ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಆರ್.ಏನ್. ಶೆಟ್ಟಿ ಪಿಯು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಕ್ಷಣದ ಜೊತೆಗೆ ಶಿಸ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕು, ಪದವಿ ಜೊತೆಗೆ ಕ್ರಿಯಾಶೀಲರಾಗಿರುವುದನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಶ್ರಮ ತ್ಯಾಗ ಪ್ರಾರ್ಥನೆ ಪ್ರಯತ್ನ ಇವನ್ನು ಸಮನಾಗಿ ಪ್ರಯೋಗಿಸಿದಾಗ ಯಶಸ್ಸು ಲಭ್ಯ ” ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ ಮಾತನಾಡಿ, ವಿಧ್ಯಾರ್ಥಿಗಳು ಜೀವನದಲ್ಲಿ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರುಗಳು ತೋರಿದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು. ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾಮಾತನಾಡಿ, ವಿಧ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕಾಣಲು ಪೋಷಕರ ಪಾತ್ರ ಶಿಕ್ಷಕರಷ್ಟೇ ಮಹತ್ವದ್ದಾಗಿದೆ ಈ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 1972ರಿಂದ ಭಜನಾ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀ ಲಕ್ಷ್ಮೀ ವೆಂಕಟೇಶ ಮಹಿಳಾ ಭಜನಾ ಮಂಡಳಿ ತನ್ನ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿತು. ಮಂಡಳಿಯ ಸದಸ್ಯೆಯರಿಂದ ಭಜನೆ, ಹೂವಿನ ಪೂಜೆ, ದೇವರಿಗೆ ಸುವರ್ಣ ಸಮರ್ಪಣೆ, ಭೋಜನ ಪ್ರಸಾದ ಮುಂತಾದ ಸೇವೆಗಳು ಜರಗಿದವು. ವಿನಯಾ ವಿ. ಶೆಣೈ ಅವರ ಮುಂದಾಳತ್ವದಲ್ಲಿ ಈ ಭಜನಾ ಮಂಡಳಿ ಹತ್ತು ಹಲವು ಊರುಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಭಜನಾ ಸೇವೆ ಸಲ್ಲಿಸಿ ಜನಪ್ರಿಯತೆಗಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ಅವರು ಈ ವರ್ಷದ ತಿರುಗಾಟದಿಂದ ರಂಗಸ್ಥಳವೇರಲಿದ್ದಾರೆ. ಈವರೆಗೆ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ದಿಢೀರ್ ನಿರ್ಗಮಿಸಿದ್ದಾರೆ. ಕೆಲ ತಿಂಗಳ ಹಿಂದೆ ಜನ್ಸಾಲೆ ಪೇರ್ಡೂರು ಮೇಳದಲ್ಲಿ ಇರುವುದಿಲ್ಲ ಎಂಬ ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಸ್ವತಃ ಜನ್ಸಾಲೆಯವರೇ ಸ್ಪಷ್ಟನೆ ನೀಡಿದ್ದರು. ಮೇಳದ ನೂತನ ಪ್ರಸಂಗದ ಕರಪತ್ರಗಳಲ್ಲಿ ಜನ್ಸಾಲೆಯವರ ಭಾವಚಿತ್ರ ಹಾಗೂ ಹೆಸರು ನಮೂದಿಸಲಾಗಿತ್ತು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ರಾಘವೇಂದ್ರ ಆಚಾರ್ಯ ಅವರು ಮೇಳದಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆನ್ನಲಾಗಿದೆ. ನ. 30ರಿಂದ ಪೆರ್ಡೂರು ಮೇಳ ತಿರುಗಾಟ ಆರಂಭಿಸಲಿದ್ದು ಪ್ರೊ. ಪವನ್ ಕಿರಣಕೆರೆ ಅವರ ‘ಕೃಷ್ಣಕಾದಂಬಿನಿ’ ಪ್ರಸಂಗ ಈ ವರ್ಷದ ಕಥಾನಕವಾಗಿ ಪ್ರದರ್ಶನವಾಗಲಿದೆ. ಪೆರ್ಡೂರು ಮೇಳ ಬಿಟ್ಟ ಬಳಿಕ ಯಾವುದೇ ಮೇಳ ತಿರುಗಾಟ ಮಾಡಿರಲಿಲ್ಲ ಈಗ ಕರುಣಾಕರ ಶೆಟ್ಟಿ ಅವರು ಮತ್ತೆ ಮೇಳಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ. – ಸುಬ್ರಹ್ಮಣ್ಯ ಧಾರೇಶ್ವರ, ಭಾಗವತರು ಹಗಲು ಹೊತ್ತಿನಲ್ಲಿ ಕೂಡ ಗಾನವೈಭವ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಪಟ್ಟಣದ ಉದ್ಯಮಿಗಳು, ಅಧಿಕಾರಿಗಳಿಗೆ ಆರ್ಟಿಐ ಕಾರ್ಯಕರ್ತ ಕೆ. ವೆಂಕಟೇಶ ಕಾರಂತ ಎಂಬುವವರು ನೀಡುತ್ತಿರುವ ಕಿರುಕುಳ ಬಗ್ಗೆ ಬೈಂದೂರು ಕ್ಷೇತ್ರ ಅಭಿವೃದ್ಧಿ ಸಮಿತಿ ಸಂಚಾಲಕ ಕೃಷ್ಣಪ್ರಸಾದ ಅಡ್ಯಂತಾಯ ಅವರು ಕೆಲವು ದಿನಗಳ ಹಿಂದೆ ದೂರು ಸಲ್ಲಿಸಿದ್ದು, ಅದರಲ್ಲಿ ಕೆ. ವೆಂಕಟೇಶ ಕಾರಂತ ಎಂಬವವರಿಂದಾದ ತೊಂದರೆ ಹಾಗೂ ಹಣದ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿಸಿದ್ದರು. ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ವೇಳೆ ವೆಂಕಟೇಶ ಕಾರಂತ ಎಂಬುವವರು ಮಾಧ್ಯಮಗಳಲ್ಲಿ ನನ್ನ ವಿಚಾರವನ್ನು ಎಳೆದು ತಂದಿರುವುದಲ್ಲದೇ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಕೆರೆಕಟ್ಟೆ ವೆಂಕಟೇಶ್ ಕಾರಂತ ಎಂಬ ವ್ಯಕ್ತಿಯು ನಾವು ಬೈಂದೂರಿನಲ್ಲಿ ಕಟ್ಟಿದ ಸಿಟಿ ಪಾಯಿಂಟ್ ಎಂಬ ಕಟ್ಟಡದ ವಿಚಾರಕ್ಕೆ ಸಂಬಂಧಿಸಿ ನಮ್ಮ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಸತ್ಯವಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಉದ್ಯಮಿ ಕೆ. ವೆಂಕಟೇಶ ಕಿಣಿ ತಮ್ಮ ಮೇಲಿನ ಆರೋಪಗಳಿಗೆ ಅವರು ಪ್ರತಿಕ್ರಿಯಿಸಿದ್ದು, ತನಿಕಾ ಸಂಸ್ಥೆಗಳಿಗೆ ದೂರು…
ಕುಂದಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಮಹಾಗಣಪತಿ ಸೆಲೆಕ್ಟ್ ತಂಡ ರಿ. ಮಟ್ನಕಟ್ಟೆ-ಕೆರ್ಗಾಲ್ ಇವರ ಆಶ್ರಯದಲ್ಲಿ 19 ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಯಾನೆ ಶ್ರೀಗಣೇಶನ ಗೊಂಬೆಯಾಟ ಮಂಡಳಿ ಇವರಿಂದ ಚೂಡಾಮಣಿ ಲಂಕಾದಹನ ಎನ್ನುವ ಗೊಂಬೆಯಾಟ ಯಕ್ಷಗಾನ ಪ್ರಸಂಗ ಶ್ರೀ ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆ-ಕೆರ್ಗಾಲ್ ನಲ್ಲಿ ನಡೆಯಿತು. ಈ ಸಂದರ್ಭ ಗೊಂಬೆಯಾಟ ಅಕಾಡೆಮಿಯ ಮುಖ್ಯಸ್ಥರಾದ ಭಾಸ್ಕರ ಕೊಗ್ಗ ಕಾಮತ್ ಅವರನ್ನು ಎಸ್ಎಂಎಸ್ ತಂಡದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ತಂಡದ ಅಧ್ಯಕ್ಷರಾದ ಪಾಂಡುರಂಗ ದೇವಾಡಿಗ, ಉಪಾಧ್ಯಕ್ಷರಾದ ನಜೀರ್ ಉಪ್ಪುಂದ,ಕೋಶಾಧಿಕಾರಿ ಸುನಿಲ್ ಕುಮಾರ್, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸನ್ಮಾನಿಸಿ ಗೌರವಿಸಲಾಯಿತು. ಸಂಘಟನಾ ಕಾರ್ಯದರ್ಶಿ ಗಣೇಶ್ ಆರ್.