Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿನ ಯುವಶಕ್ತಿ ಭಾರತ ದೇಶದಲ್ಲಿದೆ. ಆದರೆ ಈ ಶಕ್ತಿಯು ದೇಶದ ಭದ್ರತೆಗೆ ವಿನಿಯೋಗಿಸಲು ಸಿಗುತ್ತಿಲ್ಲ. ಯುವಕರು ಭ್ರಮೆಯ ಗುಂಗಿನಲ್ಲಿ ತೇಲಾಡುತ್ತಿದ್ದಾರೆ. ದೇಶದ ಮುಂದೆ ದೊಡ್ಡ ಸವಾಲುಗಳೇ ಇದ್ದು, ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಿದೆ. ಹೀಗಾಗಿ ರಾಷ್ಟ್ರದ ಏಳಿಗೆಗೆ ಒಳಿತಿಗಾಗಿ ನಮ್ಮನ್ನು ಅರ್ಪಿಸಿಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಉದ್ಯೋಗಿ ಕಾರ್ಯಪ್ರಮುಖ್ ವಿಜಯ ಕೊಡವೂರು ಹೇಳಿದರು. ಅವರು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತಿಯೊಬ್ಬ ಭಾರತೀಯನ ಕಣಕಣದಲ್ಲಿ ಇದೆ. ರಾಷ್ಟ್ರ ಧರ್ಮವನ್ನು ಮೀರಿದ ಮತ್ತೊಬ್ಬ ಧರ್ಮವು ದೇಶದ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದೆ. ಇದರ ಕರಾಳ ಮುಖಗಳು ದೇಶ ಕಟ್ಟಲು ನಮಗೆ ತೊಂದರೆಯನ್ನುಂಟು ಮಾಡುತ್ತಿದೆ. ಕೇವಲ ಕೇರಳಕ್ಕೆ ಸೀಮಿತವಾಗಿದ್ದ ಜಿಹಾದಿ ಉಗ್ರವಾದ ಇಂದು ಕರಾವಳಿಯ ಮುಕ್ಕಾಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರ ಅಭಿವೃದ್ಧಿಯೇ ಆಡಳಿತ ಮಂತ್ರ ಎನ್ನುವ ನಿಟ್ಟಿನಲ್ಲಿ ಮನಸ್ವಿನಿ, ಮೈತ್ರಿ, ಸಕಾಲ, ಅನ್ನಭಾಗ್ಯ, ಕೌಶಲ್ಯ ಕರ್ನಾಟಕ, ಕ್ಷೀರ ಭಾಗ್ಯ ಹೀಗೆ ಹಲವಾರು ಯೋಜನೆಗಳ ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದೆ. ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿ ಶೌಚಾಲಯ ನಿರ್ಮಾಣ ಗುರಿ ಪೂರೈಸಿದ್ದು, ಸಂಪೂರ್ಣ ಸ್ವಚ್ಛತೆ ಸಾಧಿಸಿ, ದೇಶದಲ್ಲೇ ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಏಳನೇ ಸ್ಥಾನ ಪಡೆದಿದದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಹೇಳಿದರು. ಕುಂದಾಪುರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರಯೋತ್ಸವ ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಸ್ವಚ್ಛ ಭಾರತ್ ಮಿಶನ್ ಯೋಜನೆಯಲ್ಲಿ ಕುಂದಾಪುರ ಪುರಸಭೆ ಬಯಲು ಶೌಚಾಲಯ ಮುಕ್ತ ಎಂದು ಘೋಷಣೆಯಾಗಿದ್ದು, ಹೆಮ್ಮಯ ಸಂಗತಿ ಎಂದ ಅವರು, ಜಿಲ್ಲೆಗೆ ಕ್ರೀಡಾ ಆಕಾಡೆಮಿ ಸ್ಥಾಪನೆಗೆ ಸರ್ಕಾರಸಮ್ಮತಿಸಿದ್ದು, ಜಿಲ್ಲಾ ವಸತಿ ಕ್ರೀಡಾ ಶಾಲೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಗ್ರಾಮೀಣ ಭಾಗದ ೧೦೩ ಕಿ.ಮೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲದೇ, ಮಹಾನ್ ಚೇತನರುಗಳು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರ ಸೈದ್ಧಾಂತಿಕ ನಿಲುವುಗಳು ಅವರು ಕಟ್ಟಿಕೊಟ್ಟ ಆದರ್ಶಯುತ ತತ್ವಗಳು ಅಲ್ಲದೇ, ನಮ್ಮ ಸುಧೀರ್ಘ ಪರಂಪರೆಯ ಮೌಲ್ಯಗಳು ಇಂದಿನ ಪೀಳಿಗೆಯ ಯುವಕರಿಗೆ ಮಾರ್ಗದರ್ಶಕಗಳಾಗಬೇಕು. ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಕೇವಲ ಒಂದು ದಿವಸದ ಹಬ್ಬವಾಗಿರದೇ, ಅದರ ನಿರಂತರ ಮೌಲ್ಯಗಳು ನಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಧ್ವಜರೋಹಣ ಮಾಡಿದ ಶ್ರೀಮಾತಾ ಹಾಸ್ಪಿಟಲ್‌ನ ಖ್ಯಾತ ಮನೋತಜ್ಞರಾದ ಡಾ. ಪ್ರಕಾಶ್ ತೋಳಾರ್ ತಮ್ಮ ಮಾತುಗಳಿಂದ ಶಾಲೆಯ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯನ್ನು ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಧ್ವಜರೋಹಣದ ಜೊತೆಗೆ ವಿವಿಧ ಕವಾಯತುಗಳಾದ ಮಾರ್ಚ್ ಪಾಸ್ಟ್ , ಮಾಸ್ ಡ್ರಿಲ್ , ಪಿರಮಿಡ್ ಮತ್ತು ಕರಾಟೆ ಪ್ರದರ್ಶನಗಳು ನಡೆಯಿತು. ಅಲ್ಲದೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲೆಯ ತಂಡಗಳಾದ ರಾಮನ್, ಕಲ್ಪನಾ, ಆರ್ಯಭಟ ಮತ್ತು ಕಲಾಮ್ ಗಳ ನಡುವೆ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಸಾರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶ ಸ್ವತಂತ್ರವಾಗುವಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ, ಮಹಾತ್ಮರ ತ್ಯಾಗ, ಬಲಿದಾನ ಹಾಗೂ ಲಕ್ಷಾಂತರ ವೀರ ಯೋಧರ ಪರಾಕ್ರಮ ಹಾಗೂ ರಕ್ತತರ್ಪಣವನ್ನು ಸ್ಮರಿಸಿದಾಗ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಲಿದೆ ಎಂದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಶಾಸಕರ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜಾರೋಹಣಗೈದು ಮಾತನಾಡಿದರು. ನಮ್ಮ ವೀರ ಯೋಧರು ಜೀವದ ಹಂಗುತೊರೆದು ದೇಶ ರಕ್ಷಣೆ ಮಾಡಿದ ಪರಿಣಾಮ ಇಂದು ನಾವೆಲ್ಲರೂ ಕ್ಷೇಮವಾಗಿರಲು ಸಾಧ್ಯವಾಗಿದೆ. ಈ ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಪ್ರತಿದಿನವೂ ಯೋಧರನ್ನು ಸ್ಮರಿಸೋಣ. ನೂರಾರು ವರ್ಷಗಳಿಂದ ಎಲ್ಲಾ ಜಾತಿ, ಮತ, ಧರ್ಮದ ಜನರು ಒಂದಾಗಿ ಸೌಹಾರ್ದ ಹಾಗೂ ಸಾಮರಸ್ಯದಿಂದ ಬಾಳುತ್ತಿರುವ ನಮ್ಮ ಪರಿಸರವನ್ನು ಸಾಮಾಜಿಕ ಕಾಳಜಿ ಮೂಡಿಸುವ ಕೇಂದ್ರಗಳಾಗಿ ಪರಿವರ್ತಿಸೋಣ ಎಂಬ ಸಂದೇಶ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಕಾರ್ಯದರ್ಶಿ ನಾಗರಾಜ ಗಾಣಿಗ ಬಂಕೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್, ಬೈಂದೂರು, ಯಡ್ತರೆ,…

Read More

