ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಪುತ್ತೂರು ಶ್ರೀ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಇದರ ಆಶ್ರಯದಲ್ಲಿ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳ ಅಂತರ್ ಕಾಲೇಜು ಮಂಗಳೂರು ವಲಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್ ಆಗಿ ಮೂಡಿಬಂದಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ತಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ಇದನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿ ಹೇಳಿದರು. ಬೈಂದೂರು ಕುಮಟೆಕಾರ್ ನಾಯಕ್ ಕುಂಟುಂಬಿಕರ ಮೂಲ ನಿವಾಸಕ್ಕೆ ತಮ್ಮ ಪಟ್ಟ ಶಿಷ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯೊಡನೆ ಚಿತ್ತೈಸಿ ಕುಟುಂಬಿಕರ ಗುರುಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಜಿಎಸ್ಬಿ ಸಮಾಜದ ಪರಂಪರೆಯ ಬಲವಾದ ರಕ್ಷಣೆಯಿಂದ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೂಡಿ ಕರ್ತವ್ಯವನ್ನು ಪೂಜೆ ಎಂಬ ಭಾವನೆಯಿಂದ, ದುಡಿಮೆಯ ಒಂದಂಶವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಿ ಅದರೊಂದಿಗೆ ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿಯಿಂದ ಬಾಳುವಂತಾಗಿದೆ. ಸನಾತನ ಧರ್ಮದ ಮೂಲ ತತ್ವಗಳನ್ನಾಧರಿಸಿ ಸಾರಸ್ವತರು ತಾವು ನೆಲೆಸಿದ ಸ್ಥಳಗಳಲ್ಲಿ ಸಂಘಟಿತರಾಗಿ ಹಾಗೂ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅಲ್ಲದೇ ಇತರರ ಬೆಳವಣಿಗೆ ಜೊತೆಗೆ ತಾವೂ ಬೆಳೆಯಬೇಕೆನ್ನುವ ಧರ್ಮದ ತಳಹದಿಯಲ್ಲಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಆದರ್ಶಪ್ರಾಯವಾದ ಜೀವನ ನಡೆಸುತ್ತಿದ್ದಾರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗೋವಾ: ಪ್ರತಿವರ್ಷದಂತೆ ಈ ವರ್ಷವು ಸಹ ಇದೆ ಮೇ 27 ರಂದು ಗೋವಾದ ಬೀಚೋಲಿಯಂನ ರಾಧಾಬಾಯಿ ಸಭಾಂಗಣದಲ್ಲಿ ಜರುಗಲಿರುವ ದಶಮಾನೋತ್ಸವದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಕೀಲರು, ಸಾಹಿತಿಗಳು ಮತ್ತು ಕನ್ನಡದ ನುಡಿ ಸೇವಕರಾದ ಶ್ರೀ ರವೀಂದ್ರ ತೋಟಿಗೇರರವರು ಆಯ್ಕೆಯಾಗಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಗೋವಾದಲ್ಲಿ ನೆಡೆಯುವ ದಶಮಾನೋತ್ಸವ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ರವೀಂದ್ರ ತೋಟಿಗೇರ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಅವರ ಅಧ್ಯಕ್ಷತೆಯಲ್ಲಿ ದಶಮಾನೋತ್ಸವದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಜರುಗಲಿದ್ದು ಇದರಲ್ಲಿ ರಾಜ್ಯದ ಕವಿಗಳು ಭಾಗವಹಿಸಿ ತಮ್ಮ ಕವನವಾಚನ ಮಾಡಲಿದ್ದಾರೆ ಎಂದು ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಶಿವಬಾಲ ಸಾಮಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಮಹೇಶ ಬಾಬು ಸುರ್ವೆ ಬೆಳೆಗಾವಿಯ ವಕೀಲರು, ಸಾಹಿತಿ, ಕನ್ನಡದ ನುಡಿ ಸೇವಕ ರವೀಂದ್ರ ತೋಟಿಗೇರ ರವರು ಕಳೆದ ೨೫ ವರ್ಷಗಳಿಂದ ನಾಡಿನ ನುಡಿ ಸೇವಕರಾಗಿ ಗಡಿ ಹೋರಾಟಗಾರರಾಗಿ ಪತ್ರಕರ್ತರಾಗಿ ಸೇವೆಸಲ್ಲಿಸುತಿದ್ದಾರೆ. ಬರಹಗಾರರಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಜನಮಾನಸದಲ್ಲುಳಿದಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸೇತುವೆ, ರಸ್ತೆ, ಬಂದರು, ಸಮುದ್ರ ತಡೆಗೋಡೆ, ಬ್ರೇಕ್ ವಾಟರ್ ಕಾಮಗಾರಿ, ಶಾಲಾ ಕಾಲೇಜು ಅಭಿವೃದ್ಧಿ, ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಸುಮಾರು ೨,೦೦೦ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬೈಂದೂರನ್ನು ತಾಲೂಕನ್ನಾಗಿಸಿದ್ದು ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಅಭಿವೃದ್ಧಿಯ ದಾಖಲೆಯ ಜನರು ಅಭಿವೃದ್ಧಿ ಕಾರ್ಯವನ್ನು ಗುರುತಿಸಿ ಬೆಂಬಲಿಸಲಿದ್ದಾರೆ ಭರವಸೆಯಿದ್ದು, ಈ ಭಾರಿಯ ಚುನಾವಣೆಯಲ್ಲಿ ದಾಖಲೆಯ ಅಂತರದಿಂದ ಗೆಲುವ ಸಾಧಿಸುವ ವಿಶ್ವಾಸವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೀನುಗಾರಿಕೆಗೆ ಅನುಕೂಲವಾಗುವಂತೆ ಗಂಗೊಳ್ಳಿ, ಶಿರೂರು ಕೊಡೇರಿ ಬ್ರೇಕ್ವಾಟರ್ ಕಾಮಗಾರಿ, ಸಮುದ್ರ ಕೊರೆತ ತಡೆಗಾಗಿ ಬಹುಪಾಲು ಕರಾವಳಿ ಭಾಗಗಳಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಶೇ. 96.6 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 147 ವಿದ್ಯಾರ್ಥಿಗಳ ಪೈಕಿ 142 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 26 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 85 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 22 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 9 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯು.ಚೈತ್ರಾ ಶ್ಯಾನುಭಾಗ್ (588) ಅಂಕ ಗಳಿಸುವ ಮೂಲಕ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ನೇಹಾ (579), ಸುಜನ್ (577), ಮಲಿಕ್ ನಾಯಕ್ (575), ಪ್ರಕಾಶ ಪೈ (568), ಶರತ್ ಎಲ್.ಪಿ.(೫೬೮), ಸುಪ್ರೀತಾ ಜಿ. (567), ಟಿ.ಅಶ್ಮಿತಾ ಶೆಣೈ (566), ಮನಿಲಾ (561), ಹೃತಿಕ್ (559), ಎಚ್.