Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಹಣೆಬರವನ್ನು ನಂಬಿ ಬದುಕಿದವರು ನಾವಲ್ಲ ಹಣೆಯ ಬೆವರನ್ನು ನಂಬಿ ಬದುಕುತ್ತಿರುವ ರೈತರು ನಾವು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು ಹೇಳಿದರು. ಅವರು ಕೋಟದ ಪಂಚವರ್ಣ ಯುವಕ ಮಂಡಲ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಮಣೂರು ಇವರ ಸಹಯೋಗದೊಂದಿಗೆ 6 ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅದೃಷ್ಟವನ್ನು ನಂಬಿ ಬದುಕಿದವರು ನಾವಲ್ಲ ದೂರದೃಷ್ಟಿಯನ್ನು ಇಟ್ಟುಕೊಂಡು ಕೃಷಿ ಕ್ಷೇತ್ರದಲ್ಲಿ ಒಂದೊಂದೆ ವಿಧಾನವನ್ನು ಕಂಡುಕೊಂಡು ಬದುಕುತ್ತಿರುವ ರೈತರು ಅಂತಹ ರೈತರನ್ನು ಗುರುತಿಸುವುದು ಪ್ರೋತ್ಸಾಹಿಸುವುದು ಅತ್ಯಗತ್ಯ ,ಇನ್ನು ಕೃಷಿಯಲ್ಲಿ ನಷ್ಟ ಅನ್ನೋದು ಸತ್ಯಕ್ಕೆ ದೂರವಾದ ವಿಚಾರ ,ಸಾಂಪ್ರಾದಾಯಕ ಕೃಷಿ ಪದ್ಧತಿಯಿಂದ ಹಿಂದಿನ ಹಿರಿಯರು ಯಶಸ್ಸು ಕಂಡಿದ್ದಾರೆ. ಆದರೆ ಇಂದಿನ ಆಧುನಿಕ ಕೃಷಿ ಪದ್ದತಿಯಲ್ಲಿ ಮತ್ತಷ್ಟು ಯಶಸ್ಸು ಕಾಣಲು ಸಾಧ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಯುವ ರೆಡ್ ಕ್ರಾಸ್ ಸೊಸೈಟಿ ಹಾಗೂ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕುಂದಾಪುರದ ವತಿಯಿಂದ ರಕ್ತದಾನದ ಮತ್ತು ಜನೌಷಧಿ ಯ ಕುರಿತು ಉಪನ್ಯಾಸ ಕಾರ್ಯಗಾರ ಇಲ್ಲಿನ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸೋನಿ ಮಾತನಾಡಿ, ದಾನಗಳಲ್ಲೇ ಶ್ರೇಷ್ಠವಾದ ರಕ್ತದಾನದ ಮೂಲಕ ಇನ್ನೊಬ್ಬರ ಬದುಕಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದರು. ರೆಡ್‌ಕ್ರಾಸ್ ಸೊಸೈಟಿಯ ಚೇರ್‌ಮ್ಯಾನ್ ಜಯಕರ ಶೆಟ್ಟಿ, ಜನೌಷದಿಯ ಕುರಿತು ಮಾಹಿತಿಯನ್ನು ವಿದ್ಯಾರ್ಥಿ ಸಮೂಹಕ್ಕೆ ತಿಳಿಸಿದರು. ರೆಡ್‌ಕ್ರಾಸ್ ಸೊಸೈಟಿಯ ಚೇರ್‌ಮ್ಯಾನ್ ಜಯಕರ್ ಶೆಟ್ಟಿ, ಖಜಾಂಚಿ ಶಿವರಾಮ್ ಶೆಟ್ಟಿ, ಸಂಯೋಜಕರಾದ ಸತ್ಯನಾರಾಯಣ ಪುರಾಣಿಕ್, ಸದಸ್ಯರಾದ ಡಾ.ಸೋನಿ ಡಿ’ಕೋಸ್ಟಾ ಹಾಗೂ ಗಣೇಶ್ ಆಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ಪ್ರಾಂಶುಪಾಲರಾದ ಡಾ.ಶಮೀರ್, ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕರಾದ ಅಹಮ್ಮದ್ ಖಲೀಲ್ ಹಾಗೂ ವಿದ್ಯಾರ್ಥಿ ಸಂಯೋಜಕ ತನ್ಙೀಮ್ ತೃತೀಯ ಬಿಕಾಂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿ.ಸಿ.ಎ ವಿದ್ಯಾರ್ಥಿ ತಸ್ಮಿಯಾ ನಿರ್ವಹಿಸಿದರು, ಗಣಕಶಾಸ್ತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶಾಸಕರ ಪ್ರದೇಶಾಭಿವೃಧ್ದಿ ಯೋಜನೆಯಡಿಯಲ್ಲಿ ನೀಡಲಾಗುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ, ನಿಗಧಿತ ಅವಧಿಯೊಳಗೆ ಅಗತ್ಯ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು. ಅವರು ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರ ಪ್ರದೇಶಾಭಿವೃಧ್ದಿ ಯೋಜನೆಯಡಿಯಲ್ಲಿ ನೀಡಲಾಗುವ ಅನುದಾನವನ್ನು ನಿಗಧಿತ ಅವಧಿಯೊಳಗೆ ವೆಚ್ಚ ಮಾಡದೇ ಇದ್ದಲ್ಲಿ , ಆರ್ಥಿಕ ಇಲಾಖೆಯಿಂದ ಹೊಸ ಅನುದಾನ ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಜಿಲ್ಲೆಯ ಎಲ್ಲಾ ಶಾಸಕರಿಂದ ಕ್ರಿಯಾ ಯೋಜನೆಯನ್ನು ಪಡೆದು, ಕಾಲಮಿತಿಯಲ್ಲಿ ಯೋಜನೆ ಮುಕ್ತಾಯಗೊಳಿಸಿ , ಅನುದಾನವನ್ನು ವೆಚ್ಚ ಮಾಡಿ , ಅನುದಾನವನ್ನು ಪಿಡಿ ಖಾತೆಯಲ್ಲಿ ಇಡಬೇಡಿ ಎಂದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಸಕರ ಪ್ರದೇಶಾಭಿವೃಧ್ದಿ ಯೋಜನೆಯ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸದೇ ಇರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಅಡಚಣೆಯಾಗಿದ್ದು, ಉಡುಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೈತರ ಹಿತಾಸಕ್ತಿಗೆ ಮಾರಕವಾಗಿರುವ ರೈತ ವಿರೋಧಿ ಕಾಯ್ದೆಗಳ ಹಿಂಪಡೆಯಲು ಆಗ್ರಹಿಸಿ ದೇಶದಾದ್ಯಂತ ರೈತರು ನಡೆಸುತ್ತಿರುವ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಮುಂದುವರಿಸುತ್ತಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಆರೋಪಿಸಿದರು. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹೆಜಮಾಡಿಯಿಂದ ಬೈಂದೂರುವರೆಗೆ ಸಾಗುವ ಜನಧ್ವನಿ ಪಾದಯಾತ್ರೆ ಗುರುವಾರ ಸಂಜೆ ಕುಂದಾಪುರ ತಲುಪಿದ ಸಂದರ್ಭದಲ್ಲಿ ಅವರು ಶಾಸ್ತ್ರಿ ಸರ್ಕಲ್ ಬಳಿ ನಡೆದ ಸಭೆಯಲ್ಲಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕಕುಮಾರ ಕೊಡವೂರು, ವಕೀಲ ಸುಧೀರ್ ಕುಮಾರ್ ಮರೋಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ, ಶಂಕರ ಕುಂದರ್ ಕೋಟ, ಬಿ.ಹರಿಯಣ್ಣ, ಎಂ.