Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಇದರ ಸಹಯೋಗದಲ್ಲಿ ’ನನ್ನ ಮೆಚ್ಚಿನ ಪುಸ್ತಕ’ ಸ್ವರ್ಧೆ ನಡೆಯಿತು. ಅತಿಥಿಯಾಗಿದ್ದ ಲೇಖಕ ನರೇಂದ್ರ ಗಂಗೊಳ್ಳಿ ಮಾತನಾಡಿ ನಾವು ಯಾರದೋ ಒತ್ತಾಯಕ್ಕೆ ಮಣಿದು ಪುಸ್ತಕ ಓದದೇ, ನಮ್ಮ ಸ್ವಂತ ಆಸಕ್ತಿಯ ನೆಲೆಯಲ್ಲಿ ಓದಿ ತಿಳಿದುಕೊಳ್ಳಬೇಕು. ಇದರಿಂದ ನಮಗೆ ಇನ್ನೂ ಓದಬೇಕು, ತಿಳಿದುಕೊಳ್ಳಬೇಕು ಎನ್ನುವ ಹವ್ಯಾಸ ಬೆಳೆಯುತ್ತದೆ. ಆಗ ಸ್ವತಃ ಹೊಸತನದ ಹುಡುಕಾಟಕ್ಕೂ ನಾವೇ ತಯಾರಾಗುತ್ತೇವೆ ಎಂದು ಅಭಿಪ್ರಾಯಪಟ್ಟರು. ಯಾವುದೇ ಪುಸ್ತಕ, ವಿಷಯ, ವಸ್ತು ಅಥವಾ ಮನುಷ್ಯನೇ ಆಗಲಿ ಅವರನ್ನು ಒಂದೇ ಬಾರಿಗೆ ನೋಡಿ ನಿರ್ಧರಿಸದೇ ಮತ್ತೆ ಮತ್ತೆ ಅದರ ತಿರುಳನ್ನು ತಿಳಿದುಕೊಂಡು ಅದರ ಬಗ್ಗೆ ಅರ್ಥೈಸಿಕೊಳ್ಳಬೇಕು. ಅಲ್ಲದೇ ಸಾಹಿತ್ಯ ಅಥವಾ ಯಾವುದೇ ಪುಸ್ತಕವಾಗಲಿ ಅದನ್ನು ಓದಿದಷ್ಟು ನಮ್ಮ ಜ್ಞಾನ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ವಯಸ್ಸಿಗನುಸಾರವಾದ ಪುಸ್ತಕವನ್ನು ಓದಬೇಕೆ ಹೊರತು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವ ಅಥವಾ ಪಕ್ಷ, ಧರ‍್ಮ, ಜಾತಿ ಪರವಾಗಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕರಾವಳಿ ಯಕ್ಷ ಮಿತ್ರರು (ವಾಟ್ಸಾಪ್ ಬಳಗ ) ಇವರ ಆಶ್ರಯದಲ್ಲಿ 2ನೇ ವರ್ಷದ ಸವಿನೆನಪಿಗಾಗಿ ಅಶಕ್ತ ಹಾಗೂ ಪ್ರತಿಭಾನ್ವಿತ ಯಕ್ಷ ಕಲಾವಿದರಿಗೆ ಸಹಾಯ ಹಸ್ತ ಮತ್ತು ಸನ್ಮಾನ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಐ.ಟಿ ಕಾಲೇಜಿನ ಪ್ರೋಪೆಸರ್, ಯಕ್ಷ ಚಿಂತಕರು, ಹವ್ಯಾಸಿ ಭಾಗವತರಾಂದತಹ ಎಸ್.ವಿ ಉದಯ ಕುಮಾರ್ ಶೆಟ್ಟಿಯವರು ವಹಿಸಿದ್ದರು ಸೇವಾ ಸಹಕಾರಿ ಬ್ಯಾಂಕ್ ಮಂದಾರ್ತಿ ಇದರ ಅಧ್ಯಕ್ಷರಾದ ಗಂಗಾಧರ ಶೆಟ್ಟಿಯವರು, ಮೊಗವೀರ ಯುವ ಸಂಘಟನೆ ಮಂದಾರ್ತಿ ಇದರ ಸ್ಥಾಪಕಾಧ್ಯಕ್ಷರಾದಂತಹ ಅಶೋಕ ಕುಂದರ್, ಸಮಾಜ ಸೇವಕರು ಆದಂತಹ ಪ್ರಶಾಂತ್ ಯಡಾಡಿ, ಕರಾವಳಿ ಯಕ್ಷಮಿತ್ರರು (ವಾಟ್ಸಾಪ್ ಬಳಗ)ದ ಸ್ಥಾಪಕಾಧ್ಯಕ್ಷರಾದಂತಹ ಧನುಷ್ ಶೆಟ್ಟಿ ಹೊಳೆಬಾಗಿಲು ಹಾಗೂ ಮಹೇಶ್ ಪೂಜಾರಿ ಹೂಡೆಯವರು ಉಪಸ್ಥಿತರಿದ್ದರು. ಅಶಕ್ತ ಕಲಾವಿದ ಪ್ರವೀಣ. ಪಿ ಆಚಾರ್ಯರವರಿಗೆ ಧನ ಸಹಾಯ ಹಾಗೂ ಸನ್ಮಾನ ಮಾಡಲಾಯಿತ್ತು, ಯಕ್ಷ ಭಾಗವತ ಗಣೇಶ್ ಆಚಾರ್ಯ ಹಾಗೂ ಯಕ್ಷ ಸಂಘಟಕರಾದ ಅಶೋಕ ಕುಂದರ್ ಅವರಿಗೂ ಸನ್ಮಾನ ಮಾಡಲಾಯಿತ್ತು. ಕಾರ್ಯಕ್ರಮದ ನಿರೂಪಣೆ ಧನುಷ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ವ್ಯಾಸರಾಜ ಮಹಾ ಸಂಸ್ಥಾನ ಪರಮ ಪೂಜ್ಯರಾದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳರವರ ಚಾತುರ್ಮಾಸ್ಯ ವೃತಾಚರಣೆ ಅಂಗವಾಗಿ ಕುಂದಾಪುರಕ್ಕೆ ಆಗಮಿಸಿದ ಈ ಸಂದರ್ಭದಲ್ಲಿ ಅವರಿಗೆ ಅತಿಥ್ಯ ನೀಡಿ ಚಾತುರ್ಮಾಸ್ಯದ ವಸ್ತ್ರಭಿಕ್ಷೆ ನೀಡಲಾಯಿತು. ಈ ಚಾತುರ್ಮಾಸ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುದಾಗಿ ಗಾಣಿಗ ಸಮಾಜ ಭಾಂದವರ ಪರವಾಗಿ ವಾಗ್ದಾನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ್, ಕೋಶಾಧಿಕಾರಿ ಪರಮೇಶ್ವರ್ ಜಿ.ಬಿ, ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ, ಕೋಶಾಧಿಕಾರಿ ಗಣಪಯ್ಯ ಗಾಣಿಗ, ಮಾಜಿ ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಸಮಾಜದ ಹಿರಿಯರಾದ ಸುಧೀರ್ ಪಂಡಿತ್, ಗೋಪಾಲ ಚೆಲ್ಲಿಮಕ್ಕಿ ಮತ್ತು ರಾಜ್ಯದ ಎಲ್ಲಾ ಭಾಗದ ಗಾಣಿಗ ಸಮಾಜದ ಅಧ್ಯಕ್ಷರು ಹಾಗೂ ಮುಖಂಡರು ಮತ್ತು ಗಾಣಿಗ ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ನೂರಾರು ಯುವ ಹಾಗೂ ಸೃಜನಶೀಲ ಮನಸ್ಸುಗಳಿದ್ದು, ಸಿನೆಮಾ ರಂಗದಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಇತ್ತಿಚಿನ ದಿನಗಳಲ್ಲಿ ಕುಂದಾಪುರ ಹಾಗೂ ಕರಾವಳಿಗರ ಸಿನೆಮಾಗಳು ಹೆಚ್ಚು ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹಿರಿಯ ಸಾಹಿತಿ, ನ್ಯಾಯವಾದಿ ಎಎಸ್‌ಎನ್ ಹೆಬ್ಬಾರ್ ಹೇಳಿದರು. ಅವರು ಶುಕ್ರವಾರ ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ತೆರೆಕಂಡ ಕತ್ತಲೆಕೋಣೆ ಸಿನೆಮಾ ಬಿಡುಗಡೆಗೂ ಮುನ್ನ ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದರು. ಕುಂದಾಪುರದ ಕ್ರೀಯಾಶೀಲ ಯುವಕರ ತಂಡ ನಿರ್ಮಿಸಿರುವ ಕತ್ತಲೆಕೋಣೆ ಇಂದು ರಾಜ್ಯದ 120 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಚಿತ್ರದ ಕಥಾವಸ್ತು ಹಾಗೂ ಭಿನ್ನ ಶೈಲಿಯ ನಿರ್ದೇಶಕ ಚಿತ್ರರಸಿಕರ ಮನಗೆಲ್ಲಲಿದೆ ಎಂದರು. ಈ ಸಂದರ್ಭ ಕತ್ತಲೆಕೋಣೆ ಚಿತ್ರದ ನಿರ್ದೇಶಕ, ನಟ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕರಾದ ಪಿ.