ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಪ್ರತಿ ತಿಂಗಳು ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ಬೋಧನೆ ಕಾರ್ಯಕ್ರಮವು ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧಾರ್ಮಿಕ ಚಿಂತಕ ಮಂಗೇಶ ಶೆಣೈ ಯಳಜಿತ್ ಮಾತನಾಡಿ ಜೀವನದಲ್ಲಿ ತ್ಯಾಗದ ಮೂಲಕ ಆಧ್ಯಾತ್ಮದ ತುತ್ತತುದಿಯನ್ನು ತಲುಪಲು ಸಾಧ್ಯವಿದೆ. ಶ್ರೀಮದ್ ಭಗವದ್ಗೀತೆಯ ೯ನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮನು ವಿವರಿಸಿದ ರಹಸ್ಯವಾದ ವಿದ್ಯೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಎಲ್ಲಾ ವಿದ್ಯೆಗಳ ರಾಜನಂತಿರುವ ಈ ವಿದ್ಯೆಯನ್ನು ಅರಿಯುವುದರಿಂದ ಎಲ್ಲಾ ವಿದ್ಯೆಗಳನ್ನು ಕಲಿಯಲು ಸಾಧ್ಯ. ನಿಸ್ವಾರ್ಥವಾಗಿ ನಮ್ಮ ಕರ್ತವ್ಯವನ್ನು ಮಾಡಿ ಅದನ್ನು ಪರಮಾತ್ಮನಿಗೆ ಶ್ರದ್ಧೆಯಿಂದ ಅರ್ಪಿಸಬೇಕು ಎಂದರು. ಭಗವದ್ಗೀತೆಯ ೧೦ನೇ ಅಧ್ಯಾಯದ ವಿಭೂತಿ ಯೋಗ ಪಠಣ ನಡೆಯಿತು. ವಿದ್ಯಾರ್ಥಿಗಳಾದ ಬಿ.ಪ್ರಾರ್ಥನಾ ಪೈ, ಎನ್.ಚೇತನಾ ನಾಯಕ್ ಮತ್ತು ಅಗ್ನೇಶ್ ನಾಯಕ್ ಅವರು ಭಗವದ್ಗೀತೆಯ ೯ನೇ ಅಧ್ಯಾಯದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಐದು ವರ್ಷಗಳಿಂದ ಚಿತ್ತೂರು ಪರಿಸರದಲ್ಲಿ ಜನಪರ ಕಾರ್ಯ ಆಯೋಜಿಸುತ್ತ ಬಂದಿರುವ ಪ್ರೇರಣಾ ಯುವ ವೇದಿಕೆ (ರಿ) ನೈಕಂಬ್ಳಿ ಚಿತ್ತೂರು ಇದರ ಐದನೇ ವಾರ್ಷಿಕೋತ್ಸವ ಯಶಸ್ವಿಯಾಯಿತು. ಪ್ರೇರಣಾ ಈ ಭಾಗದಲ್ಲಿ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಯುವ ಜನತೆಗೆ ಪ್ರೇರಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯರಾದ ಉದಯ ಜಿ ಪೂಜಾರಿ ಶುಭ ಹಾರೈಸಿದರು. ಅಶೋಕ ಶೆಟ್ಟಿ ಕೊಡ್ಲಾಡಿ ದಿಕ್ಸೂಚಿ ಭಾಷಣದಲ್ಲಿ ಮಾಡಿದರು. ವಂಡ್ಸೆ ಹೋಬಳಿ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಯೋಜಿಸಿದ ಪ್ರೇರಣಾ ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯ ವಿಜೇತರಿಗೆ ಪ್ರಶಸ್ತಿ ಮೊತ್ತ ಮತ್ತು ಫಲಕ ವಿತರಿಸಲಾಯಿತು . ಪ್ರೇರಣಾ ಹಿರಿಯ ನಾಗರಿಕ ಸನ್ಮಾನ ಸುಕ್ರ ಅವರಿಗೆ, ಗುರು ಸಮ್ಮಾನ ಚಂದ್ರ ಶೆಟ್ಟಿ ಅವರಿಗೆ, ಸಾಧಕ ಸಮ್ಮಾನ ವಿಶ್ವನಾಥ ಗಾಣಿಗ ಬಾಳಿಕೆರೆ ಇವರಿಗೆ ಮಾಡಲಾಯಿತು. ವೇದಿಕೆಯಲ್ಲಿ ಚಿತ್ತೂರು ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ , ಡಾ. ಅತುಲ್ ಕುಮಾರ ಶೆಟ್ಟಿ, ವೇದಿಕೆಯ ಗೌರವ ಅಧ್ಯಕರಾಮಚಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂಭಾಶಿ ಹರಿಹರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ೧೦೦ನೇ ಗಾನ-ಆಖ್ಯಾನ ಕಾರ‍್ಯಕ್ರಮದಲ್ಲಿ ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಅವರಿಗೆ ಯಕ್ಷ ಗಂಧರ್ವ ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಸೋದೆ ಮಠ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ, ನಮ್ಮ ಪರ್ಯಾಯ ಸಮಯದಲ್ಲಿ ರಾಮಾಯಣದ ಕಥಾಹದರಿಂದ ಆಯ್ಕೆ ಮಾಡಿಕೊಂಡ ಲವಕುಶ ಗಾನ-ವ್ಯಾಖ್ಯಾನದ ಮೂಲಕ ಗಾನ ವ್ಯಾಖ್ಯಾನಕ್ಕೆ ಲವಕುಶ ಮೂಲ ಪುರುಷರಾದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠ ಸರ್ವಜ್ಞ ಪೀಠ ಏರಲಿರುವ ಪಲಿಮಾರ್ ಮಠ ಶ್ರೀ ವಿದ್ಯಾದೀಶಥೀರ್ಥ ಸ್ವಾಮೀಜಿ ಅವರಿಗೆ ಕೃಷ್ಣ ಭಾಮಾ ಟ್ರಸ್ಟ್ ತುಲಾಬಾರ ಸೇವೆ ಆಯೋಜಿಸಿತ್ತು. ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕೆ.ವಿ.ಮಹಾಬಲ ಭಟ್ ಹಾಗೂ ಇನ್ನಿತರ ಗಣ್ಯರು ಇದ್ದರು. ಕಾರ‍್ಯಕ್ರಮದ ನಂತರ ನೂರನೇ ಕಾರ‍್ಯಕ್ರಮದ ಗಾನ ವ್ಯಾಖ್ಯಾನದ ಕೃಷ್ಣಾರ್ಪಣೆ ನಡೆಯಿತು. ಭಾಗವತರಾಗಿ ವಿದ್ವಾನಿ ಗಣಪತಿ ಭಟ್ ಯಲ್ಲಾಪುರ ಹಾಗೂ ಹರಿಹರ ಕ್ಷೇತ್ರದ ವಿದ್ವಾಂಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉತ್ತಮ ಪ್ರೇರಣೆ, ದೊರೆತರೆ, ಅವಕಾಶವನ್ನು ಬಳಸಿಕೊಳ್ಳುವ ಛಲ ಇದ್ದರೆ, ಪರಿಶ್ರಮ ವಹಿಸಿದರೆ, ಸಾಧನೆಯ ಏಣಿ ಏರಬಹುದು. ಯುವಕರು ಅವಕಾಶ ಬಳಸಿಕೊಂಡು ಉತ್ತಮ ವ್ಯಕ್ತಿಗಳ ಪ್ರೇರಣೆ ಪಡೆದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ ಎಂದು ಕೇಂದ್ರ ರಕ್ಷಣಾ ಇಲಾಖೆ ಪ್ರಾಕ್ತನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಯಪ್ರಕಾಶ್ ರಾವ್ ಹೇಳಿದರು. ಕುಂದಪ್ರಭ ಸಂಸ್ಥೆ ಆಶ್ರಯದಲ್ಲಿ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿ, ಮಾತನಾಡುತ್ತಿದ್ದರು. ಕೋ.ಮ.ಕಾರಂತರು ಯುವಕರಲ್ಲಿ ನಾಯಕತ್ವ ಗುಣ, ಬೆಳೆಸುವಲ್ಲಿ ಪ್ರೇರಣೆ ತುಂಬಿ ತರಬೇತಿ ನೀಡಿದವರು. ನಾನೂ ಅವರ ಶಿಷ್ಯ ಎನ್ನಲು ಸಂತೋಷವಾಗುತ್ತದೆ.ಜೀವನದಅನುಭವ ಪಡೆಯಲು ವಿವಿಧರೀತಿಯ ಕೆಲಸಗಳನ್ನು ಮಾಡುತ್ತಾ ಪ್ರವೃತ್ತಿಯಲ್ಲೂ ಆಸಕ್ತಿ ವಹಿಸಬೇಕಾಗುತ್ತದೆ. ಅನುಭವ ಪಡೆಯುತ್ತಾ ಬೆಳೆಯಬೇಕು ಎಂದುಹೇಳಿದರು. ನಿವೃತ್ತಐ.ಎಫ್.ಎಸ್. ಅಧಿಕಾರಿ ಬಿ.ಜಗನ್ನಾಥ ಶೆಟ್ಟಿಅಧ್ಯಕ್ಷತೆವಹಿಸಿದರು. ಸ್ವಚ್ಛ ಭಾರತ, ಸ್ವಸ್ಥ ಭಾರತಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆಲೇಖಕಡಾ.ನಾಗೇಶ ಕುಮಾರ್‌ಜಿ.ರಾವ್ ಮಣಿಪಾಲ ವಿತರಿಸಿದರು. ಹಿರಿಯ ಲೋಕೋಪ ಯೋಗಿಗುತ್ತಿಗೆದಾರರಾದ ಬಿ.ರಾಮಕೃಷ್ಣ ಶೇರುಗಾರ ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಪುರಸ್ಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಎಳಜಿತ್ ಗ್ರಾಮದ ಸಾಂತೇರಿಗೆ ಹೋಗುವ ಮಾರ್ಗದ ಹೊಳೆಗೆ ಸಂಪರ್ಕ ಸೇತುವೆ ನಿರ್ಮಿಸಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿದ್ದು, ಜನಪ್ರತಿನಿಧಿಗಳು ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಇಂದು ಹೀಗೆಯೇ ಮುಂದುವರಿದರೆ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ, ಜೆಡಿಎಸ್ ಪ್ರಮುಖ ರವಿ ಶೆಟ್ಟಿ ಅವರ ಗಮನಕ್ಕೆ ತಂದಿದ್ದು, ಅವರ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಒಂದು ವಾರದೊಳಕ್ಕೆ ಬಗೆಹರಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಭಾಗದ ಜನಕ್ಕೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ ಮತ್ತು ಉಪ್ಪುಂದ ಘಟಕದ ಕೆ. ರವಿಚಂದ್ರ, ರಾಜೇಶ್ ಕಿಣಿ, ಗಜೇಂದ್ರ ಗೌಡ. ವಿಜೇಂದ್ರ ಶೆಟ್ಟಿ, ರಾಮು, ರಾಘವೇಂದ್ರ ಸುಬ್ರಮಣ್ಯ, ಚಂದ್ರು, ಪ್ರಭಾಕರ್ ಗೌಡ, ಸುಂದರ್ ಇನ್ನಿತರರು ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ, ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಸಂಸ್ಥಾಪಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಪ್ರಾಯೋಜಕ ಕೆ. ಎಸ್. ಪ್ರಕಾಶ ರಾವ್ (77) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಖಂಬದಕೋಣೆಯ ಹಿಂದಿನ ತಲೆಮಾರಿನ ಧುರೀಣ ಆರ್. ಕೆ. ಸಂಜೀವ ರಾವ್-ಸುಶೀಲಾ ರಾವ್ ದಂಪತಿಯ ಪುತ್ರರಾದ ಪ್ರಕಾಶ ರಾವ್ ಪದವಿ ಶಿಕ್ಷಣದ ಬಳಿಕ ಮುಂಬೈ ಕೆನರಾ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸಿ, ಬಳಿಕ ಸಿಂಡಿಕೇಟ್ ಬ್ಯಾಂಕ್ ಸೇರಿ ಮಣಿಪಾಲ ಧಾರವಾಡ, ನವದೆಹಲಿ, ಕೊಲ್ಕತ್ತದಲ್ಲಿ ಕೆಲಸ ಮಾಡಿದರು, ಕೊಲ್ಕತ್ತ, ನವದೆಹಲಿಯಲ್ಲಿ ವಲಯ ಪ್ರಬಂಧಕರಾಗಿ ದುಡಿದ ಬಳಿಕ ಪ್ರಧಾನ ಕಚೇರಿಯಲ್ಲಿ ಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಹೃದಯಿಗಳೂ, ಪರೋಪಕಾರಿಗಳೂ ಆಗಿದ್ದ ಅವರು ಸೇವಾವಧಿಯಲ್ಲಿ ಸಹೋದ್ಯೋಗಿಗಳ ಮತ್ತು ಸಾರ್ವಜನಿಕರ ಅಪಾರ ಪ್ರಶಂಸೆ ಗಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಲ್ಲಿ ಸಕ್ರಿಯರಾಗಿದ್ದ ಪ್ರಕಾಶ ರಾವ್ ಅದರ ರಾಜ್ಯಾಧ್ಯಕ್ಷರಾಗಿ ದುಡಿದಿದ್ದರು. ನೌಕರರ ಬಗ್ಗೆ ತೀವ್ರ ಕಾಳಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರತಿಭಾ ಕಾರಂಜಿಯ ಭಕ್ತಿಗೀತೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅವರು ಶ್ರೇಯಾ ಖಾರ್ವಿ ಅವರನ್ನು ಸನ್ಮಾನಿಸಿದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಸಹಶಿಕ್ಷಕರಾದ ಎನ್.