ಕೆ. ಜಯಪ್ರಕಾಶ್ ರಾವ್ ಅವರಿಗೆ ಕೋ. ಮ ಕಾರಂತ ಪ್ರಶಸ್ತಿ ಪ್ರದಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉತ್ತಮ ಪ್ರೇರಣೆ, ದೊರೆತರೆ, ಅವಕಾಶವನ್ನು ಬಳಸಿಕೊಳ್ಳುವ ಛಲ ಇದ್ದರೆ, ಪರಿಶ್ರಮ ವಹಿಸಿದರೆ, ಸಾಧನೆಯ ಏಣಿ ಏರಬಹುದು. ಯುವಕರು ಅವಕಾಶ ಬಳಸಿಕೊಂಡು ಉತ್ತಮ ವ್ಯಕ್ತಿಗಳ ಪ್ರೇರಣೆ ಪಡೆದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ ಎಂದು ಕೇಂದ್ರ ರಕ್ಷಣಾ ಇಲಾಖೆ ಪ್ರಾಕ್ತನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಯಪ್ರಕಾಶ್ ರಾವ್ ಹೇಳಿದರು.

Call us

Click Here

ಕುಂದಪ್ರಭ ಸಂಸ್ಥೆ ಆಶ್ರಯದಲ್ಲಿ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿ, ಮಾತನಾಡುತ್ತಿದ್ದರು.

ಕೋ.ಮ.ಕಾರಂತರು ಯುವಕರಲ್ಲಿ ನಾಯಕತ್ವ ಗುಣ, ಬೆಳೆಸುವಲ್ಲಿ ಪ್ರೇರಣೆ ತುಂಬಿ ತರಬೇತಿ ನೀಡಿದವರು. ನಾನೂ ಅವರ ಶಿಷ್ಯ ಎನ್ನಲು ಸಂತೋಷವಾಗುತ್ತದೆ.ಜೀವನದಅನುಭವ ಪಡೆಯಲು ವಿವಿಧರೀತಿಯ ಕೆಲಸಗಳನ್ನು ಮಾಡುತ್ತಾ ಪ್ರವೃತ್ತಿಯಲ್ಲೂ ಆಸಕ್ತಿ ವಹಿಸಬೇಕಾಗುತ್ತದೆ. ಅನುಭವ ಪಡೆಯುತ್ತಾ ಬೆಳೆಯಬೇಕು ಎಂದುಹೇಳಿದರು.

ನಿವೃತ್ತಐ.ಎಫ್.ಎಸ್. ಅಧಿಕಾರಿ ಬಿ.ಜಗನ್ನಾಥ ಶೆಟ್ಟಿಅಧ್ಯಕ್ಷತೆವಹಿಸಿದರು. ಸ್ವಚ್ಛ ಭಾರತ, ಸ್ವಸ್ಥ ಭಾರತಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆಲೇಖಕಡಾ.ನಾಗೇಶ ಕುಮಾರ್‌ಜಿ.ರಾವ್ ಮಣಿಪಾಲ ವಿತರಿಸಿದರು. ಹಿರಿಯ ಲೋಕೋಪ ಯೋಗಿಗುತ್ತಿಗೆದಾರರಾದ ಬಿ.ರಾಮಕೃಷ್ಣ ಶೇರುಗಾರ ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.

ಕೆ.ಜಯಪ್ರಕಾಶ್‌ರಾವ್ ಪತ್ನಿ ತುಳಸಿಅವರಕುಸುಮಾ ಶಿವಾನಂದ ಕಾರಂತ, ಸಾಧನಾಎಸ್. ಶೆಣೈ ಗೌರವಿಸಿದರು. ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷಗಣೇಶ ಪ್ರಸಾದ ಪಾಂಡೇಲು ಅಭಿನಂದಿಸಿದರು. ಕುಂದಪ್ರಭ ಸಂಸ್ಥೆಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಅಂಕಣಗಾರ ಕೋ.ಶಿವಾನಂದ ಕಾರಂತಅಭಿನಂದನಾಭಾಷಣ ಮಾಡಿದರು.ಕೆ.ಕೆ.ರಾಮನ್‌ಚಿತ್ರಕಲಾ ಸ್ಪರ್ಧೆವಿಜೇತರವಿವರ ನೀಡಿದರು. ಹಂದಕುಂದ ಸೋಮಶೇಖರ ಶೆಟ್ಟಿ ಪ್ರಬಂಧ ಸ್ಪರ್ಧಾ ವಿಜೇತರ ವಿವರ ನೀಡಿದರು.ಕಿರಣ್ ಭಟ್ ವಿದ್ಯಾರ್ಥಿ ಪುರಸ್ಕಾರ ಪಡೆದವರ ವಿವರ ನೀಡಿದರು. ಯು.ಸುಷ್ಮಾ ಶೆಣೈ, ಯು.ಸಂಗೀತಾ ಶೆಣೈ ಅತಿಥಿಗಳ ಪರಿಚಯಿಸಿದರು.ಉಪನ್ಯಾಸಕವಿಶ್ವನಾಥಕರಬ ನಿರೂಪಿಸಿದರು.ಲೇಖಕ ಪಿ.ಜಯವಂತ ಪೈ ವಂದಿಸಿದರು.

Click here

Click here

Click here

Click Here

Call us

Call us

 

Leave a Reply