Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಕರ್ನಾಟಕ ಪತ್ರಿಕೆಯ ಕುಂದಾಪುರದ ಯುವ ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಅವರು ಪತ್ರಿಕೋದ್ಯಮದಲ್ಲಿ ಮಹಿಳೆಯರ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವಿಕ ಸಂಘದ ಸಂಯೋಜಕರಾದ ಪ್ರೊ. ರಾಮಚಂದ್ರ ಅವರು ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸುಮಲತಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶಬರಿ ಕಾರ್ಯಕ್ರಮ ನಿರೂಪಿಸಿ, ಅನಿತಾ ವಂದಿಸಿದರು.’

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹಕಾರಿ ಸಂಘಗಳ ನಡುವೆ ಪೈಪೋಟಿ ಇದ್ದರೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಹಕಾರಿ ಸಂಘಗಳು ನೀಡುತ್ತಾ ಬಂದಿರುವುದು ಸಹಕಾರಿ ಕ್ಷೇತ್ರದ ಹೆಚ್ಚುಗಾರಿಕೆ ಹೊಸ ವ್ಯವಸ್ಥೆಗಳ ಮೂಲಕ ಸಹಕಾರಿ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ದ.ಕ ಜಿಲ್ಲೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕುಂದಾಪುರ ತಾಲೂಕು ನವೀಕೃತ ಕೇಂದ್ರ ಕಚೇರಿ ಉದ್ಘಾಟಿಸಿ, ನವೀಕೃತ ಕಟ್ಟಡಕ್ಕೆ ಎರಡು ಲಕ್ಷಅನುದಾನ ನೀಡುವುದಾಗಿ ಘೋಷಿಸಿದರು. ನವೀಕೃತ ಕೇಂದ್ರದ ಮೂಲಕ ಸಾರ್ವಜನಿಕರಿಗೆಇನ್ನಷ್ಟು ಸೌಲಭ್ಯ ಲಭಿಸಲಿ ಎಂದ ಅವರು, ಸೇವೆ ಮೂಲಕ ಸಹಕಾರಿ ಕ್ಷೇತ್ರ ಬೆಳೆಯಲು ಕಾರಣವಾಗಿದ್ದು, ಸಹಾಕಾರಿ ಮಟ್ಟ ವೃದ್ಧಿಸಲೂ ಕಾರಣವಾಗಿದೆ ಎಂದು ಹೇಳಿದರು. ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರದೇವಸ್ಥಾನ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಭದ್ರತಾಕೊಠಡಿ ಉದ್ಘಾಟಿಸಿರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಅಧ್ಯಕ್ಷ ಮಲ್ಯಾಡಿ ಮೋಹನದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘ ಉಪಾಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಬಾಳೆಮನೆ, ಕುಂದಾಪುರ ಎಪಿಎಂಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯೆಂದೂರು: ಯಡ್ತರೆ ಮನೆತನದ ಹಿರಿಕ ಆಲಂದೂರು ಅಣ್ಣಪ್ಪ ಶೆಟ್ಟಿ (76) ಅವರು ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು. ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತೋಡಗಿಸಿಕೊಂಡಿದ್ದ ಅವರು ಯಡ್ತರೆ ಮನೆತನದಲ್ಲಿ ಓರ್ವ ಪ್ರಮುಖರೆನಿಸಿಕೊಂಡಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿಗಳಾಗಿ, ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರರಾಗಿ, ಬೈಂದೂರು ಶ್ರೀ ಸೇನೆಶ್ವರ ದೇವಸ್ಥಾನ, ಬ್ಯೆಂದೂರು ಶ್ರೀ ವೆಂಕಟರಮಣ ದೇವಸ್ಥಾನಗಳ ಮಾಜಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬೈಂದೂರು ಮಂಡಲದ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದರು. ಬ್ಯೆಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡಿದ್ದರು. