ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವವಿನಾಯಕ ಪಿಯು ಕಾಲೇಜಿನ ವಿದ್ಯಾರ್ಥಿಗಳ ವಾಣಿಜ್ಯ ವಿಭಾಗ ವತಿಯಿಂದ ಬ್ಯಾಂಕ್ ಆಫ್ ಬರೋಡ ಕುಂಭಾಶಿ ಶಾಖೆಗೆ ಭೇಟಿ ನೀಡಿದರು.

ಬ್ಯಾಂಕಿನ ಮ್ಯಾನೇಜರ್ ಬಿ. ಕರುಣಾಕರ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬ್ಯಾಂಕ್ ಎನ್ನುವುದು ಹಣವನ್ನು ಇಡುವ ಸುರಕ್ಷಿತ ಸ್ಥಳ, ಜನರಿಗೆ ಹಣವನ್ನು ಉಳಿಸುವ ಮತ್ತು ನಿರ್ವಹಿಸುವ, ಉಳಿತಾಯ ಖಾತೆ ತೆರೆಯುವ, ಸಾಲ ನೀಡುವ, ಬಡ್ಡಿಗಳಿಸಲು ಹಣವನ್ನು ಠೇವಣಿ ಇಡುವ, ಇಂಟರ್ನೆಟ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್‌ಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಮನೋಜ್ ಕುಮಾರ್, ಆಡಳಿತ ನಿರ್ದೇಶಕ ಹರೀಶ್ ಎನ್., ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೇಯ, ಸೌಜನ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಾರ್ಥನಾ ಕಾಮತ್ ಮತ್ತು ಸಾಕೇತ್ ವಂದಿಸಿದರು.











