ಗ್ರಾಮದ ಅಭಿವೃದ್ಧಿಯಾಗಿಲ್ಲ : ಉಪಚುನಾವಣೆ ಬಹಿಷ್ಕರಿಸಿದ ಬಿಜೂರು ಗ್ರಾಮಸ್ಥರು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮದ ರಸ್ತೆ ಹಾಗೂ ವಾರ್ಡ್‌ನ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿರುವ ಬಗ್ಗೆ ಆಕ್ರೋಶಗೊಂಡ ಮತದಾರರು ಲೋಕಸಭಾ ಉಪ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬಿಜೂರು ಗ್ರಾಮ ಪಂಚಾಯತ್‌ನ ೪ನೇ ವಾರ್ಡ್‌ನ ಗ್ರಾಮಸ್ಥರು ರವಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

Call us

Click Here

ರಾ.66ರಿಂದ ಬಿಜೂರು ಕಳಿಸಾಲ್ ಮೂಲಕ ೪ನೇ ವಾರ್ಡ್‌ನ ಶೆಟ್ರಕೇರಿಗೆ ಹೋಗುವ ರಸ್ತೆಯನ್ನು ೨೦ವರ್ಷಗಳಿಂದ ಡಾಮರು ಹಾಕಲಿಲ್ಲ, ಹಿಂದೆ ಹಾಕಿರುವ ಜಲ್ಲಿಕಲ್ಲುಗಳು ಕಿತ್ತುಹೋಗಿದ್ದು ಸಂಚರಿಸಲು ಜನರಿಗೆ ತೊಂದರೆ ಆಗುತ್ತಿದ್ದರು ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ರಸ್ತೆಗೆ ಬಿದಿ ದೀಪ ಅಳವಡಿಗೆ, ಸೂಕ್ತ ಚರಂಡಿ ವ್ಯವಸ್ಥೆ, ಹೈಗುಳಿ ಬನದ ಹತ್ತಿರ ಅಂಗನವಾಡಿ ಕೇಂದ್ರ ಬಳಿ ಶಿಥಿಲಗೊಂಡಿರುವ ನೀರಿನ ಟ್ಯಾಕ್ ತೆರವುಗೊಳಿಸದೇ ಹಾಗೆಯೇ ಉಳಿದಿದೆ. ಉಚಿತವಾಗಿ ಸಿಗುವ ಅಕ್ಕಿ ತರಲು ಸುಮಾರು ೨೦೦ ರೂ.ಖರ್ಚ ಮಾಡಬೇಕಿದ್ದು, ಇದಕ್ಕೆ ಪರಿಹಾರ ಸೇರಿದಂತೆ ವಾರ್ಡ್‌ನ ಅಭಿವೃದ್ಧಿಗೆ ಇದುವರೆಗೂ ಜನಪ್ರತಿನಿಧಿಗಳಿಂದ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಆದರಿಂದ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

Leave a Reply