Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಾರ್ವಜನಿಕ ಸಮಾರಂಭದಲ್ಲಿ ಅವಹೇಳನಕಾರಿ, ಅಸಾಂವಿಧಾನಿಕ ಹಾಗೂ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ ರಾಜ್ಯದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಸ್ ನಿಲ್ದಾಣದ ಬಳಿಯಲ್ಲಿ ಸಂಜೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಇಡೀ ವಿಶ್ವವೇ ಗುರುತಿಸಿದ ಹಾಗೂ ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದ ಈ ದೇಶ ಕಂಡ ಮಹಾನ್ ನಾಯಕ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಮಾತನಾಡಿರುವುದು ಸಚಿವರಿಗೆ ಶೋಭೆ ತರವಂತದ್ದಲ್ಲ. ಇದು ಅವರ ವಿಕೃತ ಮನಸ್ಸು ಹಾಗೂ ಕೀಳು ಸಂಸ್ಕೃತಿಯನ್ನು ತೋರಿಸುತ್ತದೆ. ಅಲ್ಪಸಂಖ್ಯಾತರನ್ನು ಓಲೈಸಿ ಓಟು ಗಿಟ್ಟಿಸಿಕೊಳ್ಳಲು ಸಿದ್ಧರಾಮಯ್ಯನವರು ರೋಷನ್ ಬೇಗ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾನ್ ಪುರುಷ ಡಾ. ಅಂಬೇಡ್ಕರ್‌ರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವ ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ವ್ಯವಸ್ಥೆ ಒಕ್ಕೂಟದಲ್ಲಿ ಮುಂದುವರಿಯಬೇಕು. ಈ ದೇಶದ ವ್ಯವಸ್ಥೆಗೆ ಪೂರಕ ವ್ಯವಸ್ಥೆ ಮತ್ತು ಯುವಜನರು ಉತ್ತಮ ಗುಣನಡತೆ, ಪ್ರೀತಿ ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಬೇಕು ಎಂದು ಬಿಇಒ ಕಛೇರಿಯ ಇ.ಸಿ.ಒ ವೆಂಕಪ್ಪ ಉಪ್ಪಾರ್ ಹೇಳಿದರು. ಖಂಬದಕೋಣೆ ಪಂಚಾಯತ್ ಸಭಾಭವನದಲ್ಲಿ ಖಂಬದಕೋಣೆ-ಹೇರಂಜಾಲು ವಲಯದ ಆದಿದ್ರಾವಿಡ ಸಂಘಟನಾ ಸಮಿತಿ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಎಂಬ ಕುಟುಂಬದ ಸದಸ್ಯರು ಹಾಗೂ ಯುವಜನರು ಶೈಕ್ಷಣಿಕವಾಗಿ ಮುಂದುವರಿಬೇಕು. ನಮ್ಮಲ್ಲಿ ಮೌಲ್ಯಯುತ ಶಿಕ್ಷಣದ ಕೊರತೆಯಿದ್ದು, ಜೀವನದಲ್ಲಿ ಉತ್ತಮ ಧ್ಯೇಯೊದ್ಧೇಶದಿಂದ ಕಾರ್ಯಕ್ಷಮತೆ ಕಡಿಮೆಯಾಗದ ಹಾಗೆ ಪ್ರಾಮಾಣಿಕವಾಗಿ ಮುಂದುವರಿಯಬೇಕಿದೆ. ಅನ್ಯ ಸಮಾಜದವರಿಗೆ ಕಿರುಕುಳ ನೀಡುವುದು, ಮೋಸ, ವಂಚನೆ ಮತ್ತು ರಾಜಕೀಯ ಗುಲಾಮಗಿರಿಯಿಂದ ಹಣಗಳಿಸುವ ವಿಚಾರಗಳಿಂದ ಹೊರಬಂದು ಅಂಬೇಡ್ಕರ್ ಅವರ ಚಿಂತನೆಗಳನ್ನು ಸಂಘಟನೆಯ ಮೂಲಕ ಅನುಸರಿಸಿ ಮುಖ್ಯವಾಹಿನಿಗೆ ಸೇರುವಂತಾಗಬೇಕು ಎಂದರು. ಸಂಘಟನೆಯ ಅಧ್ಯಕ್ಷ ರಾಮ ಬಾಳೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತ ಜನ್ಮದಿನದ ಪ್ರಯುಕ್ತ ಗಂಗೊಳ್ಳಿ ವಲಯ ಸವಿತಾ ಸಮಾಜ ಸಂಘ ಅಧ್ಯಕ್ಷ ಎಂ.ಶೇಖರ ಸುವರ್ಣ ಬಂಟ್ವಾಡಿ ನೇತೃತ್ವದಲ್ಲಿ ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನ ವಠಾರ ಶ್ರಮದಾನದ ಮೂಲಕ ಸ್ವಚ್ಛಮಾಡಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಾದ ದಿನೇಶ್ ಭಂಡಾರಿ, ಶಂಕರ ಸುವರ್ಣ ತ್ರಾಸಿ, ರಾಜೇಶ್ ಸುವರ್ಣ, ಬಾಬು ಭಂಡಾರಿ, ಸತೀಶ ಭಂಡಾರಿ, ರಮೇಶ ಭಂಢಾರಿ, ಅಶೋಕ್ ಭಂಡಾರಿ, ಮಹಾಬಲ ಬಂಗೇರ, ಸುಧಾಕರ ಬಂಗೇರ, ರಾಮಕೃಷ್ಣ ಭಂಡಾರಿ, ಅಜಿತ್ ಭಂಡಾರಿ, ವಿಠಲ ಭಂಡಾರಿ, ರಕ್ಷತ್ ಸುವರ್ಣ, ಶೇಖರ ಸಾಲಿಯಾನ್, ಗಣೇಶ ಸಾಲಿಯಾನ್, ಭಾಸ್ಕರ ಭಂಡಾರಿ, ಸಂದೀಪ ಗಂಗೊಳ್ಳಿ, ನಾಗರಾಜ ಭಂಡಾರಿ, ಗೋಪಾಲ ಭಂಡಾರಿ, ಮಂಜುನಾಥ ಬಂಗೇರ, ಮಹೇಶ ಭಂಡಾರಿ, ನಾಗರಾಜ ಸುವರ್ಣ, ರತ್ನಾಕರ ಭಂಡಾರಿ, ಕಿರಣ ಭಂಡಾರಿ ಇನ್ನಿತರು ಉಪಸ್ಥಿತರಿದ್ದರು.

Read More

ಪ್ರತೀ ತಿಂಗಳು ಎರಡು ಬಾಟಲಿ ರಕ್ತ ಕೊಡಬೇಕು : ಅಸ್ತಿಮಜ್ಜೆ ಜೋಡಣೆಯೇ ಇದಕ್ಕೆ ಪರಿಹಾರ ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಬಾಲೆ ದೇಹದಲ್ಲಿ ರಕ್ತ ಉತ್ಪಾದನೆಯೇ ನಿಂತಿದೆ. ಹಾವಿನ ಪೊರೆಯಂತೆ ಮೈಚರ್ಮ ಕಿತ್ತು ಬರುತ್ತಿದೆ. ರಕ್ತ ಕೊಡದಿದ್ದರೆ ಮುಖ ಕಪ್ಪಡರಿ ಉಸಿರಾಟವೂ ಕಷ್ಟ. ಕಳೆದ ಒಂದು ವರ್ಷದಿಂದ ಇಂತಹ ಯಾತನಾದಾಯಕ ಬದುಕು ಸವೆಸುತ್ತಿದ್ದಾಳೆ ಈ ಹೆಣ್ಣು ಮಗಳು. ಕುಂದಾಪುರ ತಾಲೂಕ್, ಹಕ್ಲಾಡಿ ಗ್ರಾಮ, ಹಕ್ಲಾಡಿ ಗುಡ್ಡೆ ನಿವಾಸಿ ಅಶ್ವಿತಾ (16) ಫ್ಯಾನ್ಕೋನಿ ಅನೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದ ಅಶ್ವಿತಾಗೆ ಏಕಾಏಕಿ ಜ್ವರ ಕಾಣಿಸಿಕೊಂಡು ಬರುಬರುತ್ತಾ ನಾಲ್ಕು ಹೆಜ್ಜೆ ನಡೆದರೂ ಎದುರುಸಿರು. ಅನಿವಾರ್ಯವಾಗಿ ಶಾಲೆಗೆ ವಿದಾಯ ಹೇಳಬೇಕಾಯಿತು. ತಿಂಗಳು ಸರಿಯಾಗಿ ಎರಡು ಬಾಟಲಿ ರಕ್ತ ಕೊಡಬೇಕು. ರಕ್ತ ಉತ್ಪತ್ತಿ ಮಾಡುವ ಅಸ್ತಿಮಜ್ಜೆ ಕೆಲಸ ನಿಲ್ಲಿಸಿದೆ. ಈ ಕಾಯಿಗೆ ವೈದ್ಯಲೋಕ ಇಟ್ಟ ಹೆಸರು ರಕ್ತ ಹೀನತೆ. ಚಿಕಿತ್ಸೆಗೆ 25 ಲಕ್ಷ ಹಣ ಬೇಕು: ಅಶ್ವಿತಾಳ ತಂದೆ ಕೃಷ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಸ್ವಲ್ಪ ಹಿಂದೆ ಬಿದ್ದಿದ್ದರು ಕೂಡ ಮತ್ತೆ ಪುಟಿದೇಳುತ್ತದೆ ಎಂದು ನಂಬಿಕೊಂಡವರು ನಾವು. ಅದಕ್ಕೆ ಪೂರಕವಾಗಿ ಇಂದು ಆಯೋಜಿಸಿರುವ ಕಾರ್ಯಕ್ರಮ ರಂಗ ಭೂಮಿಗೆ ಹೆಚ್ಚಿನ ಒತ್ತು ನೀಡಿದೆ. ವಿದ್ಯಾರ್ಥಿ ಜೀವನದಲ್ಲಿರುವ ಯಾರು ರಂಗ ಭೂಮಿ ಮತ್ತು ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರ ಮುಂದಿನ ಜೀವನದಲ್ಲಿ ಅವರು ಬಹಳಷ್ಟು ವಿಶಿಷ್ಟವಾಗಿರುತ್ತಾರೆ. ಅತ್ಯಂತ ಗ್ರಾಮೀಣ ಪ್ರದೇಶದಿಂದ ಬಂದ ಕೆಲವರ ನಡವಳಿಕೆ ಒರಟಾಗಿರುತ್ತದೆ ಪ್ರಥಮದಲ್ಲಿ, ಆದರೆ ನಾಟಕಗಳಲ್ಲಿ ತೊಡಗಿಸಿಕೊಂಡ ಬಳಿಕ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿರುವುದನ್ನು