ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಜರಾತಿನ ವಡೋದರದಲ್ಲಿ ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ ನಾಗರಾಜ ಖಾರ್ವಿ ಇವರು 200ಮೀ ಬ್ರೆಷ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 100ಮೀ ಬ್ರೆಷ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 50ಮೀ. ಬ್ರೆಷ್ಟ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ನಾಗರಾಜ ಖಾರ್ವಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚುಗೋಡು ಮತ್ತು ಗುಜ್ಜಾಡಿ, ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆ ವಿದ್ಯಾರ್ಥಿ. ಇವರಿಗೆ ರೇಷ್ಮೆ ಇಲಾಖೆಯ ನಿರೀಕ್ಷಕ ಬಿ. ಕೆ. ನಾಯ್ಕ್, ಈಜು ತರಬೇತುದಾರ ಶಿವಾನಂದ ಗಟ್ಟಿ, ಲೋಕರಾಜ್ ವಿಟ್ಲ ಈಜು ತರಬೇತಿ ನೀಡಿರುತ್ತಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮರವಂತೆ ಮೂಲದ ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಅವರ ’ಇನ್ನೂನು ಬೇಕಾಗಿದೆ’ ಹಾಡಿಗೆ ಬೆಂಗಳೂರಿನಲ್ಲಿ ಜರುಗಿದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಅವರು ಮುಂದಿನ ನಿಲ್ದಾಣ ಚಿತ್ರಕ್ಕಾಗಿ ’ಇನ್ನೂನು ಬೇಕಾಗಿದೆ’ ಹಾಡು ರಚಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಭಾಷೆ ಬಳಕೆ ಹೆಚ್ಚಾದರೆ ಕನ್ನಡ ಉಳಿಯುತ್ತದೆಯೇ ಹೊರತು ಹೋರಾಟದಿಂದಲ್ಲ. ಕನ್ನಡ ಬಳಕೆ ಹೆಚ್ಚು ಮಾಡುವುದರಿಂದ ಕನ್ನಡ ಉಳಿಸಲು ಸಾಧ್ಯ, ಸಾಮಾಜಿಕ ಜಾಲತಾಣದಿಂದ ಓದು ಕಡಿಮೆ ಆಗುತ್ತದೆ ಎನ್ನುವ ಆರೋಪದ ನಡುವೆ ಜಾಲತಾಣ ಕೂಡಾ ಬರವಣಿಗೆ ವೇದಿಕೆ ಆಗುತ್ತದೆ. ಜಂಗಮವಾಣಿಲ್ಲಿ ಕನ್ನಡ ಅಕ್ಷರ ಜೋಡಣೆ ಮಾಡುವ ಮೂಲಕ ಕನ್ನಡ ಉಳಿಸುವ ಕೆಲಸ ಮಾಡೋಣ ಎಂದು ಜಿಲ್ಲಾ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಭಾವನಾ ಆರ್. ಭಟ್ ಕೆರೆಮಠ ಹೇಳಿದರು. ಕೋಟ ಕಲಾ ಸೌರಭ ಸಂಸ್ಕೃತಿಕ ಸಂಘಟನೆ, ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಕಾಲೇಜ್ ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಪದವಿ ಮತ್ತು ಪದವಿಪೂರ್ವ ಕಾಲೇಜ್ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ ಅಮ್ಮ ಹೇಳುವ ಶೋಭಾನೆ, ಅಪ್ಪ ಹೇಳುವ ಗಾದೆ, ಅಜ್ಜಿ ಹೇಳುವ ನೀತಿಪಾಠ, ಅಜ್ಜ ಹೇಳುವ ಕತೆ ಇವೆಲ್ಲವೂ ಸಾಹಿತ್ಯದ ಪ್ರಕಾರಗಳಾಗಿದ್ದು, ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟ ಕಲಾ ಸೌರಭ ಸಂಸ್ಕೃತಿಕ ಸಂಘಟನೆ, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ಆಶ್ರಯದಲ್ಲಿ ಕಾಲೇಜು ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಪದವಿ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್. ಜನಾರ್ದನ ಮರವಂತೆ ಮಾತನಾಡಿ ಸಾಹಿತ್ಯ, ಶಿಲ್ಪ ಕಲೆಗೆ ಸಾಮ್ಯತೆ ಇದೆ. ಶಿಲ್ಪಿ ತುಂಡುಕಲ್ಲಿಗೆ ಪ್ರತಿಭೆ, ಧ್ಯಾನದ ಮೂಲಕ ಸುಂದರ ಮೂರ್ತಿ ಕೊಟ್ಟರೆ ಸಾಹಿತಿ ತನಗೆ ಸಿಕ್ಕ ವಸ್ತುವಿಗೆ ತನಗೆ ಬೇಕಾದ ಹಾಗೆ ರೂಪ ಕೊಡಲು ಭಾಷೆ, ಜ್ಞಾನ ಬಳಸುತ್ತಾನೆ. ಸಾಹಿತ್ಯ ಕ್ಷೇತ್ರಕ್ಕೆ ಬರುವ ಎಲ್ಲರಿಗೂ ಭಾಷೆ ಬಳಕೆ, ನಿರೂಪಿಸುವ ತಾಕತ್ತು ಇರಬೇಕಾಗುತ್ತದೆ. ಭಾಷೆ ಹೇಗೆ ಬಳಸಬೇಕು ಹೇಗೆ ಪ್ರಸ್ತುತ ಪಡಿಸಬೇಕು ಎನ್ನುವುದು ಕೊರತೆಯಾಗಿದ್ದು, ಅಧ್ಯಯನದ ಮೂಲಕ ಕೊರೆತೆ ನೀಗಿಸಿಕೊಳ್ಳಬೇಕು ಎಂದರು. ಭಾಷಾ ಜ್ಞಾನ ಹಿಡಿತ ಇಲ್ಲದಿದ್ದಾಗ ನಾವು ಹೇಳಬೇಕಾದ ಸಂಗತಿ ಹೊರಗಿಡಲು ಆಗದು. ಭಾಷೆ ಮತ್ತು ಜ್ಞಾನದ ಸಂಪಾದನೆಗೆ ತಕ್ಕಮಟ್ಟಿಗಿನ ಅಧ್ಯಯನ ಬೇಕು. ಸಾಹಿತ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಥಾಯ್ಲೆಂಡ್ ಫುಕೆಟ್ ರವಾಯ್ ಬಾಕ್ಸಿಂಗ್ ಸ್ಟೇಡಿಯಂನಲ್ಲಿ ಈಚೆಗೆ ನಡೆದ ಅಂತರ ರಾಷ್ಟ್ರ ಮಟ್ಟದ 65 ಕೆ ಜಿ ವಿಭಾಗದ ಮುಯಿಥಾಯ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಥಾಯ್ಲೆಂಡ್ ಕಿಕ್ ಬಾಕ್ಸರ್ ನ್ಯುವ್ಲಿಕಿಟ್ ವಿರುದ್ಧ ಕುಂದಾಪುರದ ಕ್ರೀಡಾಪಟು ಅನೀಶ್ ಶೆಟ್ಟಿ ಗೆಲುವು ದಾಖಲಿಸಿದ್ದಾರೆ. ಬಾಕ್ಸಿಂಗ್ ರಿಂಕ್‌ನಲ್ಲಿ ಎದುರಾಳಿ ಸೋಲಿಸಿ ಅಂತರ ರಾಷ್ಟ್ರ ಮಟ್ಟದ ಚಾಂಪಿಯನ್ ಷಿಪ್ ಪಟ್ಟ ದಾಖಲಿಸಿದ ಅನೀಶ್ ಶೆಟ್ಟಿ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಅನೀಶ್ ಗೆಲುವು ದಾಖಲಿಸಲು ‘ಫ್ಲೈಯಿಂಗ್ ನೀ’ (ಹಾರು ಮುಂಗಾಲು) ಹೊಡೆತವು ಪ್ರಮುಖ ಕಾರಣವಾಯಿತು. 65 ಕೆಜಿ ವಿಭಾಗದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಷಿಪ್ ಪಡೆದ 30ರ ಹರೆಯದ ಅನೀಶ್ ಶೆಟ್ಟಿ ಕುಂದಾಪುರ ತಾಲ್ಲೂಕಿನ ಕಟ್ಕೆರೆ ಶಂಕರ ಶೆಟ್ಟಿ ಹಾಗೂ ತಾಯಿ – ಉಷಾ ಶೆಟ್ಟಿ ದಂಪತಿ ಪುತ್ರ. ಬೆಂಗಳೂರಿನಲ್ಲಿ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು. ಫಿಟ್‌ನೆಸ್‌ಗಾಗಿ ಜಿಮ್ ಸೇರಿಕೊಂಡಿದ್ದರು. ಅವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಮಲ್ಯಾಡಿ ಶಿವರಾಮ ಶೆಟ್ಟಿ ತೆಕ್ಕಟ್ಟೆ ಹಾಗೂ ಉಪಾಧ್ಯಕ್ಷರಾಗಿ ದೀನಪಾಲ ಶೆಟ್ಟಿ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಭಿನಂದಿಸಿ ಮಾತನಾಡಿದರು. ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ನಿರ್ದೇಶಕ ದಿವಾಕರ ಪೂಜಾರಿ ಕಡ್ಗಿಮನೆ, ಎಸ್. ದಿನಕರ ಶೆಟ್ಟಿ ಸುಣ್ಣಾರಿ, ನಾಸಿರ್ ಮಾವಿನಕಟ್ಟೆ, ಅಣ್ಣಯ್ಯ ಗಾಣಿಗ ಮುಲ್ಲಿಮನೆ, ಗೋಪಾಲ ಬಳೆಗಾರ, ಗೀತಾ ಎಸ್.ಶೆಟ್ಟಿ ಕನ್ಯಾನ, ಶಶಿಕಲಾ ಎಸ್.ಪೂಜಾರಿ ಗುಲ್ವಾಡಿ, ಶೇಖರ ಚಾತ್ರಬೆಟ್ಟು ಬೀಜಾಡಿ, ಸುಖಾನಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಅಗ್ನಿ ಆಕಸ್ಮಿಕ ತಡೆ ಹಾಗೂ ಪರಿಹಾರೋಪಾಯ ಕುರಿತು ಎಲ್ಲರಿಗೆ ಅರಿವು ಇರಬೇಕು. ವಿದ್ಯಾರ್ಥಿಗಳು ಈ ಕುರಿತಾದ ಪರಿಜ್ಞಾನ ಪಡೆದರೆ ಅಂತಹ ಸಂದರ್ಭ ಎದುರಾದಾಗ ಸಹಕರಿಸಬಹುದು. ಅದರ ಅರಿವು ಇಲ್ಲದವರಿಗೂ ಮಾಹಿತಿ, ಮಾರ್ಗದರ್ಶನ ನೀಡಬಹುದು ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎನ್. ಶೇರುಗಾರ್ ಹೇಳಿದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ರೋವರ್ ರೇಂಜರ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ಆಶ್ರಯದಲ್ಲಿ ಕುಂದಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಗುರುವಾರ ಆಯೋಜಿಸಿದ್ದ ಅಗ್ನಿ ಆಕಸ್ಮಿಕ ತಡೆ ಮತ್ತು ಪರಿಹಾರ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ರಘು ನಾಯ್ಕ್ ಬೆಂಕಿ ಆಕಸ್ಮಿಕ, ಅನ್ಯ ಅವಘಡ ನಡೆಯದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಸಂಭವಿಸಿದಾಗ ತಡೆಗಟ್ಟುವ ಅರಿವು ನೀಡುವುದು ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳು ಇದರ ಗರಿಷ್ಠ ಲಾಭ ಪಡೆಯಬೇಕು ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಸ್ಕತ್‌ನ ಚಾಪ್ಟರ್ ಆಫ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಪಾಧ್ಯಕ್ಷ, ನಾಯ್ಕನಕಟ್ಟೆಯ ಸಿಎ ರಾಮಚಂದ್ರ ಪ್ರಭು ಅವರು ಬೆಸ್ಟ್ ಚಾಪ್ಟರ್ ಓವರ್‌ಸೀಸ್ ಕೆಟಗರಿ -2 ಅವಾರ್ಡ್ ದೊರೆತಿದೆ. ದೇಹಲಿಯ ಅಶೋಕ ಹೋಟೆಲ್‌ನಲ್ಲಿ ಶುಕ್ರವಾರ ಜರುಗಿದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ 70ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಹಣಕಾಸು ಮತ್ತು ಕಾರ್ಪರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ನಾಯ್ಕನಕಟ್ಟೆಯ ಪ್ರಭುಕೇರಿಯವರಾದ ರಾಮಚಂದ್ರ ಪ್ರಭು ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾಯ್ಕನಕಟ್ಟೆಯಲ್ಲಿಯೂ, ಪಿಯು