Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಮಧ್ಯಸ್ಥಿಕೆದಾರರ ಮತ್ತು ಸಂಧಾನಕಾರರ ದಿನಾಚರಣೆ ಕುಂದಾಪುರ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಇದರ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಯಾವುದೇ ಪ್ರಕರಣಗಳನ್ನು ಸಂಧಾನ ಮಾಡುವ ಮೊದಲು ಮಧ್ಯಸ್ಥಿಕೆದಾರರು ಪಕ್ಷಗಾರರ ಮನೋಸ್ಥಿತಿಯನ್ನು ಮೊದಲಿಗೆ ಅರಿತು ಸಂಧಾನ ಪ್ರಕ್ರಿಯೆಯನ್ನು ನಡೆಸಿದರೆ ಅವರು ನಡೆಸಿರುವ ಸಂಧಾನ ಯಶ್ವಸಿಯಾಗಲು ಸಾಧ್ಯ. ಎಂದು ಹೇಳಿದರು. ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಧ್ಯಸ್ಥಿಕೆಯಿಂದ ರಾಜಿಯಾದ ಪ್ರಕರಣಗಳಲ್ಲಿ ಸೋಲು-ಗೆಲುವಿನ ಪ್ರಶ್ನೆ ಉದ್ಭವಿಸದೇ ಇರುವುದರಿಂದ ಕಕ್ಷಿಗಾರರಲ್ಲಿ ದ್ವೇಷ ಭಾವನೆ ಇರುವುದಿಲ್ಲ ಬದಲಾಗಿ ಇಬ್ಬರ ನಡುವೆ ಸಾಮರಸ್ಯದ ಭಾವನೆ ಮೂಡುದಲ್ಲದೇ ನ್ಯಾಯಾಲಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು, ತಗ್ಗರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಜಾಗ/ಖಾಸಗಿ ಜಾಗ ಗುರುತಿಸಲು ಕಂದಾಯ ನಿರೀಕ್ಷಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮತಿ ಸಭೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರೊಡನೆ ಜಂಟಿ ನಡೆಸಲು ಜಿಲ್ಲಾ ಯೋಜನಾ ನಿರ್ದೇಶಕರು ನೀಡಿದ ಸೂಚನೆಯಂತೆ ಈ ಬಗ್ಗೆ ಕೂಡಲೇ ಸಭೆಯನ್ನು ಸಂಯೋಜಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸ್ಥಳೀಯಾಡಳಿತವನ್ನು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪರ ತಾಲೂಕು ಸಮಿತಿ ಮತ್ತು ಬೈಂದೂರು ತಗ್ಗರ್ಸೆ ಗ್ರಾಮಗಳ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬಡ ನಿವೇಶನ ರಹಿತರಿಂದ ಭೂಮಿ ಹಕ್ಕಿಗಾಗಿ ಪಡೆದ ಅರ್ಜಿಗಳನ್ನು ಗ್ರಾಮ ಪಂಚಾಯತ್ ಕಛೇರಿಗೆ ಹಸ್ತಾಂತರಿಸುವ ಹೋರಾಟ ಕಾರ್ಯಕ್ರಮ ಸಭೆಯಲ್ಲಿ ಅವರು ಮಾತನಾಡಿದರು. ಡೀಮ್ಡ್ ಅರಣ್ಯ ಪ್ರದೇಶ, ಗೋಮಾಳ ಪ್ರದೇಶದಲ್ಲಿ ವಾಸವಾಗಿರುವ ಬಡನಿವೇಶನ ರಹಿತರ ಕುಟುಂಬಕ್ಕೆ ಹಕ್ಕು ಪತ್ರ ಕೊಡಲು ಭೂಕಂದಾಯ ಕಾಯಿದೆ ತಿದ್ದುಪಡಿ ಮಾಡಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣ, ಉದ್ಯೋಗ ಎಲ್ಲದರಿಂದ ಬದುಕು ಸಾಗಿಸುವ ಪಥದಲ್ಲಿ ಆರೋಗ್ಯದ ಸಂಪಾದನೆಯನ್ನು ಮರೆಯುವಂತಿಲ್ಲ. ಇಂದಿನ ಒತ್ತಡದ ಬದುಕಲ್ಲಿ ಆರೋಗ್ಯ ಅತೀ ಅವಶ್ಯ, ಆ ಸಂಪತ್ತಿಗೆ ಯೋಗ ಸರ್ವ ಶ್ರೇಷ್ಠ ಮಾರ್ಗವಾಗಿದ್ದು ಇದರ ಪಾಲನೆಯಿಂದ ಮಾನಸಿಕ ದೈಹಿಕ ಕ್ಷಮತೆ ವೃದ್ಧಿಯಾಗುತ್ತದೆ. ಮಾತ್ರವಲ್ಲ ಕ್ಯಾನ್ಸರ್ ನಂತಹ ಘನ ಕಾಯಿಲೆಯಿಂದಲೂ ದೂರ ಉಳಿಯಲು ಸಾಧ್ಯವಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಣಾಧಿಕಾರಿ ಬಾರ‍್ಕೂರು ಶಂಕರನಾರಾಯಣ ಶಾಸ್ತ್ರಿ ಹೇಳಿದರು. ಇತ್ತೀಚೆಗೆ ಉಪ್ಪುಂದ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸಭಾ ಭವನದಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ೭೯/೮೦ರ ಬ್ಯಾಚಿನ ವಿದ್ಯಾರ್ಥಿಗಳ ಸವಿ ಸವಿ ನೆನಪು ಸಮ್ಮೇಳನ ಉದ್ಘಾಟಿಸುತ್ತಾ ಮಾತನಾಡಿದ ಅವರು ಹಳೆಯ ನೆನಪು ಹೊಸ ಹೆಜ್ಜೆಗೆ ಶಕ್ತಿಯನ್ನು ತುಂಬುವ ಸಾಮರ್ಥ್ಯಹೊಂದಿರುತ್ತದೆ ಆ ಶಕ್ತಿಯನ್ನು ವಯೋವೃದ್ಧ ಗುರುಗಳಿಗೆ ನೀಡಿ ನಮ್ಮ ಆತ್ಮಾವಲೋಕನ ನಾವು ಮಾಡಿಕೊಳ್ಳುವಂತೆ ಮಾಡಿದ್ದೀರಿ ಎಂದರು. ೩೭ ವರ್ಷದ ಬಳಿಕ ಪುನಃ ಒಂದಾದ ಈ ಪುನರ್ಮಿಲನದ ಸಭೆಯ ಅಧ್ಯಕ್ಷತೆ ವಹಿಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ರಕ್ತನಿಧಿ ಕೆಎಂಸಿ ಮಣಿಪಾಲ ಜಿಲ್ಲಾಡಳಿತ ಉಡುಪಿ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಕೆ.ಕೆ ಕಾಂಚನ್ ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ಮಂಜುನಾಥ ಎನ್.ಚಂದನ್ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಅಧ್ಯಕ್ಷ ಗಣೇಶ ಕಾಂಚನ್, ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು, ಕೆಎಂಸಿ ರಕ್ತನಿಧಿಯ ವೈದ್ಯ ಡಾ|ಗಣೇಶ್ ಮೋಹನ್, ಮೊಗವೀರ ಮುಂದಾಳು ಮಂಜು ನಾಯ್ಕ್ ಗುಜ್ಜಾಡಿ, ಮಹಾವಿಷ್ಣು ಯುವಕ ಮಂಡಲದ ಸಂಚಾಲಕ ಚಂದ್ರ ನಾಯ್ಕ್, ಮಾನಸ ಯುವತಿ ಮಂಡಲದ ಅಧ್ಯಕ್ಷೆ ಶ್ಯಾಮಲ ಚಂದನ್, ಶ್ರೀ ಹಾಗುಳಿ ಸೇವಾ ಸಮಿತಿಯ ಅಧ್ಯಕ್ಷ ರಮೇಶ ಕಾಂಚನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನೂತನ ಶಿಲಾದೇಗುವ ರಚನೆಯ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಡುಕೋಣೆ ನರಸಿಂಹ ಪೂಜಾರಿ, ಉಪಾಧ್ಯಕ್ಷರಾಗಿ ಸತೀಶ ಕೊಠಾರಿ ಮುಂಬೈ, ಡಾ. ಬಾಲಚಂದ್ರ ಭಟ್, ಬಿ. ಕುಮಾರ ಖಾರ್ವಿ, ಪ್ರವೀಣಕುಮಾರ್, ದೇವರಾಜ ಬೈಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪುಂಡಲೀಕ ನಾಯಕ್, ಸಹಕಾರ್ಯದರ್ಶಿಯಾಗಿ ಶ್ರೀನಿವಾಸ ಉಬ್ಜೇರಿ, ಕೋಶಾಧಿಕಾರಿಯಾಗಿ ರಮೇಶ ಪೈ ಎನ್. ಗೌರವ ಸಲಹೆಗಾರರಾಗಿ ಗೋವಿಂದ ಎಂ. ಮಟ್ನಕಟ್ಟೆ, ರಾಜೀವ ಭಟ್ ನಂದನವನ ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಿ. ಎಸ್. ಶ್ಯಾನುಭೋಗ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಂದರ ಕೊಠಾರಿ, ಸಮಿತಿಯ ಸದಸ್ಯರು, ಅರ್ಚಕ ರಾಘವೇಂದ್ರ ಮಧ್ಯಸ್ಥ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಂಧಿ ಜಯಂತಿ ಪ್ರಯುಕ್ತ ಮಾದಕ ವಸ್ತುಗಳ ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಅವುಗಳನ್ನು ನಿಯಂತ್ರಿಸುವ ಕುರಿತಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರಶಸ್ತಿ ಪುರಸ್ಕೃತ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಧೂಮಪಾನ, ಮಧ್ಯಪಾನ ಮತ್ತು ಡ್ರಗ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳು ಕಿರುನಾಟಕವನ್ನು ಪ್ರದರ್ಶಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಮತ್ತು ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕರಾದ ಜಯಶೀಲ್ ಕುಮಾರ್, ರಕ್ಷಿತ್ ರಾವ್ ಗುಜ್ಜಾಡಿ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಹೇಶ್ ಬಾಬು ಕಾರ್ಯಕ್ರಮವನ್ನು ಸಂಯೋಜಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಅಭಿಯೋಗ ಇಲಾಖೆ ಕುಂದಾಪುರ, ಹಿರಿಯ ನಾಗರಿಕರ ವೇದಿಕೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಕುಂದಾಪುರದ ಹೊಟೇಲ್ ಪಾರಿಜಾತ ಸ್ನೇಹ ಸಭಾಂಗಣದಲ್ಲಿ ಜರುಗಿತು. ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ ಬಣಕರ ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಹಿರಿಯರ ದಿನವನ್ನು ಆಚರಿಸುವ ಅಗತ್ಯ ಇತ್ತೇ ಇನ್ನುವ ಪ್ರಶ್ನೆ ಎಲ್ಲರಿಗೂ ಮೂಡುವುದು ಸಹಜ. ಆದರೆ ಇಂದು ಹಿರಿಯ ನಾಗರಿಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಹಾಗೂ ಅವರಿಗೆ ಸಾಮಾಜಿಕ ಬೆಂಬಲ ಸೂಚಿಸಲು ಸರಕಾರ ಈ ಕಾನೂನುನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಚಿಕ್ಕಿಂದಿನಲ್ಲೇ ಸಂಸ್ಕ್ರತಿಯ ಬಗ್ಗೆ ಅರಿವು ಉಂಟು ಮಾಡುವ ಬಗ್ಗೆ ಜಾಗೃತಿ ಮೂಡಿಸಿದರೆ ಇಂತಹ ಕಾನೂನುನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲವಾಗಿತ್ತು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಖರ ಸಂಚಿಕೆಯಲ್ಲಿ ಸಂಘಟಿತ ಪ್ರಯತ್ನವಿದೆ. ಸಂಚಿಕೆಯಲ್ಲಿ ವಿದ್ಯಾರ್ಥಿಗಳ ಒಳನೋಟ ವ್ಯಕ್ತವಾಗಿದೆ. ಸಾಹಿತ್ಯದ ಕುರಿತು ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಪ್ರಜೆಯಾಗಿ ಗುರುತಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೊಸ ದಿಗಂತ ಕನ್ನಡ ದಿನಪತ್ರಿಕೆ ಮಂಗಳೂರು ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಎಸ್. ಪ್ರಕಾಶ ಹೇಳಿದರು. ಅವರು ೨೦೧೬-೧೭ನೇ ಶೈಕ್ಷಣಿಕ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರವನ್ನು ಅನಾವರಣಗೊಳಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಭಾರತೀಯ ಮಹಿಳೆಯರಿಗೆ ವಿಶ್ವದಾದ್ಯಂತ ಗೌರವ ಸ್ಥಾನಮಾನವಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಯ ಪರಂಪರೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ ಎಂದು ಮುಖ್ಯ ಅತಿಥಿಗಳಾದ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಹೇಳಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಸೀತರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಚನಾತ್ಮಕ ಮತ್ತು ಸಕಾರಾತ್ಮಕತೆ ಚಿಂತನೆಯೊಂದಿಗೆ ಬದುಕು ಸಾಗಿಸಿದರೆ, ನಿವೃತ್ತಿಯಾದರೂ ಖಾಲಿತನ ಕಾಡದು. ನಮ್ಮ ಜೀವನದ ಒಂದು ಭಾಗವಾಗಿ ನಾವು ಮಾಡುವ ವೃತ್ತಿ ಬದುಕಿಗೆ ಮಾತ್ರ ನಿವೃತ್ತಿ ಸೀಮಿತವಾಗಿರುತ್ತದೆಯೇ ಹೊರತು ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಜೀವನಕ್ಕಲ್ಲ ಎಂದು ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು. ಬೈಂದೂರು ಅಂಚೆ ಕಛೇರಿಯಲ್ಲಿ ಸ್ವಯಂ ಸೇವಾ ನಿವೃತ್ತಿ (ವಿಆರ್‌ಎಸ್) ಪಡೆದ ಅಂಚೆಪೇದೆ (ಪೋಷ್ಟ್‌ಮ್ಯಾನ್) ಎಸ್. ಶಾಂತಾನಂದ ಪ್ರಭು ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಭು ದಂಪತಿಗಳನ್ನು ಅಭಿನಂದಿಸಿ ಮಾತನಾಡಿದರು. ಸಾಮಾನ್ಯರೊಂದಿಗೆ ಬೆರೆಯುವುದು, ಅವರ ನೋವು ನಲಿವುಗಳಲ್ಲಿ ಭಾಗಿಯಾಗುವುದರಿಂದ ಜನರ ಹೃದಯಕ್ಕೆ ಹತ್ತಿರವಾಗಬಲ್ಲರು ಮತ್ತು ಸರಳವಾಗಿ ಜನರ ಮಧ್ಯೆ ಹೋಗುವುದರಿಂದಲೇ ಜನಮನ್ನಣೆ ಗಳಿಸಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಶಾಂತಾನಂದ ಪ್ರಭು ಇವರು ಕ್ರೀಯಾಶೀಲ ವ್ಯಕ್ತಿತ್ವ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಜನಪರ ನಿಲುವನ್ನು ಹೊಂದಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಅಂಚೆ ಅಧೀಕ್ಷಕ ರಾಜಶೇಖರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸತ್ಯನಾರಾಯಣ ಹೊಳೆಬಾಗ್ಲು ಕೊಡುಗೆಯಾಗಿತ್ತ ಸುಮಾರು ರೂ. ೧ ಲಕ್ಷ ಮೌಲ್ಯದ ಸ್ಮಾರ್ಟ್‌ಕ್ಲಾಸ್ ತಂತ್ರಜ್ಞಾನ ವ್ಯವಸ್ಥೆಯನ್ನು ಅವರು ಮಂಗಳವಾರ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು ಶಾಲೆಯ ಹಳೆ ವಿದ್ಯಾರ್ಥಿಗಳು ಕಲಿತ ಶಾಲೆಯ ಋಣ ತೀರಿಸಬೇಕಾದರೆ ಅಲ್ಲಿನ ಅಗತ್ಯಗಳನ್ನು ಈಡೇರಿಸುವ ಮೂಲಕ ಶಾಲೆ ಗುಣಮಟ್ಟದ ಶಿಕ್ಷಣ ನೀಡಲು ಕಾರಣರಾಗಬೇಕು ಎಂದರು. ಶಿಕ್ಷಣ ಇಲಾಖೆಯ ಪರವಾಗಿ ಕೊಡುಗೆಯನ್ನು ಸ್ವೀಕರಿಸಿದ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಮಾತನಾಡಿ ಮರವಂತೆ ಶಾಲೆಯ ಹಳೆವಿದ್ಯಾರ್ಥಿ ಸಂಘ ಸಕ್ರಿಯವಾಗಿದ್ದು ಕಳೆದ ವರ್ಷದಿಂದ ಬಸ್ ವ್ಯವಸ್ಥೆ ಕಲ್ಪಿಸಿದೆ. ಹಳೆ ವಿದ್ಯಾರ್ಥಿಯಾಗಿರುವ ಸತ್ಯನಾರಾಯಣ ಈಗ ನೀಡಿರುವ ಸ್ಮಾರ್ಟ್‌ಕ್ಲಾಸ್ ಮೂಲಕ ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಬಹುದಾಗಿದೆ. ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಕೆಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನುನೆರ ಕಾರ್ಯಗತಗೊಳಿಸಲು ಹಿಂದೆ ಇಲ್ಲಿ ಕಲಿತು ಉತ್ತಮ ಸ್ಥಿತಿಯಲ್ಲಿರುವ ಹಳೆ ವಿದ್ಯಾರ್ಥಿಗಳು ನೆರವು ನೀಡಬೇಕು ಎಂದು ಹೇಳಿ ದಾನಿಗೆ ಕೃತಜ್ಞತೆ ಸಲ್ಲಿಸಿದರು. ಗ್ರಾಮ…

Read More