ಆರ್ ಅಮೀನ್ ಮುಂಬೈ, ನಟರಾದ ಓಂಗುರು ಬಸ್ರೂರು, ಚಂದ್ರಶೇಖರ ಬಸ್ರೂರು, ಚಿತ್ರತಂಡದ ಅಶ್ವಥ್ ಆಚಾರ್ಯ, ಮಂಜುನಾಥ ಸಾಲ್ಯಾನ್, ರಿತಿಕ್ ಮುರ್ಡೇಶ್ವರ್, ರೋಹಿತ್ ಅಂಪಾರು, ಶ್ರೀನಿವಾಸ್ ಪೈ, ಭಾಸ್ಕರ್ ಶೆಟ್ಟಿ ನೇರಳಕಟ್ಟೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಧ್ಯೇಯಘೋಷದೊಂದಿಗೆ ಮಹಾತ್ಮಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ದೇಶದಾದ್ಯಂತ ಚಳುವಳಿ ನಡೆಸಿದಂತೆ ಇಂದು ಅಪಪ್ರಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಗೊಂದಲ ಸೃಷ್ಟಿಸುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ದ ಆಡಳಿತ ಬಿಟ್ಟು ತೊಲಗಿ ಎಂಬ ಆಂದೋಲನ ಆರಂಭಿಸಬೇಕಾಗಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಚಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಕಾಂಗ್ರೇಸ್ ಪಕ್ಷ ಯಾರನ್ನೂ ಕಡೆಗಣಿಸಿಲ್ಲ. ಸರ್ವ ಸಮಾನತೆಗಾಗಿ ಒಂದು ಸಿದ್ಧಾಂತದ ಜತೆಗೆ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬಂದಿದೆ. ಇಂದಿನ ಯುವ ಪೀಳಿಗೆಗೆ ಕಾಂಗ್ರೆಸ್ ಸಾಧನೆ ನೆನಪಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ಯುವ ಪೀಳಿಗೆಗೆ ಪಕ್ಷದ ಸಾಧನೆಯನ್ನು ನೆನಪಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದರು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಮೋದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರಕಾರದ ಜನವಿರೋಧಿ ಆರ್ಥಿಕ ನೀತಿಯಿಂದಾಗಿ ಜನಸಾಮಾನ್ಯರು ಹೈರಾಣಾಗುವಂತೆ ಮಾಡಿದೆ. ಸಾಲ ಭಾದಿತ ರೈತ ಕೂಲಿ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟದಾಯಕವಾಗಿದೆ. ಸರಕಾರದಿಂದ ಕೂಲಿ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲ. ಸರಕಾರ ಉದ್ಯೋಗ, ವಸತಿ, ನಿವೇಶನ ನೀಡಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಸುರೇಶ ಕಲ್ಲಾಗರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಬಂದೂರು ತಹಶೀಲ್ದಾರರ ಕಛೇರಿ ಎದುರು ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ ಕರ್ನಾಟಕ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕರ್ನಾಟಕ ಅದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಕಾರ್ಮಿಕ ಸಂಘ, ರೈತರು, ಕೂಲಿಕಾರ್ಮಿಕರ ಸಂಘ ಇದರ ವತಿಯಿಂದ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ನಡೆದ ಬ್ರಹತ್ ಪ್ರತಿಟನೆ ಹಾಗೂ ಜೈಲ್ ಭರೋ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆಗಳಲ್ಲಿ ಭಾಗಿಯಾಗುವುದರ ಮೂಲಕ ಮಕ್ಕಳು ಆತ್ಮವಿಶ್ವಾಸ ವೃದ್ಧಿಸಿಕೊಂಡು ಸತ್ಪ್ರಜೆಯಾಗಿ ರೂಪಿಸುವಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಸಹಾಯಕಾರಿಯಾಗುತ್ತದೆ ಎಂದು ಇಂಟರ‍್ಯಾಕ್ಟ್ ಕ್ಲಬ್ ನಿರ್ದೇಶಕ ಎಂ. ಎನ್. ಶೇರಿಗಾರ್ ಹೇಳಿದರು. ಬೈಂದೂರು ರತ್ತೂಬಾ ಜನತಾ ಫ್ರೌಡಶಾಲೆಯಲ್ಲಿ ರೋಟರಿ ಕ್ಲಬ್ ಪೂರಕ ಸಂಸ್ಥೆ ಇಂಟರ‍್ಯಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು. ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ರತ್ತೂಬಾ ಜನತಾ ಫ್ರೌಡಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ, ಕಾರ್ಯದರ್ಶಿಯಾಗಿ ಮೇಘಾ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂ, ಶಿಕ್ಷಕಿಯರಾದ ಚೈತ್ರಾ, ಹೇಮಾವತಿ, ನಿರ್ಮಲಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳಾವರ ಸ್ವಾಗತಿಸಿದರು. ಕ್ಲಬ್‌ನ ಮಾರ್ಗದರ್ಶಕ ಶಿಕ್ಷಕ ಆನಂದ ಮದ್ದೋಡಿ ಪ್ರಾಸ್ತಾವಿಸಿದರು. ವಿದ್ಯಾರ್ಥಿಗಳಾದ ಸುರೇಂದ್ರ ಹಾಗೂ ಸುದರ್ಶನ್ ನಿರೂಪಿಸಿ, ಪ್ರಕಾಶ್ ಮಾಕೋಡಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಯ್ಯಾಡಿ ಬೈಂದೂರು ಇದರ 40ನೇ ವರ್ಷದ ಮಾಣಿಕ್ಯ ಮಹೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಎಸ್. ಹಾಗೂ ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್. ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಸುರೇಶ್ ನಾಯ್ಕ್, ಎಂ.ಪಿ ರವಿ, ಉಪಾಧ್ಯಕ್ಷರಾಗಿ ಹನುಮಂತ ಎಚ್., ಬಿ. ಗಣೇಶ್ ನಾಯ್ಕ್, ಜಿ. ಸತೀಶ್, ಮೂರ್ತಿ ಆರ್., ಮಂಜುನಾಥ ಜಿ., ರಾಜೇಶ್ ಕೋಟೆ, ರಾಘವೇಂದ್ರ ಎನ್., ಸುಬ್ರಹ್ಮಣ್ಯ ಎಚ್., ನಾಗೇಂದ್ರ ಎಚ್., ಸುನಿಲ್ ಸಿ. ಹೆಚ್., ಪ್ರದೀಪ್ ಜಿ, ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣಯ್ಯ ಎಂ.ಪಿ., ತಿಲಕನಾಥ್, ಶಿವಾನಂದ ಡಿ, ಎಂ. ಎನ್ ನಾಗೇಂದ್ರ, ವಿಜಯ ಕೆ., ರಾಜೇಶ್ ಎಚ್, ವರುಣ್ ಎಚ್, ಶ್ರೀಪಾದ ಎಂ.ಕೆ., ರಾಘವೇಂದ್ರ ಬಾಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ. ನಾಗರಾಜ್, ಗೋವಿಂದರಾಜ್ ಬಿ., ನಾಗೇಂದ್ರ ಎ., ಕ್ರೀಡಾ ಕಾರ್ಯದರ್ಶಿಯಾಗಿ ಎನ್. ಸುಬ್ರಹ್ಮಣ್ಯ., ಎಂ.