ಶ್ರೇಯಾಂಕ್ ಎಸ್. ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ. ಭಾರತ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಈ ಪ್ರಶ್ನೆಯನ್ನು ನಿಮ್ಮ ಆಪ್ತರ, ಸಹೋದ್ಯೋಗಿಗಳ ಹಾಗೂ ಯಾವುದೇ ವಿದ್ಯಾರ್ಥಿಗಳ ಬಳಿ ಕೇಳಿ ನೋಡಿ. ಅದಕ್ಕೆ ನಿಮಗೆ ಸಿಗುವ ಉತ್ತರ ಗಾಂಧೀಜಿ ಕೇಂದ್ರಿತವಾಗಿರುತ್ತದೆ. ಖಂಡಿತವಾಗಿಯೂ ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ 1915-1947 ಗಾಂಧೀಜಿಯ ಪಾಲು ಬಹುಮುಖ್ಯವಾದದ್ದು. ಆದರೆ ಈ ದೇಶದ ಜನರ ಆಸ್ಥೆ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹ ಮಾತ್ರವೇ ದಪ್ಪ ಚರ್ಮದ ಬ್ರಿಟಿಷರ ಸೊಕ್ಕು ಮುರಿಯಲಿಲ್ಲ. ಅನೇಕ ಕ್ರಾಂತಿಕಾರಿಗಳು, ಸಣ್ಣ-ಪುಟ್ಟ ಹಳ್ಳಿ, ಪ್ರಾಂತ್ಯ-ಪ್ರದೇಶಗಳಲ್ಲಿ ರೈತ, ಬುಡಕಟ್ಟು ಹೀಗೆ ಅಸಂಖ್ಯಾತ ಜನರು ಆಗಾಗ್ಗೆ ಇಂಗ್ಲೀಷರ ಅಹಂಕಾರಕ್ಕೆ ಪೆಟ್ಟುಕೊಟ್ಟರೆ; ಹೊರಗಿನಿಂದ ನೇರವಾಗಿ ಹಾಗೂ ಒಳಗಿನಿಂದ ಪರೋಕ್ಷವಾಗಿ ಬ್ರಿಟಿಷರ ಸೊಕ್ಕನ್ನು, ಅವರ ಬೃಹತ್ ವಸಾಹತು ಸಾಮ್ರಾಜ್ಯದ ಅಸ್ಮಿತೆಯನ್ನೇ ಕಂಪಿಸುವಂತೆ ಮಾಡಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಹೊರಟಿದ್ದು ಸುಭಾಷ್ ಚಂದ್ರ ಬೋಸ್ರ ಇಂಡಿಯನ್ ನ್ಯಾಷನಲ್ ಆರ್ಮಿ. ಆದರೆ ಐ.ಎನ್.ಎ ಸಾಗಿದ ಹಾದಿಯ ಪ್ರೇರಣೆ ಭಾರತದ ಉದ್ದಗಲಕ್ಕೂ ವ್ಯಾಪಿಸಿತ್ತು. ಶಾಂತಿಯಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ: ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪತ್ರಕರ್ತರ ವಿವಿಧ ಜಿಲ್ಲೆಯ ಪತ್ರಕರ್ತರ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಾರ‍್ಯ ನಿರ್ವಹಿಸುವ ಪತ್ರಕರ್ತ ಹೆಚ್ಚೇ ಇದ್ದಾರೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಬ್ರಹ್ಮಾವರದ ವಾರಂಬಳ್ಳಿ ಗ್ರಾ.ಪಂ. ಆವರಣದಲ್ಲಿ ಸೋಮವಾರ ಉದ್ಘಾಟನೆಗೊಂಡ ಬ್ರಹ್ಮಾವರ ಪ್ರೆಸ್ ಕ್ಲಬ್ ನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಾವರ ಪ್ರೆಸ್ ಕ್ಲಬ್‌ಗೆ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಜಾಗವನ್ನು ಹಾಗೂ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುವುದಾಗಿ ಹೇಳಿದರು. ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಇಂದು ಎಲ್ಲರು ಪತ್ರಿಕೆಯನ್ನು ಅವಲಂಭಿರಾಗಿರುವ ಕಾಲ. ಜನಮಾನಸಕ್ಕೆ ಹತ್ತಿರವಾಗಿ ಸಮಾಜದ ಒಳಿತನ್ನು ಪತ್ರಿಕೆ ಕೊಡುತ್ತಿದೆ ಎಂದರು. ಬ್ರಹ್ಮಾವರ ಪ್ರೆಸ್ ಕ್ಲಬ್‌ನ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಹಿತ್ಯವು ಮೊದಲಾಗಿ ಮಾನವೀಯ ಮತ್ತು ಸಾಮಾಜಿಕ ನೆಲೆಗಳನ್ನು ತನ್ನ ರಚನೆಯಲ್ಲಿ ಹೆಚ್ಚೆಚ್ಚು ವ್ಯಕ್ತಪಡಿಸಬೇಕು. ಎಂದು ಡಾ ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶಾಂತಿ ಕೆ.