-೨೦ ಮ್ಯಾಚ್ ಆಡಿತ್ತು. ಆದರೆ ಕೊನೆಗೆ ಜೆಡಿಎಸ್ ಏನು ಮಾಡಿತು ಎಂಬುದು ರಾಜ್ಯದ ಜನತೆಗೆ…
