Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ, ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಸಂಸ್ಥಾಪಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಪ್ರಾಯೋಜಕ ಕೆ. ಎಸ್. ಪ್ರಕಾಶ ರಾವ್ (77) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಖಂಬದಕೋಣೆಯ ಹಿಂದಿನ ತಲೆಮಾರಿನ ಧುರೀಣ ಆರ್. ಕೆ. ಸಂಜೀವ ರಾವ್-ಸುಶೀಲಾ ರಾವ್ ದಂಪತಿಯ ಪುತ್ರರಾದ ಪ್ರಕಾಶ ರಾವ್ ಪದವಿ ಶಿಕ್ಷಣದ ಬಳಿಕ ಮುಂಬೈ ಕೆನರಾ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸಿ, ಬಳಿಕ ಸಿಂಡಿಕೇಟ್ ಬ್ಯಾಂಕ್ ಸೇರಿ ಮಣಿಪಾಲ ಧಾರವಾಡ, ನವದೆಹಲಿ, ಕೊಲ್ಕತ್ತದಲ್ಲಿ ಕೆಲಸ ಮಾಡಿದರು, ಕೊಲ್ಕತ್ತ, ನವದೆಹಲಿಯಲ್ಲಿ ವಲಯ ಪ್ರಬಂಧಕರಾಗಿ ದುಡಿದ ಬಳಿಕ ಪ್ರಧಾನ ಕಚೇರಿಯಲ್ಲಿ ಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಹೃದಯಿಗಳೂ, ಪರೋಪಕಾರಿಗಳೂ ಆಗಿದ್ದ ಅವರು ಸೇವಾವಧಿಯಲ್ಲಿ ಸಹೋದ್ಯೋಗಿಗಳ ಮತ್ತು ಸಾರ್ವಜನಿಕರ ಅಪಾರ ಪ್ರಶಂಸೆ ಗಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಲ್ಲಿ ಸಕ್ರಿಯರಾಗಿದ್ದ ಪ್ರಕಾಶ ರಾವ್ ಅದರ ರಾಜ್ಯಾಧ್ಯಕ್ಷರಾಗಿ ದುಡಿದಿದ್ದರು. ನೌಕರರ ಬಗ್ಗೆ ತೀವ್ರ ಕಾಳಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರತಿಭಾ ಕಾರಂಜಿಯ ಭಕ್ತಿಗೀತೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅವರು ಶ್ರೇಯಾ ಖಾರ್ವಿ ಅವರನ್ನು ಸನ್ಮಾನಿಸಿದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಸಹಶಿಕ್ಷಕರಾದ ಎನ್.ಸುಭಾಶ್ಚಂದ್ರ ನಾಯಕ್, ಜಿ.ವಿಶ್ವನಾಥ ಭಟ್, ನಾರಾಯಣ ಉಪಾಧ್ಯಾಯ, ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ, ಸಹಶಿಕ್ಷಕಿಯರಾದ ಲಕ್ಷ್ಮೀ, ಮಾಲಾಶ್ರೀ, ರೇಖಾ ಖಾರ್ವಿ, ರೇಣುಕಾ ನಾಯಕ್, ನಾಗರಾಜ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಸವಿತಾ ಯು.ದೇವಾಡಿಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ, ೧೨ನೇ ರಾಜ್ಯ ಮಟ್ಟದ ಐಡಿಯಲ್ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಸನ್ನಾ ಪೈ, ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಕತಾರ್ನಲ್ಲಿರುವ ಕುಂದಾಪುರ ತಾಲೂಕು ಕ್ರಿಕೆಟರ್ಸ್ ನೇತೃತ್ವದಲ್ಲಿ ಕತಾರ್ ಫ್ರೀಲ್ಯಾನ್ಸ್ ಗ್ರೂಫ್ ಪ್ರಾಯೋಜಕತ್ವದಲ್ಲಿ ಇಲ್ಲಿನ ಒಲ್ಡ್ ಐಡಿಯಲ್ ಸ್ಕೂಲ್ ಗ್ರೌಂಡ್ನಲ್ಲಿ 23 ಜನವರಿ 2018ರ ಸಂಜೆ ’ಕುಂದಾಪುರ ಟ್ರೋಫಿ’ ಸಿಸಜ್ -2’ ಸೀಮಿತ ಓವರ್ಗಳ ಟೆನ್ಸಿಸ್ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ದೊರೆಯಲಿದೆ. ಕತಾರ್ನಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಕ್ರಿಕೆಟ್ ಆಸಕ್ತರು ಒಟ್ಟು ಸೇರಿ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಕಳೆದ ವರ್ಷ ಮೊದಲ ಭಾರಿಗೆ ಕುಂದಾಪುರ ತಾಲೂಕು ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಭಾರಿ ಎರಡನೇ ಸೀಸನ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇಕ್ಬಾಲ್ ನಾವುಂದ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರೇ, ಇಂತಿಖಾಬ್ ಅಲಾಮ್ ಕಾರ್ಯದರ್ಶಿಯಾಗಿ, ಅಸ್ಮತ್ ಅಲಿ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ.23 ರಿಂದ ಜ.26 ತನಕ ಪಂದ್ಯಾಟ ನಡೆಯಲಿದೆ. ಕತಾರ್‌ನಲ್ಲಿ  ನೆಲೆಸಿರುವ ಕರಾವಳಿಯ ಕ್ರಿಕೆಟ್ ಪ್ರೇಮಿಗಳು ಪಂದ್ಯಾಟ ವೀಕ್ಷಣೆಗೆ ಆಗಮಿಸುವಂತೆ ಸಂಘಟಕರು ಕೋರಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ಎಸ್‌ಜಿಎಸ್ ಇಂಟರ್‌ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಜ ೨೬ರಿಂದ ೨೮ರ ವರೆಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆಸುವ ೬ನೆ ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಮರವಂತೆಯ ಯೋಗಪಟು ಕುಶ ಪೂಜಾರಿ ಸ್ಥಾನ ಪಡೆದಿದ್ದಾರೆ. ಬಾಲ್ಯದಿಂದಲೇ ಯೋಗ ತರಬೇತಿ ಪಡೆದು ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವಾಗ ನಡೆದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದ ಸಾಧನೆ ಕುಶ ಅವರದು. ಬಿ. ಕಾಂ ಪದವಿ ಮುಗಿಸಿರುವ ಅವರು ಪ್ರಸಕ್ತ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಯೋಗವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಅಧ್ಯಯನ ನಡೆಸುತ್ತಿದ್ದಾರೆ. ಕುಶ ಪೂಜಾರಿ ಮರವಂತೆ ಗುಳದಾಳಿಬೆಟ್ಟು ರಾಮಚಂದ್ರ ಪೂಜಾರಿ, ಲೀಲಾವತಿ ಪೂಜಾರಿ ದಂಪತಿಯ ಪುತ್ರ. ತನ್ನ ಸಾಧನೆಗೆ ಶಿಕ್ಷಕರಾದ ಎಂ. ವಿ. ಲಮಾಣಿ, ಡಾ. ಯಶೋದಾ ಕರನಿಂಗ, ರಂಜಿತ್ ಟಿ. ಎನ್, ಅವರು ನೀಡಿದ ತರಬೇತಿ, ಮಾರ್ಗದರ್ಶನ, ಕುಂದಾಪುರದ ಡಾ. ಬಿ. ಬಿ. ಹೆಗ್ಡೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆಲವು ಅಂಗನವಾಡಿಯಲ್ಲಿ ಶಿಕ್ಷಕಿಯರಿದ್ದರೆ ಸಹಾಯಕಿಯರಿಲ್ಲ, ಸಹಾಯಕಿಯರಿದ್ದರೆ ಶಿಕ್ಷಕಿಯಿಲ್ಲ. ಹಾಗಿದ್ದರೂ ಮಾತೃಪೂರ್ಣ ಯೋಜನೆ ಹೊರೆ ಹೊರಿಸಲಾಗಿದೆ. ಅಂಗೈಅಗಲದ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಅಡುಗೆ ಮಾಡುವುದಾ? ಮಕ್ಕಳ ಕೂರಿಸುವುದಾ? ಗೋಡೋನ್ ಮಾಡೋದಾ, ಸಿಲೆಂಡರ್, ಒಲೆ ಇಡೋದಾ? ಏನಾದರೂ ಹೆಚ್ಚು ಕಮ್ಮಿಯಾದರೆ ನಾವು ತಲೆಕೊಡಬೇಕು. ಸರ್ಕಾರ ಬೇಡಿಕೆಗೆ ನಯಾಪೈಸೆ ಬೆಲೆ ಕೊಡದಿದ್ದರೂ, ದಿನಕ್ಕೊಂದು ಜವಾಬ್ದಾರಿ ಹೊರಿಸುವ ಮೂಲಕ ನಮ್ಮ ಜೀವನದೊಟ್ಟಿಗೆ ಚೆಲ್ಲಾಟವಾಡುತ್ತಿದೆ. ವಿವಿಧ ಬೇಡಿಕೆ ಮುಂದಿಟ್ಟುಕೊಂಡು ತಾಲೂಕು ಅಂಗನವಾಡಿ ಕಾರ‍್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ಆಶ್ರಯದಲ್ಲಿ ನಡೆದ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರು ತಮ್ಮ ಅಸಹಾಯಕತೆ ಹೊರ ಹಾಕಿದ್ದು ಹೀಗೆ. ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ 18 ಸಾವಿರ ಸಂಬಳ ಜಾರಿ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಕಿವುಡಾದರೂ ಮಾತೃಪೂರ್ಣ ಯೋಜನೆ ಜವಾಬ್ದಾರಿ ನಮ್ಮ ತಲೆಗೆಕಟ್ಟಿದೆ. ಕೆಲ ಅಂಗನವಾಡಿಯಲ್ಲಿ ಸಹಾಯಕಿಯರೇ ಇಲ್ಲದೆ ಅಡುಗೆ ಕೆಲಸ ಕೂಡಾ ಶಿಕ್ಷಕಿ ಮೇಲೆ ಬೀಳುತ್ತದೆ. ಮಾತೃಪೂರ್ಣಯೋಜನೆ ಫಲಾನುಭವಿಗಳ ಕೂರಿಸಿ ಊಟ ಬಡಿಸಲುಕೊಠಡಿಯಿಲ್ಲದೆರಸ್ತೆ ಮೇಲೆ ಕೂರಿಸಿ ಊಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೂಕ್ಷ್ಮ, ಪ್ರಾವೀಣ್ಯ ಮತ್ತು ಪ್ರಬುದ್ಧತೆಯಿಂದ ಯುವಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ, ಅವರ ವರ್ತನೆಗಳಲ್ಲಿ ಅಡಕವಾಗಿರುವ ವಿಷಯಗಳ ಅತ್ಯಂತ ಕಾಳಜಿಯಿಂದ ಗ್ರಹಿಸಿ, ಸಂವೇದನಾಶೀಲರಾಗಿ ಪರಿಹರಿಸುವ ಅನಿವಾರ್ಯತೆ ಇದೆಎಂದು ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಮನೋವೈದ್ಯಡಾ. ವಿರೂಪಾಕ್ಷ ದೇವರಮನೆ ಹೇಳಿದರು. ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಕಾಲೇಜ್ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಯುವ ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಸಂವಾದದಲ್ಲಿ ಮಾತನಾಡಿದರು. ಕಾಲೇಜ್ ಪ್ರಾಂಶುಪಾಲಪ್ರೊ.ದೋಮ ಚಂದ್ರಶೇಖರ್, ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ಜ್ಯೋತಿ ಮೊಗವೀರಸ್ವಾಗತಿಸಿದರು.ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ ಅತಿಥಿಗಳ ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಮುಖ್ಯಸ್ಥ ರಾಜೇಶ್ ಶೆಟ್ಟಿನಿರೂಪಿಸಿ, ವಂದಿಸಿದರು. ಉಡುಪಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ.ಡಾ. ವಿರೂಪಾಕ್ಷ ದೇವರಮನೆ ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಭೆ, ಸಮಾರಂಭ, ವಾರ್ಷಿಕೋತ್ಸವ, ಭಾಷಣಗಳಿಂದ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಸಮುದಾಯದ ಪ್ರತಿಯೊಬ್ಬ ಸದಸ್ಯರು ತಮ್ಮೊಡನೆ ಇತರರನ್ನು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ರೀತಿ ಒಗ್ಗಟ್ಟಿನಿಂದ ಎಲ್ಲರೂ ಬೆಳೆದಾಗ ಮಾತ್ರ ಸಮುದಾಯ ಬಲಿಷ್ಠವಾಗಲು ಸಹಕಾರಿಯಾಗುತ್ತದೆ. ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಕೆ, ಗೋಪಾಲ ಪೂಜಾರಿ ಹೇಳಿದರು. ನಾಗೂರಿನ ಮಹಾಲಸಾ ಕಲ್ಚರಲ್ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಅರ್ಧವಾರ್ಷಿಕ ಪ್ರಾದೇಶಿಕ ಮಹಾಸಭೆಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ನಡೆಯುವ ಕೆಟ್ಟ ಚಟುವಟಿಕೆಗಳಲ್ಲಿ ಸಮುದಾಯದ ಯುವ ಜನತೆ ಪಾಲ್ಗೋಳುತ್ತಿರುವುದು ಆತಂಕಕಾರಿಯಾಗಿದೆ. ಹೆತ್ತವರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ದಾರಿ ತಪ್ಪುತ್ತಿರುವ ಕಾರಣದ ಬಗ್ಗೆ ಸಂಘದ ಹಿರಿಯರು ಚರ್ಚಿಸಬೇಕು ಇಲ್ಲದಿದ್ದರೆ ಸಮುದಾಯ ಅಭಿವೃದ್ದಿಗೆ ಮಾರಕವಾಗಲಿದೆ. ಯುವಕರು ವಿವಿಧ ವೃತ್ತಿಗಲ್ಲಿ, ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಆ ಮೂಲಕ ಸಮುದಾಯಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪೋಷಕರ ವಿರೋಧ ಹಿನ್ನೆಲೆಯಲ್ಲಿ ಅಂತರ್ಜಾತಿ ಪ್ರೇಮಿಗಳಿಗೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಶುಕ್ರವಾರ ಗಣ್ಯರ ಸುಮ್ಮುಖದಲ್ಲಿ ವಿವಾಹ ನೆರವೇರಿಸಲಾಯಿತು. ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಾಗಸಂಪಿಗೆ ಜನಾಂಗಕ್ಕೆ ಸೇರಿದ ಮಂಜುನಾಥ ಎಂಬವರ ಪುತ್ರ ಶ್ಯಾಮ ಪ್ರಸಾದ್ ಹಾಗೂ ಶಿಕಾರಿಪುರ ಎಸ್ಸಿ ಜನಾಂಗಕ್ಕೆ ಸೇರಿದ ಗೋಣಿ ಬಸಪ್ಪ ಎಂಬವರ ಪುತ್ರಿ ರೇಖಾ (೨೦) ಸತಿ,ಪತಿಗಳಾದ ಪ್ರೇಮಿಗಳು. ಶ್ಯಾಮ್ ಪ್ರಸಾದ್ ಹಾಗೂ ರೇಖಾ ಒಂದೇ ಊರಿನವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು, ಒಂದೂವರೆ ವರ್ಷದಿಂದ ಒಬ್ಬರೂ ಪ್ರೀತಿ ಪಾಶಕ್ಕೆ ಬಿದ್ದಿದ್ದರು. ಶ್ಯಾಮ್‌ಪ್ರಸಾದ್ ಕೊಟೇಶ್ವರ ಬಳಿ ಬಾಡಿಗೆ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈ ಇಬ್ಬರ ಮದುವೆಗೆ ಎರಡೂ ಮನೆಯವರ ಕಡೆಯಿಂದ ವಿರೋಧವಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಸಂಪರ್ಕಿಸಿದ ಯುವ ಜೋಡಿ ತಮ್ಮ ಮದುವೆ ಮಡುವಂತೆ ಅಧ್ಯಕ್ಷೆ ರಾಧಾದಾಸ್ ಅವರಲ್ಲಿ ವಿನಂತಿಸಿತ್ತು. ಮಹಿಳಾ ಸಾಂತ್ವಾನ ಕೇಂದ್ರ ದಿಂದ ಧಾರೆ ಸೀರೆ ಕಾಲುಂಗುರು, ಹಾಗೂ ಕರಿಮಣಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಉಪವಿಭಾಗಾಧಿಕಾರಿಯಾಗಿ ಟಿ.