ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಕಳೆದ ವಾರ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ವಿಶ್ವ ಯೋಗಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೂರನೆಯ ಸ್ಥಾನ ಗಳಿಸಿ ಕಂಚಿನ ಪದಕದಿಂದ ಪುರಸ್ಕೃತರಾಗಿರುವ ಕುಶ ಪೂಜಾರಿ ಶುಕ್ರವಾರ ಮರವಂತೆಗೆ ಬರುತ್ತಿದ್ದಂತೆ ಅವರಿಗೆ ಅದ್ದೂರಿಯ ಸ್ವಾಗತ ಕೋರಿ ಅಭಿನಂದಿಸಲಾಯಿತು. ಗ್ರಾಮದ ದಕ್ಷಿಣ ಗಡಿಯಾದ ಮಾರಸ್ವಾಮಿಯಲ್ಲಿ ಕಾದಿದ್ದ ನಾಗರಿಕರ ಪರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಹಾರಾರ್ಪಣೆಗೈದರು. ಬಳಿಕ ಅವರನ್ನು ತೆರೆದ ವಾಹನದಲ್ಲಿ ಡಿಜೆ ಸಂಗೀತ, ಸಿಡಿಮದ್ದಿನ ಸದ್ದಿನೊಂದಿಗೆ ಊರಿನ ಪ್ರಮುಖ ಮಾರ್ಗಗಳಲ್ಲಿ ವಾಹನಗಳ ಮೆರವಣಿಗೆಯ ಮೂಲಕ ಅವರು ಪ್ರಾಥಮಿಕ ಶಿಕ್ಷಣ ಮತ್ತು ಯೋಗದ ಆರಂಭಿಕ ಪಾಠ ಕಲಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಜಯಘೋಷದ ನಡುವೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಜನಾರ್ದನ ಅವರನ್ನು ಸನ್ಮಾನಿಸಿದರು. ಮಾತನಾಡಿದ ಅವರು ಎಳವೆಯಲ್ಲೇ ಯೋಗದತ್ತ ಆಕರ್ಷಿತರಾದ ಕುಶ ತಮ್ಮ ಶಿಕ್ಷಣದುದ್ದಕ್ಕೂ ಸತತ ಪರಿಶ್ರಮದಿಂದ ಅದರಲ್ಲಿ ಹಂತಹಂತವಾಗಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಶ್ರಯದಲ್ಲಿ ಕೇರಳದ ತ್ರಿಶೂರ್ನಲ್ಲಿ ಜರಗಿದ ೧೩ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಎಂಡ್ ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆ ಮತ್ತು ೯ನೇ ರಾಷ್ಟೀಯ ಮಟ್ಟದ ಸ್ಪೀಡ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಪ್ರಸನ್ನಾ ಪೈ ಅವರು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಜ್ಯ ಮಟ್ಟದ ಅಬಾಕಸ್ ಎಂಡ್ ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಈಕೆ ಗಂಗೊಳ್ಳಿಯ ಪತ್ರಕರ್ತ ಬಿ.ರಾಘವೇಂದ್ರ ಪೈ ಮತ್ತು ರಾಧಿಕಾ ಆರ್.ಪೈ ದಂಪತಿ ಪುತ್ರಿ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಕುಂದಾಪುರ ವಿಭಾಗದ ಪ್ರಸನ್ನ ಕೆ.