ಎಮ್. ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಮೊಗವೀರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊಂಕಣ ರೈಲ್ವೇ ಆರಂಭವಾದಾಗಿನಿಂದ ಇದ್ದ ಜನ ಸಾಮಾನ್ಯರು ಹಾಗೂ ದೂರ ಪ್ರವಾಸಿಗರ ನೆಚ್ಚಿನ ರೈಲಾಗಿದ್ದ ನೇತ್ರಾವತಿ ಎಕ್ಸ್ಪ್ರೆಸ್ ನಿಲುಗಡೆಯನ್ನು ಕುಂದಾಪುರದಲ್ಲಿ ರದ್ದು ಮಾಡಿರುವುದು ಸರಿಯಲ್ಲ, ಇದು ಕೊಂಕಣ್ ರೈಲ್ವೇಗೆ ಕುಂದಾಪುರದ ಮೇಲಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಮತ್ತೆ ಕುಂದಾಪುರ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್ಪ್ರೆಸ್ ರೈಲಿಗೆ ನಿಲುಗಡೆ ನೀಡಬೇಕು ಎಂದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಆಗ್ರಹಿಸಿದೆ. ಕೇರಳದ ತಿರುವನಂತಪುರಂನಿಂದ ಮುಂಬಯಿಗೆ ಸಂಚರಿಸುವ ರೈಲು ಇದಾಗಿದ್ದು, ಕೇರಳದಿಂದ ರಾತ್ರಿ ವೇಳೆ ಬರುವ ಕರವಾಳಿ ಭಾಗಕ್ಕೆ ಬರುವ ಏಕೈಕ ರೈಲು ಆಗಿದ್ದು ಈ ನೇತ್ರಾವತಿ ಎಕ್ಸ್ಪ್ರೆಸ್ ರೈಲು ಕರಾವಳಿಯಿಂದ ಮುಂಬಿಯಿಗೆ ತೆರಳುವ ಹೆಚ್ಚಿನ ಪ್ರಯಾಣಿಕರು ಅವಲಂಬಿಸಿದ್ದರು. ಹೆಚ್ಚು ಕಡಿಮೆ ಕುಂದಾಪುರದಷ್ಟೇ ಆದಾಯ ಹೊಂದಿರುವ ಇತರ ನಿಲ್ದಾಣಗಳ ನಿಲುಗಡೆಯನ್ನು ಹಾಗೆಯೇ ಉಳಿಸಿರುವ ಕೊಂಕಣ ರೈಲ್ವೆಯು, ಕುಂದಾಪುರದಲ್ಲಿ ಮಾತ್ರ ನೇತ್ರಾವತಿ ಎಕ್ಸ್ಪ್ರೆಸ್ ನಿಲುಗಡೆಯನ್ನು ರದ್ದು ಮಾಡಿ ಪ್ರವಾಸಿಗರಿಗೆ ಹಾಗೂ ಮುಂಬಯಿ ಕಡೆಗೆ ತೆರಳುವ ಯಾತ್ರಿಗಳಿಗೆ ತೊಂದರೆಯಾಗುತ್ತಿದೆ. ಸಂಸದರಿಗೆ ದೂರು:ಆದರೆ ಕೊಂಕಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನವಂಬರ್ ರಲ್ಲಿ ನಡೆದ ಸಿ.ಎಸ್ – ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ನ ವಿದ್ಯಾರ್ಥಿಗಳು ದಾಖಲೆಯ 75% ಫಲಿತಾಂಶ ಪಡೆದಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನಘ ಎಸ್. ದೇಶಪಾಂಡೆ, ಅಲಿನಾ ಮೇರಿ ಜಾನಿ, ಹರ್ಷಿತ್ ಕುಮಾರ್, ಫ್ಲೇವಿಯಾ, ಲೊರೈನ್, ಮೊಹಮ್ಮದ್ ರೆಯಾನ್ ರಾಜಾ, ಮೇಘನಾ ಶೆಟ್ಟಿ, ಶಮಾ ಶೆಟ್ಟಿ, ಶ್ರೇಯಾ ಪಿ. ಹೆಗ್ದೆ, ಶ್ರೇಯಾ ಶೆಣೈ, ಸೋನಾಲಿ ಎಸ್. ಡಿಸೋಜಾ, ಸಯ್ಯೆದ್ ಮಹೆಕ್ ಜಮೀಲ್, ದೀಪಶ್ರೀ, ಮನೀಷಾ, ಪ್ರೀತಿ, ಯೋಗೇಶ ಕೆ., ಶ್ರದ್ದಾ, ಸೂರಜ್, ನಿಮ್ರಾ ನಾಜ್, ಎಂ. ಸೌಮ್ಯ, ಶೆರೀನ್ ಖತೀಜಾ, ಭಾಗ್ಯಶ್ರೀ ಬಿ. ಹೊಸಂಗಡಿ, ಅನಂತೇಶ ಪಿ. ಜಿ., ಸೌಮ್ಯ ಟಿ. ಎಚ್. ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ದ್ವಿತೀಯ ಬಿ.ಕಾಂ.ನ ಮೇಘನಾ ಶೆಟ್ಟಿ, 151 (75.5%) ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದು, ಸೋನಾಲಿ ಎಸ್. ಡಿಸೋಜಾ 146 (73%), ಶ್ರೇಯಾ ಶೆಣೈ, 144 (72%), ದೀಪಶ್ರೀ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪ.ಜಾತಿ ಮತ್ತು ಪ. ಪಂಗಡದ ಯುವಕ ಯುವತಿಯರಿಗೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕೈಗಾರಿಕಾ ಘಟಕ ಸ್ಥಾಪಿಸಲು, ಬ್ಯಾಂಕಿನಿಂದ ಸಾಲ ಪಡೆದು ಸಹಾಯಧನಕ್ಕಾಗಿ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2575650 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬಾಲ್ಯದಲ್ಲಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಅವರ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸಲಿದೆ. ಸರಕಾರ ಅಂಗನವಾಡಿ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಗಂಗೊಳ್ಳಿಯ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸುಮಾರು 60ಕ್ಕೂ ಮಿಕ್ಕಿ ಮಕ್ಕಳು ದಾಖಲಾಗಿರುವುದು ವಿಶೇಷವಾಗಿದ್ದು, ಮಕ್ಕಳ ಕಲಿಕೆಯನ್ನು ಇನ್ನಷ್ಟು ಉತ್ತಮವಾಗಿಸಲು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಹೇಳಿದರು. ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿಯರು ಕೊಡ ಮಾಡಿದ ಕಲಿಕಾ ಸಾಮಾಗ್ರಿಗಳನ್ನು ಮಕ್ಕಳಿಗೆ ಮಂಗಳವಾರ ವಿತರಿಸಿ ಅವರು ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಜಯಂತಿ ಖಾರ್ವಿ, ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೀಟಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ನೇತ್ರಾವತಿ ಖಾರ್ವಿ, ಅಂಗನವಾಡಿ ಸಹಾಯಕಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾತೃಭೂಮಿ ಸೇವಾ ಟ್ರಸ್ಟ್ ರಿ. ತುಮಕೂರು ಇವರ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಸೇವೆ ಗೈದವರಿಗೆ ಕೊಡ ಮಾಡುವ ರಾಜ್ಯ ಮಟ್ಟದ ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ಬಸ್ರೂರಿನ ಪ್ರದೀಪ್ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಕ್ರೀಡೆ, ಸಾಂಸ್ಕ್ರತಿಕ,ಶೈಕ್ಷಣೀಕ, ಸಾವ೯ಜನಿಕ ಸೇವಾ ವಲಯ, ಧಾಮಿ೯ಕ ಸೇವೆಯೊಂದಿಗೆ ಸ್ವತಂತ್ರ ಸಂಶೋಧನಾ ಕಾಯ೯ದಲ್ಲಿ ತೊಡಗಿಕೊಂಡು ಇವರ ಶಾಸನ ಶೋಧ ಕಾಯ೯ದ ಒಂದು ಶಾಸನವು ಹಂಪಿ ವಿಶ್ವವಿದ್ಯಾಲಯದ ಶಾಸನ ಪ್ರಸಾರಾಂಗ ವಿಭಾಗದಲ್ಲಿ ವರದಿಯಾಗಿದೆ. ಇದರೊಂದಿಗೆ ಅನೇಕ ವೀರಗಲ್ಲು, ಶಾಸನ ಕಲ್ಲು, ಪುರಾತನ ದೇವರ ವಿಗ್ರಹವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು, ಹಟ್ಟಿಕುದ್ರು ಗುಜ್ಜಾಡಿ ಮನೆ ಪದ್ಮನಾಭ ಪೂಜಾರಿ ಹಾಗೂ ಉಗ್ರಾಣಿ ಮನೆ ಗಿರಿಜಾ ಪೂಜಾರಿ ದಂಪತಿಯ ದ್ವಿತೀಯ ಪುತ್ರ.