ಪಿ ಮಂಜುನಾಥ್, ವಸಂತ್ ಎಚ್., ಶಿವಕುಮಾರ್, ಕೋಶಾಧ್ಯಕ್ಷ ಗೌರವ ಸಲಹೆಗಾರರಾಗಿ ವಿಘ್ನೇಶ್ವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರೊಡಕ್ಷನ್ ನಂ.1 ಹಾಗೂ ಕಲಾತರಂಗ ಬಸ್ರೂರು ಇವರ ಸಹಯೋಗದೊಂದಿಗೆ ಸಾಂಡಲ್‌ವುಡ್ ನೂತನ ಚಲನಚಿತ್ರಕ್ಕೆ ಸಿದ್ಧತೆ ನಡೆದಿದ್ದು, ಕರಾವಳಿಯ ಯುವ ಪ್ರತಿಭೆಗಳಿಗಾಗಿ ಬಸ್ರೂರಿನ ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಿಷನ್ ನಡೆಯಿತು. ಕಾರ್ಯಕ್ರಮವನ್ನು ಹಾಸ್ಯನಟ ರಘು ಪಾಂಡೇಶ್ವರ ಉದ್ಘಾಟಿಸಿ ಮಾತನಾಡಿ ಓಂಗುರು ಬಸ್ರೂರು ಹಾಗೂ ಚಂದ್ರಶೇಖರ್ ಬಸ್ರೂರು ಅವರು ಪ್ರಥಮ ಭಾರಿಗೆ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ನಂ.೧ ಚಿತ್ರದ ಮೂಲಕ ಕರಾವಳಿಯ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರೆಯುವಂತಾಗಲಿ ಎಂದರು. ಕತ್ತಲೆಕೋಣೆ ಸಿನೆಮ ನಿರ್ದೇಶಕಮ ನಟ ಸಂದೇಶ್ ಶೆಟ್ಟಿ ಆಜ್ರಿ ಮಾತನಾಡಿ ನಿಮ್ಮ ಹುಚ್ಚಿಗೆ ಚಿತ್ರರಂಗಕ್ಕೆ ಬರಬೇಡಿ, ಚಿತ್ರ ರಂಗದ ಬಗ್ಗೆ ಆಸಕ್ತಿ ಗೌರವ ಕಾಳಜಿ ಇದ್ದರೆ ಮಾತ್ರ ಬನ್ನಿ. ಯಾವುದೋ ಸಿನಿಮಾ ನೋಡಿ ಹುಚ್ಚಿನ ಗೀಳಿಗೆ ಬಿದ್ದು ಚಿತ್ರರಂಗದಲ್ಲಿ ನಟನೆಗೆ ಅವಕಾಶ ಪಡೆದು ನಂತರ ನಿರ್ದೇಶಕರಿಗೆ ಮತ್ತು ಚಿತ್ರ ತಂಡಕ್ಕೆ ತಲೆ ನೋವು ಮಾಡಬೇಡಿ ಚಿತ್ರ ರಂಗವನ್ನು ಪ್ರೀತಿಸಿ ಗೌರವಿಸಿ ಎಂದು ಸಲಹೆ ನೀಡಿದರು. ಅತಿಥಿಗಳಾಗಿ…

Read More

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಮೀಟ್ – ಗ್ರೀಟ್ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾಷೆ ಮಾತಿಗೆ ಮಾತ್ರ ಸೀಮಿತವಲ್ಲ. ಅದು ಆಯಾ ಭಾಷಿಕರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಅದು ನಮ್ಮೊಳಗಿನ ಭಾವನೆಗಳ ಅಭಿವ್ಯಕ್ತಿಯೂ ಹೌದು. ಒಂದು ಊರಿನ ಸಂಸ್ಕ್ರತಿ, ಸಾಂಸ್ಕ್ರತಿಕ ಪರಂಪರೆ, ಆಚರಣೆಗಳು ಅಲ್ಲಿನ ಜನರ ಒಡನಾಟದಿಂದ ತಿಳಿಯುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪುರ ಸಹನಾ ಮಿನಿ ಹಾಲ್‌ನಲ್ಲಿ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳಿಗೆ ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕುಂದಾಪ್ರ ಕನ್ನಡಿಗರ ಸಾಧನೆ ಅಪಾರವಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆಯ ಸೊಗಡನ್ನು ಉಳಿಸಲು ಹೆಣಗಬೇಕಾಗಿರುವುದು ವಿಷಾದನೀಯ ಎಂದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರೂ ಸಹ ದುಬ ನೆಲದಲ್ಲೂ ಕುಂದಾಪುರ ಭಾಷೆಯ…

Read More