ಮಹಮ್ಮದ್ ಶಾದಾಬ್ (556), ಸಂಜಯ್ ಖಾರ್ವಿ (553), ನಿಖಿಲ್ ಖಾರ್ವಿ (547), ಧನುಶ್ರೀ (546), ಪ್ರೀತಿ ಖಾರ್ವಿ (539), ಮನೋಜ್ ಖಾರ್ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ 5825 ಮಂದಿ ಪರೀಕ್ಷೆ ಬರೆದಿದ್ದು 5764 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.98.95 ಫಲಿತಾಂಶ ದಾಖಲಾಗಿದೆ. ಶುಭಾಂಕರ್ ಚೌಗಲೆ 594 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ನ ಚೇತನ್ ಪೈ 593 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಲಕ್ಷ್ಮೀ ನಾರಾಯಣ ರೆಡ್ಡಿ 592 ಅಂಕದೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ ಮತ್ತು ಭರತ್ ಗಜಾನನ ಹೆಗಡೆ ಹಾಗೂ ಪೃಥ್ವೀ ಗಣಪತಿ ಹೆಗಡೆ 591 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನವನ್ನು ಗಳಿಸಿಕೊಳ್ಳುವ ಜೊತೆಗೆ ಆಳ್ವಾಸ್ ರಾಜ್ಯದಲ್ಲಿಯೇ ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಸ್ಥಾನವನ್ನು ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಮಿಲಿಷಾ ರೋಡ್ರಿಗಸ್ 593 ಅಂಕದೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ ಹಾಗೂ ವರ್ಷಿನಿ ಕೆ.ಎಸ್, ಹರೀಶ್ ಡಿ.ಜಿ, ಶ್ವೇತಾ ಹೆಗಡೆ ತಲಾ 592 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಟಾಪ್ ಹತ್ತರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ತಾಲೂಕು ಕೋಟೇಶ್ವರದ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ನ ಗುರುಕುಲ ಪದವಿ ಪೂರ್ವ ಕಾಲೇಜು 2017-18 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದೆ. 11 ಮಂದಿ ಉನ್ನತ ಶ್ರೇಣಿಯಲ್ಲಿ, 19 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಗುರುಕುಲ ಪದವಿ ಪೂರ್ವ ಕಾಲೇಜು ಈ ಬಾರಿ ವಾಣಿಜ್ಯ ವಿಭಾಗ ಶೇ.100 ಫಲಿತಾಂಶವನ್ನು ಹೊಂದಿದ್ದು, ವಿಜ್ಞಾನ ವಿಭಾಗವು ಶೇ.92 ಫಲಿತಾಂಶ ದಾಖಲಿಸಿದ್ದಾರೆ. ಹಾಗೆಯೇ ಗುರುಕುಲ ಪದವಿ ಪೂರ್ವ ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿದ್ದು, ಈ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 5 ಮಂದಿ ‘JEE MAIN’ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಉತ್ತಮ ಸಾಧನೆ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾಮದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿಕೊಂಡದ್ದು ವಿಶೇಷವಾಗಿತ್ತು. ಗುಜ್ಜಾಡಿ ಭಾಗದಲ್ಲಿ ಪ್ರಚಾರ ಸಂದರ್ಭ ತಾಪಂ ಸದಸ್ಯ ರಾಜು