ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವ್ಯಕ್ತಿ, ಉದ್ಯಮ, ಸಂಸ್ಥೆ, ಸರಕಾರ ಯಾವುದೇ ಆಗಲಿ ಆರ್ಥಿಕ ಶಿಸ್ತು ಸರಿಯಾಗಿಲ್ಲದಿದ್ದಲ್ಲಿ ಸಂಪತ್ತಿನ ಕುಸಿತ ಅನಿವಾರ್ಯ. ದೂರದೃಷ್ಟಿ, ಅಧ್ಯಯನವಿಲ್ಲದಿದ್ದರೆ, ಅರ್ಥ ಸಚಿವರೂ ವಿಫಲರಾಗುತ್ತಾರೆ. ಉದ್ಯಮಕ್ಕಾಗಿ ಪಡೆದ ಆರ್ಥಿಕ ನೆರವು ಮರಪಾವತಿಯಲ್ಲಿ ಗಮನ ಹರಿಸದ ಉದ್ಯಮಿಗಳು, ವೃತ್ತಿ, ಉದ್ಯಮಕ್ಕಾಗಿ ಪಡೆದ ಸಾಲವನ್ನು ಅನುಪಯುಕ್ತ ಕಾರ್ಯಕ್ಕೆ ಬಳುವ ಮಾಲಕರು, ಸಾಲ ನೀಡಿಕೆ ಹಾಗೂ ವಸೂಲಾತಿ ವಿಷಯದಲ್ಲಿ ಬೇಜವಾಬ್ದಾರಿತನ ತೋರುವ ಬ್ಯಾಂಕ್ ಆಡಳಿತ ಹಾಗೂ ಅಧಿಕಾರಿಗಳು, ದೇಶದಲ್ಲಿ ಆರ್ಥಿಕ ಕುಸಿತಕ್ಕೆ ಕಾರಣರಾಗುತ್ತಾರೆ. ಬ್ಯಾಂಕುಗಳಲ್ಲಿ ಎನ್ಪಿಎ ಸಮಸ್ಯೆ ಹೆಚ್ಚಲು ಕಾರಣ ಎಂಬ ವಿಷಯವೂ ಸೇರಿದಂತೆ “ಭಾರತದ ಆರ್ಥಿಕ ಸಂರಕ್ಷಣೆಯ ಅನ್ವೇಷಣೆ” ಬಗ್ಗೆ ಹಿರಿಯ ಚಿಂತಕ, ಲೇಖಕ ವಿ.ಮೋಹನರಾವ್ ಅವರ ಲೇಖನಗಳು ವಿಚಾರಪೂರ್ಣವಾಗಿವೆ” ಎಂದು ಮಾಜಿ ಸಚಿವರೂ, ಮಾಜಿ ಸಂಸದರೂ ಆದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು. ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಕುಂಭಾಶಿ ರಾಧಾಬಾ ವೆಂಕಟರಮಣ ಪ್ರಭು ರಂಗಮಂಟಪದಲ್ಲಿ “ಇನ್ಕ್ವೆಸ್ಟ್ ಆಫ್ ಎ ಸಸ್ಟೈನೆಬಲ್ ಇಂಡಿಯನ್ ಇಕಾನಮಿ” ಎಂಬ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನ ಸಭೆಯಲ್ಲಿ ಮಂಡಿಸಿರುವ 2020-21 ನೇ ಸಾಲಿನ ಕರ್ನಾಟಕ ಬಜೆಟ್ನಲ್ಲಿ ಉಡುಪಿ ಜಿಲ್ಲೆಗೆ ಯಾವೆಲ್ಲಾ ಯೋಜನೆಗಳನ್ನು ಘೋಷಿಸಲಾಗಿದೆ ಎನ್ನುವ ಸಂಕ್ಷಿಪ್ತ ಅಂಶಗಳು ಇಲ್ಲಿವೆ. ಕರಾವಳಿ ಜಿಲ್ಲೆಗಳ ಬಂದರು ಅಭಿವೃದ್ದಿ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ, ಅಡಿಕೆ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ ಪ್ರಾಶಸ್ತ್ಯ ನೀಡಲಾಗಿದೆ. ಬಜೆಟ್ನಲ್ಲಿರುವ ಕರಾವಳಿಯ ಪ್ರಮುಖ ಅಂಶಗಳು: * ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ‘ಕಿಂಡಿ ಅಣೆಕಟ್ಟು ಯೋಜನೆ’ಗಳ ವ್ಯಾಪಕ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್. * ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ. * ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ * ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವುಳಿ ಪಾರ್ಕ್. * ಉಡುಪಿಯ ಅಂಗಾರು ಕಟ್ಟೆ ಬಂದರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಸಿರು ಕೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆಯುವ ೧೪ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸಾಹಿತಿ ಅಂಬಾತನ ಮುದ್ರಾಡಿ ಹಾಗೂ ಎ.ಎಸ್.ಎನ್ ಹೆಬ್ಬಾರ್ ಅವರು ಚೇತನ ಫ್ರೌಡ ಶಾಲೆ ಹಂಗಾರಕಟ್ಟೆಯಲ್ಲಿ ಅನಾವರಣಗೊಳಿಸಿದರು. ಅನಾವರಣ ಮಾಡಿದ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ರವರು ಐರೋಡಿ ಗ್ರಾಮದ ಸಾಧಕರನ್ನು ಸ್ಮರಿಸಿ ವೈದೇಹಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಹಿರಿಯ ಸಾಹಿತಿ ಅಂಬಾತನ ಮುದ್ರಾಡಿ ಅವರು ಕನ್ನಡ ಸಾಹಿತ್ಯ ಹಾದಿಗಳ ಪಲ್ಲಟಗಳ ಬಗ್ಗೆ ವಿವರಿಸಿದರು. ಚೇತನಾ ಫ್ರೌಡ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಭರತ್ ಕುಮಾರ್ ಶೆಟ್ಟಿ ಹಾಗೂ ಕಾರ್ಯದರ್ಶಿ ಇಬ್ರಾಹೀಂ ಸಾಹೇಬ್ ಹಂಗಾರಕಟ್ಟೆ, ರೋಟರಿ ಮುಂದಿನ ವರುಷದ ನಿಯೋಜಿತ ಅಧ್ಯಕ್ಷರಾದ ರೊ.ರಾಜಾರಾಮ ಭಟ್, ಚೇತನಾ ಫ್ರೌಡಶಾಲೆಯ ಮುಖ್ಯೋಪಾಧ್ಯಯರಾದ ಗಣೇಶ್ ಜಿ, ಬಿ.ಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಐ.ಬಿ.ಪಿ.ಎಸ್ ಬ್ಯಾಂಕಿಂಗ್ ಪ್ರೊಬೇಷನರಿ ಮತ್ತು ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಉಡುಪಿ ಇವರ ಆಶ್ರಯದಲ್ಲಿ 2019-2020 ನೇ ಸಾಲಿನಲ್ಲಿ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ನುರಿತ ತರಬೇತಿ ಸಂಸ್ಥೆಗಳ ಮೂಲಕ 2 ತಿಂಗಳ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಪದವೀಧರ ಅಭ್ಯರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡು, 2 ಭಾವಚಿತ್ರದೊಂದಿಗೆ ಹೆಸರನ್ನು ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿಯವರ ಸಂಕೀರ್ಣ, ರಜತಾದ್ರಿ ಮಣಿಪಾಲ ದೂರವಾಣಿ ಸಂಖ್ಯೆ: 0820 – 2574869, 9480259790 ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ನೊವಲ್ ಕರೋನಾ ವೈರಸ್ ಬಗ್ಗೆ ಇತ್ತೀಚೆಗೆ ಎಲ್ಲಡೆ ವ್ಯಾಪಕವಾಗಿ ಕೇಳಿಬರುತ್ತಿದ್ದು, ಇದು ಹೊಸ ವೈರಸ್ ಪ್ರಬೇಧವಾಗಿದ್ದು, ಈ ಹಿಂದೆ ಮನುಷ್ಯರಲ್ಲಿ ಕಂಡು ಬಂದಿರಲಿಲ್ಲ, ತಜ್ಞರ ಪ್ರಕಾರ ಇದು ಪ್ರಾಣಿ ಪ್ರಬೇಧದಲ್ಲಿ ಹುಟ್ಟಿದ್ದು, ನಂತರ ಮನುಷ್ಯರಲ್ಲಿ ಹರಡಿದೆ, ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ವೈರಸ್ ಪೀಡಿತ ವ್ಯಕ್ತಿಯಿಂದ(ಕೆಮ್ಮ ಅಥವಾ ಸೀನಿನ ಮೂಲಕ) ಅಥವಾ ಕಲುಷಿತ ಕೈಗಳಿಂದ ಅನ್ಯ ಕರೋನ ವೈರಸ್ ತಳಿಗಳು ಒಬ್ಬರಿಂದ ಒಬ್ಬರಿಗೆ ಹರಡಲಿವೆ. ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಈ ರೋಗದ ಲಕ್ಷಣಗಳಾಗಿದ್ದು, ವೈರಸ್ ಸೋಂಕಿದ 14 ದಿನಗಳ ನಂತರ ರೋಗದ ಲಕ್ಷಣಗಳು ಕಂಡುಬರುತ್ತವೆ. ರೋಗ ಲಕ್ಷಣಗಳು ಕಂಡು ಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೆಪನ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ಸೋಕನ್ನು ದೃಡಪಡಿಸಿಕೊಳ್ಳಬಹುದು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ನಿಮ್ಮ ಕೈಯನ್ನು ಚೆನ್ನಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ಇವರು ಧಾರವಾಡದಲ್ಲಿ ನಡೆಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗುಜ್ಜಾಡಿ ಗ್ರಾಮದ ಕಂಚುಗೋಡು, ನಿವಾಸಿ ಶಿಕ್ಷಕ ನಾಗರಾಜ ಖಾರ್ವಿ 50ಮೀ ಬ್ರೆಷ್ಟ್ ಸ್ಟ್ರೋಕ್ ಚಿನ್ನ, 100ಮೀ ಬ್ರೆಷ್ಟ್ ಸ್ಟ್ರೋಕ್ ಚಿನ್ನ, 200ಮೀ ಬ್ರೆಷ್ಟ್ ಸ್ಟ್ರೋಕ್ ಬೆಳ್ಳಿ, 4×100 ಮೆಡ್ಲೆ ರಿಲೇಯಲ್ಲಿ ಬೆಳ್ಳಿ, 4×100 ಫ್ರೀ ಸ್ಟೈಲ್ ರಿಲೇ ಬೆಳ್ಳಿ ಪಡೆದಿರುತ್ತಾರೆ. ಇವರು ಸರಸ್ವತಿ ವಿದ್ಯಾಲಯ ಗಂಗೊಳ್ಳಿ, ಸರಕಾರಿ ಪ್ರಾಥಮಿಕ ಶಾಲೆ ಗುಜ್ಜಾಡಿ ಮತ್ತು ಕಂಚುಗೋಡಿನ ಹಳೆವಿದ್ಯಾರ್ಥಿ.. ಇವರಿಗೆ ರೇಷ್ಮೆ ಇಲಾಖೆಯ ನಿರೀಕ್ಷಕರಾದ ಬಿ.ಕೆ.ನಾಯ್ಕ್ , ಶಿವಾನಂದ ಗಟ್ಟಿ, ಲೋಕರಾಜ್ ವಿಟ್ಲ ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: 2019-20 ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪತ್ರ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕಬ್ಸ್-ಬುಲ್ ಬುಲ್, ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್ ರೇಂಜರ್ಸ್ ಸಾಧಕರಿಗೆ, ರಾಜ್ಯಪಾಲ ವಾಜುಬಾಯಿ ರೂಡಬಾಯಿ ವಾಲಾ ರವರು, ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು. ಕಲ್ಯಾಣ್ಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ (ಕಬ್), ಬೈಂದೂರು ತಾಲೂಕಿನ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಮೃತಿ (ಬುಲ್ ಬುಲ್), ಬೈಂದೂರು ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೈಭವ್ (ಸ್ಕೌಟ್ಸ್), ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಯ ಪ್ರೀತಿ(ಗೈಡ್ಸ್), ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಶ್ರೀಕರ ಆರ್.ಎನ್ (ರೋವರ್) ಹಾಗೂ ಕಾರ್ಕಳ ಮಂಜುನಾಥ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಕ್ಷೀತಾ (ರೇಂಜರ್) ಪ್ರಶಸ್ತಿ ಸ್ವೀಕರಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮಂಗಳೂರಿನ ವಿ ಅಂಡ್ ಜಿ ಇಂಡಸ್ಟ್ರೀಸ್ ಟೆಸ್ಟಿಂಗ್ ಲ್ಯಾಬೊರೋಟರಿಸ್ ಪ್ರೈ.ಲಿನ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡೀಸ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಗಿರೀಶ್ ಬಾಬು ಒಡಂಬಡಿಕೆಗೆ ಸಹಿ ಹಾಕಿದರು. ಈ ಒಡಂಬಡಿಕೆಯ ಪ್ರಕಾರ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸುಗಳನ್ನು ಕಾಲೇಜಿನಲ್ಲಿ ಆರಂಭಿಸಿಲಾಗುತ್ತದೆ. ಜತೆಗೆ ಎನ್.