ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪು ತಿಳಿದಿರಬೇಕಾದ ಅವಶ್ಯಕತೆ ಇದೆ. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದ ಗುಂಪು ಅಗತ್ಯವಾಗಿ ತಿಳಿದಿರಬೇಕು. ರಕ್ತದಾನ ಮಾಡುವ ಸಂದರ್ಭ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರಕ್ತ ಗುಂಪು ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ತಕ್ತ ಗುಂಪು ವರ್ಗೀಕರಣ ತಪಾಸಣೆ ನಡೆಸಿ ಮುಂದಿನ ಭದ್ರ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು ಎಂದು ತ್ರಾಸಿ ಚರ್ಚಿನ ಧರ್ಮಗುರು ಚಾರ್ಲ್ಸ್ ಲೂಯಿಸ್ ಹೇಳಿದರು. ತ್ರಾಸಿಯ ಕ್ರೈಸ್ತ ದ ಕಿಂಗ್ ಚರ್ಚಿನ ಅಂತರ ಧರ್ಮೀಯ ಆಯೋಗ, ಚರ್ಚಿನ ಆರೋಗ್ಯ ಮಂಡಳಿ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಲೈಫ್ಕೇರ್ ಡಯಾಗ್ನೋಸ್ಟಿಕ್ ಸೆಂಟರ್ ಕುಂದಾಪುರ ಇವರ ಸಹಯೋಗದೊಂದಿಗೆ ತ್ರಾಸಿ ಚರ್ಚಿನ ಮಿಲೇನಿಯಂ ಸಭಾಭವನದಲ್ಲಿ ಭಾನುವಾರ ಜರಗಿದ ಉಚಿತ ರಕ್ತ ಗುಂಪು ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾರದಾ ಡಿ. ಬಿಜೂರು, ಕುಂದಾಪುರ ಲೈಫ್ಕೇರ್ ಡಯಾಗ್ನೋಸ್ಟಿಕ್ ಸೆಂಟರ್ನ ಜಗದೀಶ, ತ್ರಾಸಿಯ ಕ್ರೈಸ್ತ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಪ್ರಸ್ತುತ ದಿನಗಳಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಂತಹ ವೈದ್ಯಪದ್ಧತಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದು ಆಯುಷ್ ಜಿಲ್ಲಾ ಮುಖ್ಯಸ್ಥರಾದ ಡಾ. ಮಹಮ್ಮದ್ ಇಕ್ಬಾಲ್ ಹೇಳಿದರು. ಅವರು ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 15ನೇ ಶೈಕ್ಷಣಿಕ ವರ್ಷಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಪೆÇೀಷಕರನ್ನುದ್ದೇಶಿಸಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ವರ್ಷದಿಂದ ನಾಲ್ಕನೇ ವರ್ಷದವರೆಗೆ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ವೇತಾ ನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು. ಅನಾಮಿಕ ವಂದಿಸಿದರು ಪ್ರಕೃತಿ ಚಿಕಿತ್ಸಾ ದಿನಾಚರಣೆ: ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಆಳ್ವಾಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಮೌಂಟ್ ರೋಜರಿ ಚಾರಿಟೇಬ್ಲ್ ಟ್ರಸ್ಟ್ ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಪುಷ್ಪನಮನ ಸಲ್ಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಎಮ್. ಜಿ ಬಾನಾವಳಿಕರ್ ಪುಷ್ಪ ನಮನ ಸಲ್ಲಿಸಿ ಗಾಂಧಿಜಿ ಹಾಗೂ ಶಾಸ್ತ್ರಿಯವರ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶಂಕರ ಪೂಜಾರಿ ಹಾಗೂ ಮೇಲ್ವಿಚಾರಕರಾದ ಎ.