ಕೊಲ್ಲೂರು ಠಾಣೆಯ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯೋರ್ವರು ಕೊಲ್ಲೂರಿನ ವಸತಿಗೃಹದಲ್ಲಿ ನೇಣಿಗೆ ಶರಣಾಗಿರುವ ವಿಷಾದನೀಯ ಘಟನೆ ವರದಿಯಾಗಿದೆ. ಪೊಲೀಸ್ ಪೇದೆ ನಾಗರಾಜ (27) ಆತ್ಮಹತ್ಯೆಗೆ ಮಾಡಿಕೊಂಡ ದುರ್ದೈವಿ.

Call us

Click Here

ಶನಿವಾರ ಬೆಳಿಗ್ಗೆ ತನ್ನ ಕರ್ತವ್ಯ ಮುಗಿಸಿ ಕೊಲ್ಲೂರಿನ ಸೌಪರ್ಣಿಕಾ ಗೆಸ್ಟ್ ಗೌಸ್‌ನಲ್ಲಿ ತಂಗಿದ್ದ ನಾಗರಾಜ್ ಅವರು ರಾತ್ರಿವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರ ಕೊಠಡಿಯಲ್ಲಿದ್ದ ಇನ್ನೊರ್ವ ಪೇದೆ ರಾತ್ರಿಪಾಳಿ ಮುಗಿಸಿ ಬೆಳಿಗ್ಗೆ ಕೊಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆಯ ಮಲೆಬೆನ್ನೂರಿನವರಾದ ನಾಗರಾಜ್ 2014 ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡು ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೋಯ್ದಾಗೆ ಬಂದೋವಸ್ತ್ ಕರ್ತವ್ಯ ನಿರ್ವಹಿಸಿ ಎರಡು ದಿನದ ಹಿಂದಷ್ಟೇ ಕೊಲ್ಲೂರಿಗೆ ಬಂದಿದ್ದ ಅವರು ತಂಗಿದ್ದ ಸೌಪರ್ಣಿಕಾ ಗೆಸ್ಟ್ ಗೌಸ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply