ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಂಸ್ಕೃತಿಕ ಪ್ರಜ್ಞೆ ದೇಶದ ಅಭಿವೃದ್ಧಿಗೆ ಪೂರಕವಾಗಿ, ಪ್ರೇರಕವಾಗಿ ಕೆಲಸಮಾಡುತ್ತದೆ. ಕಲೆ, ಚರಿತ್ರೆ, ಪಾರಂಪರಿಕ ಜ್ಞಾನ ಹಿರಿಯ ಬಳುವಳಿಯಾಗಿದ್ದು, ಇವೆಲ್ಲದರ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಾಂಸ್ಕೃತಿಕ ಸಂಘಟನೆಗಳ ಪಾತ್ರ ದೊಡ್ಡದು ಎಂದು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಾಂತಾನಂದ ಶೆಟ್ಟಿ ಹೇಳಿದರು. ಅವರು ಪರಿಶಿಷ್ಟ ಪಂಗಡದ ರಂಗತಂಡ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಹೊಸೂರಿನ ಕೆ.ವಿ ಸುಬ್ಬಣ್ಣ ವನರಂಗದಲ್ಲಿ ಆಯೋಜಿಸಲಾದ ಹನ್ನೆರಡನೇ ವರ್ಷದ ವಾರ್ಷಿಕ ಸಂಭ್ರಮ ವನಸಿರಿಯಲ್ಲೊಂದು ರಂಗಸುಗ್ಗಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿವೃತ್ತ ಯೋಧ ಸಂಜೀವ ನಾಯ್ಕ್ ಹುಲ್ಕಡಿಕೆ ಅವರನ್ನು ಸನ್ಮಾನಿಸಲಾಯಿತು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಕೆಲಸವಿರಲಿ ಅದನ್ನು ಧೈರ್ಯವಾಗಿ ಮಾಡಿ. ಬದುಕಿನಲ್ಲಿ ಸಾಧನೆ ಮಾಡುತ್ತಾ ನಾವು ಬೆಳೆಯುವುದರ ಜೊತೆಗೆ ತಂದೆ ತಾಯಿಯರು ಹೆಮ್ಮೆ ಪಡುವಂತೆ ಮಾಡುವುದು ಮಾಡಬೇಕು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನೆನಪು ಮೂವೀಸ್ ಕೋಟ ಅವರ ಸುಗಂಧಿ ಚಲನಚಿತ್ರ ವಿಶೇಷ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ.ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಜಿ.ಮೂರ್ತಿ ಅವರು ನಿರ್ದೇಶಿಸಿ,ಸಾಹಿತಿ ನರೇಂದ್ರ ಕುಮಾರ್ ನಿರ್ಮಾಪಕರಾಗಿರುವ ಚಿತ್ರಕ್ಕೆ ಪ್ರವೀಣ್ ಗೋಡ್ಖಿಂಡಿ ಸಂಗೀತವಿದ್ದು,ಪಿ.ಕೆ ದಾಸ್ ಕ್ಯಾಮರಾ ಕೈಚಳಕ ಮತ್ತು ಸಂಜೀವ ರೆಡ್ಡಿ ಸಂಕಲನ ಕೆಲಸ ನಿರ್ವಹಿಸಿದ್ದಾರೆ.ರವಿ ಪೂಜಾರಿ ಮತ್ತು ಖಾನ್ ಸಂಗೀತ ಮತ್ತು ನರೇಂದ್ರ ಕುಮಾರ್ ಮತ್ತು ಸತೀಶ್ ವಡ್ಡರ್ಸೆ ಅವರ ಸಂಭಾಷಣೆವಿದೆ.ಈ ಚಿತ್ರದಲ್ಲಿ ಮಗುವಿನ ಪಾತ್ರದಲ್ಲಿ ಸಾಸ್ತಾನದ ವೈಷ್ಣವಿ ಅಡಿಗ ಕಾಣಿಸಿಕೊಂಡಿದ್ದು,ತಾಯಿಯ ಪಾತ್ರದಲ್ಲಿ ವಿನಯ ಪ್ರಸಾದ್ ,ಗುರುವಿನ ಪಾತ್ರದಲ್ಲಿ ಬನ್ನಂಜೆ ಸಂಜೀವ್ ಸುವರ್ಣ ಅವರು ಅಭಿನಯಿಸಿದ್ದಾರೆ,ಅಲ್ಲದೇ ಕೋಟ ಪರಿಸರದ ೫೦ ಕ್ಕೂ ಹೆಚ್ಚು ಕಲಾವಿದರು ಈ ಚಲನಚಿತ್ರದಲ್ಲಿ ನಟಿಸಿದ್ದು ಪ್ರಮುಖರಾದ ಅಂಬಲಪಾಡಿಯ ಡಾ.ವಿಜಯ್ ಬಲ್ಲಾಳ್,ಕೋಟದ ಉದ್ಯಮಿ ಆನಂದ್ ಸಿ ಕುಂದರ್, ನೀಲಾವರ ಸುರೇಂದ್ರ ಅಡಿಗ ಸಹ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಕುಂದರ್, ಸಹ ನಿರ್ಮಾಪಕರಾಗಿ ಪ್ರಕಾಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದಿನಾಂಕ 20.01.2020 ರ ಸೋಮವಾರದಂದು ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಸದರಿ ಶಾಲೆಯಲ್ಲಿ ಬೆಳಿಗ್ಗೆ 11-೦೦ ಗಂಟೆಗೆ ಪ್ರಧಾನಮಂತ್ರಿಯವರ ’ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದನೇರ ಪ್ರಸಾರವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋರಿಸಲಾಯಿತು. 