Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸತ್ಸಂಗ ಬದುಕಿನ ವಿಕಸನಕ್ಕೆ ದಾರಿದೀಪವಾಗಿದೆ. ಸಮಾಜವಿಂದು ಉತ್ತಮ ಚಿಂತನೆಗಳಿಂದ ವಿಮುಖರಾಗುತ್ತಿರುವುದರಿಂದ ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಿದೆ. ಶಾಂತಿ ನೆಮ್ಮದಿ ತೃಪ್ತ ಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವ ಶಕ್ತಿಯಾಗಿದೆ. ಇಂತಹ ಶಕ್ತಿ ಹರಿಕಥೆ, ಸತ್ಸಂಗಗಳಿಂದ ನಮಗೆ ಲಭಿಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಹರಿದಾಸರಾದ ಬಿ. ಸಿ. ರಾವ್ ಶಿವಪುರ ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಹರಿಹರ ಸೇವಾ ಬಳಗದ ಸಹಕಾರದೊಂದಿಗೆ ಆಯೋಜಿಸಿದ ಹರಿಕಥೆ ಸತ್ಸಂಗ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರದ ಪ್ರಸಿದ್ಧ ವೈದ್ಯರಾದ ಡಾ. ಎಸ್, ಎನ್.ಪಡಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರಾದ ಕೋಣಿ ನರಸಿಂಹ ಪೂಜಾರಿ, ಶ್ರೀಮತಿ ಲಕ್ಷ್ಮೀ ನರಸಿಂಹ ಪೂಜಾರಿ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕರಾದ ಹರಿಶ್ಚಂದ್ರ ಹೆಬ್ಬಾರ್, ಕೋಟೇಶ್ವರ ಹರಿಹರ ಸೇವಾ ಬಳಗದ ಅಧ್ಯಕ್ಷ ಎನ್. ಮೋಹನ್ ಆಚಾರ್ಯ, ಗೊಂಬೆಯಾಟದ…

Read More

ಕುಂದಾಪ್ರ ಡಾಟ್ ಕಾಂ ವರದಿ. ಉಡುಪಿ: ವಿಶ್ವ ಹಿಂದು ಪರಿಷತ್(ವಿಎಚ್ಪಿ) ವತಿಯಿಂದ ಉಡುಪಿಯಲ್ಲಿ ನ.24ರಿಂದ 26ರ ತನಕ ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿ ನಡೆಯಲಿರುವ ಸಂತ ಸಮಾವೇಶದಲ್ಲಿ 2 ಸಾವಿರಕ್ಕೂ ಅಧಿಕ ಸಾಧು ಸಂತರು, 1 ಸಾವಿರ ಗಣ್ಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಧರ್ಮ, ಸಮಾಜ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಮಕ್ಕಳಿಗೆ ಪರಿಚಯಿಸಿ ಯುವಜನರನ್ನು ತೊಡಗಿಸುವ ಮಹೋನ್ನತ ಗುರಿ ಹೊಂದಿರುವ ಧರ್ಮ ಸಂಸದ್ ಈಗ ಪ್ರಾಚೀನ ಪರಂಪರೆಯ ಜತೆಗೆ ಆಧುನಿಕತೆಗೂ ತೆರೆದುಕೊಂಡಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. [quote bgcolor=”#ffffff” arrow=”yes” align=”right”] ಬೈಂದೂರು ಪ್ರಖಂಡದಿಂದ 10,000 ಮಂದಿ ಭಾಗಿಯಾಗುವ ನಿರೀಕ್ಷೆ: ನ.26ರಂದು ಜರುಗುವ ವಿಶ್ವ ಹಿಂದು ಸಮಾಜೋತ್ಸವಕ್ಕೆ ಬೈಂದೂರು ಪ್ರಖಂಡದಿಂದ ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಖಂಡದ ಪ್ರತಿ ಗ್ರಾಮಗಳಿಗೂ ತೆರಳಿ ನ.24ರಿಂದ 26ರ ತನಕ ಧರ್ಮ ಸಂಸದ್ ಹಾಗೂ ಹಿಂದೂ ಸಮಾಜೋತ್ಸವದ ಬಗ್ಗೆ ಮಾಹಿತಿ ತಲುಪಿಸಲಾಗಿದೆ. ಧರ್ಮ ಜಾಗೃತಿಗಾಗಿ ಅತ್ಯಧಿಕ ಹಿಂದೂ ಭಾಂದವರು ಹಾಗೂ ಹಿಂದೂ ಕಾರ್ಯಕರ್ತರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು. ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಆಯೋಜಿಸಿದ ನಾಲ್ಕನೆಯ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೋಹನ್ ನಾಯಕ್ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ರೋಹನ್ ಹುಟ್ಟು ಅಂಧ. ಕಣ್ಣಿಲ್ಲದಿದ್ದರೂ ಸದಾ ಕ್ರಿಯಾಶೀಲ, ಕುತೂಹಲ ಸ್ವಭಾವದ ನಗುಮೊಗದ, ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿ. ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಉದ್ಯಮಿ ನಾಗರಮಠ ರಘುನಂದನ್ ನಾಯಕ್ ದಂಪತಿಯ ಹಿರಿಯ ಪುತ್ರನಾಗಿರುವ ಈತನ ಮಾತೃ ಭಾಷೆ ಕೊಂಕಣಿ. ಕೆ.ಜಿ. ತರಗತಿಯಿಂದ ೭ ನೇ ತರಗತಿಯವರೆಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಅನಂತರ ೮ ರಿಂದ ೧೦ ರವರೆಗೆ ಮಂಗಳೂರಿನ ಖomಚಿಟಿ & ಅಚಿಣheಡಿiಚಿಟಿ ಐobo Sಛಿhooಟ ಈoಡಿ ಖಿhe ಃಟiಟಿಜನಲ್ಲಿ ವ್ಯಾಸಂಗ ಮಾಡಿರುವ ಈತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಪಿ.ಯು. ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ರಿಕ್ಷಾ ಚಾಲಕರ ಮತ್ತು ಮಾಲಕರ ಆಶ್ರಯದಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವ ನಿಮಿತ್ತ ನಡೆದ ಕಾರ‍್ಯಕ್ರಮದಲ್ಲಿ ವಿಶೇಷ ಚೇತನರಿಗೆ ಸಹಾಯಧನ, ವಿದ್ಯಾರ್ಥಿ ವೇತನ, ಶಾಲಾ ಚಿಣ್ಣರಿಗೆ ಸ್ಕೂಲ್ ಬ್ಯಾಗ್, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿ ನೀರಜ್‌ಗೆ ಸಹಾಯಧನ ವಿತರಣೆ ಮಾಡಲಾಯಿತು. ರಾಮಕ್ಷತ್ರಿಯ ಮಂಡಳಿ ಅಧ್ಯಕ್ಷ ಕೆ.ಅಜಯ ಹವ್ದಾರ್ ಉದ್ಘಾಟಿಸಿದರು. ಯುವ ಉದ್ಯಮಿ ಅಭಿನಂದನ್ ಎ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ಪ್ರದೀಪ್ ಕುಮಾರ್ ಶೆಟ್ಟಿ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಅಧ್ಯಕ್ಷ ವಿಠಲ ಖಾರ್ವಿ ಇದ್ದರು. ಕಾರ್ಗಿಲ್ ಯುದ್ಧ ಹಾಗೂ ೨೦೧೫ರಲ್ಲಿ ಇಂಡೋ ಮಾಯನ್ಮಾರ್ ಸರ್ಜಿಕಲ್ ದಾಳಿ ನೇತೃತ್ವ ವಹಿಸಿದ ಕುಂದಾಪುರ ಯೋಧ ಕಿಶನ್ ಕುಮಾರ್ ಡಿ.ಕೆ. ಅವರ ಸನ್ಮಾನಿಸಲಾಯಿತು. ವೆಂಕಟೇಶ್ ಸನ್ಮಾನ ಪತ್ರ ವಾಚಿಸಿದರು.ಕಾರ‍್ಯದರ್ಶಿ ನಾಗರಾಜ್ ಖಾರ್ವಿ ವರದಿ ಮಂಡಿಸಿದರು. ದೀಪಾ ವೆಂಕಟೇಶ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸ್ವಪ್ನಾ ಪ್ರಕಾಶ್ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಹಾಗೂ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶಿರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು. ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕೊಲ್ಲೂರು ಪರಿಸರದಲ್ಲಿ ವಿಶೇಷ ಭದ್ರತೆ ಒದಗಿಸಲಾಗಿತ್ತು. ದೇವಸ್ಥಾನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಟ ಮತ್ತು ಪಾಠ ಕಲಿಕೆಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುದೃಡವಾದ ದೇಹದಲ್ಲಿ ಸ್ವಸ್ಥವಾದ ಮನಸ್ಸು ಸದಾ ನೆಲೆಯೂರಿರುತ್ತದೆ. ಯಾವ ಶಾಲಾ ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗಳಲ್ಲಿ ಕ್ರೀಡೆಗೆ ಪ್ರಾಶಸ್ತ್ಯವನ್ನು ಕೊಡುತ್ತದೆಯೊ ಆ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಗುರುತರವಾದ ಲಕ್ಷ್ಯವನ್ನು ಇಟ್ಟಿದೆ ಎಂದು ತಿಳಿಯಬೇಕು. ಕ್ರೀಡಾ ಜಗತ್ತಿನಲ್ಲಿ ಅನೇಕ ಕ್ರೀಡಾ ಪಟುಗಳು ತಮ್ಮ ಪ್ರತಿಭೆಗಳ ಮೂಲಕ ವಿಶವಿಖ್ಯಾತರಾಗಿದ್ದಾರೆ. ಕ್ರೀಡೆಯು ದೈಹಿಕ ಶ್ರಮದ ಜೊತೆಗೆ ಆಂತರಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಕ್ರೀಡೆ ಪ್ರಮುಖ ಕಾರಕ ಅಂಶಗಳಾಗಿದೆ. ಕ್ರೀಡೆಯ ಮೂಲಕವೇ ನಮ್ಮ ಪ್ರತಿಭೆಗಳನ್ನು ಹಾಗೂ ಜೀವನವನ್ನು ನಡೆಸಲು ಸಾಧ್ಯವಿದೆ. ಇದು ವ್ಯಕ್ತಿಗಳಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ, ನಾಯಕತ್ವ , ಐಕ್ಯತೆ ಮತ್ತು ಕ್ರೀಡಾ ಸ್ಪೂರ್ತಿಯನ್ನು ಬೆಳೆಸುತ್ತದೆ ಎಂದು ಕುಂದಾಪುರ ತಾಲೂಕಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಐ.ಎಫ್.ಎಸ್ ನುಡಿದರು. ಅವರು ಗುರುಕುಲ ವಿದ್ಯಾಸಂಸ್ಥೆಯ 12ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿ,…

Read More

ಡಿ.16 ಮತ್ತು 17 ಹಕ್ಲಾಡಿಯಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು 16 ನೇ ಕನ್ನಡ ಸಾಹಿತ್ಯ ಸಮ್ಮೇಳವು ಡಿಸೆಂಬರ್ 16 ಮತ್ತು 17 ರಂದು ಹಕ್ಲಾಡಿಯ ಕೆಎಸ್‌ಎಸ್ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿದೆ. ಅಪರಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯುವ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರನ್ನಾಗಿ ಹಿರಿಯ ಸಾಂಸ್ಕೃತಿಕ ನೇತಾರ ಬಿ.ಅಪ್ಪಣ್ಣ ಹೆಗ್ಡೆಯವರನ್ನು ಆಯ್ಕೆ ಮಾಡಲಾಗಿದೆ. ಎರಡು ದಿನಗಳ ಈ ನುಡಿಹಬ್ಬದಲ್ಲಿ ಸಾಹಿತ್ಯಾಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಪರಿಷತ್ ಪ್ರಕಟಣೆಯಲ್ಲಿ ಕೋರಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಐತಿಹಾಸಿಕ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೇ ಅವರು ಕೊಲ್ಲೂರು ಭೇಟಿ ನೀಡಿ, ದೇವಿಯ ದರಶನ ಪಡೆದರು. ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನ ಆಡಳಿತ ಮಂಡಳಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ ಉಪ್ಪುಂದ, ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ವಡಂಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಇತರರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಗೆ ಮೊದಲು ಸೂತ್ರ ಹಿಡಿದು ಕುಣಿಸಿದ್ದು ಸಿಆರ್‌ಝಡ್ ನಿಯಮ. ನಂತರ ಸಾರಿಗೆ ಇಲಾಖೆ ಒಂದು ವರ್ಷ ಸೂತ್ರ ಕೈಗೆ ತೆಗೆದುಕೊಂಡಿತು. ಪ್ರಸಕ್ತ ಉಪ್ಪಿನಕುದ್ರು ಗೊಂಬೆಗೆ ಮೆಸ್ಕಾ ಸೂತ್ರ! ತಲ್ಲೂರು ಗ್ರಾಮ ಪಂಚಾಯತ್ ಬೀದಿ ದೀಪ ಅಳವಡಿಕೆಗೆ ನಿರ್ಣಯ ಮಂಡಿಸಿ ಮೆಸ್ಕಾಂ ಕಚೇರಿಗೆ ಕಳುಹಿಸಿದ್ದೇ ತಡ ಹಿಂದೆ ಮುಂದೆ ನೋಡದೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಂಪೌಂಡ್ ಒಳಗೆ ನೆಟ್ಟ ಕಂಬದಿಂದ ಅಕಾಡೆಮಿಯ ಒಂದು ಮಾತು ಕೇಳದೆ ಲೈನ್ ಎಳೆದು, ಸ್ವಾಗತಗೋಪುರ ಕೆಲಸಕ್ಕೆ ವಿಘ್ನ ತಂದಿದೆ. ಎಲ್ಲಾದರೂ ಸ್ವಾಗತ ಗೋಪುರ ಕಾಮಗಾರಿ ಮಾಡಿದರೆ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಜೀವ ಕಳೆದುಕೊಳ್ಳುವಂತ ದುಃಸ್ಥಿತಿ ಕಾಡುತ್ತಿದೆ. ಹೌದು.. ಗೊಂಬೆಯಾಟ ಅಕಾಡೆಮಿ ವಿದ್ಯುತ್ ಸಂಪರ್ಕ ಹಿನ್ನೆಲೆಯಲ್ಲಿ ಮೆಸ್ಕಾಂಗೆ ಕಂಬದ ಹಣತುಂಬಿ ಸಂಪರ್ಕ ಪಡೆದುಕೊಂಡಿತ್ತು. ಮೊನ್ನೆ ಮೊನ್ನೆ ಶಾಲೆಯೆಡೆಗೆ ಗೊಂಬೆ ನಡಿಗೆ ಕಾರ‍್ಯಕ್ರಮಕ್ಕೆ ಅಕಾಡೆಮಿ ಬಾಗಿಲು ಹಾಕಿ, ಗೇಟ್ ಬಂದ್ ಮಾಡಿ ಹೋದ ಸಂದರ್ಭದಲ್ಲಿ ಮೆಸ್ಕಾಂ ಕಂಪೌಂಡ್ ಜಿಗಿದು, ಸ್ವಾಗತ ಗೋಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಆರ್.ಆರ್. ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಕಛೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮದನ್ ಕುಮಾರ್, ಉದ್ಯಮಿ ಕಾರ್ತಿಕೇಯ ಮಧ್ಯಸ್ಥ, ಮುಖ್ಯ ಪ್ರವರ್ತಕರಾದ ಬೇಬಿ ಕೊಠಾರಿ, ಸಹಕಾರಿ ಸಂಘದ ಅಧ್ಯಕ್ಷೆ ನಿರ್ಮಲ ಶಂಕರ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವ, ಸಂಸ್ಥೆಯ ನಿರ್ದೇಶಕರಾದ ಶಿಲ್ಪಾ ಕೆ. ಮಧ್ಯಸ್ಥ, ಮಂಜುಳಾ, ಪ್ರಭಾವತಿ, ಸ್ವಪ್ನ, ಸುಜಾತಾ ಖಾರ್ವಿ, ಶಕೀಲಾ, ಪ್ರೇಮಾ, ಕಲ್ಪನಾ ಶೇಖರ ಬಿಲ್ಲವ, ಮೊದಲಾದವರು ಉಪಸ್ಥಿತರಿದ್ದರು.

Read More