ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಘ್ ಇದರ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶವು ಯುಎಐ ಬರ್‌ದುಬಾಯಿ ರೀಜೆಂಟ್ ಪ್ಯಾಲೇಸ್ ಹೋಟೆಲ್‌ನಲ್ಲಿ ಜರುಗಿತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ನಮ್ಮ ಕುಂದಾಪ್ರ ಕನ್ನಡ ಬಳಗ ಸಂಘಟನೆಯನ್ನು ದೀಪ ಬೆಳಗಿ ಉದ್ಘಾಟಿಸಿದರು. ರಾಮೀ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ವರದರಾಜ ಶೆಟ್ಟಿ, ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಕ್ವಾಡಿ, ಚಿತ್ತಾರಿ ಗ್ರೂಫ್ ಆಫ್ ಕಂಪೆನಿ ಆಡಳಿತ ಪಾಲುದಾರ ಪಿ. ಸುಖಾನಂದ ಶೆಟ್ಟಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಉದ್ಯಮಿ ಹಮೀದ್, ಮುಂಬೈ ಉದ್ಯಮಿ ವೆಂಕಟೇಶ ಕಿಣಿ, ಮಂಜುನಾಥ ಬಿಲ್ಲವ, ಉದ್ಯಮಿ ಇಬ್ರಾಹಿಂ ಗಂಗೊಳ್ಳಿ, ಬಾಸುಮ ಕೊಡಗು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಸಾಧನಾ ದಾಸ್ ಸ್ವಾಗತಿಸಿ ಪ್ರಸಾವಿಕ ನುಡಿಗಳನ್ನಾಡಿದರು. ವಾಗ್ಮಿ ಪತ್ರಕರ್ತ ಅರುಣ್‌ಕುಮಾರ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋಗ್ರಾಸ ನೀಡುವುದರಿಂದ ಕರ್ಮ ಕ್ಷಯಿಸಿ ಬದುಕಿನಲ್ಲಿ ಆನಂದ ನೆಲೆಸುವುದು ಆದುದರಿಂದ ಗೋವಿನ ಸೇವೆ ಆತ್ಮೋನ್ನತಿಗೆ ಪರಮ ಪವಿತ್ರ ಕಾರ್ಯವಾಗಿದೆ ಎಂದು ಹಂಗಾರಕಟ್ಟೆಯ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಅವರು ಯುಗಾದಿಯ ಶುಭ ಸಂದರ್ಭದಲ್ಲಿ ಕೋಟೇಶ್ವರದ ಹರಿಹರ ಸೇವಾ ಬಳಗದವರು ಹೊರ ತಂದ ಗಾವೋ ವಿಶ್ವಸ್ಯ ಮಾತರಃ ಎನ್ನುವ ಜ್ಞಾನಪ್ರದ ಗೋಡೆ ಫಲಕವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜಗತ್ತಿನಲ್ಲಿ ಕಾಮಧೇನುವಿಗೆ ಮಹತ್ವದ ಸ್ಥಾನವಿದೆ. ಗೋವಿನ ಪಾಲನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆ, ನೆಮ್ಮದಿ, ನೆಲಸಲು ಸಹಕಾರಿಯಾಗಿದೆ. ಗೋ ಉತ್ಪನ್ನಗಳು ಪೂಜೆಯ ಶ್ರೇಷ್ಠತೆಯನ್ನು ಹೆಚ್ಚಿಸುವ ಜೊತೆಗೆ ಸಮಗ್ರ ಕುಟುಂಬದ ಆರೋಗ್ಯವಂತ ಜೀವನಕ್ಕೆ ಭದ್ರ ತಳಹದಿಯನ್ನು ನೀಡುತ್ತದೆ. ಹಾಗಾಗಿ ಮನೆಮನೆಯಲ್ಲಿ ಗೋವಿನ ಪಾಲನೆಯಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಹರಿಹರ ಸೇವಾ ಬಳಗದ ಅಧ್ಯಕ್ಷರಾದ ಕೆ. ಮೋಹನ ಆಚಾರ್ಯ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ಪುಷ್ಪರಾಜ್, ಹರೀಶ್ ಜೆ. ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಆಟೋ ರಿಕ್ಷಾ ಚಾಲಕರ ಬೇಡಿಕೆಗೆ ಅನುಗುಣವಾಗಿ ಮ್ಯಾಂಗೀಸ್ ರಸ್ತೆಯ ವಠಾರದಲ್ಲಿ ತಾಲೂಕು ಪಂಚಾಯತ್ ನಿಧಿಯಿಂದ ಸುಸಜ್ಜಿತವಾದ ಆಟೋ ರಿಕ್ಷಾ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆಟೋ ರಿಕ್ಷಾ ಚಾಲಕ ಮಾಲಕರು ಈ ತಂಗುದಾಣದ ಸದುಪಯೋಗ ಪಡೆದುಕೊಂಡು ಗಂಗೊಳ್ಳಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು. ಅವರು ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ವಠಾರದಲ್ಲಿ ತಾಲೂಕು ಪಂಚಾಯತ್ ನಿಧಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಎಂ.ರಾಮಕೃಷ್ಣ ಪೈ ಮುಳ್ಳಿಕಟ್ಟೆ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಅತಿ ವೇಗದಿಂದ ಚಲಾಯಿಸುವುದು, ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದನ್ನು ಮಾಡದೇ ತಮ್ಮ ವಾಹನವನ್ನು ಅತ್ಯಂತ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಚಾಲನೆ ಸಂದರ್ಭ ಎಲ್ಲಾ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆ ಪತ್ರಗಳನ್ನು ತಮ್ಮೊಟ್ಟಿಗೆ ಇಟ್ಟುಕೊಳ್ಳಬೇಕು ಎಂದರು. ಪತ್ರಕರ್ತ ಬಿ.ರಾಘವೇಂದ್ರ ಪೈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶಾನುಸಾರ ಪ್ರಾಯ:ಶ್ಚಿತ್ತ ಶ್ರೀ ಲಘು ವಿಷ್ಣು ಹವನ, ಶ್ರೀದೇವರಿಗೆ ದ್ವಾದಶ ಕಲಶಾಭಿಷೇಕ ಹಾಗೂ ಕುಳಾವಿ ಬಾಂಧವರಿಂದ ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ದ್ವಾದಶ ಕಲಶಾಭಿಷೇಕ, ಮಧ್ಯಾಹ್ನ ಗಂಟೆಗೆ ಶ್ರೀ ಲಘು ವಿಷ್ಣು ಹವನ ಪೂರ್ಣಾಹುತಿ, ೧ ಗಂಟೆಗೆ ಮಹಾಪ್ರಾರ್ಥನೆ ನಡೆದು ಶ್ರೀ ದೇವರಿಗೆ ಮುಷ್ಠಿ ಕಾಣಿಕೆ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ಮಹಾ ಮಂಗಳಾರತಿ ಹಾಗೂ ಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಯಶಸ್ವಿಯಾಗಿ ಜರಗಿದವು. ದೇವಳದ ಧರ್ಮದರ್ಶಿ ಮಂಡಳಿ ಸದಸ್ಯರು, ಊರ ಪರವೂರ ಸಮಾಜ ಬಾಂಧವರು, ಕುಳಾವಿ ಬಾಂಧವರು, ಭಜಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಏಕಾಗ್ರತೆ ಹಾಗೂ ಆತ್ಮ ಶುದ್ಧಿಯಿಂದ ದೇವರ ಧ್ಯಾನ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರ ಧ್ಯಾನದಿಂದ ಸಾರ್ಥಕ ಜೀವನ ಹೊಂದಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೇಳಿದರು. ಅವರು ಬೆಳ್ವೆ ಹೊನ್ಕಲ್ಲು ಚಿತ್ತೇರಿ ಶ್ರೀ ವನದುರ್ಗಾ ದೇವಸ್ಥಾನದ ಪುನಃ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರದ್ಧೆ ಭಕ್ತಿಯ ಧಾರ್ಮಿಕ ಆಚರಣೆಗಳಿಂದ ಧರ್ಮ ಸಂಸ್ಕೃತಿಯ ಉಳಿವಿಗೆ ಸಾಧ್ಯ. ದೇವರ ಭಯವೇ ಜ್ಞಾನದ ಆರಂಭ. ಯುವ ಜನತೆ ಹಿರಿಯರನ್ನು ಗೌರವಿಸುವ ಸೇವಾ ಮನೋಭಾವನೆಗಳನ್ನು ಮೈಗೂಡಿಸಿ ಕೊಳ್ಳಬೇಕು. ದೂರದರ್ಶನ ಕಾರ್ಯ ಕ್ರಮಗಳಿಂದ ಧಾರ್ಮಿಕ ಆಚರಣೆಗಳು ವ್ಯತಿರಿಕ್ತ ಸ್ವರೂಪವನ್ನು ಹೊಂದಿ ಕೊಳ್ಳುತ್ತಿರುವುದು ದುರದೃಷ್ಟಕರ. ಧಾರ್ಮಿಕ ಆಚರಣೆಗಳಲ್ಲಿ ಜನರ ಆಸಕ್ತಿ ಒಗ್ಗೂಡುವಿಕೆಯಿಂದ ಊರಿನ ಅಭಿವೃದ್ಧಿ ಹಾಗೂ ಗೌರವ ಹೆಚ್ಚುತ್ತದೆ. ವ್ಯಕ್ತಿಯ ಉತ್ತಮ ಸೇವಾ ಮನೋಭಾವನೆಯಿಂದ ಸಮಾಜದಲ್ಲಿ ಗೌರವಕ್ಕೆ ಅರ್ಹರಾಗುತ್ತಾರೆ ಎಂದರು. ನಿವೃತ್ತ ಶಿಕ್ಷಕ ಶೇಖರ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿಯವರು ಯಕ್ಷರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಮೇಳದ ತಿರುಗಾಟದಿಂದ ನಿವೃತ್ತರಾದ ಪ್ರಯುಕ್ತ “ಹಳ್ಳಾಡಿಗೆ 60, ರಂಗಕ್ಕೆ 50′ ಕಾರ್ಯಕ್ರಮ ಕುಂದಾಪುರ ಆರ್.ಎನ್.ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆಯಿತು. ಈ ಸಂದರ್ಭ ಯುವ ಬಂಟರ ಸಂಘಟನೆ ಕುಂದಾಪುರ ನೇತೃತ್ವದಲ್ಲಿ, ಹಳ್ಳಾಡಿ ಅಭಿಮಾನಿ ಬಳಗ ಸಾೖಬ್ರಕಟ್ಟೆ, ಅಭಿಮಾನಿ ಬಳಗ ಗಾವಳಿ ಹಾಗೂ ಹಟ್ಟಿಯಂಗಡಿ ಯಕ್ಷಗಾನ ಮೇಳ ಮತ್ತು ಅಭಿಮಾನಿಗಳು, ಹಿತೈಷಿಗಳ ವತಿಯಿಂದ ಹಳ್ಳಾಡಿಯವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಹಳ್ಳಾಡಿಯವರು, ಯಕ್ಷರಂಗ ತನಗೆ ಎಲ್ಲವನ್ನು ಕೊಟ್ಟಿದೆ. ಜಾತಿ-ಮತ ಭೇದವಿಲ್ಲದೆ ತನಗೆ ಅಭಿಮಾನಿಗಳಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು. ಯಕ್ಷಗಾನ ವಿಮರ್ಶಕ ಎಸ್. ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಯಕ್ಷರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳ್ಳಾಡಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಬೇಕಿದೆ ಎಂದರು. ಕುಂದಾಪುರ ಯುವಬಂಟರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹುಂಡೇಕರ್ ಸಮಿತಿ ವರದಿಯಲ್ಲಿ ದೊಡ್ಡ ತಾಲೂಕುಗಳಲ್ಲಿ ಸಂಪರ್ಕದ ವ್ಯವಸ್ಥೆಗಳು ಅಂದು ಕಡಿಮೆ ಇರುವ ಹಿನ್ನೆಲೆಯಲ್ಲಿ ಜನರಿಗೆ ಹತ್ತಿರದಲ್ಲೇ ಸೌಲಭ್ಯಗಳು ದೊರಕಲಿ ಎನ್ನುವ ಅಭಿವೃದ್ಧಿ ದೃಷ್ಟಿಕೋನದಲ್ಲಿ ಅಂತಹ ತಾಲೂಕನ್ನು ಒಡೆದು ಎರಡು ತಾಲೂಕನ್ನಾಗಿ ಮಾಡಬೇಕೆಂದು ಸೂಚಿಸಿದ್ದರು. ಆದರೆ ಈ ವರದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ವಂಡ್ಸೆಯನ್ನು ತಾಲೂಕು ಕೇಂದ್ರವಾಗಿ ಮಾಡದಿದ್ದರೇ ಬೈಂದೂರು ತಾಲೂಕಿಗೆ ಸೇರಿಸುವುದು ಬೇಡ ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದರು. ಅವರು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ನಡೆದ ವಂಡ್ಸೆ ಹೋಬಳಿ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಹುಂಡೇಕರ್ ವರದಿಯಲ್ಲಿ ತಾಲೂಕು ಕೇಂದ್ರ ಎಲ್ಲಿ ಆಗಬೇಕೆಂಬ ಪ್ರಸ್ತಾಪ ಇಲ್ಲ. ಬೈಂದೂರು ತಾಲೂಕು ರಚನೆಯಾದಲ್ಲಿ ಬೈಂದೂರೇ ಕೇಂದ್ರವಾಗಬೇಕೆಂದು ವರದಿಯಲ್ಲಿ ಹೇಳಿಲ್ಲ. ಎ.ಬಿ. ಪ್ರಕಾಶ್ ಸಮಿತಿಯಲ್ಲಿದ್ದ ಚಿರಂಜೀವಿ ಸಿಂಗ್ ಕೂಡಾ ಮುಂದೆ ರಾ.ಹೆ.ಕೇಂದ್ರಿತ ತಾಲೂಕು ಕೇಂದ್ರಗಳಾಗಿ ಮಾಡುವುದು ಸರಿಯಲ್ಲ ಎಂದಿದ್ದರು. ಇದುವರೆಗೆ ಯಾವ ಸರಕಾರವೂ ಕೂಡ ತಾಲೂಕು ರಚನೆಗೆ ಸಂಬಂಧಿಸಿದ ಯಾವುದೇ ವರದಿಗೂ ಗೌರವ ಕೊಟ್ಟಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೇರೂರು ಗ್ರಾಮದ ಕೆಳ ಹೇರೂರಿನ ದುರ್ಗಾಂಬಿಕಾ ದೇವಸ್ಥಾನದ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿದ ಕಳ್ಳರು ಗರ್ಭ ಗುಡಿಯ ಬೀಗ ಒಡೆದು ದೇವರಿಗೆ ಹಾಕಿರುವ ಚಿನ್ನ -ಬೆಳ್ಳಿಯ ಆಭರಣಗಳು ಹಾಗೂ ಪರಿಕರಗಳನ್ನು ಕಳವು ಮಾಡಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ದೇವಸ್ಥಾನದ ಅರ್ಚಕ ರಾಮಯ್ಯ ಬಳೆಗಾರ ಅವರು ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆ ಬಂದಾಗ ಕಳವು ನಡೆದ ಬಗ್ಗೆ ತಿಳಿದುಬಂದಿದ್ದು ತತ್‌ಕ್ಷಣ ಆಡಳಿತ ಮೊಕ್ತೇಸರರಿಗೆ ಕರೆ ಮಾಡಿ ತಿಳಿಸಿರುತ್ತಾರೆ. ಎದುರಿನ ಬಾಗಿಲಿನ ಬೀಗ ಹಾಕುವ ಕೊಂಡಿಯನ್ನು ಮುರಿದು ಬಾಗಿಲಿಗೆ ಒಳಗಡೆಯಿಂದ ಚಿಲಕ ಹಾಕಿರುವುದು ತಿಳಿದ ಅನಂತರ ದೇವಸ್ಥಾನದ ಉತ್ತರ ಬದಿಯಲ್ಲಿ ಬಾಗಿಲನ್ನು ತೆರೆದು ಹೊಕ್ಕ ಕಳ್ಳರು ದೇವಸ್ಥಾನದ ಒಳಗಿನ ಗರ್ಭಗುಡಿಗೆ ಹೋಗುವ ಬಾಗಿಲಿನ ಬೀಗ ಹಾಕುವ ಕೊಂಡಿಯನ್ನು ಮುರಿದು ಗರ್ಭಗುಡಿಯ ಒಳಗೆ ಪ್ರವೇಶಿಸಿ ದೇವರಿಗೆ ಹಾಕಿರುವ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ತ್ರಿಶೂಲ, ಬೆಳ್ಳಿಯ ಮುಖವಾಡ, ಬೆಳ್ಳಿಯ ಸೊಂಟದ ಪಟ್ಟಿ, ಬೆಳ್ಳಿಯ ಬಳೆ ಒಂದು ಜತೆ, ಬೆಳ್ಳಿಯ…