ಅಪ್ಪಣ್ಣ ಅವರು ಅಭಿಪ್ರಾಯಪಟ್ಟರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಾಹಿತ್ಯ ಮತ್ತು ಸಾಹಿತಿ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಸಮಾಜದ ಮಾನವೀಯ ನೆಲೆಗಳಿಗೆ ಸ್ಪಂದಿಸುವ ಹೃದಯವಂತಿಕೆ ಸಾಧ್ಯವಾಗಿಸಿಕೊಳ್ಳಬೇಕು. ತನ್ನ ಮಿತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು. ನಿರ್ಧಿಷ್ಠವಾದ ನಿರ್ಧಾರಗಳಿಗೆ ಜೋತುಬೀಳದೆ ಸೃಜನಶೀಲತೆಗೆ ತನ್ನ ಬರವಣಿಗೆಯಲ್ಲಿ ಪ್ರಾಮುಖ್ಯತೆಯನ್ನು ನೀಡಬೇಕು. ಬರವಣಿಗೆ ಸ್ವಭಾವವಾಗಿದೆ. ಅದನ್ನು ಕರಗತ ಮಾಡಿಕೊಳ್ಳಬೇಕಾದರೆ ನಮ್ಮ ಒಳಗಣ್ಣನ್ನು ತೆರೆದು ನೋಡಬೇಕು. ಪ್ರೋತ್ಸಾಹಿಸಬೇಕು ಪೋಷಿಸಬೇಕು. ಹಾಗೆಯೇ ಈ ಪ್ರಶಸ್ತಿಯು ನನ್ನ ಬರವಣಿಗೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಹೆಚ್.ಶಾಂತಾರಾಮ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯವನ್ನು ಓದುವಂತಹ ಪ್ರವೃತ್ತಿ ಬೆಳೆದುಬರಬೇಕು. ನಮ್ಮ ವಿದ್ಯಾಸಂಸ್ಥೆಗಳಲ್ಲಿ ಉತ್ತಮವಾದ ಗ್ರಂಥಾಲಯವಿದೆ. ಅದನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇರಳಕಟ್ಟೆ ಘಟಕದ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ, ಸಭೆಯನ್ನು ನೇರಳಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ನೇರಳಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಬಿಜ್ರಿ ರಾಜೀವ ಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಆಜ್ರಿ ಮೂರ್ಕೈ ನಿಸರ್ಗ ಮಾರ್ಗವಾಗಿ ಪುನಃ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹಿಂದಿರುಗಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮಂದಿರ ಸಂಪರ್ಕ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಅವರು ದಿಕ್ಸೂಚಿ ಭಾಷಣ ಮಾಡಿದರು. ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ ಅಧ್ಯಕ್ಷ ಶ್ರೀಧರ ಬಿಜೂರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನಾಗರಾಜ ಬಾಳಿಗ, ಜಗದೀಶ್ ನಾಯಕ್ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ನೇರಳಕಟ್ಟೆ ಘಟಕದ ಅಧ್ಯಕ್ಷ ನಾರಾಯಣ ಗಾಣಿಗ, ಭಜರಂಗದಳ ತಾಲೂಕು ಸಹ ಸಂಚಾಲಕ ಜಯರಾಮ್ ಎಮ್. ನೇರಳಕಟ್ಟೆ, ಗೌರವಾಧ್ಯಕ್ಷರಾದ ಕುಷ್ಠ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾನ್ಯವಾಗಿ ಬಹಳ ಶಿಸ್ತುಬದ್ಧರಾಗಿ ಜೀವನ ನಡೆಸುವವರು