ನಾನು ಕಂಡಿದ್ದೇನೆ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ಸಂಚಾಲಕ ವಸಂತ ಬನ್ನಾಡಿ ಹೇಳಿದರು. ಅವರು ಕುಂದಾಪುರದ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜೇಸಿಐ ಕುಂದಾಪುರ ವತಿಯಿಂದ ಕುಂದ ಸಂಪದ ಸಹಭಾಗಿತ್ವದಲ್ಲಿ ಆಯೋಜಿಸಲಾದ ಜೇಸೀ ರಂಗ ಸಪ್ತಾಹ ೨೦೧೭ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೇಸಿಐ ಕುಂದಾಪುರದ ಅಧ್ಯಕ್ಷೆ ಅಕ್ಷತಾ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿನ ೭ನೇ ತರಗತಿ ವಿದ್ಯಾರ್ಥಿ ಸುಜನ್ ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈಗಾಗಲೇ ವೃತ್ತ ಮಟ್ಟದಲ್ಲಿ ಚಾಂಪಿಯನ್ ಆಗಿ, ಬೈಂದೂರು ವಲಯ ಮಟ್ಟದಲ್ಲಿ ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಪದಕ ಪಡೆದಿದ್ದಾನೆ. ವಂಡ್ಸೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್ ಗುಜ್ಜಾಡಿ ತರಬೇತಿ ನೀಡಿದ್ದು, ಈತ ಉದ್ದಿನಬೆಟ್ಟು ಸುಧಾಕರ ಪೂಜಾರಿ ಮತ್ತು ಭಾರತಿ ದಂಪತಿಗಳ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಕರ್ಯ ಇಲ್ಲದೇ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಕರಾವಳಿ ಭಾಗಗಳಲ್ಲಿ ಸರಕಾರಿ ಬಸ್‌ಗಳನ್ನು ಓಡಿಸಬೇಕು ಎಂದು ಜಿಲ್ಲಾ ಪ್ರಸಸ್ತಿ ಪುರಸ್ಕೃತ ಸಂಸ್ಥೆಯಾದ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ವತಿಯಿಂದ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ,ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಶಾಲಾ ಸಮಯದಲ್ಲಿ ಸಾಸ್ತಾನದಿಂದ ಪ್ರಾರಂಭಿಸಿ ಕರಾವಳಿಯ ರಸ್ತೆ ಮೂಲಕ ಕೋಡಿಕನ್ಯಾಣ, ಕೋಡಿತಲೆ, ಪಾರಂಪಳ್ಳಿ ಪಡುಕರೆ, ಕೋಟ ಪಡುಕರೆ, ಮಣುರು ಪಡುಕೆರೆ, ಕೊಮೆ, ಕೊರವಡಿ, ಗೋಪಾಡಿಯ ಮೂಲಕ ಬೀಜಾಡಿ ಫಿಶರೀಸ್ ರಸ್ತೆಯ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ನ್ನು ನಿಗದಿತ ಸಮಯದಲ್ಲಿ ಓಡಿಸಬೇಕೆಂದು ಮನವಿ ಮಾಡಲಾಯಿತು.ಮನವಿಯ ಜತೆಯಲ್ಲಿ ಸರಕಾರಿ ಬಸ್ ಓಡಿಸುವ ಕುರಿತು ಬೀಜಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಡಿದ ನಿರ್ಣಯದ ಪ್ರತಿಯನ್ನು ಲಗತ್ತಿಸಲಾಯಿತು. ಮನವಿ ಸ್ವೀಕರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪರದ ರೋಟರಿ ಕ್ಲಬ್ ಮಿಡ್‌ಟೌನ್ ಇವರಿಂದ ನೇಷನ್ ಬಿಲ್ಡರ್ ಅವಾರ್ಡ್‌ಗೆ ಭಾಜನರಾದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಸತೀಶ ಶೆಟ್ಟಿಗಾರರಿಗೆ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಗೌರವಾರ್ಪಣೆ ಹಾಗೂ ಅಭಿನಂದನಾ ಸಮಾರಂಭವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಲಾಲರ ಅಧ್ಯಕ್ಷತೆಯಲ್ಲಿ ಜರುಗಿತು. ಮೊಳಹಳ್ಳಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ದಿನಪಾಲ ಶೆಟ್ಟಿಯವರು ಸತೀಶ ಶೆಟ್ಟಿಗಾರರನ್ನು ಫಲ ಪುಷ್ಪಗಳನ್ನಿತ್ತು ಗೌರವಿಸಿದರು. ನಂತರ ಮಾತನಾಡಿದ ಅವರು ’೧೯೯೮ರಲ್ಲಿ ಮೊಳಹಳ್ಳಿ ಶಾಲೆಯಿಂದ ಸೇವೆ ಪ್ರಾರಂಭಿಸಿದ ಶೆಟ್ಟಿಗಾರರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಮಾದರಿ ಶಿಕ್ಷಕರಾಗಿ ಈ ಭಾಗದಲ್ಲಿ ಜನಾನುರಾಗಿಯಾಗಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿ, ಪರಿಷ್ಕರಣಾ ಸಮಿತಿ, ಪ್ರಶ್ನೆ ಪತ್ರಿಕೆ ತಯಾರಿಕೆ, ನಲಿಕಲಿ ಹೀಗೆ ವಿವಿಧ ವಿಷಯಗಳಲ್ಲಿ ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ಸೇವೆಗೈದು ಅನುಭವ ಹೊಂದಿರುವ ಇವರ ಅವಿರತ ಸೇವೆಗೆ ರೋಟರಿ ಮಿಡ್‌ಟೌನ್ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಇತ್ತೀಚಿಗೆ ಮೃತಪಟ್ಟ ಕಂಚುಗೋಡು ನಿವಾಸಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸದಸ್ಯ ಬಾಬು ಖಾರ್ವಿ ಕುಟುಂಬಕ್ಕೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಸಹಾಯಧನವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ೨೫ ಸಾವಿರ ರೂ.ಗಳ ಸಹಾಯ ಧನದ ಚೆಕ್‌ನ್ನು ಮೃತರ ಪತ್ನಿ ಶಾಂತಿ ಖಾರ್ವಿ ಅವರಿಗೆ ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷ ಗುರುನಾಥ ಪಟೇಲ್, ಕಾರ್ಯದರ್ಶಿ ದೇವದಾಸ ಖಾರ್ವಿ, ಮಾಜಿ ಕಾರ್ಯದರ್ಶಿ ಚೌಕಿ ವಿಠಲ ಖಾರ್ವಿ, ನಾಗಪ್ಪಯ್ಯ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು ಮೂಡುಬೆಳ್ಳೆಯ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಿದ ಜಿಲ್ಲಾ ಮಟ್ಟದ ವಿಕಲ ಚೇತನರ ಕ್ರೀಡಾಕೂಟದಲ್ಲಿ ಕುಂದಾಪುರ ವಲಯದ ವಿವಿಧ ಶಾಲೆಗಳಿಂದ ಭಾಗವಹಿಸಿದ ೧೮ ವಿದ್ಯಾರ್ಥಿಗಳು ೧೨ ಚಿನ್ನ,೮ ಬೆಳ್ಳಿ ಹಾಗೂ ೧೦ ಕಂಚಿನ ಪದಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕುಂದಾಪರ ವಲಯದ ಬಿ.ಐ.ಇ.ಆರ್.ಟಿ.ಶ್ರೀ ಸೀತಾರಾಮ ಶೆಟ್ಟಿಯವರು ತಂಡದ ವ್ಯವಸ್ಥಾಪಕರಾಗಿ ಮಾರ್ಗದರ್ಶನ ಮಾಡಿರುತ್ತಾರೆ. ಸಮಗ್ರ ಪ್ರಶಸ್ತಿ ಪಡೆದ ಕುಂದಾಪುರ ವಲಯದ ಈ ತಂಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಸದಾನಂದ ಬೈಂದೂರು ಅಭಿನಂದಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Read More