ಸುಭಾಶ್ಚಂದ್ರ ನಾಯಕ್, ಜಿ.ವಿಶ್ವನಾಥ ಭಟ್, ನಾರಾಯಣ ಉಪಾಧ್ಯಾಯ, ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ, ಸಹಶಿಕ್ಷಕಿಯರಾದ ಲಕ್ಷ್ಮೀ, ಮಾಲಾಶ್ರೀ, ರೇಖಾ ಖಾರ್ವಿ, ರೇಣುಕಾ ನಾಯಕ್, ನಾಗರಾಜ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಸವಿತಾ ಯು.ದೇವಾಡಿಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ, ೧೨ನೇ ರಾಜ್ಯ ಮಟ್ಟದ ಐಡಿಯಲ್ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಸನ್ನಾ ಪೈ, ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಕತಾರ್ನಲ್ಲಿರುವ ಕುಂದಾಪುರ ತಾಲೂಕು ಕ್ರಿಕೆಟರ್ಸ್ ನೇತೃತ್ವದಲ್ಲಿ ಕತಾರ್ ಫ್ರೀಲ್ಯಾನ್ಸ್ ಗ್ರೂಫ್ ಪ್ರಾಯೋಜಕತ್ವದಲ್ಲಿ ಇಲ್ಲಿನ ಒಲ್ಡ್ ಐಡಿಯಲ್ ಸ್ಕೂಲ್ ಗ್ರೌಂಡ್ನಲ್ಲಿ 23 ಜನವರಿ 2018ರ ಸಂಜೆ ’ಕುಂದಾಪುರ ಟ್ರೋಫಿ’ ಸಿಸಜ್ -2’ ಸೀಮಿತ ಓವರ್ಗಳ ಟೆನ್ಸಿಸ್ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ದೊರೆಯಲಿದೆ. ಕತಾರ್ನಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಕ್ರಿಕೆಟ್ ಆಸಕ್ತರು ಒಟ್ಟು ಸೇರಿ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಕಳೆದ ವರ್ಷ ಮೊದಲ ಭಾರಿಗೆ ಕುಂದಾಪುರ ತಾಲೂಕು ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಭಾರಿ ಎರಡನೇ ಸೀಸನ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇಕ್ಬಾಲ್ ನಾವುಂದ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರೇ, ಇಂತಿಖಾಬ್ ಅಲಾಮ್ ಕಾರ್ಯದರ್ಶಿಯಾಗಿ, ಅಸ್ಮತ್ ಅಲಿ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ.23 ರಿಂದ ಜ.26 ತನಕ ಪಂದ್ಯಾಟ ನಡೆಯಲಿದೆ. ಕತಾರ್‌ನಲ್ಲಿ ನೆಲೆಸಿರುವ ಕರಾವಳಿಯ ಕ್ರಿಕೆಟ್ ಪ್ರೇಮಿಗಳು ಪಂದ್ಯಾಟ ವೀಕ್ಷಣೆಗೆ ಆಗಮಿಸುವಂತೆ ಸಂಘಟಕರು ಕೋರಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ಎಸ್‌ಜಿಎಸ್ ಇಂಟರ್‌ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಜ ೨೬ರಿಂದ ೨೮ರ ವರೆಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆಸುವ ೬ನೆ ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಮರವಂತೆಯ ಯೋಗಪಟು ಕುಶ ಪೂಜಾರಿ ಸ್ಥಾನ ಪಡೆದಿದ್ದಾರೆ. ಬಾಲ್ಯದಿಂದಲೇ ಯೋಗ ತರಬೇತಿ ಪಡೆದು ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವಾಗ ನಡೆದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದ ಸಾಧನೆ ಕುಶ ಅವರದು. ಬಿ. ಕಾಂ ಪದವಿ ಮುಗಿಸಿರುವ ಅವರು ಪ್ರಸಕ್ತ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಯೋಗವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಅಧ್ಯಯನ ನಡೆಸುತ್ತಿದ್ದಾರೆ. ಕುಶ ಪೂಜಾರಿ ಮರವಂತೆ ಗುಳದಾಳಿಬೆಟ್ಟು ರಾಮಚಂದ್ರ ಪೂಜಾರಿ, ಲೀಲಾವತಿ ಪೂಜಾರಿ ದಂಪತಿಯ ಪುತ್ರ. ತನ್ನ ಸಾಧನೆಗೆ ಶಿಕ್ಷಕರಾದ ಎಂ. ವಿ. ಲಮಾಣಿ, ಡಾ. ಯಶೋದಾ ಕರನಿಂಗ, ರಂಜಿತ್ ಟಿ. ಎನ್, ಅವರು ನೀಡಿದ ತರಬೇತಿ, ಮಾರ್ಗದರ್ಶನ, ಕುಂದಾಪುರದ ಡಾ. ಬಿ. ಬಿ. ಹೆಗ್ಡೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆಲವು ಅಂಗನವಾಡಿಯಲ್ಲಿ ಶಿಕ್ಷಕಿಯರಿದ್ದರೆ ಸಹಾಯಕಿಯರಿಲ್ಲ, ಸಹಾಯಕಿಯರಿದ್ದರೆ ಶಿಕ್ಷಕಿಯಿಲ್ಲ. ಹಾಗಿದ್ದರೂ ಮಾತೃಪೂರ್ಣ ಯೋಜನೆ ಹೊರೆ ಹೊರಿಸಲಾಗಿದೆ. ಅಂಗೈಅಗಲದ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಅಡುಗೆ ಮಾಡುವುದಾ? ಮಕ್ಕಳ ಕೂರಿಸುವುದಾ? ಗೋಡೋನ್ ಮಾಡೋದಾ, ಸಿಲೆಂಡರ್, ಒಲೆ ಇಡೋದಾ? ಏನಾದರೂ ಹೆಚ್ಚು ಕಮ್ಮಿಯಾದರೆ ನಾವು ತಲೆಕೊಡಬೇಕು. ಸರ್ಕಾರ ಬೇಡಿಕೆಗೆ ನಯಾಪೈಸೆ ಬೆಲೆ ಕೊಡದಿದ್ದರೂ, ದಿನಕ್ಕೊಂದು ಜವಾಬ್ದಾರಿ ಹೊರಿಸುವ ಮೂಲಕ ನಮ್ಮ ಜೀವನದೊಟ್ಟಿಗೆ ಚೆಲ್ಲಾಟವಾಡುತ್ತಿದೆ. ವಿವಿಧ ಬೇಡಿಕೆ ಮುಂದಿಟ್ಟುಕೊಂಡು ತಾಲೂಕು ಅಂಗನವಾಡಿ ಕಾರ‍್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ಆಶ್ರಯದಲ್ಲಿ ನಡೆದ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರು ತಮ್ಮ ಅಸಹಾಯಕತೆ ಹೊರ ಹಾಕಿದ್ದು ಹೀಗೆ. ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ 18 ಸಾವಿರ ಸಂಬಳ ಜಾರಿ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಕಿವುಡಾದರೂ ಮಾತೃಪೂರ್ಣ ಯೋಜನೆ ಜವಾಬ್ದಾರಿ ನಮ್ಮ ತಲೆಗೆಕಟ್ಟಿದೆ. ಕೆಲ ಅಂಗನವಾಡಿಯಲ್ಲಿ ಸಹಾಯಕಿಯರೇ ಇಲ್ಲದೆ ಅಡುಗೆ ಕೆಲಸ ಕೂಡಾ ಶಿಕ್ಷಕಿ ಮೇಲೆ ಬೀಳುತ್ತದೆ. ಮಾತೃಪೂರ್ಣಯೋಜನೆ ಫಲಾನುಭವಿಗಳ ಕೂರಿಸಿ ಊಟ ಬಡಿಸಲುಕೊಠಡಿಯಿಲ್ಲದೆರಸ್ತೆ ಮೇಲೆ ಕೂರಿಸಿ ಊಟ…