ಶಿಕ್ಷಣವನ್ನು ಉಪ್ಪುಂದ ಹಾಗೂ ಪದವಿ ಶಿಕ್ಷಣವನ್ನು ಬೈಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪೂರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿಗೆ ಸಮೀಪದ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಎಂಬಲ್ಲಿ 2019, ಜನವರಿ 26 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಶುಕ್ರವಾರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದರು. ಈ ಪ್ರಕರಣದಲ್ಲಿ ಅವರಿಗೆ ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಎತ್ತಿಹಿಡಿದ ಸುಪ್ರೀಂ ಕೋರ್ಟ್ ಜಾಮೀನು ವಜಾಗೊಳಿಸಿತ್ತು. ಟಾಯ್ಲೆಟ್ ಪಿಟ್ ವಿಚಾರಕ್ಕೆ ಸಂಬಂಧಿಸಿ ವಿಚಾರಕ್ಕೆ ನಡೆದ ಪ್ರಕರಣದಲ್ಲಿ ಭರತ್ ಹಾಗೂ ಯತೀಶ್ ಎಂಬ ಯುವಕರಿಬ್ಬರ ಕೊಲೆ ನಡೆದಿತ್ತು. ಜಾಮೀನು ರದ್ದತಿ ಆಗಿದ್ದರಿಂದ ಆರೋಪಿ ಬಂಧಿಸುವಂತೆ ನ್ಯಾಯಾಲಯವು ಆದೇಶ ನೀಡಿತ್ತು. ಆರೋಪಿಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ಶರಣಾದ ರಾಘವೇಂದ್ರ ಕಾಂಚನ್‌ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಉಡುಪಿ ಉಪವಿಭಾಗದ ಡಿವೈಎಸ್‌ಪಿ ಟಿ.ಜೈಶಂಕರ್, ಬ್ರಹ್ಮಾವರ ಸರ್ಕಲ್ ಇನ್‌ಸ್ಪೆಕ್ಟರ್ ಅನಂತಪದ್ಮನಾಭ, ಕೋಟ ಎಸ್.ಐ ನಿತ್ಯಾನಂದ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಅಷ್ಟಠಬಂಧ ಬ್ರಹ್ಮಕಲಶೋತ್ಸವ ಸಂದರ್ಭ ಜರುಗಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತ ಶುಕ್ರವಾರ ಜರುಗಿತು. ಈ ಸಂದರ್ಭ ಮಾತನಾಡಿದ ದೇವಸ್ಥಾನದ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಊರಿನ ಧಾರ್ಮಿಕ ಕಾರ್ಯಕ್ರಮಗಳು ಸರ್ವರ ಸಹಕಾರವಿದ್ದಾಗಲಷ್ಟೇ ಯಶಸ್ಸು ಕಾಣಲು ಸಾಧ್ಯವಿದೆ. ಊರಿನ ಶ್ರೇಯಸ್ಸಿಗಾಗಿ ನಡೆಯುವ ಧಾರ್ಮಿಕ ಕೆಲಸಗಳಲ್ಲಿ ಎಲ್ಲವೂ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು. ದೇವಳದ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಆಡಳಿತ ಮಂಡಳಿ ಸದಸ್ಯರುಗಳಾದ ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಅಣ್ಣಪ್ಪ ಪೂಜಾರಿ, ನಾಗರಾಜ ಗಾಣಿಗ ಬಂಕೇಶ್ವರ, ದೊಟ್ಟಯ್ಯ ಪೂಜಾರಿ, ಗ್ರಾಮಸ್ಥರಾದ ಶ್ರೀನಿವಾಸ ಉಬ್ಜೇರಿ, ಬಿ. ಚಂದ್ರಶೇಖರ ನಾವಡ, ಗಿರೀಶ್ ಬೈಂದೂರು, ಗಣೇಶ್ ಪೂಜಾರಿ, ಶಶಿಕಲಾ, ಸಾವಿತ್ರಿ ಅಳ್ವೆಗದ್ದೆ, ರಘುರಾಮ ಪೂಜಾರಿ ಸೇರಿದಂತೆ ಹಲವರು…
