Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು, ಮಕ್ಕಳು ಭಯದಿಂದ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯದಲ್ಲಿ ಇವತ್ತಿನವರೆಗೆ ಕಂಡು ಕೇಳರಿಯದಂತಹ ಹಿಂದು ಕಾರ್ಯಕರ್ತರ ಕೊಲೆಗಳಾಗಿದೆ. ಕೇರಳ ಮಾದರಿಯಂತೆ ಇಲ್ಲಿಯೂ ಕೂಡಾ ರಾಜಕೀಯ ಉದ್ದೇಶಕ್ಕಾಗಿ ಸಂಘ ಪರಿವಾರದ ಅಮಾಯಕ ಕಾರ್ಯಕರ್ತರ ಕೊಲೆಗಳಾಗಿತ್ತಿರುವುದು ಖಂಡನೀಯ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದರು. ಅವರು ರಾಜ್ಯದಲ್ಲಿ ಹಿಂದು ಯುವಕರ ಹತ್ಯೆ ಖಂಡಿಸಿ ಹಾಗೂ ಸಮಾಜಘಾತುಕ ಸಂಘಟನೆಗಳ ನಿಷೇಧ ಆಗ್ರಹಿಸಿ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳು ನಡೆಸುತ್ತಿರುವ ಮಂಗಳೂರು ಚಲೋ ಜನಸುರಕ್ಷಾ ಪಾದಯಾತ್ರೆಗೆ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು. ಗೋವಾ, ಮಹಾರಾಷ್ಟ್ರಗಳಿಂದ ಕದ್ದುತಂದಿರುವ ಜಾನುವಾರುಗಳನ್ನು ಇಲ್ಲಿನ ಅಕ್ರಮ ಕಸಾಯಿಖಾನೆ ಕಾರ್ಖಾನೆಯಿಂದ ವಿವಿಧೆಡೆ ರವಾನಿಸಲಾಗುತ್ತಿದೆ. ಇದಕ್ಕೆ ಪರೋಕ್ಷವಾಗಿ ರಾಜ್ಯ ಸರ್ಕಾರ, ಪೋಲಿಸ್ ಇಲಾಖೆಯೂ ಶಾಮೀಲಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸಿಗರು ಆತಂಕದ ವಾತಾವರಣ ಸೃಷ್ಠಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡಾ ಕ್ಷೇತ್ರದ ಸಾಧಕರಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಡಮಾಡುವ ಏಕಲವ್ಯ ಪ್ರಶಸ್ತಿಗೆ ಚಿತ್ತೂರಿನ ಯುವಕ, ಅಥ್ಲೆಟಿ ಗುರುರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ. ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರ್ವೆಸ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಗುರುರಾಜ್‌ಗೆ ಸುಕೇಶ್ ಶೆಟ್ಟಿ ಅವರು ತರಬೇತಿ ನೀಡಿದ್ದರು. ಮುಂದೆ ಪದವಿ ವ್ಯಾಸಂಗಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ಗುರುರಾಜ್ ಬದುಕಿಗೊಂದು ತಿರುವು ದೊರೆತಿತ್ತು. ಈ ಅವಧಿಯಲ್ಲಿ ಎಂ. ರಾಜೇಂದ್ರ ಪ್ರಸಾದ್ ವೇಯ್ಡ್ ಲಿಫ್ಟಿಂಗ್ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಗುರುರಾಜ್ ಎಸ್.ಡಿ.ಎಂ ಕ್ರೀಡಾ ತರಬೇತಿ ಸಂಸ್ಥೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊಸಾಡು ಗ್ರಾಮದಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಶಾಸಕ ಕೆ, ಗೋಪಾಲ ಪೂಜಾರಿ ಬುಧವಾರ ಕುಂಜನಬೈಲು ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆಗೈದರು. ಆ ಬಳಿಕ ಮಾತನಾಡಿದ ಅವರು ಈ ಯೋಜನೆಯಡಿ ಗ್ರಾಮದ ೬ ರಸ್ತೆಗಳ ಕಾಂಕ್ರೀಟೀಕರಣ, ಗ್ರಾಮ ಪಂಚಾಯತ್ ಸಭಾ ಭವನ, ಹೊಸಾಡು ಗರಡಿಮನೆ, ನಾಲ್ಕು ಮಾರ್ಗಗಳಗೆ ಸೋಲಾರ್ ಬೀದಿದೀಪ ಅಳವಡಿಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ, ಗ್ರಾ.ಪಂ ನಡವಳಿ ಪ್ರಸಾರ, ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳು ನಡೆಯುವುವು. ಆ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಹೊಸದಾಗಿ ಆರಂಭವಾದ ಗ್ರಾಮ ಪಂಚಾಯತ್‌ಗೆ ಹಲವು ಅಗತ್ಯಗಳಿವೆ. ಅವುಗಳನ್ನು ಕ್ರಮಶ: ಈಡೇರಿಸಲಾಗುವುದು ಎಂದರು. ಗ್ರಾ,ಪಂ, ಅಧ್ಯಕ್ಷ ಚಂದ್ರಶೇಖರ ಪೂಜಾರಿ ಸ್ವಾಗತಿಸಿದರು. ಶಾಸಕರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಊರಿನ ಪ್ರಮುಖರಾದ ಎಂ. ಎಂ. ಸುವರ್ಣ, ವಕೀಲ ಮಂಜುನಾಥ ಅರಾಟೆ, ವಿಜಯ ಪುತ್ರನ್, ಗ್ರಾ.ಪಂ. ಸದಸ್ಯರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿ-ನಾಡ ಗ್ರಾಮಗಳನ್ನು ಸಂಪರ್ಕಿಸಲು ಸೌಪರ್ಣಿಕಾ ನದಿಗೆ ಅಡ್ಡವಾಗಿ ರೂ 7 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸೇತುವೆ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಬುಧವಾರ ಮೊವಾಡಿ ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಸೇತುವೆ ಪೂರ್ಣಗೊಂಡಾಗ ನಾಡದ ನಿವಾಸಿಗಳಿಗೆ ಹೆದ್ದಾರಿ ಹತ್ತಿರವಾಗುತ್ತದೆ. ತ್ರಾಸಿಯ ನಿವಾಸಿಗಳಿಗೆ ನಾಡಕ್ಕೆ ನಿಕಟ ಸಂಪರ್ಕ ಏರ್ಪಡುತ್ತದೆ. ಈ ಎರಡೂ ಗ್ರಾಮಗಳ ಅಭಿವೃದ್ಧಿಗೆ ವೇಗ ದೊರೆಯುತ್ತದೆ ಎಂದರು. ಈ ಸೇತುವೆಯನ್ನು ಸಂಪರ್ಕಿಸುವ ರಸ್ತೆಗೆ ಭೂಮಿ ಬಿಟ್ಟುಕೊಟ್ಟಿರುವವರನ್ನು ಅಭಿನಂದಿಸಿದ ಅವರು ಸೇತುವೆ ಮುಗಿಯುವ ಹೊತ್ತಿಗೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಈ ಪರಿಸರದಲ್ಲಿ ಈಚೆಗೆ ಆಗಿರುವ ಅಭಿವೃದ್ಧಿ ಕೆಲಸಗಳ ವಿವರ ನೀಡಿದ ಅವರು ನಾಡದಲ್ಲಿ ’ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ನಡೆದಿದೆ. ತ್ರಾಸಿ ಭಾಗದ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ನಾಡ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಬಹು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿಶೋರ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ ಇವರ ಸ್ಮರಣಾರ್ಥ ಓಂ ಫ್ರೆಂಡ್ಸ್ ಕುಂದಾಪುರ ಇವರ ಆಶ್ರಯದಲ್ಲಿ ಮಾಚ್ 11 ಮತ್ತು 25ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಡಾ.ಶಿವರಾಮ ಕಾರಂತ ಥೀಂ ಪಾರ್ಕ್ ಕೋಟತಟ್ಟುವಿನಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವಾಗಿ ಪ್ರಥಮ ರೂ.20,000 ನಗದು, ದ್ವಿತೀಯ ರೂ.10,000 ನಗದು ಮತ್ತು ಶಾಶ್ವತ ಫಲಕವನ್ನು ನೀಡಲಿದ್ದಾರೆ. ಪ್ರವೇಶಾತಿಯು ಉಚಿತವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳಿಗೆ ಹಾಗೂ ವಿಧ್ಯಾರ್ಥಿಗಳಿಗರ ಸಹಾಯಕವಾಗಲಿದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಓಂ ಫ್ರೆಂಡ್ಸ್ ನ ಸದಸ್ಯರಾದ ಹರೀಶ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಗವಹಿಸುವ ಆಕಾಂಕ್ಷಿಗಳು ತಮ್ಮ ಹೆಸರನ್ನು ವಾಟ್ಸಪ್ ಮೂಲಕ ಹೆಸರನ್ನು ನೊಂದಾಯಿಸಬಹುದು – 9980040551