ಎ ಗಫೂರ್, ಮಲ್ಯಾಡಿ ಶಿವರಾಮ ಶೆಟ್ಟಿ, ವರೋನಿಕಾ ಕರ್ನೋಲಿಯ, ದೇವಕಿ ಪಿ ಸಣ್ಣಯ್ಯ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ವತಿಯಿಂದ ಕೇಂದ್ರ ಬಜೆಟ್- 2021ರ ಕುರಿತು ಪ್ಯಾನೆಲ್ ಡಿಸ್ಕಶನ್ ನಡೆಯಿತು. ಕಂದಾಯ, ಉದ್ಯಮ, ಕೃಷಿ, ಇನ್‌ಫ್ರಾಸ್ಟ್ರಕ್ಚರ್, ಬ್ಯಾಂಕಿಂಗ್, ಟೂರಿಸಮ್, ರಕ್ಷಣಾ ಕ್ಷೇತ್ರಗಳನ್ನು ಪ್ರತಿನಿಧಿಸಿ ವಿವಿಧ ಕ್ಷೇತ್ರತಜ್ಞರು ತಮ್ಮ ವಾದಗಳನ್ನು ಮಂಡಿಸಿದರು. ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಭಾರತೀಯ ಕಂದಾಯ ಇಲಾಖೆಯ ಮಾಜಿ ಅಧಿಕಾರಿ ಜಯಪ್ರಕಾಶ್ ರಾವ್, ಯಾವುದೇ ಬಜೆಟ್ ಆಗಲಿ, ಸರಕಾರವಾಗಲಿ ಆರ್ಥಿಕತೆಯ ಮೇಲೆ ಜನಸಂಖ್ಯಾ ಸ್ಫೋಟದ ಪರಿಣಾಮದ ಕುರಿತು ವಿಶ್ಲೇಷಿಸಿಲ್ಲ. ಇಲ್ಲಿಯವರೆಗೂ ಬಂದ ಯಾವುದೇ ಬಜೆಟ್‌ನಲ್ಲಿ ದೇಶದ ಪ್ರಜೆಯ ಆತ್ಮಾಭಿಮಾನದ ಕುರಿತು ಪ್ರಸ್ತಾಪವಿಲ್ಲ. ನಾವು ಜಿಡಿಪಿ, ತಲಾ ಆದಾಯದ ಹೆಚ್ಚಳದ ಕುರಿತು ಮಾತಾಡುತ್ತೇವೆಯೇ ಹೊರತು, ಪ್ರತಿಯೊಬ್ಬ ವ್ಯಕ್ತಿಗೆ ದೊರಕಬಹುದಾದ ಸಂಪನ್ಮೂಲಗಳ ಬಗ್ಗೆ ಯೋಚಿಸುವುದಿಲ್ಲ. ನಮ್ಮಲ್ಲಿ ಎಷ್ಟೋ ಹುಡುಗಿಯರು 14 ವರ್ಷದ ಬಳಿಕ ಶಾಲೆಗೆ ಹೋಗುವುದನ್ನು ಇಂದಿಗೂ ನಿಲ್ಲಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಲ್ಲಿರುವ ಮೂಲ ಸೌಕರ‍್ಯಗಳು, ಸಂಪನ್ಮೂಲಗಳ ಕೊರತೆ. ಬುಲೆಟ್ ಟ್ರೇನ್‌ಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ‘ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್’ ಇದರ ಸನ್ನದು ಪ್ರಧಾನ ಹಾಗೂ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯು ಕುಂದಾಪುರದ ಕೋಯಾಕುಟ್ಟಿ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಆದ ಲಯನ್ ಎನ್. ಎಂ. ಹೆಗಡೆ ‘ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್’ ಇದರ ಅಧ್ಯಕ್ಷರಾದ ಲಯನ್ ಇಂಜಿನಿಯರ್ ಚೇತನ್ ಹೆಗಡೆ, ಕಾರ್ಯದರ್ಶಿ ಲಯನ್ ಇಂಜಿನಿಯರ್ ರಶ್ವಿನ್ ಕೆ.ಎಚ್. ಹಾಗೂ ಕೋಶಾಧಿಕಾರಿ ಲಯನ್ ಇಂಜಿನಿಯರ್ ರಮೇಶ್ ಆಚಾರ್ ಹಾಗೂ ಸದಸ್ಯರಿಗೆ ಸನ್ನದು ಪ್ರಧಾನ ಮಾಡಿದರು ಹಾಗೆಯೇ ಎಲ್ಲಾ ಸದಸ್ಯರಿಗೆ ಸದಸ್ಯತ್ವ ನೀಡಲಾಯಿತು. ಈ ಕ್ಲಬ್ಬಿನ ಮೊದಲ ಕಾರ್ಯಕ್ರಮದ ಅಂಗವಾಗಿ ‘ಬಿ. ಆರ್. ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ಕುಂದಾಪುರ ಇವರಿಗೆ ಒಂದು ಹೊಸ ಸೋಕ್ ಪಿಟ್ ನಿರ್ಮಿಸಿ ಲಯನ್ಸ್ ಜಿಲ್ಲಾ ಗವರ್ನರ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಲಯನ್ಸ್ ಜಿಲ್ಲೆ 317ಸಿ ಇದರ ಗವರ್ನರ್ ಆದ ಲಯನ್ ಎನ್.ಎಂ. ಹೆಗಡೆ ಹಾಗೂ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಟಿ.ಜಿ. ಆಚಾರ್ಯ, ಝೋನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ. ವಿ. ಕುಂದಾಪುರ ವಲಯ ಅಂತರ್‌ಕಾಲೇಜು ಮಹಿಳಾ ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭ ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದಲ್ಲಿ ನಡೆಯಿತು. ಈ ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಎಜ್ಯುಕೇಶನ್ ಸೊಸೈಟಿ ರಿ. ಇದರ ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತ್ತಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜ್ಯೋತಿ ಜ್ಯುವೆಲ್ಲರ‍್ಸ್‌ನ ಮಾಲಕರಾದ ಎನ್. ಕೃಷ್ಣಮೂರ್ತಿ ಶೇಟ್, ಡಿಜಿಟೆಕ್ ಸೊಲ್ಯೂಷನ್ಸ್ ಕುಂದಾಪುರದ ಮಾಲಕ, ಕಾಲೇಜಿನ ಪೂರ್ವ ವಿದ್ಯಾರ್ಥಿ ದಿಗಂತ್ ಶೆಟ್ಟಿ ಉಪಸ್ಥಿತರಿದ್ದರು. ಈ ಪಂದ್ಯಕೂಟದಲ್ಲಿ ಕುಂದಾಪುರ ವಲಯದ ಒಟ್ಟು 9 ತಂಡಗಳು ಭಾಗವಹಿಸಿದ್ದವು. ಸರ್ಕಾರಿ ಪ್ರ.ದ. ಕಾಲೇಜು ಶಂಕರನಾರಾಯಣ ಪ್ರಥಮ ಸ್ಥಾನ, ಡಾ| ಬಿ. ಬಿ. ಹೆಗ್ಡೆ ಕಾಲೇಜು ದ್ವಿತೀಯ, ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರ.ದ. ಕಾಲೇಜು ತೃತೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಶ್ವತ್ಥ ವೃಕ್ಷಕ್ಕೆ ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಅದರ ಮೂಲದಲ್ಲಿ ಬ್ರಹ್ಮ, ನಡುವೆ ವಿಷ್ಣು ಮತ್ತು ಮೇಲ್ಭಾಗದಲ್ಲಿ ಶಿವ ವಾಸಿಸುತ್ತಾರೆ ಎಂಬ ನಂಬಿಕೆ ಇರುವುದರಿಂದ ಅದರ ಬಗ್ಗೆ ಪೂಜ್ಯ ಭಾವನೆ ಹೊಂದಿ ಆರಾಧಿಸಲಾಗುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ಹೇಳಿದರು. ಅವರು ಖಂಬದಕೋಣೆ ಹಳಗೇರಿಯ ಕೋಟಿ ವೀರಾಂಜನೇಯ ದೇವಸ್ಥಾನದ ಮುಂದಿನ ಅಶ್ವತ್ಥ ವೃಕ್ಷದ ಪ್ರತಿಷ್ಠೋಪನಯನ ವಿವಾಹ ಮಹೋತ್ಸದ ನಿಮಿತ್ತ ನಡೆದ ಧಾರ್ಮಿಕಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧ ಪುರಾಣಗಳಲ್ಲಿ ಅಶ್ವತ್ಥ ವೃಕ್ಷದ ಹಿನ್ನೆಲೆ, ಮಹಿಮೆಯ ಉಲ್ಲೇಖ ಇದೆ. ಅದು ಪರಿಸರವನ್ನು ಪೋಷಿಸುವುದರ ಜತೆಗೆ ಜನರ ಆರೋಗ್ಯ ವೃದ್ಧಿಸುತ್ತದೆ ಎಂದು ಈಗ ವೈಜ್ಞಾನಿಕವಾಗಿ ಸಿದ್ಧವಾಗಿದೆ ಎಂದು ಹೇಳಿದರು. ಕೋವಿಡ್ ವಾರಿಯರ್ ಆಗಿ ಕೆಲಸಮಾಡಿದ ಬೈಂದೂರು ಎಸ್‌ಐ ಸಂಗೀತಾ, ಹಳಗೇರಿ ಕೊಕ್ಕೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಕಾರಂತ, ಮೇಕೋಡು ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ, ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ ಬಸ್‌ಗಳಲ್ಲಿ, ಮಕ್ಕಳಿಗೆ ಸ್ಪಷ್ಟವಾಗಿ ಕಾಣುವಂತೆ ಚೈಡ್‌ಲೈನ್ ಸಂಖ್ಯೆ 1098 ಸಂಖ್ಯೆಯ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಕುರಿತಂತೆ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಬಸ್‌ಗಳಲ್ಲಿ ಚೈಡ್‌ಲೈನ್  ಸಂಖ್ಯೆ 1098 ಅಳವಡಿಸುವುದರ ಜೊತೆಗೆ ಮಕ್ಕಳಿಗೆ ಆ ಸಂಖ್ಯೆಯ ಪ್ರಯೋಜನ ಕುರಿತು ಮಾಹಿತಿ ನೀಡಬೇಕು ಹಾಗೂ ಶಾಲಾ ವಾಹನಗಳಲ್ಲಿ ಮಕ್ಕಳು ದೂರು ನೀಡಲು ದೂರು ಪೆಟ್ಟಿಗೆ ಅಳವಡಿಸಬೇಕು. ಮಕ್ಕಳ ಸಂರಕ್ಷಣೆಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಸಭೆಗಳನ್ನು ತ್ರೈಮಾಸಿಕವಾಗಿ ನಡೆಸಿ, ಸಭೆಯಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ತೆಗೆದುಕೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಸಹಾಯಕ ಕಮೀಷನರ್ ರಾಜು ಕೆ. ಅವರು ಭೇಟಿ ನೀಡಿದರು. ಥೀಮ್ ಪಾರ್ಕ್‌ಗೆ ಆಗಮಿಸುವ ರಸ್ತೆಯ ಸಮಸ್ಯೆಯ ಬಗ್ಗೆ ವೀಕ್ಷಿಸಿದರು. ನಂತರ ಕಾರಂತ ಥೀಮ್ ಪಾರ್ಕ್‌ನಲ್ಲಿ ಕಾರಂತರ ಪುತ್ಥಳಿ, ನೂತನವಾಗಿ ನಿರ್ಮಾಣವಾಗುತ್ತಿರುವ ಸಂಗೀತ ಕಾರಂಜಿ ಬಗ್ಗೆ ಮಾಹಿತಿ ಪಡೆದುಕೊಂಡರು. ಅಂಗನವಾಡಿ, ಗ್ರಂಥಾಲಯ, ರಂಗಮಂದಿರ, ಆರ್ಟ್‌ಗ್ಯಾಲರಿ, ವೀಕ್ಷಿಸಿದರು. ಕಾರಂತರ ಕಾದಂಬರಿಗಳ ಪಾತ್ರಗಳು ನಮ್ಮೊಳಗಿನ ವ್ಯಕ್ತಿಯ ಚಿತ್ರಣಗಳು ಅನಾವರಣಗೊಳ್ಳುವಂತೆ ಭಾಸವಾಗುವುದಲ್ಲದೇ, ಸಮಾಜದಲ್ಲಿನ ಸಮಸ್ಯೆಗಳನ್ನು ಕಾದಂಬರಿ ಮೂಲಕ ಓದುಗರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್ ಪೂಜಾರಿ, ಕೋಟ ಕಂದಾಯ ನಿರೀಕ್ಷಕರಾದ ರಾಜು, ಗ್ರಾಮ ಲೆಕ್ಕಾಧಿಕಾರಿ ಚೆಲುವರಾಜ್, ಕೋಟ ಹೋಬಳಿಯ ಕೃಷಿ ಅಧಿಕಾರಿ ಸುಪ್ರಭಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More