ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಆನ್ಲೈನ್‌ಗೆ ಸೀಮಿತವಾಗಿದ್ದ ಕಾರ್ಯಕ್ರಮಗಳು ಈ ವರ್ಷ ಎಲ್ಲರೂ ಜೊತೆಗೂಡಿ ಆಚರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕತಾರ್‌ನಲ್ಲಿ ಪ್ರಪಂಚದ ಅತಿ ಪ್ರತಿಷ್ಟಿತ ಪಂದ್ಯಾವಳಿ ಫಿಫಾ ನಡಯುತ್ತಿರುವ ವಷದಲ್ಲಿ ಸಂಘವು ರಾಜ್ಯೋತ್ಸವ ಆಚರಿಸಿರವುದು ಹೆಮ್ಮೆಯ ವಿಷಯ ಎಂದು ಕತಾರ್ ಕನ್ನಡ ಸಂಘದ ಅಧ್ಯಕ್ಷ ಮಹೇಶ ಗೌಡ ಹೇಳಿದರು. ಕತಾರ್ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ಸಂಘದ ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ದೋಹಾದ ಡಿ. ಪಿ. ಎಸ್. ಶಾಲೆಯಲ್ಲಿ ಆಯೋಜಿಸಿದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಇವರಿಗೆ “ಕತಾರ್ ಕನ್ನಡ ಸಮ್ಮಾನ್” ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು. ಅಲ್ಲದೇ ಕನ್ನಡ ನಾಡಿನ ರಂಗಭೂಮಿ, ಕಲಾತ್ಮಕ ಹಾಗೂ ವಾಣಿಜ್ಯ ಚಲನಚಿತ್ರಗಳ ಹೆಸರಾಂತ ಕಲಾವಿದರು, ನಿರ್ಮಾಪಕರು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಂದುಕಾ ಎ. ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೈಂದೂರಿನ ಸಂಘದ ಕಛೇರಿಯಲ್ಲಿ ಗುರುವಾರ ಜರುಗಿದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘದ ಗೌರವಾಧ್ಯಕ್ಷರಾಗಿ ಎಸ್. ಜನಾರ್ದನ ಮರವಂತೆ, ಕಾರ್ಯದರ್ಶಿಯಾಗಿ ಅರುಣ ಕುಮಾರ್ ಶಿರೂರು, ಉಪಾಧ್ಯಕ್ಷರಾಗಿ ಉದಯ ಪಡಿಯಾರ್, ಕೊಶಾಧಿಕಾರಿಯಾಗಿ ಸುನಿಲ್ ಹೆಚ್. ಜಿ., ಬೈಂದೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನರಸಿಂಹ ಬಿ. ನಾಯಕ್, ರಾಮ ಬಿಜೂರು, ಗಿರೀಶ್ ಶಿರೂರು, ಕೃಷ್ಣ ಬಿಜೂರು ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.9: ನಶೆ ಏರಿಸುವ ಗಾಂಜಾ ಮೊದಲಾದ ಪದಾರ್ಥಗಳು ಜೀವನ ನೆಮ್ಮದಿ ಕಿತ್ತು ತಿನ್ನುವುದಲ್ಲದೆ, ಸಮಾಜದ ಸ್ವಾಸ್ಥ್ಯ ಕೆಡಿಸಿ, ಕೌಂಟುಂಬಿಕ ಬದುಕು ನಾಶ ಮಾಡುತ್ತಿದೆ. ಯುವ ಸಮಾಜ ಜಾಗೃತಿ ಹೆಜ್ಜೆ ಇಡಬೇಕು ಎಂದು ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಹೇಳಿದರು. ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಡಾ. ಬಿ.ಬಿ. ಹೆಗ್ಡೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಆಶ್ರಯದಲ್ಲಿ ಕುಂದಾಪುರ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ಗಾಂಜಾ ವಿರುದ್ಧ ಜಾಗೃತ ನಡಿಗೆ ವಾಕಥಾನ್ ಒಂದು ಹೆಜ್ಜೆ ಒಂದ ಅಮುಲು ಮುಕ್ತ ಭಾರತಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ಡೋಲು ನುಡಿಸಿ ಉದ್ಘಾಟಿಸಿ ಮಾತನಾಡಿ ನಶಾ ಪ್ರಪಂಚ ಕಾಲೇಜು ಕರಿಡಾರ್‌ಗಳಿಗೂ ಪ್ರವೇಶ ಪಡುತ್ತಿರುವುದ ಬೇಸರದ ವಿಷಯವಾಗಿದ್ದು, ಸಮಾಜದ ಎಚ್ಚರಿಸುವ ಕಾರ್ಯ ಮಾಡಬೇಕಿದೆ ಎಂದರು. ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್., ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಬಿಸಿನೆಸ್ ಡೇ ಕಾರ್ಯಕ್ರಮವನ್ನು ನ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿ ಅವರು ಮಾಹಿತಿ ನೀಡಿದರು. ಕುಂದಾಪುರ ಪ್ರೆಸ್ ಕ್ಲಬ್’ನಲ್ಲಿ ಮಂಗಳವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡಬೇಕೆಂಬ ಉದ್ದೇಶದಿಂದ ಬಿಸಿನೆಸ್ ಡೇ ಹಮ್ಮಿಕೊಳ್ಳಲಾಗಿದ್ದು ನ.12ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಂಡವನ್ನು ರಚಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕಂತೆ ಅಂಗಡಿಗಳನ್ನು ತೆರೆದು, ಸಣ್ಣ ಬಂಡವಾಳವನ್ನು ಹೂಡಿ ಲಾಭ ಪಡೆಯುವ ಬಗೆ, ಭಾವನಾತ್ಮಕ, ಸಾಮಾಜಿಕ ಸಂಬಂಧಗಳ ಮೌಲ್ಯವನ್ನು ಅರ್ಥ ಮಾಡಿಕೊಳ್ಳುವುದು, ವಿದ್ಯಾರ್ಥಿಗಳ ಸೃಜನಶೀಲತೆಗೆ ಮೆರಗು ದೊರಕಿಸಲು, ಸ್ವ ಉದ್ಯೋಗದ ಕುರಿತು ಮಾಹಿತಿ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿದರೇ ಯಶಸ್ಸು ತಮ್ಮ ಕಡೆ ಒಲಿಯುತ್ತದೆ ಎನ್ನುವುದನ್ನು ಮನವರಿಕೆ ಮಾಡಿ ಕೊಡುವ ನಿಟ್ಟಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ನ.07: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಳದ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ವೇಳೆ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಶಾಸಕ ಸುಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರುಗಳಾದ ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಕುಂಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ:► ಮೀನುಗಾರರು, ರೈತ ಕೂಲಿಕಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಣೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ – https://kundapraa.com/?p=63074 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮುಖ್ಯಮಂತ್ರಿಯಾಗಿ ನಾಲ್ಕು ಗಂಟೆಯ ಒಳಗೆ ರೈತರ ಮಕ್ಕಳಿಗಾಗಿ ಆರಂಭಿಸಿದ್ದ ವಿದ್ಯಾನಿಧಿ ಯೋಜನೆಯನ್ನು ಈ ವರ್ಷದಿಂದ ಮೀನುಗಾರರು ಹಾಗೂ ರೈತ ಕೂಲಿಕಾರರ ಮಕ್ಕಳಿಗೂ ವಿಸ್ತರಿಸಲಾಗುವುದು. ಇದರಿಂದ ಕರಾವಳಿ 2 ಲಕ್ಷ ಮೀನುಗಾರರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು. ಅವರು ಸೋಮವಾರ ಮುಳ್ಳಿಕಟ್ಟೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮನೆ ಮನೆಗೆ ಕುಡಿಯು ನೀರು, ಮರವಂತೆ ಮೀನುಗಾರಿಕಾ ಬಂದರು, ಏತ ನೀರಾವರಿ ಯೋಜನೆ ಸಹಿತ 1591.77 