ದೇವಾಡಿಗ, ರಾಜು ಪೂಜಾರಿ, ತಮ್ಮಯ್ಯ ದೇವಾಡಿಗ, ಯುತ್ ಕಾಂಗ್ರೆಸ್ನ ಸತೀಶ್ ದೇವಾಡಿಗ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೀವನದಲ್ಲಿ ನಿರಂತರ ಉತ್ಸಾಹ, ಧನತ್ಮಕವಾದ ಚಿಂತನೆಗಳಿದ್ದರೆ. ಅಂತಹವರಿಗೆ ದೇವರ ಸಹಾಯವಿರುತ್ತದೆ. ಆದ್ದರಿಂದ ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಯಾವುದೇ ಉದ್ಯಮ, ವ್ಯವಹಾರ ಮಾಡುವಂತಾಗಲು ಧೈರ್ಯದಿಂದ ಮುಂದುವರಿದಾಗ ಮಾತ್ರ ಖಂಡಿತವಾಗಿಯೂ ಯಶಸ್ಸು ದೊರಕುವುದು ಎಂದು ನಿವೃತ್ತ ಬ್ರಿಗೇಡಿಯರ್ ಮಂಗಳೂರಿನ ಐ. ಎನ್. ರೈ ಹೇಳಿದರು. ಬೈಂದೂರು ಶ್ರೀ ಮೂಕಾಂಬಿಕಾ ರೈಲ್ವೆ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣಗೊಂಡ ಹೊಟೇಲ್ ಅಂಬಿಕಾ ಇಂಟರ್ನ್ಯಾಶನಲ್ ಹೋಟೆಲನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ೩೪ವರ್ಷಗಳ ಕಾಲ ನನ್ನನ್ನು ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ದೇಶದ ಲಕ್ಷಾಂತರ ಸೈನಿಕರ ಆಶೀರ್ವಾದ ಈ ಹೊಟೇಲ್ ಮೇಲಿರಲಿದೆ ಎಂದು ಶುಭಹಾರೈಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಹೋಟೆಲ್ನ ಸಂಪೂರ್ಣ ಹವಾನಿಯಂತ್ರಿತ ಶಾರದಾ ಕನ್ವೆನ್ಸನ್ ಹಾಲ್ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವೆಂಕಟರಮಣ ಪಿಯು ಕಾಲೇಜ್ ಪಿಸಿಎಂಸಿ ವಿದ್ಯಾರ್ಥಿನಿ ಸತ್ಯಶ್ರೀ ರಾವ್ ವಿಜ್ಞಾನ ವಿಭಾಗದಲ್ಲಿ ಒಟ್ಟು 593ಅಂಕ ಪಡೆದ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದು ಉತ್ತೀರ್ಣಳಾಗಿದ್ದಾಳೆ. ಇಂಗ್ಲೀಷ್ನಲ್ಲಿ 93 ಅಂಕ ಬಿಟ್ಟರೆ ಉಳಿದಿದ್ದರಲ್ಲಿ ನೂರರ ಸಾಧನೆ. ವಿಶೇಷವೆಂದರೆ ಯಾವ ಶಾಲೆಯಲ್ಲಿ ತಂದೆ ಚಾಲಕರಾಗಿ ದುಡ್ಡಿಯುತ್ತಿದ್ದರೋ ಅದೇ ಶಾಲೆಯಲ್ಲಿ ಕಲಿತ ಮಗಳು ರಾಜ್ಯಕ್ಕೆ ನಾಲ್ಕನೇ ಟಾಪರ್ ಆಗಿದ್ದಾರೆ. ಕುಂದಾಪುರ ಅಂಕದಕಟ್ಟೆ ನಾಗೇಶ್ ರಾವ್ ಹಾಗೂ ಲಲಿತಾ ಎನ್.ರಾವ್ ಇಬ್ಬರು ಹೆಣ್ಣು ಮಕ್ಕಳಲ್ಲಿ ಸತ್ಯಾಶ್ರೀ ಎರಡನೆಯವಳು. ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಕ ಶೈಲಶ್ರೀ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ಬಿಎಸ್ಸಿ ವಿದ್ಯಾರ್ಥಿನಿ. ಕುಂದಾಪ್ರ ಡಾಟ್ ಕಾಂಗೆ ಸತ್ಯಾಶ್ರೀ ಪ್ರತಿಯಿಸಿ ದಿನಕ್ಕೆ ಮೂರು ಗಂಟೆ ಓದುತ್ತಿದ್ದು, ಓದಲಿಕ್ಕಾಗಿಯೇ ಸಮಯ ನಿಗಧಿ ಮಾಡಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಕೂಡಾ ಓದುವಂತೆ ಒತ್ತಡ ಹೇರುತ್ತಿರಲಿಲ್ಲ. ಓದಿನೊಟ್ಟಿಗೆ ತ್ರೋ ಬಾಲ್ ಹಾಗೂ ಡಾನ್ಸ್ ಬಗ್ಗೆಯೂ ಗಮನ ಹರಿಸುತ್ತಿದ್ದೆ. ಇನ್ನೂ ಒಂದೆರಡು ಹೆಚ್ಚು ಅಂಕ ನೀರೀಕ್ಷಿಸಿದ್ದು, ಅಂಗ್ಲಾ ಭಾಷೆಯಲ್ಲಿ ನಾನು ಎಣಿಸಿದ್ದಕ್ಕಿಂತ ಕಡಿಮೆ…
