Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: 2017-18 ನೇ ಸಾಲಿನ ರಾಷ್ಟ್ರ ಮಟ್ಟದ ಜೆಇಇ ಮೈನ್ ಪ್ರವೇಶ ಪರೀಕ್ಷೆಯಲ್ಲಿ ಕೋಟೇಶ್ವರದ ಗುರುಕುಲ ಪದವಿ ಪೂರ್ವ ಕಾಲೇಜಿನ 5 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಜೆಇಇ ಆಡ್ವಾನ್ಸ್ ಬರೆಯಲು ಅರ್ಹತೆ ಗಳಿಸಿ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ವೃಂದದವರು ಅಭಿನಂದಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಿಂದ ಹಣ ಸಂದಾಯವಾಗುತ್ತಿರುವುದನ್ನು ತಡೆಹಿಡಿಯಲು ಕೊಲ್ಲೂರಿನ ಮಾಜಿ ಧರ್ಮದರ್ಶಿ ಬಿ.ಎಂ ಸುಕುಮಾರ ಶೆಟ್ಟಿ ಅವರು ತಿಳಿಸಿದ್ದರಿಂದ ಸರಕಾರದ ಗಮನಕ್ಕೆ ತಂದು ತಡೆಹಿಡಿಯಲಾಗಿತ್ತು ಎಂದು ಸಚಿವ ರಮಾನಾಥ ರೈ ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಅವರು ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣಾ ಗಿಮಿಕ್ ಮಾಡಿದ್ದಾರೆಂದು ಬೈಂದೂರು ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಅವರು ಹೆಮ್ಮಾಡಿಯ ಬಿಜೆಪಿ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಮಾನಾಥ ರೈ ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೊಲ್ಲೂರು ದೇವಳದ ಟ್ರಸ್ಟಿಯಾದ ಬಳಿಕ ವಿದ್ಯಾರ್ಥಿಗಳಿಗಾಗಿ ದೇವಳದ ಶಾಲೆ ಆರಂಭಿಸಿದ್ದೇನೆ. ಸರಕಾರದಿಂದ ಬಿಸಿಯೂಟ ನೀಡುವ ಮೊದಲೇ ಕೊಲ್ಲೂರು ದೇವಳದಿಂದ ಸ್ಥಳೀಯ ಎಲ್ಲಾ ಶಾಲೆಗಳಿಗೂ ಬಿಸಿಯೂಟ ನೀಡುವ ವ್ಯವಸ್ಥೆ ಮಾಡಿದ್ದೇನೆ. ದೂರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ರೋಜರಿ ಮಾತಾ ಇಗರ್ಜಿಯಲ್ಲಿ ಕಥೊಲಿಕ್ ಸಭಾ ಘಟಕ ದಿನಾಚರಣೆ ಪ್ರಯುಕ್ತ ಖಾದ್ಯ ತಿಂಡಿಗಳ ಹಬ್ಬ (ಫುಡ್ ಫೆಸ್ತ್) ಸಹಾಯಕ ಧರ್ಮಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ ನೇತೃತ್ವದಲ್ಲಿ ಪವಿತ್ರ ಬಲಿದಾನ ಅರ್ಪಿಸಿದರು. ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾ ಶುಭಾಷಯ ಕೋರಿದರು. ನಂತರ ಫುಡ್ ಪೆಸ್ಟ್‌ನಲ್ಲಿ ಕಥೊಲಿಕ್ ಸಭಾ ಸದಸ್ಯರೆ ಸಿದ್ದ ಪದಿಸಿದ ವಿವಿಧ ರೀತಿಯ ಮಾಂಸಹಾರಿ ಖಾದ್ಯಗಳು, ಜೊತೆಗೆಇಡ್ಲಿ, ಶಾವಿಗೆ ಖಾದ್ಯ ತಿಂಡಿಗಳ ಪ್ರದರ್ಶನಕ್ಕೆ ಇಡಲಾಯಿತು. ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್, ನಿಕಟ ಪೂರ್ವ ಅಧ್ಯಕ್ಷ ಜೇಕಬ್ ಡಿಸೋಜಾ, ನಿಯೋಜಿತ ಅಧ್ಯಕ್ಷ ವಾಲ್ಟರ್ ಡಿಸೋಜಾ, ಉಪಾಧ್ಯಕ್ಷ ಬರ್ನಾಡ್ ಜೆ. ಡಿಕೋಸ್ತಾ, ಸಹ ಕಾರ್ಯದರ್ಶಿ ನಿರ್ಮಲಾ ಡಿಸೋಜಾ, ಸಹಾಯಕ ಖಚಾಂಚಿ ವಿಲ್ಸನ್ ಡಿಆಲ್ಮೇಡಾ, ಆಮ್ಚೊ ಸಂದೇಶ್ ಪ್ರತಿನಿಧಿ ವಿನ್ಸೆಂಟ್ ಡಿಸೋಜಾ, ರಾಜಕೀಯ ಸಂಚಾಲಕ ಜೋನ್ಸನ್ ಡಿಆಲ್ಮೇಡಾ, ಸರ್ಕಾರಿ ಸವಲತ್ತು ಸಂಚಾಲಕ ವಿನೋದ್ ಕ್ರಾಸ್ಟೊ, ಲೆಕ್ಕ ಪರಿಸೋಧಕ ವಿಲ್ಸನ್ ಒಲಿವೇರಾ, ಕಾರ್ಯಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಮುಖ್ಯೋಪಾಧ್ಯಾಯರಾಗಿ ರವಿದಾಸ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ಎನ್.ಕೆ.ಬಿಲ್ಲವ ರವರು ನೂತನ ಮುಖ್ಯೋಪಾಧ್ಯಾಯರನ್ನು ಸ್ವಾಗತಿಸಿಕೊಂಡು ಮಾತನಾಡಿ ಸಂಸ್ಥೆಯನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಮುಖ್ಯೋಪಾಧ್ಯಾಯರು ಸಮರ್ಥರಿದ್ದಾರೆ ಎಂದರು. ಸಂಸ್ಥೆಯ ನಿರ್ದೇಶಕರಾದ ಕೆ.ಪುಂಡಲೀಕ ನಾಯಕ್ , ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಉದಯ ಪೂಜಾರಿ, ರಾಜೀವ ಶೆಟ್ಟಿ, ಸತೀಶ ಪೂಜಾರಿ ಹಾಗೂ ಸಂಚಾಲಕರಾದ ಶಂಕರ ಪೂಜಾರಿ ಉಪಸ್ಥಿತರಿದ್ದರು. ಸಂಯೋಜಕಿ ಗೀತಾದೇವಿ ಅಡಿಗ ಅವರು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಕುಂದಾಪುರದ ಗುರುರಾಜ ಪೂಜಾರಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವಿಶೇಷ ಗೌರವ ಲಭಿಸಿದೆ. ಮನ್ ಕೀ ಬಾತ್‌ನಲ್ಲಿ ಉಲ್ಲೇಖಿಸಿದ ಬಳಿಕ ಭೇಟಿಯಾದ ಗುರುರಾಜ್‌ಗೆ ಮೋದಿ ವಿಶೇಷ ಅಭಿನಂದನೆ ಸಲ್ಲಿಸಿದ್ದು, ಈ ಕುರಿತು ಫೋಟೋ ಸಮೇತ ಟ್ವೀಟ್ ಕೂಡ ಮಾಡಿದ್ದಾರೆ. ಮಂಗಳವಾರ ಉಡುಪಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲೂ ಗುರುರಾಜ್ ಸಾಧನೆಯನ್ನು ಕೊಂಡಾಡಿದ್ದಾರೆ. ದೆಹಲಿಯಲ್ಲಿ ಅಭಿನಂದನೆ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಗುರುರಾಜ್ ಸಹಿತ ಭಾರತೀಯ ಕ್ರೀಡಾಪಟುಗಳಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿನಂದನೆ ಸಲ್ಲಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದು, ಈ ಸಂದರ್ಭ ದೇಶದ ಗೌರವ ಹೆಚ್ಚಿಸಿದ ಕ್ರೀಡಾಪಟುಗಳನ್ನು ಅವರು ಮನತುಂಬಿ ಅಭಿನಂದಿಸಿದ್ದಾರೆ. ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಗುರುರಾಜ್‌ಗೆ ಹಸ್ತಲಾಘವ ಮಾಡುವ ಪೋಟೋವನ್ನು ಮೋದಿ ಟ್ವೀಟ್ ಮಾಡಿಯೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ ಬಂದಾಗ ದೇಶದ ಸ್ಥಿತಿ ಹೇಗಿತ್ತು, ಆ ಬಳಿಕ ಆಗಿರುವ ಬದಲಾವಣೆ ಏನು ಮತ್ತು ಎಷ್ಟು ಎನ್ನುವುದರ ಅರಿವಿಲ್ಲದ ಹೊಸ ತಲೆಮಾರಿನ ಜನ ಅದನ್ನು ನಂಬುತ್ತಿದ್ದಾರೆ. ಜನರಿಗೆ ಸತ್ಯ ತಿಳಿಸಿ, ಬಿಜೆಪಿ ಅಪಪ್ರಚಾರ ಬಯಲುಗೊಳಿಸುವ ಹೊಣೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ರಾಜ್ಯ ಮತ್ತು ದೇಶದಲ್ಲಿ ಮರುಸ್ಥಾಪಿಸುವ ಕೆಲಸ ಮಾಡಬೇಕು ಎಂದು ಬೈಂದೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಮರವಂತೆಯಲ್ಲಿ  ನಡೆದ ಪಕ್ಷ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ದೊರೆತಾಗ ದೇಶ ಆಹಾರ, ವಸತಿ, ರಕ್ಷಣೆ, ಸಂಪರ್ಕವೇ ಆದಿಯಾದ ಎಲ್ಲ ಕ್ಷೇತ್ರಗಳಲ್ಲೂ ಕೊರತೆ ಎದುರಿಸುತ್ತಿತ್ತು. ದೀರ್ಘಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುವ ಮೂಲಕ ಜಗತ್ತಿನ ಮುಂಚೂಣಿಯ ರಾಷ್ಟ್ರಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ಆರ್.ಎನ್.ಎಸ್ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಬಸ್ರೂರು ವೆಂಕಟೇಶ್ ಪುರಾಣಿಕ್ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದು ಅವರನ್ನು ಕುಂದಾಪುರ ತಾಲೂಕು ಹವ್ಯಕ ಸಭಾವತಿಯಿಂದ  ಅವರ ಮನೆಗೆ ತೆರಳಿ ಫಲ-ಪುಷ್ಪ, ಸ್ಮರಣಿಕೆ, ನಗದು ನೀಡಿ ಅಭಿನಂದಿಸಲಾಯಿತು. ತಾಲೂಕು ಹವ್ಯಕ ಸಭಾಧ್ಯಕ್ಷ ಎಮ್. ನಾಗರಾಜ ಭಟ್ ಮಕ್ಕಿ ದೇವಸ್ಥಾನ ಅಭಿನಂದಿಸಿ ಮಾತನಾಡಿ ವಿದ್ಯಾರ್ಥಿ ವೆಂಕಟೇಶ್ ಗ್ರಾಮೀಣ ಭಾಗದ ಮದ್ಯಮ ವರ್ಗದ ಕುಟುಂಬದಿಂದ ಬಂದಿರುವವನಾಗಿದ್ದು ಇವನು ಸ್ವಪ್ರಯತ್ನದಿಂದ ಸಾಧನೆ ಮಾಡಿದ್ದಾನೆ. ಇವನ ಸಾಧನೆ ತಾಲೂಕಿಗೆ ಹಾಗೂ ಸಮಾಜಕ್ಕೆ ಹೆಮ್ಮೆತಂದಿರುತ್ತದೆ. ಇವನ ಈ ಸಾಧನೆಗೆ ಹೆತ್ತವರು ಹಾಗೂ ಉಪನ್ಯಾಸಕ ವರ್ಗದವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಬಹಳ ಮುಖ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಹವ್ಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಯು. ಸಂದೇಶ ಭಟ್, ಶ್ರೀ ರಾಮಚಂದ್ರಾಪುರ ಮಠದ ಬಸ್ರೂರು ಭಾಗದ ಗುರಿಕಾರ ರವಿಶಂಕರ ಮಧ್ಯಸ್ಥ, ವಿದ್ಯಾರ್ಥಿ ತಂದೆ ಸುಬ್ರಹ್ಮಣ್ಯ ಪುರಾಣಿಕ್, ತಾಯಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮಾಜದ ಸಂಪನ್ನವರ್ಗ ತಮ್ಮ ಮಕ್ಕಳನ್ನು ನಾಟಕರಂಗದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಸಕಾರಾತ್ಮಕವಾಗಿ ಸ್ಪಂದಿಸದ ಸಮಯವೊಂದಿತ್ತು. ಆದರೆ ಈಗ ಬದುಕು ನಿಂತ ನೀರಾಗದೇ ಮನಸ್ಸಿಗೆ ಮುದಕೊಡುವ ಹವ್ಯಾಸಗಳು ಬೇಕೆಂಬ ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ನಾಟಕ ತರಬೇತಿ ಶಿಬಿರಗಳಿಗೆ ಕಳುಹಿಸಲು ಮುಂದಾಗಿದ್ದಾರೆ ಎಂದು ರಂಗಾಯಣ ಹಾಗೂ ನೀನಾಸಂ ಪದವೀಧರ ವಾಸುದೇವ ಗಂಗೇರಾ ಹೇಳಿದರು. ಶ್ರೀ ಶಾರದಾ ವೇದಿಕೆಯಲ್ಲಿ ಬೈಂದೂರು ಲಾವಣ್ಯ ಆಶ್ರಯದಲ್ಲಿ ನಡೆದ 21 ನೇ ವರ್ಷದ ಮಕ್ಕಳ ಬೇಸಿಗೆ ನಾಟಕ ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಪಂಚದಲ್ಲಿ ವಿಭಿನ್ನ ಸ್ತರಗಳ ಬದುಕಿನ ಓಟದ ನಡುವೆ ಮಕ್ಕಳು ಬಾಂದವ್ಯ, ಕುಟುಂಬ, ಪರಿಸರ ಪ್ರಜ್ಞೆಯಿಲ್ಲದೇ ಕಳೆದುಹೋಗುತ್ತಿದ್ದಾರೆ. ಇದನ್ನು ತಡೆಗಟ್ಟುವ ಮೂಲಕ ಮಕ್ಕಳ ಬಾಲ್ಯವನ್ನು ಅವರು ಆನಂದಿಸಬೇಕೆಂಬ ಕಲ್ಪನೆಯಿಂದ ಹೆತ್ತವರು ಹೆಚ್ಚಿನ ಸಹಕಾರ ನೀಡಿ ಮಕ್ಕಳನ್ನು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆರೋಗ್ಯಕರ ಮನಸ್ಸಿದ್ದರೆ ಶರೀರ ಸ್ವಾಸ್ಥ್ಯವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಪುತ್ತೂರು ಶ್ರೀ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಇದರ ಆಶ್ರಯದಲ್ಲಿ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳ ಅಂತರ್ ಕಾಲೇಜು ಮಂಗಳೂರು ವಲಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್ ಆಗಿ ಮೂಡಿಬಂದಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ತಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ಇದನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿ ಹೇಳಿದರು. ಬೈಂದೂರು ಕುಮಟೆಕಾರ್ ನಾಯಕ್ ಕುಂಟುಂಬಿಕರ ಮೂಲ ನಿವಾಸಕ್ಕೆ ತಮ್ಮ ಪಟ್ಟ ಶಿಷ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯೊಡನೆ ಚಿತ್ತೈಸಿ ಕುಟುಂಬಿಕರ ಗುರುಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಜಿಎಸ್‌ಬಿ ಸಮಾಜದ ಪರಂಪರೆಯ ಬಲವಾದ ರಕ್ಷಣೆಯಿಂದ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೂಡಿ ಕರ್ತವ್ಯವನ್ನು ಪೂಜೆ ಎಂಬ ಭಾವನೆಯಿಂದ, ದುಡಿಮೆಯ ಒಂದಂಶವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಿ ಅದರೊಂದಿಗೆ ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿಯಿಂದ ಬಾಳುವಂತಾಗಿದೆ. ಸನಾತನ ಧರ್ಮದ ಮೂಲ ತತ್ವಗಳನ್ನಾಧರಿಸಿ ಸಾರಸ್ವತರು ತಾವು ನೆಲೆಸಿದ ಸ್ಥಳಗಳಲ್ಲಿ ಸಂಘಟಿತರಾಗಿ ಹಾಗೂ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅಲ್ಲದೇ ಇತರರ ಬೆಳವಣಿಗೆ ಜೊತೆಗೆ ತಾವೂ ಬೆಳೆಯಬೇಕೆನ್ನುವ ಧರ್ಮದ ತಳಹದಿಯಲ್ಲಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಆದರ್ಶಪ್ರಾಯವಾದ ಜೀವನ ನಡೆಸುತ್ತಿದ್ದಾರೆ…

Read More