ಡಿ.ಟಿ ತಂತ್ರಜ್ಞಾನದ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸು ಆರಂಭಿಸಲಾಗುತ್ತದೆ. ಸಂಶೋಧನಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಮನ್ನಣೆಯನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ಕಾಲೇಜಿನ ಡೀನ್ ಡಾ. ಪ್ರವೀಣ್ ಜೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ್, ಪ್ರಾಧ್ಯಪಕ ಕೆ.ವಿ ಸುರೇಶ್ ಮತ್ತು ವಿ ಅಂಡ್ ಜಿ ಯ ವೆಂಕಟ ಸುಬ್ರಮಣಿಯನ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಶಿಕ್ಷಣದ ದ್ಯೇಯ ಉದ್ದೇಶ ಬಗೆಗಿನ ಅಲ್ಪ ಜ್ಞಾನವೇ ವಿದ್ಯಾರ್ಥಿಗಳನ್ನ ನಿರುತ್ಸಾಹರನ್ನಾಗಿ ಮಾಡುತ್ತದೆಯೆ ಹೊರತು ಶಿಕ್ಷಣವಲ್ಲ ಎಂದು ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಮನೋಜ್, ನವೀನ್ ಮತ್ತು ಸಮರ್ಥ್ ರೂಪಿಸಿದ ವಿಸ್ಠಿ ಆಪ್ನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಕೇವಲ ಒಂದೇ ಉದ್ದೇಶದಿಂದ ಸಂಘಟಿತವಾದವಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲೆಂದು ವಿವಿಧ ಬಗೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತವೆ. ಆ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಒಂದು ಕಂಪನಿಯನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ, ಆದರೆ ನಮ್ಮ ವಿದ್ಯಾರ್ಥಿಗಳು ಆದರತ್ತ ಹೆಜ್ಜೆ ಇಟ್ಟಿದ್ದಾರೆ. ಮೊದಲ ಹಂತದಲ್ಲಿ ಸುಲಭವೆನಿಸುವ ವಿಷಯಗಳು ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳನ್ನ ತಂದೊಡ್ಡುತ್ತವೆ. ಅವೆಲ್ಲವನ್ನು ದಾಟಿ ಮುಂದೆ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಸ್ಠಿ ಕಂಪನಿ ಪ್ರತಿಯೊಬ್ಬರನ್ನು ತಲುಪಿ, ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಬ್ರಹ್ಮರಥೋತ್ಸವದ ಕೊನೆಯ ದಿನವಾದ ಮಂಗಳವಾರ ಸಂಜೆ ಅವಭೃತ ಉತ್ಸವ ವಿಜೃಂಭಣೆಯಿಂದ ಜರಗಿತು. ಮಂಗಳವಾರ ಸಂಜೆ ಅವಭೃತ ಉತ್ಸವ, ಧ್ವಜ ಅವರೋಹಣ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನುಷ್ಠಾನಗಳು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ಮತ್ತು ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ನೇತೃತ್ವದಲ್ಲಿ ನಡೆಯಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಅರ್ಚಕರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಹಾಗೂ ಭಜಕರು ಉತ್ಸವದಲ್ಲಿ ಪಾಲ್ಗೊಂಡು ಮೊದಲಾದವರು ಶ್ರೀದೇವರ ಪ್ರಸಾದ ಸ್ವೀಕರಿಸಿದರು.
