ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ದರೆ, ಆಶಾ ಕಾರ್ಯಕರ್ತರು ಬೀದಿಯಲ್ಲಿದ್ದಾರೆ. ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಸುಡುಬಿಸಿಲಿನಲ್ಲಿಯೂ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಶ್ಲಾಘನೀಯವಾದುದು. ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರ ಆಶಯದಂತೆ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಎಸ್.ಸಿ.ಡಿ.ಸಿಸಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಹೇಳಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜು ದೇವಾಡಿಗ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಂಗೊಳ್ಳಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ಡೌನ್ ಸಂದರ್ಭ ಅಗತ್ಯ ನೆರವು ನೀಡುವ ಸಲುವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಆರಂಭಿಸಿದ ಮೊಬೈಲ್ ಹೆಲ್ಪ್ ಡೆಸ್ಕ್ ಸೇವೆ ಸಂಕಷ್ಟದಲ್ಲಿರುವವರಿಗೆ ವಿವಿಧ ಹಂತದಲ್ಲಿ ಉಪಯೋಗವಾಗುತ್ತಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಮುದೂರು ಗ್ರಾಮದಲ್ಲಿ ವಾಸವಿದ್ದ ಕುಟುಂಬದ ಮಗುವಿಗೆ ಪೀಡ್ಸ್ ಕಾಯಿಲೆಯಿದ್ದು, ಶಿವಮೊಗ್ಗ ಮಾನಸಾ ಆಸ್ಪತ್ರೆಯಿಂದ ತುರ್ತಾಗಿ ತರಬೇಕಾಗಿದ್ದ ಔಷಧಿಗಾಗಿ ಮುದೂರು ವಿ.ಎ ವೀರೇಶ್ ಅವರ ಮೂಲಕ ಬೇಡಿಕೆ ಇಟ್ಟಿದ್ದು, ತಕ್ಷಣ ಸ್ಪಂದಿಸಿದ ಹೆಲ್ಪ್ಡೆಸ್ಕ್ ತಂಡ ಶಿವಮೊಗ್ಗ ಆಸ್ಪತ್ರೆಯಿಂದ ಸ್ಥಳೀಯ ಸರ್ವೆಯರ್ ಪ್ರವೀಣ್ ಕುಮಾರ್ ಅವರ ಮೂಲಕ ನಿಟ್ಟೂರು ತನಕ ಹಾಗೂ ನಿಟ್ಟೂರಿನಿಂದ ಯಡ್ತರೆ ವಿ.ಎ ಮಂಜು ಹಾಗೂ ಸಂಸದರ ಆಪ್ತ ಸಹಾಯಕ ಶಿವಕುಮಾರ್ ಅವರು ಮುದೂರಿಗೆ ತಂದು ವ್ಯಕ್ತಿಯ ಮನೆಗೆ ತೆರಳಿ ಉಚಿತವಾಗಿ ಔಷಧಿಯನ್ನು ತಲುಪಿಸಿದರು. ಹೆಲ್ಪ್ ಡೆಸ್ಕ್ಗೆ ಆಹಾರ ಸಾಮಾಗ್ರಿ, ಔಷಧಿ ಸೇರಿದಂತೆ ವಿವಿಧ ಸಹಾಯಕ್ಕಾಗಿ ಕರೆ ಬರುತ್ತಿದ್ದು, ಆದ್ಯತೆಯಂತೆ ಸ್ಪಂದಿಸಲಾಗುತ್ತಿದೆ ಎಂದು ಸಂಸದ ಮೊಬೈಲ್ ಹೆಲ್ಪ್ಡೆಸ್ಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಯುಬಿಎಸ್ ಚಾರಿಟೇಬಲ್ ಟ್ರಸ್ಟ್ ಧಾರವಾಡ ಇವರ ವತಿಯಿಂದ ಆಶಾ ಕಾರ್ಯಕರ್ತರು ಹಾಗೂ ಬೈಂದೂರು ಸುತ್ತಲಿನ ಗ್ರಾಮಗಳ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂಗೀತಾ ಅವರು ಬೈಂದೂರು ಭಾಗದ ಆಶಾ ಕಾರ್ಯಕರ್ತರಿಗೆ ಕಿಟ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿ ದಾನಿಗಳ ಉದಾರ ಸಹಕಾರದಿಂದ ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನರಿಗೆ ಸಹಕಾರ ದೊರೆಯುವಂತಾಗಿದೆ. ಲೌಕ್ಡೌನ್ನಂತಹ ಸಂದರ್ಭದಲ್ಲಿ ಜನರ ಅಗತ್ಯ ಅರಿತು ನೆರವು ನೀಡುವುದು ಮೆಚ್ಚುವಂತಹ ಕಾರ್ಯ ಎಂದರು. ಈ ಸಂದರ್ಭ ಯುಬಿಎಸ್ ಚಾರಿಟೇಬಲ್ ಟ್ರಸ್ಟ್ ಧಾರವಾಡ ಇದರ ಟ್ರಸ್ಟೀ ಪ್ರಶಾಂತ್ ಶೆಟ್ಟಿ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಕರ್ನಾಟಕ ಬ್ಯಾಂಕ್ ಬೈಂದೂರು ಶಾಖಾ ಪ್ರಬಂಧಕ ಪರಮೇಶ್ವರ ಪೂಜಾರಿ, ಬಾಡಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಾಲಯ್ಯ ಶೇರುಗಾರ್, ಹಳೆ ವಿದ್ಯಾರ್ಥಿ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲು ಜಾರಿ ವಾರಾಹಿ ಕಾಲುವೆಗೆ ಬಿದ್ದ ಪರಿಣಾಮ ಎಂಟು ವರ್ಷದ ಬಾಲಕಿ ಸಾವನ್ನಪ್ಪಿಗ್ಪಿದ ಘಟನೆ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ತಲಮಕ್ಕಿ ಬ್ರಹ್ಮನಗರ ಎಂಬಲ್ಲಿನ ಜನತಾ ಕಾಲೋನಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತ ಬಾಲಕಿಯನ್ನು ಜನತಾ ಕಾಲೋನಿ ನಿವಾಸಿ ಭಾಸ್ಕರ ಕುಲಾಲ್ ಹಾಗೂ ಲಕ್ಷ್ಮೀ ಕುಲಾಲ್ ಎಂಬುವರ ಪುತ್ರಿ ಮೇಘನಾ ಕುಲಾಲ್(8) ಎಂದು ಗುರುತಿಸಲಾಗಿದೆ. ಮೇಘನಾ ಕುಲಾಲ್ ತನ್ನ ದೊಡ್ಡಮ್ಮನ ಮಗ ಸಚಿನ್ ಕುಲಾಲ್ (9) ಜೊತೆಗೆ ಆಟವಾಡುತ್ತಿದ್ದು ವಾಪಾಸ್ಸು ಮನೆಗೆ ವಾರಾಹಿ ಕಾಲುವೆಯ ದಂಡೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾಲು ಜಾರಿ ಇಬ್ಬರೂ ಬಿದ್ದಿದ್ದಾರೆ. ಕಾಲುವೆಗೆ ಬೀಳುವ ಸಂದರ್ಭ ಸಚಿನ್ ಗಿಡವೊಂದನ್ನು ಹಿಡಿದುಕೊಂಡಿದ್ದು ಬೊಬ್ಬೆ ಹೊಡೆದಿದ್ದಾನೆ. ಬೊಬ್ಬೆ ಕೇಳಿದ ಸ್ಥಳೀಯರು ಓಡಿ ಬಂದಿದ್ದು ಸಚಿನ್ನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಾಲುವೆಗೆ ಬಿದ್ದ ಮೇಘನಾ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾಳೆ. ಬಹಳ ದೂರದಲ್ಲಿ ಆಕೆಯ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೇಘನಾ ಬಿದ್ಕಲ್ಕಟ್ಟೆಯ ಸರಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋರೋನಾ ಸೊಂಕಿನಿಂದ ಸಂಪೂರ್ಣ ಗುಣಮುಖರಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯಿಂದ ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮೂಲದ ಆರು ತಿಂಗಳ ಗರ್ಭಿಣಿ ಮಹಿಳೆಯನ್ನು ಉಡುಪಿ ಜಿಲ್ಲಾಡಳಿತ ಮಡಿಲು ತುಂಬಿ ಬೀಳ್ಕೊಟ್ಟು ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಭಟ್ಕಳಕ್ಕೆ ಹೊರಟು ನಿಂತಿದ್ದ ಗರ್ಭಿಣಿಗೆ ಜಿಲ್ಲಾಡಳಿತದ ಪರವಾಗಿ ಉಡುಪಿ ಸಿಇಓ ಪ್ರೀತಿ ಗೆಹ್ಲೋಟ್ ಅವರು ಮಲ್ಲಿಗೆ ಹೂವು, ಸಿಹಿ ತಿಂಡಿ, ಹಣ್ಣುಗಳಿದ್ದ ತಟ್ಟೆಯನ್ನು ನೀಡಿ ಬೀಳ್ಕೊಟ್ಟರು. ಈ ಸಂದರ್ಭ ಜಿಲ್ಲಾಧಿಕಾರಿ ಜಿ. ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಡಿಹೆಚ್ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ಪ್ರೇಮಾನಂದ್ , ಕೆಎಂಸಿ ಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ಡಾ. ಶಶಿ ಕಿರಣ್ ಹಾಗೂ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಎ.9ರಂದು ಭಟ್ಕಳ ಮೂಲದ 26 ವರ್ಷದ ಗರ್ಭಿಣಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸ್ತುತ ಕೊವೀಡ್ 19 ಪರೀಕ್ಷೆಗಾಗಿ ಸ್ಯಾಂಪಲ್ಗಳು ಬೇರೆ ಜಿಲ್ಲೆಗೆ ಹೋಗುತ್ತಿದ್ದು, ಎಸ್.ಡಿ.ಆರ್.ಎಫ್ ಫಂಡ್ನಲ್ಲಿ ಟೆಸ್ಟ್ ಲ್ಯಾಬ್ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನು ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಈಗಾಗಲೆ 17 ಟೆಸ್ಟ್ ಲ್ಯಾಬ್ ಆರಂಭಿಸಿದ್ದೇವೆ. ಕೋವಿಡ್ ಆರಂಭದಲ್ಲಿ ಕೇವಲ 2 ಟೆಸ್ಟ್ ಲ್ಯಾಬ್ ಇತ್ತು. ಎಪ್ರಿಲ್ ಅಂತ್ಯದಲ್ಲಿ ಮತ್ತೆ 10ಲ್ಯಾಬ್ಗಳು ಆರಂಭವಾಗಲಿದ್ದು ಈ ಸಂದರ್ಭ ಉಡುಪಿ ಜಿಲ್ಲೆಯಲ್ಲೂ ಲ್ಯಾಬ್ ಆರಂಭಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದ ಮೂರು ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 110ಮಂದಿಯ ಟೆಸ್ಟ್ ರಿಪೋರ್ಟ್ ಬರಲು ಬಾಕಿ ಇದೆ. ಒಟ್ಟು 3300 ಜನ ಕ್ವಾರಂಟೈನ್ನಲ್ಲಿದ್ದು 993 ಜನ ಟೆಸ್ಟ್ ಮಾಡಿಕೊಂಡಿದ್ದಾರೆ. ಅದರಲ್ಲಿ 990 ನೆಗಟಿವ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಹಳಗೇರಿ ತೆಂಕಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಿನ ಶ್ರೀ ಕಾಲಬೈರವ ಸೇವಾ ಸಂಘ, ಶ್ರೀ ಕಾಲಬೈರವ ಸೇವಾ ಸಮಿತಿ, ಶ್ರೀ ಬಸವೇಶ್ವರ ಭಜನಾ ಮಂದಿರ, ಅಲ್ ವಫಾ ವೆಲ್ಫೇರ್ ಸೊಸೈಟಿ ನೇತೃತ್ವದಲ್ಲಿ ಬ್ಲಡ್ ಹೆಲ್ತ್ಕೇರ್ ಕರ್ನಾಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಬೈಂದೂರು ತಾಲ್ಲೂಕು ಘಟಕ ಮತ್ತು ಇಡಿಯನ್ ರೆಡ್ಕ್ರಾಸ್ ಸೊಸೈಟಿಯ ಕುಂದಾಪುರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮೊದಲಿಗರಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಎದುರಾಗಿರುವ ಇಂದಿನ ಸನ್ನಿವೇಶದಲ್ಲಿ ರಕ್ತದಾನಕ್ಕೆ ಅತ್ಯಂತ ಹೆಚ್ಚು ಮಹತ್ವ ಇದೆ. ಗ್ರಾಮೀಣ ಪ್ರದೇಶವಾಗಿರುವ ಹಳಗೇರಿಯ ಸುತ್ತಲಿನ ಯುವಜನರು ಆಯೋಜಿಸಿರುವ ರಕ್ತದಾನ ಶಿಬಿರ ಇಲ್ಲಿ ಹೊಸ ಎಚ್ಚರ ಮೂಡಿಸುತ್ತದೆ. ರಕ್ತದಾನದಿಂದ ಜೀವನ್ಮರಣ ಸ್ಥಿತಿಯಲ್ಲಿರುವವರ ಜೀವ ಉಳಿಸಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತರಿಗೆ ಆಹಾರದ ಕಿಟ್ ನೀಡಲಾಗುತ್ತಿದ್ದು, ಗುರುವಾರ ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿಟ್ ವಿತರಣೆಗೆ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಸುರೇಶ್ ಬಟವಾಡಿ, ಗೌರಿ ದೇವಾಡಿಗ, ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ರೈತಸಂಘದ ದೀಪಕ್ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಎ.22ರ ಮಧ್ಯರಾತ್ರಿಯಿಂದಲೇ ಭಾಗಶಃ ಜಾರಿಯಾಗಲಿದೆ. ಲಾಕ್ ಡೌನ್ ಸಡಿಲಿಕೆ ಸುರಕ್ಷಿತ ವಲಯಗಳಿಗೆ ಮಾತ್ರ (ಹಾಟ್ಸ್ಟಾಟ್, ಕಂಟೈನ್ಮೆಂಟ್ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ) ಅನ್ವಯವಾಗಲಿದ್ದು, ಕ್ವಾರಂಟೈನ್ ವಲಯಗಳಿಗೆ ಅನ್ವಯವಾಗುವುದಿಲ್ಲ. ಈ ಕೆಳಕಂಡ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳಿಗೆ ನಿರ್ಬಂಧ ಮುಂದುವರಿದಿದ್ದು, ಈ ಸೇವೆಗಳು ಲಭ್ಯವಿರುವುದಿಲ್ಲ. ಯಾವೆಲ್ಲಾ ಕ್ಷೇತ್ರಗಳಿಗೆ ಅವಕಾಶ ನೀಡಲಾಗಿದೆ ಎಂಬುವುದರ ಪಟ್ಟಿ ಈ ಕೆಳಗಿದೆ ನೋಡಿ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಲಾಕ್ ಡೌನ್ ನಿಂದ ಐದು ವರ್ಷದೊಳಗಿನ ಮಕ್ಕಳಿಗೆ ವಿವಿಧ ಹಂತದಲ್ಲಿ ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಚುಚ್ಚುಮದ್ದುಗಳನ್ನು ನಿಲ್ಲಿಸಲಾಗಿದ್ದು, ಗುರುವಾರದಿಂದ ಎಂದಿನಂತೆ ಈ ಚುಚ್ಚುಮದ್ದುಗಳನ್ನು ನೀಡಲಾಗುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರ ದಿಂದ ಶನಿವಾರದ ವರೆಗೆ ಮತ್ತು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತೀ ಗುರುವಾರ, 1.5, 2.5, 3.5 ಮತ್ತು 9 ತಿಂಗಳು ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳು ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಟಿಡಿ ಲಸಿಕೆಯನ್ನು ನೀಡಲಾಗುವುದು ಎಂದು ಡಾ. ಸೂಡಾ ತಿಳಿಸಿದ್ದಾರೆ. ಲಸಿಕೆ ತೆಗೆದುಕೊಳ್ಳಲು ವಾಹನಗಳಲ್ಲಿ ಬರುವಾಗ ತಾಯಿ ಕಾರ್ಡ್ ಅಥವಾ ಲಸಿಕೆ ಕಾರ್ಡ್ ಗಳನ್ನು ಪೊಲೀಸರಿಗೆ ತೋರಿಸುವ ಮೂಲಕ , ಆರೋಗ್ಯ ಕೇಂದ್ರಕ್ಕೆ ಬರಲು ಲಾಕ್ಡೌನ್ ನ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ ಸ್ಪಷ್ಟಪಡಿಸಿದ್ದಾರೆ.