ಕುಂದಾಪ್ರ ಡಾಟ್ ಕಾಂ ವಿಡಿಯೋ |ಮರವಂತೆ ಸೌಪರ್ಣಿಕ ನದಿಯ ಕುರು ದ್ವೀಪ ನೋಡುಗರ ಕಣ್ಮನ ಸೆಳೆಯುವಂತಿದೆ. ಮರವಂತೆ ಸಮುದ್ರ ತೀರ ಹಾಗೂ ಸೌಪರ್ಣಿಕ ನದಿಯ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-66 ಇಲ್ಲಿನ ಒಂದು ವೈಶಿಷ್ಟ್ಯವಾದರೇ, ಅದರ ಪಕ್ಕದಲ್ಲಿಯೇ ಇರುವ ಕುರು ದ್ವೀಪವೂ ಸುಂದರ ಪ್ರವಾಸಿ ತಾಣವೆನಿಸಿಕೊಂಡಿದೆ. ಕುಂದಾಪುರದ ಡಿಜೆ ರಂಜು ತಮ್ಮ ಡ್ರೋನ್ ಕ್ಯಾಮರಾ ಮೂಲಕ ಈ ಪ್ರದೇಶವನ್ನು ಸೆರೆಹಿಡಿದಿದ್ದಾರೆ. ಒಮ್ಮೆ ನೋಡಿ ಮತ್ತು ಶೇರ್ ಮಾಡಿ. Aerial View of Kuru Islaland Maravanthe ಇದನ್ನೂ ನೋಡಿ: http://kundapraa.com/aerial-view-of-current-maravanthe-nh-66-beach-and-river/ ಮತ್ತಷ್ಟು ವಿಡಿಯೋಗಳಿಗೆ ನಮ್ಮ ಚಾನೆಲ್ Subscribe ಮಾಡಿಕೊಳ್ಳಿ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕೀಲರ ಸಂಘದ ಸದಸ್ಯರಾದ ಯುವ ನ್ಯಾಯವಾದಿ ಕೆ. ವಿಕಾಸ ಹೆಗ್ಡೆಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾದ ಬಗ್ಗೆ ಕುಂದಾಪುರ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಯುವ ನ್ಯಾಯವಾದಿಯಾಗಿ ಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ಕೆ.ವಿಕಾಸ ಹೆಗ್ಡೆಯವರು ರಾಜಕೀಯದಲ್ಲಿ ಅಜಾತಶತ್ರುವಾಗಿದ್ದು, ಅತೀ ಕಿರಿಯ ವಯಸ್ಸಿನಲ್ಲಿ ಉನ್ನತ ಸ್ಥಾನ ಅಲಂಕರಿಸಿರುವುದು ನಮ್ಮ ವಕೀಲರ ಸಂಘಕ್ಕೆ ಅತ್ಯಂತ ಹೆಮ್ಮೆಯ ವಿಚಾರ ಎಂದರು. ಮಾಜಿ ಅಧ್ಯಕ್ಷರುಗಳಾದ ಎ.ಬಿ.ಶೆಟ್ಟಿ, ಗಡಾಹದ್ ರಾಮಕೃಷ್ಣ ರಾವ್, ಜಿ. ಸಂತೋಷ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಟಿ.ಬಿ ಶೆಟ್ಟಿ, ಉಪಾಧ್ಯಕ್ಷರಾದ ಜಯಪ್ರಕಾಶ ಸಾಲಿನ್ಸ್‌ರವರು ಕೆ.ವಿಕಾಸ ಹೆಗ್ಡೆ ಇವರನ್ನು ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೆ.ವಿಕಾಸ ಹೆಗ್ಡೆಯವರು, ಒಬ್ಬ ನ್ಯಾಯವಾದಿಯಾಗಿ ಇದ್ದುದರಿಂದ ರಾಜಕೀಯವಾಗಿ ಹೆಚ್ಚು ಗೌರವ ಸಿಕ್ಕಿರುವುದಲ್ಲದೆ, ಈ ವಯಸ್ಸಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು. ಅಲ್ಲದೇ ನಾನು ನ್ಯಾಯವಾದಿಯಾಗಿರುವುದರಿಂದ ಜನರಿಗೂ ಸಹಾ ಹೆಚ್ಚಿನ…
