ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್: ಇಲ್ಲಿನ ಕುಂದಾಪುರ ತಾಲೂಕು ಕ್ರಿಕೆಟರ‍್ಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ‘ಕುಂದಾಪುರ ಟ್ರೋಫಿ’ ಕ್ರಿಕೆಟ್ ಪಂದ್ಯಾಟದ ಫೈನಲ್‌ನಲ್ಲಿ ಅಲಿಯನ್ಸ್ ಕತಾರ್ ತಂಡವನ್ನು ಮಣಿಸಿದ ಗಲ್ಹಿನ್ನ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಕೆ. ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಟ್ರೋಫಿ ವಿತರಿಸಿದರು. ಐಎಸ್‌ಸಿನ ಅಧ್ಯಕ್ಷರಾದ ಅಜೀಮ್ ಅಬ್ಬಾರ್ ಅವರನ್ನು ವಿಶೇಷವಾಗಿ ಸ್ವಾಗತಿಸಿಕೊಳ್ಳಲಾಯಿತು. ಕೆಟಿಸಿ ಅಧ್ಯಕ್ಷ ಇಕ್ಬಾಲ್ ನಾವುಂದ, ಕತಾರ್ ಪ್ರೀಲ್ಯಾನ್ಸ್ ಗ್ರೂಫ್‌ನ ಇಮ್ರಾನ್ ನಾವುಂದ, ಕೆಟಿಸಿಯ ಮಾಜಿ ಅಧ್ಯಕ್ಷ ಅಕ್ಬರ್ ಗಂಗೊಳ್ಳಿ, ಕನ್ನಡ ಸಂಘ ಕತಾರ್‌ನ ಅಧ್ಯಕ್ಷ ಹೆಚ್. ಕೆ. ಮಧು, ತುಳುಕೂಟದ ಅಧ್ಯಕ್ಷ ಅಸ್ಮತ್ ಅಲಿ, ಕೆಎಂಸಿಎ ಅಧ್ಯಕ್ಷ ಅಬ್ದುಲ್ಲ ಮೋನು, ಎಂಸಿಸಿ ಅಧ್ಯಕ್ಷ ಪ್ರಕಾಶ್ ನೋರೋನಾ, ಎಸ್‌ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್, ತುಳುಕೂಟದ ಪೋಷಕ ತುಫೈಲ್ ಮಥೀನ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಟ್ರಿಕೆಟರ‍್ಸ್‌ನ ಉಪಾಧ್ಯಕ್ಷ ಮುಬಾರಕ್ ಕೋಡಿ ಸ್ವಾಗತಿಸಿದರು. ಕೆಟಿಸಿ ಸಂಘಟನಾ ಸಮಿತಿ ಸದಸ್ಯ ಹಾಗೂ ಕತಾರ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ ಅತಿಥಿಗಳನ್ನು ಪರಿಚಿಯಿಸಿದರು. ಕೆಟಿಸಿ ಕಾರ್ಯದರ್ಶಿ ಇಂತಿಖಾಬ್ ಅಲಾಮ್ ವಂದಿಸಿದರು. ಶೆಹಜೀಮ್ ಸಹಕರಿಸಿ, ತುಫೈಲ್ ಮಥೀನ್ ಕಾರ್ಯಕ್ರಮ ನಿರೂಪಿಸಿದರು.