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಕರ್ನಾಟಕ ಸಂಘ ಕತಾರ್‌ನ 2018-19ನೇ ಸಾಲಿಕ ಅಧ್ಯಕ್ಷ ಸ್ಥಾನದ ಹಾಗು ಹೊಸ ಸಮಿತಿಯ ಚುನಾವಣೆ ಐಸಿಸಿಯಲ್ಲಿ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವೆಂಕಟ ರಾವ್ ಅವರು, ನಾಗೇಶ್ ರಾವ್ ವಿರುದ್ಧ ಹೆಚ್ಚು ಮತ ಪಡೆದು ಮುಂದಿನ 2 ವರ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ಅಧ್ಯಕ್ಷ ಸ್ಥಾನಕ್ಕೆ 2 ಅಭ್ಯರ್ಥಿಗಳ ಹೆಸರು ನೋಂದಾವಣೆ ಗೊಂಡಿದ್ದು, ಹಾಗೇನೇ ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಒಟ್ಟು ೧೫ ಸ್ಪರ್ದಿಗಳ ಹೆಸರು ಚುನಾವಣೆಗೆ ನಾಮಾಂಕಿತ ಗೊಂಡಿತ್ತು. ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಪಟ್ಟಿಗೆ 10 ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಮತ ಮುಖಾಂತರ ಕಾರ್ಯಕಾರಿ ಸಮಿತಿಗೆ ರವಿ ಶೆಟ್ಟಿ, ದಿನೇಶ್ ಗೌಡ, ಸಂದೀಪ್ ರೆಡ್ಡಿ, ಮುರಳೀಧರ್ ರಮಾನಾಥ್ ರಾವ್, ಅನಿಲ್ ಕುಮಾರ್ ಬೋಳೂರ್, ಮಣಿಹಳ್ಳ ಯೋಗೀಶ್ ಪೈ, ಅಶ್ವಿನ್ ಪ್ರಸನ್ನ ಕುಮಾರ್, ಶಶಿಧರ್ ಹೆಬ್ಬಾಳ್ ಚುನಾಯಿತರಾದರು. ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಆಶಾ ನಂಜಪ್ಪ ಹಾಗು ರಶ್ಮಿ ಜಯರಾಮ್ ಅವಿರೋಧವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆದರ್ಶ ಪುರುಷರಾದ ಕೋಟಿ ಚೆನ್ನಯರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲೆಡೆಯೂ ಬಿಲ್ಲವ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿದೆ. ಸಮುದಾಯದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರುವ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡುತ್ತಿದೆ. ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘ ಯಡ್ತರೆ ಇದರ ವಿಂಶತಿ ವರ್ಷಾಚರಣೆಯ ಅಂಗವಾಗಿ ಶನಿವಾರ ಯಡ್ತರೆ ಬೈಪಾಸ್ ಬಳಿ ಆಯೋಜಿಸಲಾದ ಬಿಲ್ಲವ ಸಮ್ಮಿಲನ ೨೦೧೮ ’ಕೋಟಿ ಚೆನ್ನಯ್ಯ ಟ್ರೋಫಿ’ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಬೈಂದೂರು ತಾಲೂಕು ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸದ್ಯದಲ್ಲೇ ಕೋರ್ಟ್, ತಾಲೂಕು ಪಂಚಾಯತ್ ಹಾಗೂ ಇತರೆ ಕಛೇರಿಗಳ ಕಾರ್ಯರಂಭ ಮಾಡಲಿವೆ. ಕೆಎಸ್‌ಆರ್‌ಟಿಸಿ ಡಿಪೋ ಕೂಡ ಮಂಜೂರಾಗಿದ್ದು ಜನರಿಗೆ ಅನುಕೂಲವಾಗಲಿದೆ. ಬಿಲ್ಲವ ಸಂಘಟನೆ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸುವುದಲ್ಲದೇ, ವೈಯಕ್ತಿಯವಾಗಿ ನೆರವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೀತ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಕರಾವಳಿಯಲ್ಲಿನ ಉದಯೋನ್ಮುಖ ಪ್ರತಿಭೆ ಗಳಿಗೆ ಅವಕಾಶ ನೀಡುವ ಕಾರ್ಯ ವಾಗಬೇಕು ಎಂದು ನಾಡೋಜಾ ಡಾ. ಜಿ. ಶಂಕರ್ ಹೇಳಿದರು. ಮನಸ್ಮಿತ ಫೌಂಡೇಶನ್ ಕೋಟ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್ ಒಪೆರಾ ಪಾರ್ಕ್‌ನಲ್ಲಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾದ ಡಾ. ಎಸ್. ಜಾನಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಗಾನಕೋಗಿಲೆ ಬಿರುದಿಗೆ ಪಾತ್ರರಾದ ಎಸ್. ಜಾನಕಿ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಮಿತ ಭಾಷಿ, ಸಹೃದಯಿಯಾಗಿರುವ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಲಭಿಸಿರುವುದು ನಿಜಕ್ಕೂ ಶ್ಲಾಘನೀಯ ವಾಗಿದ್ದು ಇದು ಜಾನಕಿ ಅಮ್ಮನಿಗೂ ತೃಪ್ತಿದಾಯಕ ವಿಚಾರ ಎಂದರು. ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಗಾಯಕ ರಾಜೇಶ್ ಕೃಷ್ಣನ್, ಹಲವಾರು ಪ್ರಶಸ್ತಿಗಳು ಈ ಹಿಂದೆ ಸಿಕ್ಕಿದ್ದರೂ ಕೂಡ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ವರ್ಧಂತಿ, ಶತಚಂಡಿಕಾಯಾಗದ ಧಾರ್ಮಿಕ ಕಾರ್ಯಗಳು ಆನಗಳ್ಳಿ ಚೆನ್ನಕೇಶವ ಗಾಯತ್ರಿ ಭಟ್ಟರ ನೇತೃತ್ವದಲ್ಲಿ ಪ್ರಾರಂಭಗೊಂಡಿತು. ಅಷ್ಟೋತ್ತರ ಶತಕಲಶ ಸ್ಥಾಪನೆ, ವಾಸ್ತುಪೂಜೆ, ಶತಕಲಾಭಿಷೇಕ, ಯಾಗದ ಪೂರ್ವಾಂಗ, ಸಾಮೂಹಿಕ ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಿತು. ಶುಕ್ರವಾರ ನಾಗಮಂಡಲೋತ್ಸವದ ವರ್ಧಂತಿಯ ಪ್ರಯುಕ್ತ ಮೂಲ ನಾಗಬನದಲ್ಲಿ ಕಲಾತತ್ವಹೋಮ ಹಾಗೂ ನಾಗದೇವರಿಗೆ ಕಲಶಾಭಿಷೇಕ ನಡೆಯಿತು. ನಂತರ ಶ್ರೀಕ್ಷೇತ್ರ ಪೆರ್ಡೂರಿನ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ ಇವರಿಂದ ನಾಗಸಂದರ್ಶನ ಜರುಗಿತು. ಮಧ್ಯಾಹ್ನ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಕರಾವಳಿ ಮೂರು ಜಿಲ್ಲೆಯ ಸುಮಾರು ಐದು ಸಹಸ್ರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಕೊಂಡದಕುಳಿ ಪೂರ್ಣಚಂದ್ರ ಯಕ್ಷಗಾನ ಮೇಳ ಕುಂಭಾಶಿ ಇವರಿಂದ ಯಕ್ಷಗಾನ ಪ್ರದರ್ಶನಗೊಂಡಿತು. ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಸೇವಾಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ಶ್ರೀನಿವಾಸ ಕುಮಾರ್, ಮಂಜುನಾಥ ಆಚಾರ್ಯ, ಬಿ. ಮಾಧವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಕ್ತಿಯು ದೇವಸ್ಥಾನಕ್ಕೆ ಮಾತ್ರ ಸೀಮಿತವಾಗದೇ ಪ್ರತಿಯೊಂದು ಜೀವರಾಶಿಯಲ್ಲಿಯೂ ದೇವರನ್ನು ಕಾಣುವಂತಾಗಬೇಕು. ಮನುಷ್ಯ ಮೌಢ್ಯಗಳಿಗೆ ಒಳಗಾಗದೇ, ಭಕ್ತಿ, ಶೃದ್ಧೆಯಿಂದ ನಿರಂತರವಾಗಿ ಸಾಧನೆ ಮಾಡಿದಾಗ ಭಗವಂತನನ್ನು ಕಾಣಬಹುದಾಗಿದೆ ಎಂದು ಭಾರತೀಯ ಸೇನಾ ಶಿಕ್ಷಣ ಕೋರ್‌ನ ನಿವೃತ್ತ ಉಪನ್ಯಾಸಕ ಬೈಂದೂರು ಚಂದ್ರಶೇಖರ ನಾವಡ ಹೇಳಿದರು. ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಪ್ರತಿಷ್ಠಾ ವರ್ಧಂತಿ ಹಾಗೂ ಶತಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಕ್ತಿ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲಾ ನ್ಯೂನ್ಯತೆಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಜೀವನದ ಒಂದು ಭಾಗ. ಸಮಜದಲ್ಲಿ ಇದನ್ನು ಬೇರೆ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಧರ್ಮದ ಮೇಲಿನ ಶೃದ್ಧೆಯನ್ನು ಕಡಿಮೆ ಮಾಡುವ ವ್ಯವಸ್ಥಿತ ಸಂಚು ತೆರೆಮರೆಯಲ್ಲಿ ನಡೆಯುತ್ತಿದೆ ಎಂದರು. ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆಯೇ ಬಲ ನೀಡುತ್ತದೆ. ಹಾಗೆಯೇ…

Read More