1೦ ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಭಾರತ ಸರ್ಕಾರಕೈಗೊಂಡ ಈ ಕಾರ್ಯಕ್ರಮದಲ್ಲಿಎಲ್ಲಾ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು. ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳೊಡನೆ ನಡೆಸಿದ ಈ ಸಂವಾದಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಬಹಳ ಆಸಕ್ತಿಯಿಂದ ತೊಡಗಿಸಿಕೊಂಡು.ಪ್ರೇರಣೆಯನ್ನು ಪಡೆದರು.ಮುಂಬರುವ ಪರೀಕ್ಷೆಯ ಹಿನ್ನೆಲೆಯಲ್ಲಿ ನಡೆಸಲಾದ ಬಹಳ ಚೆನ್ನಾಗಿ ಮುಡಿಬಂದಿ ಪ್ರಧಾನಮಂತ್ರಿಯವರ ಉತ್ತರ ವಿದ್ಯಾರ್ಥಿಗಳಿಗೆ ಬಹಳ ಸ್ಫೂರ್ತಿದಾಯಕವಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಮ್ಯಶ್ರೀ ಶೆಟ್ಟಿ ಇವರು ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿ.ಕಾಂ. ಪದವಿ ಐದನೇ ಮತ್ತು ಆರನೇ ಸೆಮಿಸ್ಟರ್ ಫಿನಾನ್ಶಿಯಲ್ ಅಕೌಂಟಿಂಗ್ ಪರೀಕ್ಷೆಯಲ್ಲಿ ೩೦೦ಕ್ಕೆ ೩೦೦ ಅಂಕ ಗಳಿಸಿ ಅಖಿಲ ಭಾರತ ಚಾರ್ಟೆಡ್ ಅಕೌಂಟೆಂಟ್ ಇನ್ಸ್ಟಿಟ್ಯೂಶನ್ನ ಚಿನ್ನದ ಪದಕ ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬೆಂಗಳೂರಿನಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹೋಟೆಲ್ ಗ್ರೀನ್ ಗಾರ್ಡೆನೀಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ ಮಹೇಂದ್ರ ಭಟ್ ಮಾತನಾಡಿ ಶಾಲಾ ಅಭಿವೃಧ್ಧಿ ನಮ್ಮೇಲ್ಲಾ ಹಳೆ ವಿದ್ಯಾರ್ಥಿಗಳ ಹೊಣೆಯಾಗಿದೆ ಎನ್ನುತ್ತಾ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಆರ್. ದೇವಾಡಿಗ ವಹಿಸಿ ಶಾಲಾ ಶತಮಾನೋತ್ಸವ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತ ಎಲ್ಲಾ ವಿಧ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸೋಣ ಎಂದರು. ವೇದಿಕೆಯಲ್ಲಿ ಹಳೆವಿದ್ಯಾರ್ಥಿಗಳಾದ ಉದ್ಯಮಿ ಶ್ರೀಧರ ಶೆಟ್ಟಿ, ಗಿರೀಶ್ ಬೈಂದೂರು ಹಳೆವಿದ್ಯಾರ್ಥಿ ಸಂಘದ ಖಜಾಂಚಿ ಜಯಾನಂದ ಹೋಬಳಿದಾರ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಚರಣ ಬೈಂದೂರು ಸ್ಟಾಗತಿಸಿದರು. ಶಾಲಾ ಪದವೀಧರ ಮುಖ್ಯೋಪಾದ್ಯಾಯ ಜನಾರ್ಧನ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣ ವ್ಯಕ್ತಿಯಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜೊತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ ಮತ್ತಷ್ಟು ಕ್ರೀಯಾಶೀಲನಾಗುತ್ತಾನೆ. ಕಲೆ, ಶಿಕ್ಷಣ ಎಲ್ಲದರ ಮೂಲ ಉದ್ದೇಶ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವುದಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಪರಿಶಿಷ್ಟ ಪಂಗಡದ ರಂಗತಂಡ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಹೊಸೂರಿನ ಕೆ.ವಿ ಸುಬ್ಬಣ್ಣ ವನರಂಗದಲ್ಲಿ ಆಯೋಜಿಸಲಾದ ಹನ್ನೆರಡನೇ ವರ್ಷದ ವಾರ್ಷಿಕ ಸಂಭ್ರಮ ವನಸಿರಿಯಲ್ಲೊಂದು ರಂಗಸುಗ್ಗಿ ಕಾರ್ಯಕ್ರಮವನ್ನು ದೀಪ ಬೆಳಗಿ, ಮಡಿಕೆಗೆ ಹಾಲೆರೆದು ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಪಂಗಡ ಸಮುದಾಯದ ಅಭ್ಯುದಯಕ್ಕೆ ಬದ್ಧನಾಗಿದ್ದು, ಸಮುದಾಯಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ತೂದಳ್ಳಿ ಕಿಂಡಿ ಅಣೆಕಟ್ಟಿಗೆ 3.75 ಲಕ್ಷ ರೂ., ಅತ್ಯಾಡಿ ತೂದಳ್ಳಿ ರಸ್ತೆಗೆ 1.64 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು ಯಡ್ತರೆ ಗ್ರಾಮಕ್ಕೆ ಒಟ್ಟು8 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳವಾಡಿ ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದಲ್ಲಿ ಮಾ.೨೭ ರಿಂದ ಎ.೪ರ ವರೆಗೆ ನಡೆಯುವ ನವೀಕೃತ ಗರ್ಭಗುಡಿ ಮತ್ತು ನೂತನ ಶಿಲಾಮಯ ತೀರ್ಥ ಮಂಟಪ ಸಮರ್ಪಣೆ ಹಾಗೂ ಅಷಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ ಬಿಡುಗಡೆಗೊಳಿಸಿದರು. ಧಾರ್ಮಿಕ ಮುಖಂಡರಾದ ಬಿ. ಅಪ್ಪಣ್ಣ ಹೆಗ್ಡೆ, ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಅನುವಂಶಿಯ ಮೊಕ್ತೇಸರರು ಕೆ ಚಂದ್ರಶೇಖರ ಶೆಟ್ಟಿ ಹಾಗು ಕೆ ವಸಂತ ಕುಮಾರ್ ಶೆಟ್ಟಿ ಕಾರಿಕಟ್ಟೆ, ಉತ್ಸವ ಸಮಿತಿ ಅಧ್ಯಕ್ಷರಾದ ಎಚ್ ವಸಂತ ಹೆಗ್ಡೆ ಕಳವಾಡಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಿವಾಕರ್ ಹೆಗ್ಡೆ ಕಳವಾಡಿ, ಆಡಳಿತ ಮಂಡಳಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಕಾರಿಕಟ್ಟೆ, ತಗ್ಗರ್ಸೆ ಟಿ. ನಾರಾಯಣ ಹೆಗ್ಡೆ, ವೆಂಕ್ಟ ಪೂಜಾರಿ ಸಸಿಹಿತ್ಲು, ವತ್ತಿನಕಟ್ಟೆ ದೇವಳದ ಗೌರವಾಧ್ಯಕ್ಷರಾದ ರಾಜು ಪೂಜಾರಿ ಯಡ್ತರೆ, ಅಧ್ಯಕ್ಷರಾದ ನಾಗರಾಜ ಶೆಟ್ಟಿ ನಾಕಟ್ಟೆ, ಜಗನ್ನಾಥ ಶೆಟ್ಟಿ, ವೆಂಕಟಾಚಲ ಮಯ್ಯ ಮತ್ತು ಗಣಪಯ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕೆನ್ನುವ ಉದ್ದೇಶದಿಂದ ಸಂಘದ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸುಜ್ಞಾನ ನಿಧಿ ಮೂಲಕ ಸಹಾಯ ಮಾಡಲಾಗುತ್ತಿದೆ. ಈ ಯೋಜನೆಯ ಸದುಪಯೋಗ ಪಡೆದುಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕಾದ ಜವಾಬ್ದಾರಿ ಸ್ವಸಹಾಯ ಸಂಘದ ಸದಸ್ಯರದ್ದಾಗಿದೆ ಎಂದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸತೀಶ ಎಂ.ನಾಯಕ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಡ-ಸೇನಾಪುರ ಒಕ್ಕೂಟದ ಆಶ್ರಯದಲ್ಲಿ ನಾಡ-ಗುಡ್ಡೆ ಅಂಗಡಿಯ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರಗಿದ ಸುಜ್ಞಾನ ನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಡ ಒಕ್ಕೂಟದ ಅಧ್ಯಕ್ಷೆ ವೀಣಾ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಶುಭ ಹಾರೈಸಿದರು. ಒಕ್ಕೂಟದ ಎಂಟು ಮಂದಿ ಸದಸ್ಯರಿಗೆ ಸುಜ್ಞಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ನದಿ ಹಾಗೂ ಸಮುದ್ರದಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಎಸೆಯಲಾಗುತ್ತಿದ್ದು ಇದರಿಂದ ಜಲಚರ ಜೀವಿಗಳಿಗೆ ಹಾನಿಯಾಗುತ್ತಿದೆ. ತ್ಯಾಜ್ಯಗಳನ್ನು ನದಿ, ಸಮುದ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದರಿಂದ ಆಗುವ ಅನಾಹುತಗಳು, ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಬೇಕು ಎಂದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೀಪ ಜಿ.ಎಸ್. ಹೇಳಿದರು. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಆಶ್ರಯದಲ್ಲಿ ಖಾರ್ವಿ ಆನ್ಲೈನ್ ಸಹಯೋಗದೊಂದಿಗೆ ಭಾನುವಾರ ಜರಗಿದ ತ್ರಾಸಿ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ತಮ್ಮ ಮನೆ ವಠಾರ, ಬೀದಿಯನ್ನು ಸ್ವಚ್ಛಗೊಳಿಸಿ ಸ್ವಚ್ಛ, ಸದೃಢ ದೇಶ ನಿರ್ಮಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ನೇರಿ ಕಾರ್ನೆಲಿಯೋ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ನಮ್ಮ ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಸಂಗೀತ ಮಹತ್ತರ ಪಾತ್ರ ವಹಿಸಿದೆ. ಸಂಗೀತಕ್ಕೆ ಅದ್ಭುತವಾದ ಶಕ್ತಿಯಿದ್ದು, ಶಾಂತಿ, ಸಾಮರಸ್ಯ, ಸಹಬಾಳ್ವೆ ನಡೆಸಲು ಸಂಗೀತ ಸಹಕಾರಿಯಾಗುತ್ತದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರ ಆಸಕ್ತಿಯ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಶಿಕ್ಷಣದ ಜೊತೆಗೆ ಪಾಠೇತರ ಚಟುವಟಿಕೆಯಲ್ಲಿ ಮಕ್ಕಳು ಸಕ್ರಿಯರಾದರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಕುಂದಾಪುರದ ವಕೀಲ ರವಿಕಿರಣ್ ಮುರ್ಡೇಶ್ವರ ಹೇಳಿದರು. ಶ್ರೀ ಸಿಂಗಧೂರೇಶ್ವರಿ ಡಾನ್ಸ್ ಅಕಾಡೆಮಿ ಗಂಗೊಳ್ಳಿ ಮತ್ತು ಸನ್ನಿಧಿ ಎಂಟರ್ಪ್ರೈಸಸ್ ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಗಂಗೊಳ್ಳಿ ಪ್ರಾಯೋಜಕತ್ವದಲ್ಲಿ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಜರಗಿದ ವಾಯ್ಸ್ ಆಫ್ ಕರಾವಳಿ ಕೋಗಿಲೆ -೨೦೨೦ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ನಮ್ಮ ನಡುವೆ ಅನೇಕ ಪ್ರತಿಭೆಗಳಿದ್ದು ಅವರನ್ನು ಗುರುತಿಸಿ ಸೂಕ್ತ ವೇದಿಕೆ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಹೀಗಾಗಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಟ್ಟು ಅವರ ಭವಿಷ್ಯ…