ಭೂಬಾಲನ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಕುಂದಾಪುರ ಎಸಿಯಾಗಿದ್ದ ಶಿಲ್ಪಾ ನಾಗ್ ಸಿ.ಟಿ, ಪದೋನ್ನತಿಹೊಂದಿ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಓ ಆಗ ವರ್ಗಾವಣೆ ಗೊಂಡಿದ್ದರಿಂದ ಕುಂದಾಪುರ ಉಪವಿಭಾಗಾಧಿಕಾರಿ ಸ್ಥಾನ ತೆರವಾಗಿತ್ತು. ತಮಿಳುನಾಡು ಮೂಲದ ಟಿ. ಭೂಬಾಲನ್ ೨೦೧೫ರ ಪ್ರಥಮ ಬ್ಯಾಚ್ ಬೀದರ್‌ನಲ್ಲಿ ತರಬೇತಿ ಪಡೆದಿದ್ದು, ಮೂರು ತಿಂಗಳು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆ ಇಲಾಖೆಯಲ್ಲಿದ್ದರು. ನಂತರ ಹರ್ಪನಹಳ್ಳಿಯಲ್ಲಿ ಮೂರು ತಿಂಗಳು ಎಸಿಯಾಗಿದ್ದು, ಪುತ್ತೂರಿಗೆ ಸರ್ಕಾರ ವರ್ಗಮಾಡಿತ್ತು. ಚಾರ್ಜ್ ತೆಗೆದುಕೊಳ್ಳುವ ದಿನವೇ ಅವರ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಿತ್ತು. ಅಧಿಕಾರ ಸ್ವೀಕರಿಸಿದ ಎಸಿ ಟಿ.ಭೂಬಾಲನ್ ಅವರನ್ನು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಕೆ.ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕುಂದಾಪುರ ಮೂಲದ ಕಾಶಿನಾಥ್ ಅವರು ಗುರುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್ ಅವರನ್ನು 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕುಂದಾಪುರ ಕೋಣಿ ಮೂಲದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ ಕಾಶಿನಾಥ್ ಒಬ್ಬ ನಟನಾಗಿ, ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದಂತಹ ಪ್ರತಿಭಾವಂತ ವ್ಯಕ್ತಿ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಅಸೀಮಾ ಎಂಬ ಚಿತ್ರತಂಡವನ್ನು ಸೇರಿಕೊಂಡ ಕಾಶಿನಾಥ್ ಅವರು ಸುರೇಶ್ ಹೆಬ್ಳೀಕರ್ ಅವರ ಗರಡಿಯಲ್ಲಿ ಪಳಗಿದರು. 1975 ರಲ್ಲಿ ಅಪರೂಪದ ಅತಿಥಿ ಚಿತ್ರವನ್ನು ನಿರ್ದೇಶಿಸಿ ಹೊಸತನವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟರು. 1978 ರಲ್ಲಿ ಕಾಶಿನಾಥ್ ನಿರ್ದೇಶಿಸಿದ್ದ ಸಸ್ಪೆನ್ಸ್ ಥ್ರಿಲ್ಲರ್ ‘ಅಪರಿಚಿತ’ ಚಿತ್ರ ಭರ್ಜರಿ ಯಶಸ್ವಿಯಾಗಿತ್ತು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿತ್ತು. 1984 ರಲ್ಲಿ…

Read More