ಬಿ.ಪೂಜಾರಿ ಉಪಸ್ಥಿತರಿದ್ದು, ಪುಷ್ಪ ನಮನ ಸಲ್ಲಿಸಿದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ವಧರ್ಮ ಭಜನೆಯನ್ನು ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು. ಪ್ರತಿದಿನ ಭಜನೆ ವಿಶೇಷ ಪೂಜೆ, ಅಲಂಕಾರ ಸೇವೆ, ಚಂಡಿಕಾಯಾಗ, ರಂಗಪೂಜೆಗಳಲ್ಲಿ ಭಕ್ತಾದಿಗಳು ಪಾಲ್ಗೊಂಡರು. ದೇವಳದ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಕೆ.ಬಿ, ಶ್ರೀಧರ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ ಸ್ತ್ರೀ ಸಂಘಟನೆ ನೇತೃತ್ವದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಜರುಗಿತು. ಉಡುಪಿ ಸಂಪದ ಕೇಂದ್ರ ನಿರ್ದೇಶಕ ರೆ. ಫಾ. ರೆಜಿನಾಲ್ಡ್ ಪಿಂಟೋ, ರೆ. ಫಾ ರೊನಾಲ್ಡ್ ಮಿರಾಂದ, ಉಪಾಧ್ಯಕ್ಷ ಸ್ಟಾನಿ ಮಾಸ್ಟರ್ ದಾನಿ ತಿಯೋಕರ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು. ಹಿರಿಯ ನಾಗರಿಕರಿಗೆ ವಿವಿಧ ಸ್ವರ್ಧೆಗಳು ಜರುಗಿದವು. ಶಾಂತಿ ಡಯಾಸ್ ಸ್ವಾಗತಿಸಿ ಜೋಯಲಾಸ್ ರೋಡ್ರಿಗಸ್ ವಂದಿಸಿದರು. ವೀಣಾ ಫೆರ್ನಾಂಡಿಸ್ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕವನಗಳನ್ನು ಹಾಡುವಾಗ ಸಾಹಿತ್ಯಕ್ಕೆ ಮುತ್ತು ಕೊಟ್ಟು, ಪದ-ಪದ ಪ್ರಸ್ತಾರ ಹಾಕಿ ಪ್ರಸ್ತುತ ಪಡಿಸಿದರೇ ಕವಿಯ ಆಶಯ ಪೂರ್ತವಾಗುವುದು. ಕವಿ ಅಡಿಗರ ಆಯ್ದ ಹಾಡುಗವನಗಳನ್ನು ಸಂಗ್ರಹಿಸಿ ಕವಿಯ ಆಶಯ ಮತ್ತು ಕವನದ ಒಟ್ಟು ಅರ್ಥ ಸ್ಫುರಿಸಲು ಅನುವಾಗುವಂತೆ ಸುವಿಚಾರ ಬಳಗದ ಯು. ವರಮಹಾಲಕ್ಷ್ಮೀ ಹೊಳ್ಳ ಮತ್ತು ತಂಡ ಹಾಕಿದ ಮೇಲ್ಪಂಕ್ತಿ ಕವಿ ಅಡಿಗರ ಜನ್ಮ ಶತಾಬ್ಧಿಯ ಉತ್ತಮ ಕಾಣೆಯಾಗಿದೆ. ಇದು ಐತಿಹಾಸಿಕವಾಗಿದ್ದು ಇದರ ಮಹತ್ವ ದರ್ಶಕದ ಬಳಿಕ ಅರಿವಿಗೆ ಬರಬಹುದು. ಎಂದು ಸಿರಿಮೋಗೇರಿ ಸಮಷ್ಠಿ ವೇದಿಕೆಯ ಸಂಚಾಲಕ ಎಂ .ಜಯರಾಮ್ ಅಡಿಗರು ನುಡಿದರು. ಉಪ್ಪುಂದದ ಸುವಿಚಾರ ಬಳಗವು ಕವಿ ಅಡಿಗರ ಜನ್ಮ ಶತಾಬ್ಧಿ ಕಾರ್ಯಕ್ರಮದಡಿ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಏರ್ಪಡಿಸಿದ ತಿಂಗಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಿದ್ದರು. ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮಾತನಾಡಿ ದೀಪದ ಬುಡದಲ್ಲಿ ಕತ್ತಲು, ಹಿತ್ತಲ ಗಿಡ ಮದ್ದಲ್ಲ ಗಾದೆಗಳು ಸುಳ್ಳಾಗುವಂತೆ ನಮ್ಮವರನ್ನು ಆಸ್ವಾದಿಸಿ, ಆನಂದಿಸಿ, ಗೌವರಸುವುದು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ದಿನಗಳಲ್ಲಿ ಹಿಂದೂ ಎಂದು ಹೇಳಿಕೊಂಡರೂ ಕೋಮುವಾದಿ ಎಂದು ಬಿಂಬಿಸುವ ವಾತಾವರಣ ಸೃಷ್ಠಿಯಾಗಿದೆ. ಹಿಂದೂ ಧರ್ಮವೆಂಬುದು ಒಂದು ಮತ, ಜಾತಿ ಹಾಗೂ ಪ್ರದೇಶಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಶ್ರೇಯಸ್ಸನ್ನು ಬಯಸುವ ಹಿಂದೂಗಳು ಎಂದಿಗೂ ಸಂಕುಚಿತ ಮನೋಭಾವದವರಾಗಲು ಸಾಧ್ಯವೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯಕಾರಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಬೈಂದೂರು ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡದ ಕಾರ್ಯಕರ್ತರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಚಿಂತನೆ ಹಾಗೂ ದೃಷ್ಠಿಕೋನವೇ ಭಿನ್ನವಾಗಿದ್ದು ಇಂತಹ ವೈಶಿಷ್ಟ್ಯವನ್ನು ಪ್ರಪಂಚದ ಯಾವುದೇ ದೇಶದಲ್ಲಿಯೂ ಕಾಣಲು ಸಾಧ್ಯವಿಲ್ಲ. ಗೋವನ್ನು ತಾಯಿ ಎಂದು ಪೂಜೆಸುವ, ನದಿನೀರಿನ ಮೂಲವನ್ನು ತೀರ್ಥ ಎಂದು ಸೇವಿಸುವ, ಭೂಮಿಯೆಂಬುದು ಕಲ್ಲು ಮಣ್ಣಿಗೂ ಮಿಗಿಲಾದದ್ದು ಎಂದು ಗೌರವದಿಂದ ಕಾಣುವುದು ನಮ್ಮ ದೇಶದ ಸಂಸ್ಕೃತಿ. ಇಲ್ಲಿನ ಸಂಪ್ರದಾಯಗಳಲ್ಲಿ ವೈರುಧ್ಯವಿದೆ ಆದರೆ ಸಂಸ್ಕೃತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತದ ಹುಟ್ಟೂರಲ್ಲಿ ಶಿವರಾಮ ಕಾರಂತರ ನೆನಪಿಗಾಗಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸ್ಮಾರಕ ಭವನ ಸಾರ್ಥಕ್ಯವನ್ನು ಕಂಡಿದೆ ತಪ್ಪಾಗಲಾರದು. ವಾರಕ್ಕೊಂದರಂತೆ ಇಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಸೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಮೂಲಕ ಈ ಪ್ರದೇಶದ ಉಡುಪಿ ಜಿಲ್ಲೆಯಲ್ಲಯೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕಾರಂತ ಭವನದಲ್ಲಿ ಇಂದಿನಿಂದ ಅಕ್ಟೋಬರ್ ೧೦ರ ವರೆಗೆ ನಿತ್ಯವು ಸಾಂಸ್ಕೃತಿಕ ಸಾಹಿತ್ಯಿಕ ಕಲೆ ಇವೇ ವಿಚಾರಗಳಿಂದ ಕೂಡಿದ ತಂಬೆಲರು ೨೦೧೭ ಸಾಹಿತ್ಯಿಕ ಸಾಂಸ್ಕೃತಿಕ ಸುಗ್ಗಿ ಉತ್ಸವ ನಡೆಯಲಿದೆ. ಕೋಟತಟ್ಟು ಗ್ರಾಮ ಪಂಚಾಯಿತಿಯಲ್ಲಿ ೨೦೧೧ರಲ್ಲಿ ಲೋಕಾರ್ಪಣೆಗೊಂಡ ಕೋಟ ಕಾರಂತ ಕಲಾಭವನ (ಕಾರಂತ ಥೀಂ ಪಾರ್ಕ್) ಕಾರಂತರು ನಲಿದಾಡಿದ ಹುಟ್ಟೂರ ಕೊಳ್ಕೆರೆಯಲ್ಲಿ ನಿರ್ಮಾಣಗೊಂಡಿದೆ. ಖ್ಯಾತ ಸಾಹಿತಿ ಕಾರಂತರಿಗೆ ಹುಟ್ಟೂರಲ್ಲಿಯೆ ಅವಿಸ್ಮರಣೀಯ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಿಗಳ ಹಾರೈಕೆ ಮತ್ತು ಡಾ.ಶಿವರಾಮ ಕಾರಂತರ ಅಪ್ಪಟ ಅಭಿಮಾನಿ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ…
ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಿದ ನಾನೋ ಫ್ಲೂಯಿಡ್ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಜಪಾನ್ ನ ಕುಮಾಮೊಟೊ ವಿವಿಯ ಸಹಾಯಕ ನಿರ್ದೇಶಕ ಮತ್ತು ಪ್ರಾಧ್ಯಾಪಕ ಡಾ. ಶುಯಿಚಿ ತೋರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ಶುಯಿಚಿ ತೋರಿ, ಇಂದಿನ ವಿದ್ಯಾರ್ಥಿಗಳು ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಾನೋ ಫ್ಲೂಯಿಡ್ ಕ್ಷೇತ್ರದಲ್ಲಿ ಆಗುತ್ತಿರುವ ಅನೇಕ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಅರಿತು ಅಧ್ಯಯನ ನಡೆಸಬೇಕು. ಆಳ್ವಾಸ್ ಮತ್ತು ಕುಮಾಮೊಟೊ ವಿವಿ ನಡುವಣ ಶೈಕ್ಷಣಿಕ ಒಪ್ಪಂದದಿಂದ ವಿದ್ಯಾರ್ಥಿ ವಿನಿಮಯ ಮತ್ತು ಉನ್ನತ ಸಂಶೋಧನೆ ಸಾಧ್ಯ ಎಂದು ಡಾ . ಶುಯಿಚಿ ತಿಳಿಸಿದರು . ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಈ ಸಂಶೋಧನಾ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ , ಉದ್ಯಮಿಗಳಿಗೆ ಮತ್ತು ಬೋಧಕರಿಗೆ ಉಪಯುಕ್ತವಾಗಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮತ್ತು ಕುಮಾಮೊಟೊ ವಿಶ್ವವಿದ್ಯಾಲಯ ನವೀನ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿದ್ದು ಜಪಾನಿನ ಉನ್ನತ ತಂತ್ರಜ್ಞಾನ ನಮಗೆ ಮಾರ್ಗದರ್ಶನವಾಗಬಲ್ಲುದು. ಸಮಾಜೋಪಯೋಗಿ…
ಮೂಡುಬಿದಿರೆ : ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸತತ 13ನೇ ಬಾರಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಆಳ್ವಾಸ್ನ ದೈಹಿಕ ಶಿಕ್ಷಣ ಕಾಲೇಜು ಎರಡು ವಿಭಾಗಗಳಲ್ಲೂ ದ್ವಿತೀಯ ಸ್ಥಾನಿಯಾಗಿದೆ. ಒಟ್ಟು 16 ವಿಭಾಗಗಳಲ್ಲಿ ನಡೆದಿರುವ ಸ್ಪರ್ಧೆಯಲ್ಲಿ ಪುರುಷರ 7 ಹಾಗೂ ಮಹಿಳೆಯರ 8 ವಿಭಾಗಗಳಲ್ಲಿ ಒಟ್ಟು 15 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆಯಿತು. ಆಳ್ವಾಸ್ ಕಾಲೇಜಿನ ಬಸವರಾಜ್ ಹಾಗೂ ಲಕ್ಷ್ಮೀ ರೇಡೇಕರ್ ಅತ್ಯುತ್ತಮ ಕುಸ್ತಿಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
