ಕತಾರ್ ಕರ್ನಾಟಕ ಸಂಘದ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್:
ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಆನ್ಲೈನ್‌ಗೆ ಸೀಮಿತವಾಗಿದ್ದ ಕಾರ್ಯಕ್ರಮಗಳು ಈ ವರ್ಷ ಎಲ್ಲರೂ ಜೊತೆಗೂಡಿ ಆಚರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕತಾರ್‌ನಲ್ಲಿ ಪ್ರಪಂಚದ ಅತಿ ಪ್ರತಿಷ್ಟಿತ ಪಂದ್ಯಾವಳಿ ಫಿಫಾ ನಡಯುತ್ತಿರುವ ವಷದಲ್ಲಿ ಸಂಘವು ರಾಜ್ಯೋತ್ಸವ ಆಚರಿಸಿರವುದು ಹೆಮ್ಮೆಯ ವಿಷಯ ಎಂದು ಕತಾರ್ ಕನ್ನಡ ಸಂಘದ ಅಧ್ಯಕ್ಷ ಮಹೇಶ ಗೌಡ ಹೇಳಿದರು.

Call us

Click Here

ಕತಾರ್ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ಸಂಘದ ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ದೋಹಾದ ಡಿ. ಪಿ. ಎಸ್. ಶಾಲೆಯಲ್ಲಿ ಆಯೋಜಿಸಿದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಇವರಿಗೆ “ಕತಾರ್ ಕನ್ನಡ ಸಮ್ಮಾನ್” ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು. ಅಲ್ಲದೇ ಕನ್ನಡ ನಾಡಿನ ರಂಗಭೂಮಿ, ಕಲಾತ್ಮಕ ಹಾಗೂ ವಾಣಿಜ್ಯ ಚಲನಚಿತ್ರಗಳ ಹೆಸರಾಂತ ಕಲಾವಿದರು, ನಿರ್ಮಾಪಕರು, ನಿರ್ದೇಶಕರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಸುವರ್ಣನ್ಯೂಸ್ ವಾಹಿನಿ ಮುಖ್ಯಸ್ಥ ರವಿ ಹೆಗ್ಡೆ, ನಟ, ನಿರ್ದೇಶಕ ಅನೂಪ್ ಭಂಡಾರಿ, ಮಿಮಿಕ್ರಿ ಕಲಾವಿದ ಯೋಗಿ ಗೌಡ, ಭಾರತೀಯ ರಾಯಭಾರಿ ಕಚೇರಿ ಪ್ರತಿನಿಧಿ ಏಂಜೆಲಿನ್ ಪ್ರೇಮಲತಾ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಹಾಗೂ ಸಂಘದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುಶೀಲಾ ಸುನಿಲ್ ವಂದಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಬಾರಿಸು ಕನ್ನಡ ದಿಂಡಿಮವ ಗಾನದಿಂದ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮ, ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸುಮಾ ಮಹೇಶ್ ಗೌಡ ಸಂಯೋಜಿಸಿದ ಮಹಿಳಾ ತಂಡದ ಡೊಳ್ಳು ಕುಣಿತ ಎಲ್ಲರ ಆಕರ್ಷಣೀಯವಾಗಿತ್ತು. ಯೋಗಿ ಗೌಡ ಅವರ ಚಿತ್ರ ನಟರು, ರಾಜಕೀಯ ವ್ಯಕ್ತಿಗಳು, ದೃಶ್ಯ ಮಾಧ್ಯಮದ ದಿಗ್ಗಜರ ಮಿಮಿಕ್ರಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಸಂಜನಾ ಜೀವನ್ ಅವರು ಸಂಯೋಜಿಸಿದ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತಿರುವ ಕನ್ನಡ ಚಿತ್ರ ಕಾಂತಾರದ ವರಾಹ ರೂಪಂ ನೃತ್ಯವು ಪ್ರೇಕ್ಷಕರ ಮನ್ನಣೆ ಪಡೆಯಿತು.

Click here

Click here

Click here

Click Here

Call us

Call us

Leave a Reply