ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಮ್ಮ ಅಗತ್ಯಕ್ಕಿಂತ ಹೆಚ್ಚು ಸಮಯ ಆಸಕ್ತಿಗಳನ್ನು ತಂತ್ರಜ್ಞಾನದ ಬಳಕೆಗೆ ಮೀಸಲಾಗಿಟ್ಟರೆ, ಯುವ ವಿದ್ಯಾರ್ಥಿಗಳು ಬೌದ್ಧಿಕ ಬೆಳವಣಿಗೆಗೆ ಬೇಕಾದ ಸಮಯ ಮತ್ತು ಸಂಯಮವನ್ನು ಕಳೆದುಕೊಳ್ಳಬೇಕಾಗುತ್ತದೆ. ಬದಲಾಗಿ ಯುವ ಜನತೆಯು ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಇತರರೊಂದಿಗೆ ಸಹನೆಯಿಂದ ಬಾಳಲು ಕಲಿಯಬೇಕು ಎಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ ವಿ ಬನ್ನಾಡಿ ಹೇಳಿದರು. ಅವರು ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಸಂಚಾಲಕರಾದ ಬಿ.ಎಂ ಸುಕುಮಾರ ಶೆಟ್ಟಿ ವಿದ್ಯಾರ್ಥಿಗಳು ಮನೋಸ್ಥೈರ್ಯವನ್ನು ವೃದ್ಧಿಸಿಕೊಳ್ಳಬೇಕೆಂಬ ಕಿವಿಮಾತು ಹೇಳಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಸೀತಾರಾಮ ನಕ್ಕತ್ತಾಯರವರು ವಿದ್ಯಾರ್ಥಿಗಳ ಸ್ಪರ್ಧೆಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಪ್ರಾದ್ಯಾಪಕಿ ಸುಮತಿ ಶೆಣೈಯವರು ಉದ್ಘಾಟಕರ ಪರಿಚಯ ಮಾಡಿದರು. ಆಂಗ್ಲಭಾಷಾ ಪ್ರಾಧ್ಯಾಪಕಿ ಲೋನಾ ಲೂಯಿಸ್ರವರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ಕಟ್ಟೆ ಆಶ್ರಯದಲ್ಲಿ ಬಿದ್ಕಲ್ಕಟ್ಟೆಯಲ್ಲಿ ಜರುಗಿದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಬಾಲಕಿಯರು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಉಪನ್ಯಾಸಕ ರಾಮ್ ನಾಯ್ಕ್ ಮತ್ತು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ಮನುಷ್ಯನ ಅಂಗಾಂಗಳಲ್ಲಿ ಕಣ್ಣು ಚಿಕ್ಕದಾಗಿದ್ದರೂ ಕೂಡ ಐದು ಬಗೆಯ ಖಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕಣ್ಣಿನ ಸಂಬಂಧಿ ಖಾಯಿಲೆಯಲ್ಲಿ ನಾಲ್ಕು ಪ್ರಕಾರವನ್ನು ಗುಣಪಡಿಸಲಾಗಿದ್ದರೂ ಮುಂದಾಗುವ ಹಾನಿಯನ್ನು ನಿಯಂತ್ರಿಸಬಹುದಷ್ಟೇ. ಆದರೆ ಕಣ್ಣಿನ ಪೊರೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಚಿಕಿತ್ಸೆಗಳು ಲಭ್ಯವಿದ್ದು, ವಯಸ್ಸಾದಂತೆ ದೃಷ್ಟಿ ಮಂಜಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದು ಪಾರ್ವತಿ ಮಹಾಬಲ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯರಾಮ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು, ಇನ್ನರ್ವ್ಹೀಲ್ ಕ್ಲಬ್ ಬೈಂದೂರು, ಹಿಂದೂ ಅಭ್ಯುದಯ ಸಂಘ ರಿ. ನಾವುಂದ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಕಣ್ಣಿನ ಆಸ್ಪತ್ರೆ ಶಿರೂರು-ಮುದ್ದುಮನೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ. ಸಂಯುಕ್ತಾಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಜರುಗಿದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ದೀಪ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಗೀತದ ಬಗೆಗೆ ಕನಿಷ್ಠ ಜ್ಞಾನ, ಅಧ್ಯಯನವಿಲ್ಲದೇ ನೇರವಾಗಿ ವೇದಿಕೆಯಲ್ಲಿ ಹಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ನಿರಂತರವಾದ ಕಲಿಕೆಯಿಂದ ಮಾತ್ರ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಸಂಗೀತ ಸ್ವರ್ಧೆಗಳು ಮಕ್ಕಳಲ್ಲಿನ ಪ್ರತಿಭಾನ್ವೇಷಣೆಗೆ ವೇದಿಕೆಯಾಗುವುದಲ್ಲದೇ, ಸಂಗೀತಾಸಕ್ತರಿಗೆ ಆರಂಭದಲ್ಲಿಯೇ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಸವಿಸವಿ ನೆನಪು ಕಲಾ ಸಂಸ್ಥೆ ಕಳವಾಡಿ, ಶ್ರೀ ಮಾರಿಕಾಂಬ ಹವ್ಯಾಸಿ ಕಲಾ ತಂಡ ಕಳವಾಡಿ ಹಾಗೂ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ತಗ್ಗರ್ಸೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜೆಎನ್ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರಾವಣ ಸಂಗೀತ ಸ್ವರ್ಧೆ ಹಾಗೂ ಸಂಗೀತ ರಸಮಂಜರಿ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಸವಿ ಸವಿ ನೆನಪು ಕಲಾತಂಡದ ಗೌರವ ಪೋಷಕ ರಘುರಾಮ ಪೂಜಾರಿ, ಸಂಗೀತಗಾರ ಚಂದ್ರ ಬಂಕೇಶ್ವರ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಹಕಾರಿ ಸಂಘಗಳು ದೈನಂದಿನ ಆರ್ಥಿಕ ವ್ಯವಹಾರಗಳೊಂದಿಗೆ ಸಾಮಾಜಮುಖಿ ಚಟುವಟಿಕೆಗಳಲ್ಲಿಯೂ ಗಮನ ಹರಿಸಿದಾಗ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಿದೆ. ಸದಸ್ಯರು ಸ್ವಾವಲಂಭಿ ಬದುಕಿಗೆ ಅಗತ್ಯವಾದ ನೆರವು ಪಡೆದು, ಕೌಶಲಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪರಸ್ಪರರೊಂದಿಗೆ ಸ್ನೇಹ ವಿಶ್ವಾಸದಿಂದ ಬದುಕುವುದೂ ಅಗತ್ಯವಾಗಿದೆ ಎಂದು ಉಪ್ಪುಂದ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಯು. ವರಮಹಾಲಕ್ಷ್ಮೀ ಹೊಳ್ಳ ಹೇಳಿದರು. ಅವರು ಉಪ್ಪುಂದ ಶಂಕರ ಕಲಾಮಂದಿರ ಆವರಣದಲ್ಲಿ ಜರುಗಿದ ವನಿತಾ ಸ್ನೇಹ ಸಮ್ಮಿಲನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿವರ್ಷ ಆಯೋಜಿಸಲಾಗುತ್ತಿರುವ ವನಿತಾ ಸ್ನೇಹ ಸಮ್ಮಿಲನ ಸಂಘದ ಸದಸ್ಯರ ಉತ್ತಮ ಭಾಂದವ್ಯಕ್ಕೆ ಸಾಕ್ಷಿಯಾಗಿದೆ ಎಂದರು. ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ, ಬೈಂದೂರು ಇನ್ನರ್ವ್ಹೀಲ್ ಕ್ಲಬ್ ಲಿಟರಸಿ ಕೋ ಆರ್ಡಿನೇಟರ್ ಸುಜಾತಾ ರಾವ್ ಉಪಸ್ಥಿತರಿದ್ದರು. ಬೈಂದೂರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಕೆ. ಶಂಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಂಗೋಲಿ, ಆಶುಭಾಷಣ, ರಸಪಶ್ನೆ, ಕರಕುಶಲ ವಸ್ತು ತಯಾರಿ, ದಾಸರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರ ಶ್ರೀ ನಾಗಬನದಲ್ಲಿ ಜರುಗುವ 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಹಕ್ಲುಮನೆ ಹಾಗೂ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಆಚಾರ್ಯ ಆಯ್ಕೆಯಾಗಿದ್ದಾರೆ. ಸಮಿತಿಯ ಉಪಾಧ್ಯಕ್ಷರಾಗಿ ಪ್ರದೀಪ ಶೆಟ್ಟಿ, ಮಂಜುನಾಥ ದಾಸ್, ಗುರುರಾಜ ಆಚಾರ್ಯ, ಪ್ರಶಾಂತ ಆಚಾರ್ಯ, ಮಂಜುನಾಥ ಹಾಡಿಮನೆ, ಅಕ್ಷಯ್ ಶೆಟ್ಟಿ; ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಆಚಾರ್ಯ, ಸೋಮಶೇಖರ ಆಚಾರ್ಯ, ಪ್ರಭಾಕರ ಮೊಗವೀರ, ಶಿವಾನಂದ ಚಂದನ್, ಮಂಜುನಾಥ ಆಚಾರ್ಯ, ಸಂತೋಷ ಆಚಾರ್ಯ, ನಾಗರಾಜ ಶೆಟ್ಟಿ; ಕೋಶಾಧಿಕಾರಿಗಳಾಗಿ ಪ್ರಮೋದ್ ಆಚಾರ್ಯ, ಮಹೇಶ್, ರಾಘವೇಂದ್ರ ಆಚಾರ್ಯ, ಆಕಾಶ್ ಕುಂದರ್, ವಸಂತ ಪೂಜಾರಿ, ಮಂಜುನಾಥ ಸಿದ್ಧನಹಿತ್ಲು, ರಾಜೇಂದ್ರ ಪೂಜಾರಿ, ಕಾರ್ತಿಕ್ ಶೆಟ್ಟಿ, ಅಭಿಷೇಕ್; ಲೆಕ್ಕ ಪರಿಶೋಧಕರಾಗಿ ಗಣೇಶ ಜಟ್ಟಿಹಿತ್ಲು, ಮಹೇಂದ್ರ ಆಚಾರ್ಯ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ದೇವರಾಜ ಆಚಾರ್ಯ, ಗೋವಿಂದರಾಜ ಆಚಾರ್ಯ, ಲಕ್ಷ್ಮಣ ಚಂದನ್, ಸುದೇಶ್, ರಾಜಶೇಖರ, ಶ್ರೀನಿವಾಸ ಆಚಾರ್ಯ, ಗುರುಪ್ರಸಾದ್, ಸಂತೋಷ್, ರವಿದಾಸ್, ದಯಾನಂದ ಚಂದನ್;…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟತಟ್ಟು ಗ್ರಾಮಪಂಚಾಯತ್ ಕೋಟ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.)ದ ಸಹಭಾಗಿತ್ವದಲ್ಲಿ ಕಳೆದ ಹನ್ನೆರಡು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ. ಈಗಾಗಲೇ ಶ್ರೀಯುತರಾದ ವೀರಪ್ಪ ಮೊಯ್ಲಿ, ವೆಂಕಟಾಚಲ , ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ.ಎಂ. ಹೆಗ್ಡೆಯವರಿಗೆ ಪ್ರದಾನ ಮಾಡಲಾಗಿರುತ್ತದೆ. ೨೦೧೭ನೇ ಸಾಲಿನಲ್ಲಿ ಸೃಜನಶೀಲತೆ ವ್ಯಕ್ತಿತ್ವದ ಬಹುಭಾಷಾ ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ ರೈ ಅವರನ್ನು ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಅಕ್ಟೋಬರ್ ೧೦ ರಂದು ಡಾ.ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ದಿನ ಡಾ.ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗುತ್ತದೆ. ಕಾರಂತರಂತೆ ರಂಗಭೂಮಿ, ಚಲನಚಿತ್ರ, ಸಾಂಸ್ಕೃತಿಕ-ಸಾಹಿತ್ಯಿಕ ಚಿಂತಕ, ಬಹುಭಾಷಾ ನಟ, ನಿಷ್ಠುರ ಗುಣಗಳನ್ನು ಮೈಗೂಡಿಸಿಕೊಂಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾರ್ವಜನಿಕ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಪದವಿಪೂರ್ವ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಹಾಜಿ.ಕೆ.ಮೊಹಿದ್ದೀನ್ ಬ್ಯಾರಿ ಪಿಯು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಕೊಂಡಿರುತ್ತಾರೆ. (ಸತತ ಮೂರು ವರ್ಷ ಪ್ರಥಮ ಸ್ಥಾನ) ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮ್ಮದ್, ಪ್ರಾಂಶುಪಾಲರಾದ ಡಾ.ಶಮೀರ್, ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಿತೇಶ್ ಶೆಟ್ಟಿ. ತರಬೇತುದಾರ ಇಲಿಯಾಸ್ ನಾವುಂದ ಹಾಗೂ ಕುಮಾರ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶಿರೂರಿನ ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕುಂದಾಪುರ ತಾಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಫುಟ್ ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾವು ಪಡೆದ ಟ್ರೋಫಿಯೊಂದಿಗೆ. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಉಪಸ್ಥಿತರಿದ್ದಾರೆ. ಇಲ್ಲಿನ ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಅವರ ಪ್ರತಿಭೆಯ ಪ್ರದರ್ಶನಕ್ಕೆ ಸ್ಪೂರ್ತಿ ನೀಡಿದರೆ ಅವರಿಗೆ ವೇದಿಕೆಗಳಲ್ಲಿ ಅವಕಾಶ ನೀಡಿದರೆ ಅವರು ಭಾಷೆ ಹಾಗೂ ಸಮಾಜದ ಅಭಿವೃದ್ಧಿಗೆ ಶಕ್ತಿಯಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಇಂದು ಅಪಾರ ಪ್ರತಿಭೆ ಇದ್ದು, ಅವರಿಗೆ ಪಾಠೇತರ ಉತ್ತಮ ವಿಷಯಗಳಲ್ಲಿ ಆಸಕ್ತಿ ಮೂಡುವಂತೆ ಅವಕಾಶ ನೀಡಿದರು. ವ್ಯಕ್ತಿತ್ವ ವಿಕಸನವಾಗುತ್ತದೆ. ಅವರಿಂದ ಭಾಷೆಯ ಅಭಿವೃದ್ದಿ ಆಗುವಂತೆ ಮಾಡುವ ಪ್ರಯತ್ನ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಜೈ ಕೊಂಕಣಿ ಸಂಸ್ಥೆ ಏರ್ಪಡಿಸಿದ ಕೊಂಕಣಿ ವಿದ್ಯಾರ್ಥಿ ಸಮ್ಮೇಳನ ಪ್ರತಿಭಾ ಸಮರ್ಪಣಾ ಸಾರ್ಥಕವಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ್ ಹೇಳಿದರು. ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಕೊಂಕಣಿ ವಿದ್ಯಾರ್ಥಿ ಸಮ್ಮೇಳನ ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು. ಶ್ರೇಯಾ ಎಸ್.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶೇಟ್ ಜ್ಯುವೆಲ್ಲರ್ ಮಾಲಕ ಬಿ.ಸುಧೀಂದ್ರ ಶೇಟ್ ಪ್ರಧಾನ ಅತಿಥಿಯಾಗಿ ಭಾಗವಹಿಸಿ ಜಾಗಟೆ ಬಾರಿಸಿದರು. ಫ್ಯಾನ್ಸಿಟಾ ಸಮ್ಮೇಳನ ಧ್ವಜ ಹಾರಿಸುವ ಮೂಲಕ ಸಮ್ಮೇಳನಕ್ಕೆ…