ಬಿ. ಮತ್ತು ಮಹಾಲಕ್ಷ್ಮೀ ಪ್ರಸನ್ನ ತರಬೇತಿ ನೀಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ತುಳು ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಭಾಗವಾಗಿದೆ. ಯುವ ಜನತೆಗೆ ತುಳು ಸಂಸ್ಕೃತಿಯನ್ನು ಕಲಿಸುವುದು ದೊಡ್ಡ ಸವಾಲಾಗಿದೆ. ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಇಲ್ಲಿನ ರಾಜಕಾರಣಿಗಳ ಅನಾಧರವೇ ಇದಕ್ಕೆ ಕಾರಣವಾಗಿದೆ. ತುಳುವಿನ ಉಳಿವಿಗೆ ಇಚ್ಛಾಶಕ್ತಿ ಬರಲಿ ಎಂದು ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು. ಶ್ರೀ ವಿದ್ಯಾಸಂಸ್ಥೆ, ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಜಂಟಿ ಸಹಯೋಗದಲ್ಲಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಯಲು ರಂಗಮಂದಿರದ ಪಳಕಳ ಸೀತಾರಾಮ ಭಟ್ ವೇದಿಕೆಯಲ್ಲಿ ಬುಧವಾರ ರಾತ್ರಿ ನಡೆದ ೯ನೇ ವರ್ಷದ ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬೈ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಸಂಪತ್ತನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು. ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವುಗಳ ಬೆಳವಣಿಗೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯೋರ್ವರು ಪ್ರೇಮ ವೈಫಲ್ಯದಿಂದ ಕೊಲ್ಲೂರಿನ ವಸತಿಗೃಹದಲ್ಲಿ ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ. ಪೊಲೀಸ್ ಪೇದೆ ನಾಗರಾಜ (23) ಆತ್ಮಹತ್ಯೆಗೆ ಮಾಡಿಕೊಂಡವರು. ಅವರ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಪ್ರೇಯಸಿ ಹಾಗೂ ಅದೇ ಠಾಣೆಯ ಮಹಿಳಾ ಪೇದೆ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅವರನ್ನು ರಕ್ಷಿಸಲಾಗಿದೆ. ಶನಿವಾರ ಬೆಳಿಗ್ಗೆ ತನ್ನ ಕರ್ತವ್ಯ ಮುಗಿಸಿ ಕೊಲ್ಲೂರಿನ ಸೌಪರ್ಣಿಕಾ ಗೆಸ್ಟ್ ಗೌಸ್ನಲ್ಲಿ ತಂಗಿದ್ದ ನಾಗರಾಜ್ ಅವರು ರಾತ್ರಿವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರ ಕೊಠಡಿಯಲ್ಲಿದ್ದ ಇನ್ನೊರ್ವ ಪೇದೆ ರಾತ್ರಿಪಾಳಿ ಮುಗಿಸಿ ಬೆಳಿಗ್ಗೆ ಕೊಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆಯ ಮಲೆಬೆನ್ನೂರಿನವರಾದ ನಾಗರಾಜ್ ೨೦೧೪ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡು ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಅದೇ ಠಾಣೆಯಲ್ಲಿ ಮಹಿಳಾ ಪೇದೆಯೋರ್ವರೊಂದಿಗೆ ಪ್ರೇಮಾಂಕುವಾಗಿತ್ತು. ಇಬ್ಬರ ಪ್ರೀತಿಯ ವಿಚಾರ ಅವರ ಕುಟುಂಬಿಕರಿಗೂ ತಿಳಿದು ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಈ ಮಧ್ಯೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯೋರ್ವರು ಕೊಲ್ಲೂರಿನ ವಸತಿಗೃಹದಲ್ಲಿ ನೇಣಿಗೆ ಶರಣಾಗಿರುವ ವಿಷಾದನೀಯ ಘಟನೆ ವರದಿಯಾಗಿದೆ. ಪೊಲೀಸ್ ಪೇದೆ ನಾಗರಾಜ (27) ಆತ್ಮಹತ್ಯೆಗೆ ಮಾಡಿಕೊಂಡ ದುರ್ದೈವಿ. ಶನಿವಾರ ಬೆಳಿಗ್ಗೆ ತನ್ನ ಕರ್ತವ್ಯ ಮುಗಿಸಿ ಕೊಲ್ಲೂರಿನ ಸೌಪರ್ಣಿಕಾ ಗೆಸ್ಟ್ ಗೌಸ್ನಲ್ಲಿ ತಂಗಿದ್ದ ನಾಗರಾಜ್ ಅವರು ರಾತ್ರಿವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರ ಕೊಠಡಿಯಲ್ಲಿದ್ದ ಇನ್ನೊರ್ವ ಪೇದೆ ರಾತ್ರಿಪಾಳಿ ಮುಗಿಸಿ ಬೆಳಿಗ್ಗೆ ಕೊಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆಯ ಮಲೆಬೆನ್ನೂರಿನವರಾದ ನಾಗರಾಜ್ 2014 ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡು ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೋಯ್ದಾಗೆ ಬಂದೋವಸ್ತ್ ಕರ್ತವ್ಯ ನಿರ್ವಹಿಸಿ ಎರಡು ದಿನದ ಹಿಂದಷ್ಟೇ ಕೊಲ್ಲೂರಿಗೆ ಬಂದಿದ್ದ ಅವರು ತಂಗಿದ್ದ ಸೌಪರ್ಣಿಕಾ ಗೆಸ್ಟ್ ಗೌಸ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಅಗ್ರಮಾನ್ಯ ಸ್ಥಾನವನ್ನು ಹೊಂದಿರುವ ಪ್ಲೆಸೆಂಟ್ ಗೃಹೋಪಕರಣ ಮಳಿಗೆ ಯಶಸ್ವಿ 14 ವರ್ಷಗಳನ್ನು ಪೂರೈಸಿ ೧೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಪ್ರತಿ ವರ್ಷದಂತೆ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ದರ ಕಡಿತದ ಮಾರಾಟ ಫೆ.05ರಿಂದ ಆರಂಭಗೊಂಡು ಫೆ.24ರವರೆಗೆ ನಡೆಯಲಿದೆ. ಕುಂದಾಪುರದ ಶಾಸ್ತ್ರೀ ಸರ್ಕಲ್ನಲ್ಲಿರುವ ಹೆಬ್ಬಾರ್ ಕಾಂಪ್ಲೆಕ್ಸ್, ಬ್ರಹ್ಮಾವರದ ಮ್ಯಾಕ್ಸ್ ಸೆಂಟರ್ನಲ್ಲಿರುವ ಗೃಹೋಪಕರಣ ಮಳಿಗೆಗಳಲ್ಲಿ ವಾರ್ಷಿಕ ವಿಶೇಷ ರಿಯಾಯತಿ ಮಾರಾಟ ಜರುಗಲಿದೆ. ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ವಿಶಾಲ, ವಿಶಿಷ್ಟ, ವಿಫುಲ ಸಂಗ್ರಹವನ್ನೊಳಗೊಂಡ ಪ್ಲೆಸೆಂಟ್ ಶೋರೂಂ ಅಂತರಾಷ್ಟ್ರೀಯ ಗುಣಮಟ್ಟದ ಬ್ರ್ಯಾಂಡ್ಗಳಾದ ಕುರ್ಲ್ಆನ್, ಜುವಾರಿ, ಡ್ಯುರೋಪ್ಲೆಕ್ಸ್, ಗೋಗ್ರೆಜ್, ನೀಲ್ಕಮಲ್, ಸುಪ್ರೀಮ್, ಶೀತಲ್ ಡ್ರೆಪ್, ಡಕ್ಕನ್, ಪ್ರೈಮಾ ಪ್ಲಾಸ್ಟಿಕ್ಸ್, ವೆಲ್ ಹೋಮ್, ವೀವೇಸ್, ಬ್ಲೈಂಡ್ಸ್, ನಯಾಸ, ಬಾಥ್ಲಾ ಇನ್ನಿತರ ಬ್ರ್ಯಾಂಡ್ಗಳ ವಿಶೇಷ ಸಂಗ್ರಹವನ್ನು ಹೊಂದಿರುವ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೇ ಸೂರಿನಡಿ ವೈವಿಧ್ಯಮಯ ಉತ್ತಮ ಶ್ರೇಣಿಯ ಬ್ರಾಂಡೆಡ್ ಪೀಠೋಪಕರಣಗಳು, ಪರದೆಗಳು, ಕಾರ್ಪೆಟ್ಗಳು, ಮ್ಯಾಟ್ಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮೀಪದ ಕಾರಣಿಕ ಹಾಗೂ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ(೧೦೦೮ ತೆಂಗಿನಕಾಯಿ) ನವಚಂಡಿ ಹವನ ಮತ್ತು ಸಂಕಷ್ಟಹರ ಚತುರ್ಥಿ ಮಹಾಪೂಜೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಸಾಂಗವಾಗಿ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರ ನಾಳಿಕೇರ ಮಹಾ ಗಣಯಾಗ, ನವಚಂಡಿ ಹವನ, ಸಂಕಷ್ಟಹರ ಚತುರ್ಥಿ ಪೂಜೆಯಲ್ಲಿ ಪಾಲ್ಗೊಂಡು ಕೃಥಾರ್ತರಾದರು. ಕಿಕ್ಕಿರಿದು ಸೇರಿದ ಜನಸಂದಣಿಯ ನಡುವೆಯು ಆಡಳಿತ ಮಂಡಳಿ ಭಕ್ತರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಸಾಂಗವಾಗಿ ಸಾವಿರಾರು ಭಕ್ತಸಮೂಹ ದೇವರ ದರ್ಶನ ಪಡೆದರು. ಧಾರ್ಮಿಕ ಮಹೋತ್ಸವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎರಡು ದಿನಗಳ ಹಿಂದಷ್ಟೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲಾಡಿ ಅವರಿಗೆ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಸ್ವಾಗಿತಿಸಿಕೊಂಡರು. ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಮುಖಂಡರಾದ ಆರ್. ಅಶೋಕ್, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಮೊದಲಾದವರು ಈ ಸಂದರ್ಭ ಇದ್ದರು. ಕುಂದಾಪುರದಿಂದ ತೆರಳಿದ್ದ ಹಲವಾರು ಹಾಲಾಡಿ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಲಾಡಿ ಅವರು ಬಿಜೆಪಿ ಪಕ್ಷದ ಟಾಲ್ ನಂಬರ್ಗೆ ಮಿಸ್ ಕಾಲ್ ನೀಡಿ ಸದಸ್ಯತ್ವ ಪಡೆದುಕೊಂಡದ್ದು ವಿಶೇಷವಾಗಿತ್ತು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸ್ಥಾನ ನೀಡದೇ ಅವಮಾನಿಸಿದ್ದಾರೆಂಬ ಬೇಸರಕ್ಕೆ ಹಾಲಾಡಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಒಟ್ಟು 5 ರ್ಯಾಂಕ್ ಬಂದಿವೆ. ಬಿ.