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿ ದುಡಿಯುವ ವರ್ಗಕ್ಕೆ ಸ್ವಾವಲಂಭಿ ಬದುಕು ಕಟ್ಟಿಕೊಡುವುದು ನಮ್ಮ ಕನಸು. ಆ ನಿಟ್ಟಿನಲ್ಲಿ ಬಿಜೆಪಿ ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಬಡವರಿಗೆ ಬಾಯಿ ಮಾತಿನಿಂದ ಮಾತ್ರ ಪರಿಹಾರವಲ್ಲದೇ, ಅವರ ಕಷ್ಟಸುಖದಲ್ಲಿ ಪಾಲ್ಗೊಂಡು ಅಭಿವೃದ್ಧಿ ಮಾಡಬೇಕು ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದೇ ದಾರಿಯಲ್ಲಿ ಪ್ರಸ್ತುತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.7: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸರಕಾರಿ ಕಾರ್ಯಕ್ರಮ ಆಯೋಜನೆಯ ಹೆಸರಿನಲ್ಲಿ ಆಡಳಿತ ಯಂತ್ರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಆರೋಪಿಸಿದ್ದಾರೆ. ಅವರು ಸೋಮವಾರ ಕುಂದಾಪುರದಲ್ಲಿ ಆಯೋಜಿಸಲಾದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೈಂದೂರು ಕ್ಷೇತ್ರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಜನ ಸೇರಿಸುವ ಉದ್ದೇಶದಿಂದ ಶಾಲಾ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸುವಂತೆ ಬಿಇಓ ಮೂಲಕ ಸೂಚನೆ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತರಿಗೂ ಜನರನ್ನು ಕರೆತರುವಂತೆ ಸೂಚಿಸಲಾಗಿದೆ. ಬಹುಪಾಲು ಸರಕಾರಿ ಬಸ್ಸುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಸಂಚಾರಕ್ಕೂ ತೊಡಕುಂಟುಮಾಡಲಾಗಿದೆ. ಜನ ಸೇರಿಸುವುದಕ್ಕಾಗಿ ಇಂತಹ ಗಿಮಿಕ್ ಮಾಡುತ್ತಿರುವುದು ದುರದೃಷ್ಟಕರ ಎಂದು ಲೇವಡಿ ಮಾಡಿದರು. ಎರಡೆರದು ಭಾರಿ ಗುದ್ದಲಿ ಪೂಜೆ:ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಸೌಡ ಶಂಕರನಾರಾಯಣ ಸೇತುವೆ, ಕಬ್ಬಿನಾಲೆ ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ನನ್ನ ಅವಧಿಯಲ್ಲಿಯೇ ಅನುಮೋದನೆ ದೊರೆತು ಗುದ್ದಲಿಪೂಜೆ ನೆರವೇರಿಸಲಾಗಿತ್ತು. ಚುನಾವಣೆಯ ಬಳಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.7: ಜನಸಂಕಲ್ಪ ಯಾತ್ರೆಯಿಂದ ಕಾರ್ಯಕರ್ತರಲ್ಲಿ ಹುರುಪು ಮೂಡಿದ್ದು ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಇದು ಮುಂದುವರಿಯಲಿದೆ ಎಂದು ಸಿಎಂ ಬಸವರಾಜ ಎಸ್. ಬೊಮ್ಮಾಯಿ ಅವರು ಹೇಳಿದರು. ಅವರು ಕಾಪು ಹಾಗೂ ಬೈಂದೂರು ಕ್ಷೇತ್ರದಲ್ಲಿ ಆಯೋಜಿಸಲಾದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಉಡುಪಿ ಹೆಲಿಪ್ಯಾಡಿಗೆ ಆಗಮಿಸಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆದರೆ ಅದರ ನಾಯಕರು ನಮ್ಮ ಮೇಲೆ ಆರೋಪ ಮಾಡುವುದರಲ್ಲಿ ಮುಳುಗಿದ್ದಾರೆ. ಸಿದ್ಧರಾಮಯ್ಯನವರು ಹೇಳಿದ್ದು ಯಾವುದೂ ನಿಜವಾಗಿಲ್ಲ. ಹಾಗಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಈ ವೇಳೆ ಸಚಿವರುಗಳಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಗೋವಿಂದ ಕಾರಜೋಳ, ಜಿಲ್ಲಾಧಿಕಾರಿ ಕೂರ್ವರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.7: ಕುಂದಾಪುರ ಮೊದಲ ಮಕ್ಕಳ ತಜ್ಞ (Pediatrician), ಖ್ಯಾತ ವೈದ್ಯ ಡಾ. ವೆಂಕಟರಾಜ್ (67) ಅವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕುಂದಾಪುರ ನಗರದಲ್ಲಿ ಸ್ವಾತಿ ಕ್ಲಿನಿಕ್ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸಿದ್ದ ಡಾ. ವೆಂಕಟರಾಜ್ ಅವರು, ಜನನುರಾಗಿ ವೈದ್ಯರೂ ಆಗಿದ್ದರು. ಕುಂದಾಪ್ರ ಡಾಟ್ ಕಾಂ. ಮೂಲತಃ ಉಪ್ಪುಂದದವರಾದ ಡಾ. ವೆಂಕಟರಾಜ್ ಅವರು, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಣಿಪಾಲದ ಕೆಎಂಸಿಯಲ್ಲಿ ಎಬಿಬಿಎಸ್ ಹಾಗೂ ಡಿಸಿಎಚ್ ಮುಗಿಸಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಮೃತರು ತಂದೆ ತಿಮ್ಮಪ್ಪಯ್ಯ ಕಾರಂತ್, ಮಡದಿ ರಾಜೇಶ್ವರಿ, ಪುತ್ರ ಯುರಾಲಾಜಿಸ್ಟ್ ಡಾ. ಕಿಶನ್ ರಾಜ್, ಪುತ್ರಿ ಆಶಾಜ್ಯೋತಿ, ಸೊಸೆ ಗೌನಕಾಲಜಿಸ್ಟ್ ಡಾ. ರಜನಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ವೆಂಕಟರಾಜ್ ಅವರ ನಿಧನಕ್ಕೆ ಐಎಂಎ ಕುಂದಾಪುರದ ಅಧ್ಯಕ್ಷರಾದ ಡಾ. ಮಹೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾನೂನು ಎಂದರೆ ಮುನುಷ್ಯನನ್ನು ಬಿಡದಂತೆ ಹಿಂಬಾಲಿಸುವ ನೆರಳಿದ್ದಂತೆ. ಹುಟ್ಟಿನಿಂದ ಸಾವಿನ ವರೆಗೂ ಪ್ರತಿಯೊಬ್ಬ ಮಾನವನೂ ಕಾನೂನಿನ ಪರಿಧಿಯಲ್ಲಿಯೇ ಇರುತ್ತಾನೆ. ಭ್ರೂಣದಲ್ಲಿರುವ ಕೂಸಿನಿಂದ ಹಿಡಿದು ಜೀವಿತಾವಧಿವರೆಗೂ ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಇರಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಗೌರವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಹೇಳಿದರು. ಬೈಂದೂರು ಯಡ್ತರೆ ಜೆಎನ್‌ಆರ್ ಸಭಾಭವನದಲ್ಲಿ ಭಾನುವಾರ 75ನೇ ಸ್ವಾಂತಂತ್ರ್ಯ ಅಮೃತ ಮಹೋತ್ಸವ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರೀಕರ ಸಬಲೀಕರಣ ಅಂಗವಾಗಿ ಹಮ್ಮಿಕೊಂಡಿರುವ ಕಾನೂನು ಅರಿವು ನೆರವು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಕಾನೂನು ಸೇವ ಪ್ರಾಧಿಕಾರದ ಆದೇಶದಂತೆ ಪ್ರತಿ ಮನೆಮನೆಗಳಿಗೂ ಉಚಿತ ಕಾನೂನು ಸೇವೆ ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಾನೂನಿನ ಅರಿವು ಪ್ರಚಾರ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿಯೊಬ್ಬರಿಗೂ ಕನಿಷ್ಠ ಕಾನೂನಿನ ಜ್ಞಾನ ಇರಬೇಕು. ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಿದರೆ…
