Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ವಚ್ಛ ಕಡಲ ತೀರ, ಹಸಿರು ಕೋಡಿ ಅಭಿಯಾನದ ಮೂರನೆಯ ಹಂತವನ್ನು ಬ್ಯಾರೀಸ್ ವಿದ್ಯಾ ಸಂಸ್ಥೆ, ಕುಂದಾಪುರ ಪುರಸಭೆ ಮತ್ತು ಕೋಡಿ ಮಹಾಜನರ ಸಹಯೋಗದೊಂದಿಗೆ ಹಳಅಳಿವೆಯಿಂದ ಕೋಡಿಯ ಸೀ ವಾಕ್ ವರೆಗಿನ 4 ಕಿಲೋ ಮೀಟರ್ ದೂರದ ಕಡಲ ತೀರ ಹಾಗೂ ತೀರದ ಪಕ್ಕದಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಹಮ್ಮಿಕೊಳ್ಳಲಾಯಿತು. ಪುರಸಭೆಯ ಸಹಕಾರದೊಂದಿಗೆ ಕಸದ ವಿಲೇವಾರಿ ಮಾಡಲಾಯಿತು. ಈ ಅಭಿಯಾನದ ನಿರಂತರ ಪ್ರಕ್ರಿಯೆಯಾಗಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆಸಲಾಗುವುದು ಮತ್ತು ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಈ ಕಾರ್ಯವನ್ನು ಕುಂದಾಪುರ ಜನರ ಆದ್ಯತೆ ಹಾಗೂ ಆಶಯವಾಗಿ ರೂಪಿಸುವ ಇಚ್ಛೆಯನ್ನು ಬ್ಯಾರೀಸ್ ಗ್ರೂಪಿನ ಛೇರ್ಮನ್ ಸಯ್ಯದ್ ಮೊಹಮ್ಮದ್ ಬ್ಯಾರಿ ವ್ಯಕ್ತಪಡಿಸಿದರು. ಬ್ಯಾರೀಸ್ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಕುಂದಾಪುರ ಪುರಸಭೆಯ ಕೌನ್ಸಿಲರ್ ಗಳು, ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 67 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಸುಮನಾ ಸುಧಾಕರ್ ಆಚಾರ್, ತ್ರಾಸಿ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.ನಿವೃತ್ತ ಶಿಕ್ಷಕ ಸದಾಶಿವ ಐತಾಳ್, ವಾಸುದೇವ ಶ್ಯಾನುಭಾಗ್ ಕುಂದಾಪುರ, ದೇವಕಿ ಪ್ರಭು ತಲ್ಲೂರು, ನಾಗರಾಜ ಆಚಾರ್ ತ್ರಾಸಿ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಶ್ರೀ ರಾಮ ಗಣಪತಿ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ, ತ್ರಾಸಿ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿದರು, ಪ್ರಭಾಕರ್ ಆಚಾರ್ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ವಾರ್ಷಿಕ ಮಹಾಸಭೆ ಸಾಸ್ತಾನದ ಶಿವಕೃಪಾ ಕಲ್ಯಾಣ ಪಂಟದಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಶ್ರೀಧರ್ ಜಿ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2021ರ ಆರ್ಥಿಕ ವ್ಯವಹಾರಕೆ ಶೇ97.18ರಷ್ಟು ಸಾಲ ವಸೂಲಾತಿಯಾಗಿದ್ದು ಆಡೀಮ ವರ್ಗೀಕರಣ ಎ ತರಗತಿಯದ್ದಾಗಿರುತ್ತದೆ ಎಂದು ತಿಳಿಸಿದರು. ವರದಿ ಸಾಲಿನಲ್ಲಿ ಸಂಘವು ೮೮ ಲಕ್ಷಕ್ಕೂ ಮಿಕ್ಕಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 15% ಡಿವಿಡೆಂಟ್ ಘೋಷಿಸಲಾಯಿತು. ಸದಸ್ಯರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಲಾಗುವುದು ಎಂದರು. ಈ ಸಂದರ್ಭ ಕಾರ್ಯವ್ಯಾಪ್ತಿಯ ಹಿರಿಯ ಕೃಷಿಕರಾದ ಜಗದೀಶ ಕಾರಂತ ಐರೋಡಿ, ನಾರಾಯಣ ಮರಕಲ ಪಾಂಡೆಶ್ವರ, ಜುಲಿಯಸ್ ಎಂ. ರೋಚ್, ಮೈಕಲ್ ಡಿಸೋಜ ಬಾಳ್ಕುದ್ರು, ಸದಾಶಿವ್ ಪೂಜಾರಿ ಪಾಂಡೆಶ್ವರ ಇವರಿಗೆ ಆಧುನಿಕ ರೈತ ಪದ್ದತಿಯ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ85 ಹಾಗೂ 85ಕ್ಕಿಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಉಪಾಧ್ಯಕ್ಷರಾಗಿ ಗುಲಾಬಿ ಪೂಜಾರಿ ಮರವಂತೆ ಆಯ್ಕೆಯಾಗಿದ್ದಾರೆ. ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೌರಿ ದೇವಾಡಿಗ ಅವರ ಶಿಫಾರಸ್ಸಿನ ಮೇರೆಗೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಪ್ರಥಮ ಡೋಸ್ ಕೋವಿಡ್ ಲಸಿಕೆ ನೀಡುವಲ್ಲಿ ಶೇ.93ರಷ್ಟು ಸಾಧನೆ ಮಾಡಿದ್ದು, ಬಾಕಿ ಉಳಿದ ಶೇ.7 ರಷ್ಟು ಜನರಿಗೆ ಲಸಿಕೆ ಪಡೆಯುವಂತೆ ಎಲ್ಲಾ ಸಮುದಾಯಗಳ ಮುಖಂಡರು ಮತ್ತು ವೈದ್ಯರು ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ, ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು ಮತ್ತು ವೈದ್ಯರೊಂದಿಗೆ ನಡೆದ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡೂ ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ನಿಂದ ಗರಿಷ್ಠ ಸುರಕ್ಷೆ ದೊರೆಯಲಿದೆ. ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಮತ್ತು ಈಗಾಗಲೇ ಮೊದಲ ಡೋಸ್ ಪಡೆದು 2 ನೇ ಡೋಸ್ ಪಡೆಯಲು ಅವಧಿ ಮೀರಿದವರು ತಕ್ಷಣವೇ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯಲು ನಿರಾಸಕ್ತಿ ತೋರುವವರನ್ನು ಸಂಬಂಧಪಟ್ಟ ಸಮುದಾಯಗಳ ಮುಖಂಡರು ಮನವೊಲಿಸಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು ಎಂದರು. ಜಿಲ್ಲೆಯ ಎಲ್ಲಾ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳು ಕೋವಿಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಮೂಲದ 1.6 ವರ್ಷದ ಪೋರಿ ಅಗಮ್ಯ ಎಂ. ಶೆಟ್ಟಿ ತನ್ನ ವಿಶೇಷ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಯಾಗಿದ್ದಾರೆ. ಅಗಮ್ಯ, ಮಹಾಭಾರತದ ಪ್ರಮುಖ 5 ಪಾತ್ರದಾರಿಗಳ ಅನುಕರಣೆ ಮಾಡುವುದಲ್ಲದೇ ಭಾವನಾತ್ಮಕವಾಗಿ ಅಭಿನಯಿಸು ತ್ತಾಳೆ. 7 ಬಗೆಯ ಪ್ರಾಣಿಗಳ ಧ್ವನಿಯನ್ನು ಅನುಕರಿಸುತ್ತಾಳೆ, ಆರು ಬಗೆಯ ಧಾನ್ಯ ಗಳನ್ನು ಗುರುತಿಸುತ್ತಾಳೆ, 14 ಪ್ರಾಣಿಗಳನ್ನು ಗುರುತಿಸುತ್ತಾಳೆ, ದೇಹದ ಎಂಟು. ಭಾಗಗಳನ್ನು ಗುರುತಿಸುತ್ತಾಳೆ, 20ಕ್ಕೂ ಹೆಚ್ಚು ಗೃಹಬಳಕೆ ವಸ್ತುಗಳನ್ನು ಗುರುತಿಸುವ ಮೂಲಕ ಕಿರಿಯ ವಯಸ್ಸಿನಲ್ಲಿ ಇಂಡಿಯಾ ಆಫ್ ರೆಕಾರ್ಡ್‌ಗೆ ಬುಕ್ ಸೇರ್ಪಡೆಯಾಗಿದ್ದಾಳೆ. ಬಾಲಕಿ ಉಪ್ಪುಂದ ನಿವಾಸಿ, ಶಹಾಪುರದ ಉದ್ಯಮಿ ಗುರುದತ್ತ ಶೆಟ್ಟಿ ಹಾಗೂ ಮಮತಾ ಶೆಟ್ಟಿ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ತಾಂತ್ರಿಕವಾಗಿ ಗೆಲುವು ಸಾಧ್ಯವಿದ್ದರೂ ತಲೆಯೆತ್ತಿ ನಿಲ್ಲುವ ಗೆಲುವು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ನ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹೇಳಿದರು. ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಕುಂದಾಪುರ ಸೋಮವಾರ ಆಯೋಜಿಸಿದ್ದ ಮತದಾರರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ 6 ಸಾವಿರ ಮತಗಳಿವೆ. ಬಿಜೆಪಿ ಬೆಂಬಲಿತ ಸ್ಥಳೀಯ ಪ್ರತಿನಿಧಿಗಳು 3,600 ಇದ್ದಾರೆ. ಕಾಂಗ್ರೆಸ್ ಪಕ್ಷ ಮತ ಹೊಂದಿದೆ. ಎಸ್ಡಿಪಿಐಗೆ 200 ಮತ ಇದೆ. 6 ಸಾವಿರದಲ್ಲಿ 2 ಸಾವಿರ ಮತ ಗೆದ್ದವರು ವಿಜಯ ಸಾಧಿಸಿದಂತೆ, 2 ಸಾವಿರಕ್ಕಿಂತ ಕಡಿಮೆಯಾದಲ್ಲಿ ಪ್ರಿಪರೆನ್ಸಿಯಲ್ ಸಿಸ್ಟಮ್ನಡಿ ಆಯ್ಕೆ ನಡೆಯುತ್ತದೆ. ತಾಂತ್ರಿಕವಾಗಿ ನಮಗೆ ಗೆಲುವು ಆಗಲಿದ್ದರೂ, ಪಕ್ಷೇತರ 27 ಮತಗಳು ಸಹಿತ ಕಾಂಗ್ರೆಸ್ನಲ್ಲಿ ಹಿಂದೆ ಸಾಕಷ್ಟು ಬೆಳೆದು, ಬಳಿಕ ಕಾರಣಾಂತರ ದಿಂದ ಅನ್ಯಪಕ್ಷದಲ್ಲಿರು ವವರ ಮನವೊಲಿಸಿ ಮತ ಪಡೆಯುವ ಮೂಲಕ ತಲೆಯೆತ್ತುವ ಗೆಲುವು ನಮ್ಮದಾಗಬೇಕಾಗಿದೆ ಎಂದರು. ಪ್ರತಾಪ್ಚಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನಾಗಪುರದ ಸಿಂಬಯೋಸಿಸ್ ಲಾ ಸ್ಕೂಲ್ ಆಯೋಜಿಸಿದ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ರೆಶೆಲ್ ಫೆನಾಂಡಿಸ್ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಅಭಿನಂದನೆ ಸಲ್ಲಿಸಿದ್ದಾರೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಮಣಿಕಂಠ ಎಸ್ . ಅವರು ಆಯ್ಕೆಯಾಗಿದ್ದಾರೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಶಿಪಾರಸ್ಸಿನ ಮೇರೆಗೆ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷರ ಆದೇಶದ ಮೇರೆಗೆ, ರೋಟರಿ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆದೇಶ ಪ್ರತಿ ನೀಡುವುದರ ಮೂಲಕ ಪದಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಮಾಜಿ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸೈನಿಕರು ಯುದ್ಧವನ್ನು ಗೆಲ್ಲುತ್ತಾರೆ. ಆದರೆ ಅದರ ಕೀರ್ತಿ ದಂಡನಾಯಕನ ಪಾಲಾಗುತ್ತದೆ ಎಂಬ ಮಾತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ಕೀರ್ತಿ, ಗೌರವ ಗಳಿಸುವವರಿಗೂ ಇದೇ ಮಾತು ಅನ್ವಯಿಸುತ್ತದೆ. ಏಕೆಂದರೆ ಸಾಧನೆ ಎಂದೂ ಒಬ್ಬರದ್ದಾಗಿರದೇ ಅವರೊಂದಿಗೆ ದುಡಿದ ಹಲವರದಾಗಿರುತ್ತದೆ ಎಂದು ಈ ಸಾಲಿನ ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಬಿ. ರಾಮ ಟೈಲರ್ ಅವರ ಜತೆ ರೋಟರಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸನ್ಮಾನವು ಕೇವಲ ಸಾಂಕೇತಿಕವಾಗಿರುತ್ತದೆ. ಅದು ತಮಗೊಬ್ಬರಿಗೇ ಅಲ್ಲ; ಬದಲಾಗಿ ತಮ್ಮ ಸಾಧನೆಗೆ ಬೆಂಬಲವಾಗಿ ನಿಂತ ಎಲ್ಲರಿಗೆ ಸಲ್ಲುತ್ತದೆ ಎಂಬ ವಿನೀತ ಭಾವದೊಂದಿಗೆ ಸನ್ಮಾನವನ್ನು ಸ್ವೀಕರಿಸಬೇಕು ಎಂದು ಅವರು ಹೇಳಿದರು. ತಮಗೆ ನೀಡಿದ ಸನ್ಮಾನಕ್ಕಾಗಿ ಬಿ. ರಾಮ ಟೈಲರ್ ಕೃತಜ್ಞತೆ ಸಲ್ಲಿಸಿದರು. ಉಭಯರನ್ನು ಜಿಪಂ…

Read More