ಎಸ್ಸಿ ಪದವಿ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿ ಅಂಚೆ ಇಲಾಖೆ ಉದ್ಯೋಗಿಗಳಾಗಿರುವ ಉಪ್ಪುಂದದ ಶಿವಾನಂದ ಭಟ್ ಮತ್ತು ಶಾರದಾ ಭಟ್ ದಂಪತಿಯ ಪುತ್ರಿ ಶಾಂಭವಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಕುಂದಾಪುರದ ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು.ಎಸ್.ಶೆಣೈ ಮತ್ತು ಸಾಧನಾ ಶೆಣೈ ದಂಪತಿಯ ಪುತ್ರಿ ಯು. ಸಂಗೀತಾ ಶೆಣೈ ಎಂಟನೇ ರ್ಯಾಂಕ್ ಪಡೆದಿದ್ದಾರೆ. ಬಿ.ಸಿ.ಎ ಪದವಿ ವಿಭಾಗದಲ್ಲಿ ಹೊಸಾಡು ಗ್ರಾಮದ ಗುಜ್ಜಾಡಿಯ ರಾಮ ಪೂಜಾರಿ ಮತ್ತು ರುಕ್ಮಿಣಿ ದಂಪತಿಯ ಪುತ್ರಿ ಸಂಧ್ಯಾ ಐದನೇ ರ್ಯಾಂಕ್ ಪಡೆದಿದ್ದಾರೆ. ಮಣಿಪಾಲದ ನಾಗೇಂದ್ರ ಕಾಮತ್ ಅವರ ಪುತ್ರ ಕಾರ್ತಿಕ್ ಎನ್.ಕಾಮತ್ ಹತ್ತನೇ ರ್ಯಾಂಕ್ ಪಡೆದಿದ್ದಾರೆ. ಬಿ.ಎ ಪದವಿ ವಿಭಾಗದಲ್ಲಿ ಕುಂದಾಪುರದ ಟಿ . ಬಿ ನಗರದ ಶಂಕರ್ ಮತ್ತು ಜಾನಕಿಯವರ ಪುತ್ರಿ ರಜನಿ ಒಂಬತ್ತನೇ ರ್ಯಾಂಕ್ ಪಡೆದಿದ್ದಾರೆ. ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಇಲ್ಲಿನ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ‘ಕುಂದಾಪುರ ಟ್ರೋಫಿ’ ಕ್ರಿಕೆಟ್ ಪಂದ್ಯಾಟದ ಫೈನಲ್ನಲ್ಲಿ ಅಲಿಯನ್ಸ್ ಕತಾರ್ ತಂಡವನ್ನು ಮಣಿಸಿದ ಗಲ್ಹಿನ್ನ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಕೆ. ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಟ್ರೋಫಿ ವಿತರಿಸಿದರು. ಐಎಸ್ಸಿನ ಅಧ್ಯಕ್ಷರಾದ ಅಜೀಮ್ ಅಬ್ಬಾರ್ ಅವರನ್ನು ವಿಶೇಷವಾಗಿ ಸ್ವಾಗತಿಸಿಕೊಳ್ಳಲಾಯಿತು. ಕೆಟಿಸಿ ಅಧ್ಯಕ್ಷ ಇಕ್ಬಾಲ್ ನಾವುಂದ, ಕತಾರ್ ಪ್ರೀಲ್ಯಾನ್ಸ್ ಗ್ರೂಫ್ನ ಇಮ್ರಾನ್ ನಾವುಂದ, ಕೆಟಿಸಿಯ ಮಾಜಿ ಅಧ್ಯಕ್ಷ ಅಕ್ಬರ್ ಗಂಗೊಳ್ಳಿ, ಕನ್ನಡ ಸಂಘ ಕತಾರ್ನ ಅಧ್ಯಕ್ಷ ಹೆಚ್. ಕೆ. ಮಧು, ತುಳುಕೂಟದ ಅಧ್ಯಕ್ಷ ಅಸ್ಮತ್ ಅಲಿ, ಕೆಎಂಸಿಎ ಅಧ್ಯಕ್ಷ ಅಬ್ದುಲ್ಲ ಮೋನು, ಎಂಸಿಸಿ ಅಧ್ಯಕ್ಷ ಪ್ರಕಾಶ್ ನೋರೋನಾ, ಎಸ್ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್, ತುಳುಕೂಟದ ಪೋಷಕ ತುಫೈಲ್ ಮಥೀನ್ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಟ್ರಿಕೆಟರ್ಸ್ನ ಉಪಾಧ್ಯಕ್ಷ ಮುಬಾರಕ್ ಕೋಡಿ ಸ್ವಾಗತಿಸಿದರು. ಕೆಟಿಸಿ ಸಂಘಟನಾ ಸಮಿತಿ ಸದಸ್ಯ…
