ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ರೋಟರಿ ಕ್ಲಬ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರತಜ್ಞ ಡಾ.ಕೀರ್ತನ್ ರಾವ್, ಕಣ್ಣಿನ ದೋಷ ಹಾಗೂ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಕಣ್ಣಿನ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರತಜ್ಞರಾದ ಡಾ. ಅಲಿಷಾ, ಡಾ. ನಿಖಿಲ್, ಗಂಗೊಳ್ಳಿ ರೋಟರಿ ಕ್ಲಬ್ ಕಾರ್ಯದರ್ಶಿ ಎಂ. ನಾಗೇಂದ್ರ ಪೈ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ನಾರಾಯಣ ಇ.ನಾಯ್ಕ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವ ಸ್ಪಂದನಾ ಕೇಂದ್ರ ಉಡುಪಿ, ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಅರಿವು ಕಾರ್ಯಕ್ರಮವು ಶಿಕ್ಷ ಪ್ರಭಾ ಅಕಾಡೆಮಿಯ ಕೌಟಿಲ್ಯ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರ ಠಾಣಾಧಿಕಾರಿ ಸದಾಶಿವ ಆರ್ ಗವರೋಜಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸುವ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅವರ ಜೀವನದ ಭವಿಷ್ಯವಾಗಿರುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸಾರ್ವಜನಿಕರಿಗೆ ಮಾಹಿತಿ ಕೊರೆತೆಯಿರುತ್ತದೆ. ಸರಿಯಾದ ಮಾಹಿತಿ ನೀಡಬೇಕಾದರೆ ಹೆಚ್ಚು ಹೆಚ್ಚು ಕಾರ್ಯಕ್ರಮ ಸಂಘಟಿಸುವುದರ ಮೂಲಕ ಅಧಿಕಾರಿಗಳು ಸಮರ್ಪಕವಾದ ಮಾಹಿತಿಯನ್ನು ನೀಡಿದರೆ ಸಾಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ನಿರ್ದೇಶಕರಾದ ಪ್ರತಾಪ್ಚಂದ್ರ ಶೆಟ್ಟಿ ವಹಿಸಿಕೊಂಡು ಯುವ ಜನರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಮುಖ್ಯ ಅತಿಥಿಯಾಗಿ ಯುವ ಸ್ಪಂದನ ಕೇಂದ್ರದ ಪರಿವರ್ತಕರಾದ ನರಸಿಂಹ ಗಾಣಿಗ ಯುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಸ್ತೆ ಬದಿಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕಲ್ಲಿಗೆ ಜೀವ ತುಂಬಿದ ಕಲಾವಿದರು ತಮ್ಮ ಕಲಾಕೃತಿಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಮಲಶಿಲೆ ಹಳ್ಳಿಹೊಳೆಯ ಮಾರ್ಗದ ರಸ್ತೆಯಂಚಿನಲ್ಲಿ ಬಿದ್ದಿದ್ದ ಕಡುಗಲ್ಲಿಗೆ ಕಲಾವಿದ ಚೇತನ್ ಕುಮಾರ್ ಮತ್ತು ಅಭಿಷೇಕ್ ಹೊಸ ವರ್ಷದ ಸಂದರ್ಭ ಜೀವ ತುಂಬಿದ್ದು ಮಲಗಿದ ಹಸನ್ಮುಖಿ ಕಪ್ಪೆಯ ಕಲಾಕೃತಿಯನ್ನು ರಚಿಸಿದ್ದಾರೆ. ಈ ಸುಂದರ ಕಲಾಕೃತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚೇತನ್ ಕುಮಾರ್ ಮೂಡುಬಿದ್ರೆ ಕಲಾವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಲೇಜು ತೆರೆದ ಕಾರಣ ತಮ್ಮ ಊರಾದ ಹಳ್ಳಿಹೊಳೆಯಲ್ಲಿ ಉಳಿದು ಹತ್ತಾರು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಶಾಖೆಯಲ್ಲಿ ಜನರ ಬಳಿಗೆ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್. ರಾಜು ಪೂಜಾರಿ ಮಾತನಾಡಿ, ಜನರ ಆರ್ಥಿಕ ಅಗತ್ಯತೆಗಳಿಗೆ ಅನುಗುಣವಾಗಿ ಅವರ ಬಳಿ ಹೋಗುವುದು ಸಹಕಾರಿ ಬ್ಯಾಂಕುಗಳ ಕರ್ತವ್ಯ. ಆ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರರವರ ವಿಶೇಷ ಯೋಜನೆ ಜನರ ಬಳಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಆರ್ಥಿಕ ಸಂಕಷ್ಟದ ಕಾಲದಲ್ಲಿ ಜನರಿಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಉಳಿತಾಯ ಖಾತೆ, ಠೇವಣಿ ಸಂಗ್ರಹ, ಸಾಲ ನೀಡಿಕೆ ಮುಂತಾದ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಇದರಿಂದ ಜನರಿಗೂ ಉಪಯೋಗವಾಗುತ್ತದೆ ಮತ್ತು ಬ್ಯಾಂಕಿನ ಗೌರವವೂ ಹೆಚ್ಚಾಗಲಿದೆ. ಜನರ ಬಳಿ ತೆರಳಿ ಬ್ಯಾಂಕಿನ ಅಗತ್ಯತೆಗಳನ್ನು ತಿಳಿಸಿ, ಜನರಲ್ಲಿ ಆರ್ಥಿಕ ಶಕ್ತಿಯ ವಿಶ್ವಾಸವನ್ನು ಮೂಡಿಸಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿಟ್ಟಿದ್ದ ಪಡಿತರ ಅಕ್ಕಿಯನ್ನು ಆಹಾರ ನಿರೀಕ್ಷಕರು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಹಿತಿ ಆಧರಿಸಿ ಕೋಟೇಶ್ವರ ಗ್ರಾಮದ ಹಾಲಾಡಿ ರಸ್ತೆಯಲ್ಲಿರುವ ನಂದಿ ಹೋಟೆಲ್ನ ಹಿಂಭಾಗದಲ್ಲಿ ಉದಯ್ ಕುಮಾರ್ ಶೆಟ್ಟಿ ಎಂಬುವವರಿಗೆ ಸೇರಿದ್ದ ಶೆಡ್ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲು ಯತ್ನಿಸಲಾಗುತ್ತಿತ್ತು. ಈ ವೇಳೆ ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಕೋಟೇಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ, ಮಂಗಳೂರು ನಿವಾಸಿ ಆಜಾಮ್, ಉಡುಪಿ ನಿವಾಸಿ ರಮಾ ಪೂಜಾರಿ ಆರೋಪಿಗಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದಾಳಿ ವೇಳೆ ರೂ. 3,76,800 ಮೌಲ್ಯದ 25,120 ಕೆಜಿ ಪಡಿತರ ಅಕ್ಕಿ, 2 ಲಕ್ಷ ರೂ ಮೌಲ್ಯದ ಅಶೋಕ್ ಲೈಲ್ಯಾಡ್ ಗೂಡ್ಸ್ ಗಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಅತ್ಯಂತ ದೊಡ್ಡ ಸರಕಾರಿ ಪ್ರೌಡಶಾಲೆಯಾದ ಸಿದ್ಡಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಹೊಸವರ್ಷದಂದು ಸಂಭ್ರಮ ಮನೆಮಾಡಿತ್ತು. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಉಡುಪಿ ಇಲ್ಲಿನ ಪ್ರಾಂಶುಪಾಲರಾದ ವೇದಮೂರ್ತಿ, ಹಿರಿಯ ಉಪನ್ಯಾಸಕರಾದ ಅಶೋಕ ಕಾಮತ್, ಸಮಗ್ರ ಶಿಕ್ಷಣ ಕರ್ನಾಟಕದ ಉಪ ಯೋಜನಾ ಸಮನ್ವಯಾಧಿಕಾರಿಗಳಾದ ಪ್ರಭಾಕರ ಮಿತ್ಯಾಂತ, ಡಯಟ್ ಉಪನ್ಯಾಸಕರಾದ ವೆಂಕಟೇಶ ನಾಯಕ ಪಾಲ್ಗೊಂಡರು. ಶಾಲೆಯ ಮುಖ್ಯಶಿಕ್ಷಕರಾದ ಉದಯ ಗಾಂವಕಾರ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿ ವರ್ಗ ಶಾಲೆಯನ್ನು ಮುಂಚಿತವಾಗಿ ಶುಚಿಗೊಳಿಸಿ, ಅಲಂಕರಿಸಿದ್ದರು. ತೋರಣ, ಬಲೂನುಗಳೊಡನೆ ಶಾಲೆಯನ್ನು ಅಲಂಕರಿಸಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿ ಮಾಹಿತಿ ಕಾರ್ಯಕ್ರಮ ಇಲ್ಲಿನ ಜಪ್ತಿ ಗ್ರಾಮದಲ್ಲಿ ನಡೆಯಿತು . ಪ್ರತಿಯೊಂದು ಮನೆಗೆ ಪಿವಿಸಿ ಪೈಪ್ ಬಳಸಿ ಮನೆಯಲ್ಲಿ ಇರುವ ಒಣ ಕಸವನ್ನು ಸಂಗ್ರಹಿಸಿ ನಮಗೆ ಬೇಕಾಗುವ ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು ೫೦ ಜನರು ಇದರ ಉಪಯೋಗವನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಚಂದ್ರಶೇಖರ, ಲಯನ್ ಪ್ರಕಾಶ್ ಬೆಟ್ಟನ್, ಲಯನ್ ನವೀನ್ ಕುಮಾರ್ ಶೆಟ್ಟಿ, ಲಯನ್ ನಾರಾಯಣ ಶೆಟ್ಟಿ, ಲಯನ್ ರಾಜೀವ್ ಕೋಟ್ಯಾನ್, ಲಯನ್ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪಿ.ಯು.ಸಿ ಎರಡನೇ ವರ್ಷ ಹಾಗೂ ಡಿಪ್ಲೋಮಾ ಮೂರನೇ ವರ್ಷದಲ್ಲಿ ಶೇ. 60 ಅಂಕ ಪಡೆದು ಪ್ರಸಕ್ತ ಸಾಲಿನಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಮಾಜಿ ಸೈನಿಕರ ಮಕ್ಕಳು ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ http://www.ksb.gov.in ಅನ್ನು ಸಂಪರ್ಕಿಸುವಂತೆ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನಿನಲ್ಲಿ ಫಾರ್ಮಲಿನ್ ಬಳಕೆ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಮೀನುಗಾರಿಕಾ ಅಧಿಕಾರಿಗಳು ಡಿ.18ರಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ 12 ಜಾತಿಯ ಮೀನುಗಳ ಆಹಾರ ಮಾದರಿಯನ್ನು ತೆಗೆದು ಬೆಂಗಳೂರಿನ ಪ್ರಯೋಗಾ ಶಾಲಾ ವಿಶ್ಲೇಷಣೆಗೆ ಕಳುಹಿಸಿದ್ದು, ಇದರ ವರದಿಯಲ್ಲಿ ಮೀನಿನಲ್ಲಿ ಫಾರ್ಮಲಿನ್ ಇರುವುದು ಕಂಡು ಬಂದಿರುವುದಿಲ್ಲ. ಫಾರ್ಮಲಿನ್ ಟೆಸ್ಟ್ ಕಿಟ್ನ್ನು ತರಿಸಲಾಗಿದ್ದು, ಮೀನಿನಲ್ಲಿ ಫಾರ್ಮಲಿನ್ ಇರುವ ಬಗ್ಗೆ ಪರೀಕ್ಷೆ ನಡೆಸಲಾಗುವುದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಫಾರ್ಮಲಿನ್ ಕಂಡುಬಂದರೆ ಮೀನಿನ ಆಹಾರ ಮಾದರಿಯನ್ನು ತೆಗೆದು ಪ್ರಯೋಗ ಶಾಲಾ ವಿಶ್ಲೇಷಣೆಗೆ ಕಳುಹಿಸಿ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದರಿಂದ ಸರ್ಕಾರದ ವೇಳಾಪಟ್ಟಿಯಂತೆ 6 ರಿಂದ 9ನೇ ತರಗತಿ ವರೆಗಿನ ಮೊದಲ ಬ್ಯಾಚಿನ ವಿದ್ಯಾರ್ಥಿಗಳು ಹಾಗೂ 10ನೇ ತರಗತಿ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತಾಲೂಕಿನಾದ್ಯಾಂತ ತಮ್ಮ ತಮ್ಮ ಶಾಲೆಗಳಿಗೆ ಆಗಮಿಸಿದ್ದರು. ಶಾಲೆಯ ಆವರಣದ ಒಳಗೆ ಬಂದ ವಿದ್ಯಾರ್ಥಿಗಳು ತರಗತಿ ಕೊಠಡಿಗಳಿಗೆ ಹೋಗುವ ಮೊದಲು ದೇಹದ ಉಷ್ಣತೆ ಪರೀಕ್ಷೆ ಹಾಗೂ ಸ್ಯಾನಿಟೈಸೇಶನ್ ಕಡ್ಡಾಯವಾಗಿ ಮಾಡಲಾಗುತ್ತಿತ್ತು. ಕಳೆದ 10 ತಿಂಗಳಿಂದ ಶಾಲಾಂಗಣವನ್ನು ಮರೆತಿದ್ದ ವಿದ್ಯಾರ್ಥಿಗಳು ಇಂದು ಶಾಲಾ ಸಮವಸ್ತ್ರ ಹಾಗೂ ಶಾಲಾ ಸಾಮಾಗ್ರಿಯನ್ನು ಹೊಂದಿದ್ದ ಬ್ಯಾಗ್ ಗಳೊಂದಿಗೆ ಶಾಲೆಗೆ ಆಗಮಿಸಿದ್ದರು. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿಕೊಂಡರು. ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಬೈಂದೂರು ಬಿಇಓ ಜಿ. ಎಂ. ಮಂದಿನಮನಿ ಅವರು ವಿಧ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದರು. ಪಾಳಿಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ವಿಂಗಡನೆ ಮಾಡಿರುವುದರಿಂದ ತರಗತಿಯ ಒಳ ಭಾಗದಲ್ಲಿ ಪ್ರತಿಯೊಂದು ಡೆಸ್ಕ್…
