Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಮಂದಾರ ಕಲಾವೇದಿಕೆ ಬೀದರ್ ಕೊಡಮಾಡುವ 2022ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ಕೊಲ್ಲೂರು ಗ್ರಾಮದ ಮಾವಿನಕಾರಿನ ಭರತ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ. ಅವರ ಧಾರ್ಮಿಕ ಕಾರ್ಯ ಹಾಗೂ ಸಾಮಾಜಿಕ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ಪ್ರದಾನಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾವಿನಕಟ್ಟೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಕಲಿತ 2005-06ನೇ ಸಾಲಿನ ವಿದ್ಯಾರ್ಥಿಗಳು ಸುಮಾರು 1 ಲಕ್ಷ ಮೊತ್ತದ ಸೌಂಡ್ ಸಿಸ್ಟಮ್ ಹಾಗೂ ವಾಟರ್ ಫ್ಯೂರಿಫೈ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಎಚ್. ಕುಶಲ್ ಶೆಟ್ಟಿ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಡಾ. ಅತುಲ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿಗಳು, ಶಾಲಾ ಅದ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿ ಧನ್ಯವಾದಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಸೇವಾ ಸಹಕಾರ ಬ್ಯಾಂಕ್‌ನ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಆನಂದ ಬಿಲ್ಲವ ಮತ್ತು ಉಪಾಧ್ಯಕ್ಷರಾಗಿ ವಾಸುದೇವ ಶೇರುಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ನೇತೃತ್ವದಲ್ಲಿ ಸಹಕಾರಿಯ ಗಂಗೊಳ್ಳಿ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಆನಂದ ಬಿಲ್ಲವ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಾಸುದೇವ ಶೇರುಗಾರ್ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ನಿರ್ದೇಶಕರಾದ ಶ್ರೀನಿವಾಸ ಜತ್ತನ್, ಮಾಧವ ಖಾರ್ವಿ, ಸುಭಾಶ್ಚಂದ್ರ ಪೂಜಾರಿ, ಗೋಪಾಲ ನಾಯ್ಕ್, ಚಂದ್ರಶೇಖರ ಪೂಜಾರಿ, ಪ್ರೇಮಾ ಪೂಜಾರಿ, ಯಮುನಾ, ಚಂದ್ರಮತಿ ಡಿ.ಹೆಗ್ಡೆ, ನಾಗರಾಜ ಎಂ., ಲಕ್ಷ್ಮಣ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೌಟುಂಬಿಕ ಕಲಹದ ಕಾರಣದಿಂದ ಮಗನೇ ತಂದೆಯನ್ನು ಹತ್ಯೆಗೈದ ಅಮಾನುಷ ಘಟನೆ ತಾಲೂಕಿನ ಗೋಪಾಡಿ ಗ್ರಾಮದಲ್ಲಿ ನಡೆದಿದೆ. ಗೋಪಾಡಿಯ ಹಾಲಾಡಿ ಮನೆ ನಿವಾಸಿ ನರಸಿಂಹ ಮರಕಾಲ(74) ಕೋಲೆಯಾದ ವ್ಯಕ್ತಿ. ಆರೋಪಿ ಪುತ್ರನನ್ನು ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ. ಆರೋಪಿ ರಾಘವೇಂದ್ರ ಜಾಗದ ವಿಚಾರದಲ್ಲಿ‌ ತಂದೆಯೊಂದಿಗೆ ಜಗಳ ಮಾಡಿಕೊಂಡಿದ್ದು, ಪ್ರತ್ಯೇಕವಾಗಿ ವಾಸವಿದ್ದ. ಶನಿವಾರ ರಾತ್ರಿ ರಾಘವೇಂದ್ರ ಮನೆಯ ಅಂಗಳದಲ್ಲಿ ಕಸಕಡ್ಡಿಗೆ ಬೆಂಕಿ ಹಾಕಿದ್ದಾನೆ. ಪಕ್ಕದಲ್ಲಿ ದನದ ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ ನರಸಿಂಹ ಮರಕಾಲ ಅವರು ಬೆಂಕಿಗೆ ನೀರು ಹಾಕಿ ಆರಿಸಲು ಹೋದ ವೇಳೆ ರಾಘವೇಂದ್ರ ಏಕಾಏಕಿ ತಂದೆ ಮೇಲೆ ಮುಗಿಬಿದ್ದು, ಮನೆಯ ಒಳಗಿದ್ದ ಕಬ್ಬಿಣದ ಕೊಡಲಿಯನ್ನು ತಂದು ನರಸಿಂಹ ಮರಕಾಲ ಅವರ ತಲೆಗೆ ಮುಖಕ್ಕೆ ಬಲವಾಗಿ ಕಡಿದಿದ್ದಾನೆ. ಅಲ್ಲೇ ಸ್ಥಳದಲ್ಲಿದ್ದ ನರಸಿಂಹ ಅವರ ಪುತ್ರಿ ತಪ್ಪಿಸಲು ಹೋದಾಗ ಅವರಿಗೂ ಕೊಡಲಿಯನ್ನು ಬೀಸಿ ಗಾಯಗೊಳಿಸಿದ್ದಾನೆ. ನರಸಿಂಹ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ನಾಟಕದ ಪಾತ್ರಗಳೇ ನಿಜ. ನಮ್ಮ ಬದುಕೇ ನಾಟಕೀಯವಾಗಿದೆ ಎಂದೆನಿಸುವ ಮಟ್ಟಿಗೆ ಇಂದಿನ‌ ಬದುಕು ಬದಲಾಗಿದೆ. ನಾಟಕದ ಪಾತ್ರಗಳಿಂದ ನಾವು ಕಲಿತು ಅಳವಡಿಸಿಕೊಳ್ಳುವುದು ಸಾಕಷ್ಟಿದೆ ಎಂದು ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಯೋಜಿತ ಅಧ್ಯಕ್ಷ ಡಾ. ರಘು ನಾಯ್ಕ್ ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಸೋಮವಾರ ಸುರಭಿ ರಿ. ಬೈಂದೂರು ಸಂಸ್ಥೆ ಮಾ.25 ರಿಂದ 28ರ ತನಕ ಆಯೋಜಿಸಿರುವ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ನಾಟಕೋತ್ಸವ ಜೀವನ ಪಾಠ ಕಲಿಸಲೊಂದು ದಾರಿಯಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ಉಪಸ್ಥಿತರಿದ್ದರು. ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಕಾರ್ಯಕ್ರಮ‌ ನಿರೂಪಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ,ಮಾ.19: ಇಲ್ಲಿನ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಆಚರಣೆ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಸಾರ್ವಜನಿಕರೂ ಕೂಡ ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಎಫ್ಎಸ್ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು. ಕೊಂಕಣಿ ಖಾರ್ವಿ ಜನಾಂಗದ ವೈಶಿಷ್ಟ್ಯಪೂರ್ಣ ಆಚರಣೆ ಹೋಳಿ:ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಮಾ.19: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸ ಸಿಂಹಯಾಗದ ನಂತರ (ವೃಷಭಲಗ್ನ) ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ದೇವಳದಲ್ಲಿ ಮಾ.18ರಿಂದ ಮಾ.27ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದೆ. ಮಾ.19ರ ರಾತ್ರಿ ಮಯೂರಾರೋಹಣೋತ್ಸವ, ಮಾ.20ರ ರಾತ್ರಿ ಡೋಲಾರೋಹಣೋತ್ಸವ, ಮಾ.21ರ ರಾತ್ರಿ ಪುಷ್ಪಮಂಟಪಾರೋಹಣೋತ್ಸವ, ಮಾ.22ರ ರಾತ್ರಿ ವೃಷಭಾರೋಹಣೋತ್ಸವ, ಮಾ.23ರ ರಾತ್ರಿ ಗಜಾರೋಹಣೋತ್ಸವ, ಮಾ.24ರ ಬೆಳಿಗ್ಗೆ ಶಿಖರ ಪ್ರತಿಷ್ಠೆ, ಸಂಜೆ ಹಿರೇರಂಗಪೂಜೆ, ರಾತ್ರಿ ಸಿಂಹಾರೋಹಣೋತ್ಸವ ಜರುಗಲಿದೆ. ಮಾ.25ರಂದು ಬೆಳಿಗ್ಗೆ ಮುಹೂರ್ತ ಬಲಿ, ಕ್ಷಿಪ್ರಬಲಿ, ರಥಬಲಿ ನಂತರ ಮಧ್ಯಾಹ್ನ ಮಿಥುನ ಲಗ್ನ ಮುಹೂರ್ತದಲ್ಲಿ ರಥಾರೋಹಣ ನಡೆಯಲಿದೆ. ಸಂಜೆ ಶ್ರೀಮನ್ಮಹಾರಥೋತ್ಸವ ಜರುಗಲಿದೆ. ಮಾ.26ರ ರಾತ್ರಿ ಓಕುಳಿ, ಅವಭೃತಸ್ನಾನಾದಿ ಕರ್ಮಗಳು ನಡೆಯಲಿದ್ದು, ಮಾ೨೭ರ ಬೆಳಿಗ್ಗೆ ಅಶ್ವಾರೋಹಣೋತ್ಸವದ ಬಳಿಕ ಮಹಾಪುರ್ಣಾಹುತಿ, ಧ್ವಜಾವರೋಹಣ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆಯಾಗಲಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪುರಸಭಾ ವ್ಯಾಪ್ತಿಯಲ್ಲಿಯೇ ಪ್ರವೇಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಶುಕ್ರವಾರ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂದಾಪುರ ಎಲ್.ಐ.ಸಿ ರಸ್ತೆ ಬಳಿ ಮೆಸ್ಕಾಂ ಕಛೇರಿ ಎದುರುಗಡೆ ಕುಂದಾಪುರ ನಗರಕ್ಕೆ ಪ್ರವೇಶ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಎರಡುವರೆ ತಿಂಗಳ ಒಳಗಡೆ ಕಾರ್ಯಗತಗೊಳ್ಳಲಿದೆ. ಇಲ್ಲಿ ಸರ್ವೀಸ್ ರಸ್ತೆಯನ್ನು ವಿಸ್ತಾರಗೊಳಿಸಿಕೊಂಡು ಹೆದ್ದಾರಿ ಮಟ್ಟದಲ್ಲಿಯೇ ನಗರಕ್ಕೆ ಪ್ರವೇಶ ನೀಡಲಾಗುವುದು. ಅದೇ ರೀತಿ ಆಚೆ ಕಡೆಯಲ್ಲಿಯೂ ಕೂಡಾ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾ.30ರ ಒಳಗೆ ಮೇಲ್ಸೇತುವೆಗೆ ದಾರಿದೀಪಗಳ ಅಳವಡಿಸಲಾಗುವುದು ಎಂದರು. ಅದೇ ರೀತಿ ಹೆದ್ದಾರಿ ದಾಟುವ ಕುರಿತಂತೆ ವಿದ್ಯಾರ್ಥಿಗಳ ಬೇಡಿಕೆಗೂ ಸ್ಪಂದನ ನೀಡಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ನೀಡುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಲಾಗಿತ್ತು. ಯೋಜನಾ ನಿರ್ದೇಶಕರಿಗೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮಾ.18: ಇಲ್ಲಿನ ಟಿಟಿ (ತಾತ್ಯಾ ಟೋಪೆ) ರಸ್ತೆ ಆಶ್ರಯ ಕಾಲನಿಯಲ್ಲಿನ ಮಕ್ಕಳ ಉದ್ಯಾನವನವನ್ನು ಇದೀಗ ಸ್ವಚ್ಛಗೊಳಿಸಲಾಗಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕುಂದಾಪ್ರ ಡಾಟ್ ಕಾಂ ವರದಿ ಪ್ರಕಟಿಸಿದ ಬಳಿಕ ಪಾರ್ಕ್ ತುಂಬೆಲ್ಲಾ ಹರಡಿಕೊಂಡಿದ್ದ ಮದ್ಯ ಬಾಟಲ್‌ಗಳು, ಕಸದ ರಾಶಿಯನ್ನು ತೆರವು ಮಾಡಿ ಗಿಡಗಂಟಿಯನ್ನೆಲ್ಲಾ ಕಡಿದು ಸ್ವಚ್ಛಗೊಳಿಸಿದೆ. ಈ ಪರಿಸರದ ಮಕ್ಕಳಿಗೆ ಆಟವಾಡಲು, ನಾಗರಿಕರಿಗೆ ಸಂಜೆಯ ವಿಹಾರಕ್ಕಾಗಿ ಪುರಸಭೆ ನಿರ್ಮಿಸಿದ್ದ ಉದ್ಯಾನವನವು ಸಾರ್ವಜನಿಕರ ನಿರಾಸಕ್ತಿ ಹಾಗೂ ಪುರಸಭೆಯ ನಿರ್ವಹಣೆ ಇದ್ದಲೇ ಪಾಳು ಕೊಂಪೆಯಂತಾಗಿತ್ತು. ರಾಶಿ ರಾಶಿ ಮದ್ಯದ ಬಾಟೆಲ್, ಬಾಟೆಲ್ ಚೂರುಗಳು, ಕಸದ ರಾಶಿಯಿಂದಲೇ ತುಂಬಿಕೊಂಡಿತ್ತು. ಸದ್ಯ ಪಾರ್ಕ್ ಸ್ವಚ್ಛ ಮಾಡಿದ ನಂತರ ರಾತ್ರಿವೇಳೆ ಯಾರೂ ಪಾರ್ಕ್ ಪ್ರವೇಶಿಸದಂತೆ ಗೇಟಿಗೆ ಬೀಗ ಹಾಕುವ ವ್ಯವಸ್ಥೆ ಮಾಡಲಾಗಿತ್ತಾದರೂ ಮತ್ತೆ ದುಷ್ಕರ್ಮಿಗಳು ತಡೆಬೇಲಿ ಕಿತ್ತು ವಿಕೃತಿ ಮೆರೆದಿದ್ದಾರೆ. ಇಂತಹ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಲೈವ್ ಟ್ರ್ಯಾಕಿಂಗ್ ಸಿಸಿ ಕ್ಯಾಮರಾ, ಪಾರ್ಕ್ ಒಳಾಂಗಣದಲ್ಲಿ ಸುಂದರ ಕೈದೋಟಗಳನ್ನು ನಿರ್ಮಿಸುವ ಅಗತ್ಯವಿದೆ. ಪಾರ್ಕ್ ಬಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಪ್ರಸಿದ್ಧ ಚೇತನಾ ಕಲಾರಂಗದ ಸಕ್ರಿಯ ಸದಸ್ಯ, ಅಪ್ರತಿಮ ನಾಟಕ ಕಲಾವಿದ ರಾಮಚಂದ್ರ (ಬೆನಕ) ಆಚಾರ್ಯ (60) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಕುಂಭಾಶಿಯ ನಾರಾಯಣ ಆಚಾರ್ಯ – ಸತ್ಯಮ್ಮ ದಂಪತಿಯ ಪುತ್ರನಾದ ರಾಮಚಂದ್ರ ಆಚಾರ್ಯ ಸೆಂಟ್ರಿಂಗ್ ಮತ್ತು ಮರಗೆಲಸಗಳನ್ನು ಮಾಡುತ್ತಿದ್ದರು. ಕೋಟೇಶ್ವರದ ಚೇತನಾ ಕಲಾರಂಗದ ಸದಸ್ಯರಾಗಿ, ಸಂಸ್ಥೆಯ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ಪ್ರಸಿದ್ಧ ನಿರ್ದೇಶಕರಾದ ಪ್ರಭಾಕರ ಐತಾಳ, ವಾದಿರಾಜ ತವಳ, ವಾಸುದೇವ ಶೆಟ್ಟಿಗಾರ್, ಗಣೇಶ್ ಐತಾಳರ ನಿರ್ದೇಶನದ ಕುರಿದೊಡ್ಡಿ ಕುರುಕ್ಷೇತ್ರ, ಚೋರ ಚರಣದಾಸ, ಬಾವಿ ಕಳೆದಿದೆ, ಬೆನಕನ ಕೆರೆ ಮೊದಲಾದ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ಬೆನಕನ ಕೆರೆ ನಾಟಕದ ಬೆನಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅದ್ಭುತ ನಟನೆಯ ನಂತರ, ಆ ಪಾತ್ರದ ‘ಬೆನಕ’ ಎಂಬ ಹೆಸರು ಇವರಿಗೇ ಅಂಟಿಕೊಂಡು ಬೆನಕ ಆಚಾರ್ಯ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯತೊಡಗಿದರು. ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪರು ನಿರ್ಮಿಸಿ ನಿರ್ದೇಶಿಸಿದ್ದ…

Read More