ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್‌ಗೆ ಪ್ರಶಸ್ತಿ ಪ್ರಧಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂಭಾಶಿ ಹರಿಹರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ೧೦೦ನೇ ಗಾನ-ಆಖ್ಯಾನ ಕಾರ‍್ಯಕ್ರಮದಲ್ಲಿ ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಅವರಿಗೆ ಯಕ್ಷ ಗಂಧರ್ವ ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Call us

Click Here

ಉಡುಪಿ ಸೋದೆ ಮಠ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ, ನಮ್ಮ ಪರ್ಯಾಯ ಸಮಯದಲ್ಲಿ ರಾಮಾಯಣದ ಕಥಾಹದರಿಂದ ಆಯ್ಕೆ ಮಾಡಿಕೊಂಡ ಲವಕುಶ ಗಾನ-ವ್ಯಾಖ್ಯಾನದ ಮೂಲಕ ಗಾನ ವ್ಯಾಖ್ಯಾನಕ್ಕೆ ಲವಕುಶ ಮೂಲ ಪುರುಷರಾದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠ ಸರ್ವಜ್ಞ ಪೀಠ ಏರಲಿರುವ ಪಲಿಮಾರ್ ಮಠ ಶ್ರೀ ವಿದ್ಯಾದೀಶಥೀರ್ಥ ಸ್ವಾಮೀಜಿ ಅವರಿಗೆ ಕೃಷ್ಣ ಭಾಮಾ ಟ್ರಸ್ಟ್ ತುಲಾಬಾರ ಸೇವೆ ಆಯೋಜಿಸಿತ್ತು.

ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕೆ.ವಿ.ಮಹಾಬಲ ಭಟ್ ಹಾಗೂ ಇನ್ನಿತರ ಗಣ್ಯರು ಇದ್ದರು. ಕಾರ‍್ಯಕ್ರಮದ ನಂತರ ನೂರನೇ ಕಾರ‍್ಯಕ್ರಮದ ಗಾನ ವ್ಯಾಖ್ಯಾನದ ಕೃಷ್ಣಾರ್ಪಣೆ ನಡೆಯಿತು. ಭಾಗವತರಾಗಿ ವಿದ್ವಾನಿ ಗಣಪತಿ ಭಟ್ ಯಲ್ಲಾಪುರ ಹಾಗೂ ಹರಿಹರ ಕ್ಷೇತ್ರದ ವಿದ್ವಾಂಸ ಶ್ರೀಪತಿ ಉಪಾಧ್ಯಾಯ ಕುಂಭಾಶಿ ವ್ಯಾಖ್ಯಾನದಲ್ಲಿ ಗಂಗಾವತರಣ ಗಾನ ವ್ಯಾಖ್ಯಾನ ನಡೆಯಿತು.

Leave a Reply