ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಸ್ಟೆಲಾ ಮ್ಯಾರಿಸ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ 14 ವರ್ಷದ ಬಾಲಕ- ಬಾಲಕಿಯರ ನೆಟ್ಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದಿದೆ. ಬಾಲಕರ ತಂಡದಲ್ಲಿ ಸಮರ್ಥ್, ಸಮರ್ಥ್ ಖಾರ್ವಿ, ವೈಭವ್, ನಾಗರಾಜ್, ಅರವ್, ವಿಗ್ನೇಶ್, ಯಶ್ವಿಕ್, ಮೌನೇಶ್, ನಿಯಾನ್ ಮತ್ತು ಬಾಲಕಿಯರ ತಂಡದಲ್ಲಿ ಮನ್ವಿತಾ, ಸನ್ನಿಧಿ, ಶ್ರೀ ಲಕ್ಷ್ಮಿ, ಅಪೇಕ್ಷಾ, ಧನ್ಯ ಖಾರ್ವಿ, ಸನ್ನಿಧಿ ಖಾರ್ವಿ, ಶ್ರಾವಣಿ, ಅನ್ವಿತಾ, ಆಶೀತಾ ಖಾರ್ವಿ, ಅದಿತಿ ಪ್ರತಿನಿಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದೀಕ್ಷಿತ್ ಮೇಸ್ತ ಮಾರ್ಗದರ್ಶನ ನೀಡಿದರು. ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಬೋಧಕ ವೃಂದ ಮತ್ತು ಶಿಕ್ಷಕ-ರಕ್ಷಕ ಸಮಿತಿ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ , ಶ್ರೀ ವಿಶ್ವಕರ್ಮ ಕಲಾವೃಂದ ಹಾಗೂ ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಜಂಟಿ ಆಶ್ರಯದಲ್ಲಿ ಗುರುವಾರ ಸಾಲಿಗ್ರಾಮದ ಶ್ರೀ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ಪುರೋಹಿತರಾದ ಲಕ್ಷ್ಮೀಕಾಂತ್ ಶರ್ಮ ಪೌರೋಹಿತ್ಯದಲ್ಲಿ ಸಂಘದ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ಯ ದಂಪತಿಗಳ ಸಮ್ಮುಖದಲ್ಲಿ ನೆರವೇರಿತು. ಅಪರಾಹ್ನ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ಜರಗಿತು. ಈ ಅಂಗವಾಗಿವ .ಅಪರಾಹ್ನ 2.30ರಿಂದ ಎಂ. ಹೆಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ‘ಭೀಷ್ಮ ವಿಜಯ ಯಕ್ಷಗಾನ ಪ್ರಸಂಗ ಅಭಿನಯ.ಅತಿಥಿ ಕಲಾವಿದರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಭಾಗವತರಾಗಿ ಭಾಗಿಯಾದರು. ರಾತ್ರಿ 9.00 ರಿಂದ ಕಲಾವೃಂದ ಹಾಗೂ ವಿಶ್ವಜ್ಯೋತಿ ಮಹಿಳಾ ಬಳಗದ ಸದಸ್ಯರಿಂದ ’ಕಲಾ ವೇದಿಕೆ – 2026ʼ ಸಂಗೀತ, ನೃತ್ಯ ಮತ್ತು ಗಾನ ವೈಭವ ಮನೋರಂಜನಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಕರ್ನಾಟಕ ಸಂಘ ಕತಾರ್ (KSQ) ನಿಯೋಗದ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ, ಉಪಾಧ್ಯಕ್ಷರಾದ ಅನಿಲ್ ಭಾಸಗಿ, ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾ ಸಮಿತಿ ಅಧ್ಯಕ್ಷರಾದ ಡಾ. ರವಿ ಶೆಟ್ಟಿ, ಸಲಹೆಗಾರರಾದ ವೀರೇಶ್ ಮಣ್ಣಂಗಿ ಹಾಗೂ ಸಂದೀಪ್ ರೆಡ್ಡಿ (ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಮಿತಿಯಲ್ಲಿ ಕರ್ನಾಟಕದ ಪ್ರತಿನಿಧಿ) ಅವರೊಂದಿಗೆ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿ, ಭಾರತೀಯ ರಾಯಭಾರ ಕಚೇರಿ, ದೋಹಾದ ಉಪ ರಾಯಭಾರ ಮುಖ್ಯಸ್ಥರು (DCM) ಸಂದೀಪ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ ಸಲ್ಲಿಸಿತು. ಈ ಸಂದರ್ಭದಲ್ಲಿ, ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕ ಸಂಘ ಕತಾರ್ಗೆ ನೀಡಿದ ಅತ್ಯುತ್ತಮ ಮಾರ್ಗದರ್ಶನ, ನಿರಂತರ ಪ್ರೋತ್ಸಾಹ ಹಾಗೂ ಅಚಲ ಬೆಂಬಲಕ್ಕಾಗಿ KSQ ನಿಯೋಗವು ಸಂದೀಪ್ ಕುಮಾರ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿತು. ಸಂಘದ ವಿವಿಧ ಸಮುದಾಯ ಉಪಕ್ರಮಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹಾಗೂ ನಿರಂತರ ಮಾರ್ಗದರ್ಶನವನ್ನು ನಿಯೋಗವು ವಿಶೇಷವಾಗಿ ಸ್ಮರಿಸಿತು. ಅವರ ಬೆಂಬಲವು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಹಿಳೆಯರ ಆರ್ಥಿಕ ಸಬಲೀಕರಣವು ಕುಟುಂಬದ ಅಭಿವೃದ್ಧಿಯಷ್ಟೇ ಅಲ್ಲದೆ, ಸಮಾಜದ ಪ್ರಗತಿಗೂ ಪ್ರಮುಖ ಆಧಾರವಾಗಿದೆ. ಮಹಿಳೆಯರಲ್ಲಿರುವ ಕೌಶಲ್ಯಕ್ಕೆ ಸೂಕ್ತ ವೇದಿಕೆ ಹಾಗೂ ಮಾರುಕಟ್ಟೆ ದೊರೆತಾಗ ಅದು ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಳ್ವಾಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಹೇಳಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ವೇದಿಕೆ ‘ಸಕ್ಷಮಾ’ ಹಾಗೂ ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಸಹಯೋಗದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆಸಕ್ತ ಗೃಹಿಣಿಯರು, ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹಾಗೂ ಹವ್ಯಾಸಿ ಕಸೂತಿ ಕಲಾವಿದೆಯರಿಗಾಗಿ ಆಯೋಜಿಸಿರುವ ‘ಆರಿ ಲಹರಿ’ 15 ದಿನಗಳ ಉಚಿತ ಆರಿ ಕಸೂತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮಹತ್ವದ ಕೊಡುಗೆ ನೀಡುತ್ತವೆ. ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಿ, ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಆರ್ಥಿಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು. ಕೌಶಲ್ಯವು ಕೇವಲ ವೈಯಕ್ತಿಕ ಆಸಕ್ತಿಯಾಗಿ ಉಳಿಯದೆ, ಆದಾಯದ ಮೂಲವಾಗಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಇಲಾಖಾ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ/ಕೃಷಿ ಪಂಡಿತ ಯೋಜನೆಯಡಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಪಡೆಯಲಾಗುತ್ತಿದ್ದು ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಕೆ-ಕಿಸಾನ್ ಪೋರ್ಟಲ್ನಡಿ RSK Loginಅಥವಾ Citizen Loginಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಕೇಂದ್ರ/ಸ್ವತಃ ಆಸಕ್ತ ರೈತ/ರೈತ ಮಹಿಳೆಯರು ಪ್ರತ್ಯೇಕವಾಗಿ ರೈತರ FID ಅನ್ನು ಬಳಸಿಕೊಂಡು ಆನ್ ಲೈನ್ ಮೂಲಕ ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟಿವಿ ರಿಚಾರ್ಜ್ ಮಾಡುವ ಹೆಸರಿನಲ್ಲಿ ಸೈಬರ್ ಕಳ್ಳರು ಲಿಂಕ್ ಕಳುಹಿಸಿ, ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ವಿವೇಕಾನಂದ ಕೋಟೆಗಾರ್ (61) ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಯಲ್ಲಿದ್ದ 1.88 ಲಕ್ಷ ರೂ. ಹಣವನ್ನು ಯಾರೋ ಸೈಬರ್ ವಂಚಕರು ಮೋಸ ಮಾಡಿ ಲಪಟಾಯಿಸಿದ ಘಟನೆ ಬೆಳಕಿಗೆ ಬಂದಿದೆ. ವಿವೇಕಾನಂದ ಅವರು ಸೆ.12 ರ ಬೆಳಗ್ಗೆ ಮೊಬೈಲ್ನಲ್ಲಿ ಟಾಟಾ ಸೈ ವೆಬ್ಸೈಟ್ಗೆ ಹೋಗಿ ಹುಡುಕಿದಾಗ 06009616528 ನಂಬರ್ ಇದ್ದು, ಅದಕ್ಕೆ ಕರೆ ಮಾಡಿದ್ದಾರೆ. ಆಗ ಆ ಆರೋಪಿಯು ಟಾಟಾ ಸೈ ಕರೆನ್ಸಿ ದರ ಕಡಿಮೆಯಿದ್ದು, ರಿಚಾರ್ಜ್ ಮಾಡಿಸಿ ಎಂದು ಹೇಳಿದ್ದ. ಅದರಂತೆ ಇವರು ಪತ್ನಿ ಬಳಿ ರಿಚಾರ್ಜ್ ಮಾಡುವಂತೆ ಹೇಳಿದ್ದು, ಅವರು ಈ ಹಿಂದೆ ರಿಚಾರ್ಜ್ ಮಾಡುತ್ತಿದ್ದ 209 ರೂ. ಹಾಕಿದ್ದಾರೆ. ಆಗ ಆ ಆರೋಪಿಯು ನೀವು ಈಗ ರಿಚಾರ್ಜ್ ಮಾಡಿದ ಹಣ ನನ್ನ ಸಿಸ್ಟಮ್ನಲ್ಲಿ ತೋರಿಸಲು ತಡವಾಗುತ್ತದೆ. ಅದಕ್ಕೆ ನಾನು ಲಿಂಕ್ ಕಳುಹಿಸುತ್ತೇನೆ, ಅದರಲ್ಲಿ ರಿಚಾರ್ಜ್ ಮಾಡಿದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ-ಯಡ್ತಾಡಿ ಕೊಡ ಮಾಡುವ 2026ನೇ ಸಾಲಿನ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರವನ್ನು ಪದ್ಮಶ್ರೀ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಆಯ್ಕೆ ಮಾಡಲಾಗಿದೆ. ಕಿತ್ತಳೆ ಹಣ್ಣನ್ನು ಮಾರಿ ತನ್ನ ಊರಿನಲ್ಲಿ ಯಾರು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ತನ್ನ ಊರಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಅಕ್ಟೋಬರ್ 18ರಂದು ನಡೆಯುವ ನಮ್ಮೂರ ದಸರಾ-2026( ಭಕ್ತಿ ಬಣ್ಣದ ಮಾರ್ದನಿ) ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯದರ್ಶಿ ಸುಧಾಕರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗ್ರಾಮದಲ್ಲಿ ದೇಗುಲ ಹೇಗೆ ಇರುತ್ತದೆಯೋ ಅದೇ ರೀತಿ ಆ ಊರಿನ ಕೆರೆ ಕೂಡಾ ಅಷ್ಟೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ದಿಸೆಯಲ್ಲಿ ಕೋಟದ ವರುಣತೀರ್ಥ ಕೆರೆ ಊರಿನ ಸೌಂದರ್ಯದ ಮೆರಗನ್ನು ಹೆಚ್ಚಿಸಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಅವರು ಕೋಟದ ವರುಣತೀರ್ಥಕೆರೆಯಲ್ಲಿ ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 51ನೇ ವರ್ಷದ ಉತ್ಸವದಲ್ಲಿ ಹಮ್ಮಿಕೊಂಡ ಈಜು ಸ್ಪರ್ಧೆಯಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಕೃಷಿಗೆ ಪೂರಕವಾದ ಈ ಕೆರೆ ಸಮಾಜದ ಸದ್ಭಳಕೆಯ ಕೇಂದ್ರವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮವನ್ನು ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇ.ಮೂ.ಸುಬ್ರಹ್ಮಣ್ಯ ಅಡಿಗ ಶುಭಹಾರೈಸಿದರು. ಸಮಿತಿಯ ಅಧ್ಯಕ್ಷ ಆನಂದ್ ದೇವಾಡಿಗ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಚಂದ್ರ ಪೂಜಾರಿ, ಕಾರ್ಯಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಉದ್ಯಮಿಗಳಾದ ಸದಾನಂದ ಪೂಜಾರಿ, ಪ್ರವೀಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಹೇಗೆ ಸಹಾಯಕವೋ ಹಾಗೆಯೇ ಶಿಕ್ಷಕರ ಸಾಧನೆಗೂ ಪುಷ್ಟಿಯನ್ನು ಒದಗಿಸುತ್ತಿದೆ. ಈ ಶಾಲೆಯ ಹಿಂದಿ ಭಾಷಾ ಶಿಕ್ಷಕರಾದ ಗಣೇಶ್ ದೇವಾಡಿಗ ಅವರಿಗೆ ದೆಹಲಿಯಲ್ಲಿ ನಡೆದ ಪ್ರತಿಷ್ಠಿತ “ರಾಷ್ಟ್ರೀಯ ಶಿಕ್ಷಕರ ಪುರಸ್ಕಾರ-2026” ಲಭಿಸಿದೆ. ದೆಹಲಿ ಸರಕಾರದ ’ಹಿಂದಿ ಅಕಾಡೆಮಿ’ ಮತ್ತು ಪ್ರಸಿದ್ಧ ’ಮಧುಬನ್ ಪಬ್ಲಿಕೇಷನ್ಸ್’ ಜಂಟಿಯಾಗಿ ಹಿಂದಿ ದಿನಾಚರಣೆಯ ಶುಭ ಸಂದರ್ಭದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಶಿಕ್ಷಕರ ಪುರಸ್ಕಾರ ಸಮಾರಂಭದಲ್ಲಿ ಇವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು. ಹಿಂದಿ ಭಾಷಾ ಬೋಧನೆಯಲ್ಲಿ ಇವರ ಸುದೀರ್ಘ ಸೇವೆ, ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಮತ್ತು ಆಸಕ್ತಿಯನ್ನು ಮೂಡಿಸುವಲ್ಲಿ ಇವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಹರ್ಷ ವ್ಯಕ್ತಪಡಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶಕರು. ಶಿಕ್ಷಕರು ಸಾಧನೆಯ ಹಾದಿಯಲ್ಲಿ ಸಾಗಿದರೆ ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನರ ಸೇವೆಯನ್ನು ತಮ್ಮ ಸಾರ್ವಜನಿಕ ಜೀವನದ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿಯಲ್ಲಿ ’ಸೇವಾ ಸಂಕಲ್ಪ’ಎಂಬ ಪರಿಕಲ್ಪನೆ ಪ್ರಮುಖ ಸ್ಥಾನ ಪಡೆದಿದೆ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಹೇಳಿದರು. ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮ ದಿನದ ಪ್ರಯುಕ್ತ ’ಸೇವಾ ಸಂಕಲ್ಪ ಅಭಿಯಾನ’ ಅಂಗವಾಗಿ ಗುಜ್ಜಾಡಿ ಗ್ರಾಮದ ಮಂಕಿಯ ಪುಂಡಲೀಕ ಮಂಕಿ ಅವರ ಮನೆಯಲ್ಲಿ ಗುರುವಾರ ನಡೆದ ’ಆಶೀರ್ವಾದ ದೀಪ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯದಲ್ಲಿಯೇ ಜನಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಅವರು ತಮ್ಮನ್ನು ’ಪ್ರಧಾನ ಸೇವಕ’ ಎಂದು ಬಿಂಬಿಸಿಕೊಂಡಿದ್ದು, ಬಡವರು, ರೈತರು, ಮಹಿಳೆಯರು, ಯುವಕರು ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಸೇವೆ, ಕರ್ತವ್ಯ ಮತ್ತು ರಾಷ್ಟ್ರ ಪ್ರಥಮ ಎಂಬ ಆಶಯಗಳ ಮೂಲಕ ಜನ ಕಲ್ಯಾಣವನ್ನು ಮುಂದುವರಿಸುವ ಸಂಕಲ್ಪ ಮಾಡಿರುವ…