ಜನರಿಂದ ದೂರವಿರುತ್ತಾರೆ. ಪರಂಪರೆಯಲ್ಲಿ ಅಭಿಮಾನವುಳ್ಳವರು ಆಧುನಿಕತೆ ಯನ್ನು ನಿರಾಕರಿಸು ತ್ತಾರೆ ಹಾಗೂ ಸಮುದಾಯದಿಂದ ದೂರವಿರುತ್ತಾರೆ ಎನ್ನುವುದು ಪ್ರತೀತಿ. ಆದರೆ ಇದಕ್ಕೆ ಭಿನ್ನವಾಗಿರುವ ಡಾ| ಶಾಂತಾರಾಮ್‌ ಅವರು ಇವುಗಳನ್ನೆಲ್ಲ ಮೀರಿ ಜನರ ನಡುವೆಯೇ ಸಾಧನೆ ಮಾಡಿ ತೋರಿದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅವರು ಹೇಳಿದರು. ಅವರು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಸ್ವಪ್ನಶಿಲ್ಪಿ ಡಾ| ಎಚ್‌. ಶಾಂತಾರಾಮ್‌ ಅವರ ತೊಂಬತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆಯುವ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನ ಎನ್ನುವುದು ಪುಸ್ತಕದ ಮೂಲಕ, ರಂಗದ ಮೂಲಕ ಹಾಗೂ ರಂಗದ ಹೊರಗಡೆ ಹೀಗೆ ಮೂರು ನೆಲೆಗಳಲ್ಲಿ ದೊರೆಯುವಂತಹದು. ಈ ಮೂರು ನೆಲೆಗಳಲ್ಲಿ ಜ್ಞಾನ ಸಂಪಾ ದನೆ ಮಾಡದೇ ಹೋದಲ್ಲಿ ನಮ್ಮ ಶಿಕ್ಷಣ ಎನ್ನುವುದು ಪದವಿಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತ ವಾಗುತ್ತದೆ ಎನ್ನುವುದನ್ನು ನಂಬಿಕೊಂಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಭಟ್ಕಳ: ಫ್ಯಾನ್ ತುಂಡಾದ ಪರಿಣಾಮ, ಮುಂದಕ್ಕೆ ಚಲಿಸಲಾಗದ ದೋಣಿ ಸಮುದ್ರದಲ್ಲೇ ಮುಳುಗುತ್ತ ತೇಲುತ್ತ ಬಂದು ರಾತ್ರಿ ನೆಸ್ತಾರ್ ಸಮುದ್ರ ತೀರದ ಮರಳಿನಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೀನುಗಾರಿಕಾ ದೋಣಿಯೊಂದನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಗಿದ್ದು, ದೋಣಿಯಲ್ಲಿದ್ದ ೩೦ಕ್ಕೂ ಹೆಚ್ಚು ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಕುಂದಾಪುರದ ಮರವಂತೆಯ ರಾಮ ಖಾರ್ವಿ ಹಾಗೂ ಪ್ರಭಾಕರ ಖಾರ್ವಿ ಅವರಿಗೆ ಸೇರಿದ ‘ಯಕ್ಷೇಶ್ವರಿ’ ಹೆಸರಿನ ಈ ‘ದೋಣಿಯು ಭಟ್ಕಳದ ಬಂದರಿನಿಂದ ಶುಕ್ರವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿತ್ತು. ತೀರದಿಂದ ಸುಮಾರು ಒಂದೂವರೆ ಕಿ. ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ದೋಣಿಯ ಫ್ಯಾನ್ ಇದ್ದಕ್ಕಿದ್ದಂತೆ ತುಂಡಾಗಿದೆ. ಚಲಿಸಲಾಗದ ದೋಣಿ ನಿಧಾನವಾಗಿ ಮುಳುಗಲು ಆರಂಭಿಸಿದೆ. ಮೀನುಗಾರಿಕೆ ನಡೆಸುತ್ತಿದ್ದ ಇತರ ದೋಣಿಗಳ ಮೂಲಕ ಹಗ್ಗವನ್ನು ಬಳಸಿ ಮುಳುಗುತ್ತಿದ್ದ ದೋಣಿಯನ್ನು ಎಳೆಯಲು ಮೀನುಗಾರರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇದೇ ಸಂದರ್ಭದಲ್ಲಿ ಜೋರಾಗಿ ಗಾಳಿ, ಮಳೆ ಬಂದಿದ್ದರಿಂದ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿ ಮುಳುಗುತ್ತ ತೇಲುತ್ತಾ ಬಂದು…

Read More