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣಪ್ಪ ಶೆಟ್ಟರ ಕುಟುಂಬಿಕರು ದೊಡ್ಡ ಜಮಿನ್ದಾರರಾಗಿದ್ದರು. ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಯಾದ ಸಂದರ್ಭ ಅಣ್ಣಪ್ಪ ಶೆಟ್ಟರು ಹಾಗೂ ಅವರ ತಂದೆ ತಮ್ಮ ಒಕ್ಕಲುಗಳಿಗೆ ಗೇಣಿ ಪಡೆಯುವುದನ್ನು ತಾವಾಗಿಯೇ ಇಲ್ಲಿಸಿದ್ದರು. ಒಕ್ಕಲುಗಳು ಉಳುವೆ ಮಾಡುತ್ತಿದ್ದ ಜಮೀನನ್ನು ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜು ಇದರ ನೂತನ ಕಟ್ಟಡ ರಚನೆಗೆ ರೂ.೪೪ಲಕ್ಷದ ಕಾಮಗಾರಿಗೆ ರಾಜ್ಯ ಸಾರಿಗೆ ನಿಗಮ ಅಧ್ಯಕ್ಷರು, ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆಯನ್ನು ಗುರುವಾರ ನೇರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಂಬದಕೋಣೆ ಕಾಲೇಜಿನ ಶಿಕ್ಷಕರ ಪರಿಶ್ರಮದಿಂದಾಗಿ ಮಾದರಿಯಾಗಿ ಗುರುತಿಸಿಕೊಂಡಿದೆ. ಶಿಕ್ಷಕರ ಕಾರ‍್ಯವನ್ನು ಅಭಿನಂದಿಸುವುದಾಗಿ ತಿಳಿಸಿದರು. ಮಕ್ಕಳ ವಿದ್ಯಾಭಾಸದ ಕುರಿತು ಕಾಳಜಿವಹಿಸುವ ಸಲುವಾಗಿ ಮುಂದಿನ ದಿನಗಳಲಿ ಪ್ರತಿ ಶಾಲೆಗೆ ತೆರಳಿ ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಹೆತ್ತವರೊಂದಿಗೆ ಸಮಾಲೋಚಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಶಾಲಾ ಮೈದಾನಕ್ಕೆ ಸುಮಾರು ೬ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಇಂಟರ್‌ಲಾಕ ವ್ಯವಸ್ಥೆಯನ್ನು ಶಾಸಕರು ಈ ಸಂದರ್ಭ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾ ಪಂ.ಸದಸ್ಯೆ ಗೌರಿ ದೇವಾಡಿಗ, ತಾ.ಪಂ.ಸದಸ್ಯ ಜಗದೀಶ ದೇವಾಡಿಗ, ಕಂಬದಕೋಣೆ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ ದೇವಾಡಿಗ, ಕೆರ್ಗಾಲು ಗ್ರಾ.ಪಂ. ಅಧ್ಯಕ್ಷೆ ಸೋಮು, ಉಪಾಧ್ಯಕ್ಷ ಸುಂದರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸೆ.9ರಿಂದ 15ರವರೆಗೆ ನಡೆಯುವ ಜೇಸಿ ಸಪ್ತಾಹದ ಸಭಾಪತಿಯಾಗಿ ಕುಂದಾಪುರದ ಸಿವಿಲ್ ಇಂಜಿನಿಯರ್, ಬಿಲ್ಡಿಂಗ್ ಮತ್ತು ಇಂಟಿರಿಯರ್ ಡಿಸೈನ್ ಕನ್ಸಲ್ಟೆಂಟ್ ಗಣೇಶ್ ನಾಯಕ್ ಎಂ. ಆಯ್ಕೆಯಾಗಿದ್ದಾರೆ ಎಂದು ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾನವ ಹಕ್ಕುಗಳ ಕೋಶ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ.ಎಸ್. ಸತೀಶ್ ಪೋಲೀಸ್ ನಿರೀಕ್ಷಕರು, ಉಡುಪಿ ಜಿಲ್ಲೆ ಅವರು ಮಾತನಾಡಿ ಭ್ರಷ್ಟಾಚಾರವೆಂಬ ನಕಾರಾತ್ಮಕ ಮನಸಿದ್ದಾಗ ಮಾತ್ರ ಭ್ರಷ್ಟಾಚಾರವೆಂಬುದು ನಡೆಯಲಿಕ್ಕೆ ಸಾಧ್ಯವಿದೆ. ನಮಗೆ ಕಾನೂನಿನ ಸಲಹೆ ಮತ್ತು ಅರಿವಿನ ಅಗತ್ಯತ ಬಹಳ ಇದೆ. ನಿಮ್ಮ ನಮ್ಮ ಊರುಗಳಲ್ಲಿ ನೀವೆ ಭ್ರಷ್ಟಾಚಾರವೆಂಬುದರ ನಿಗ್ರಹ ಕುರಿತಂತೆ ಅರಿವು ಮೂಡಿಸಬೇಕು. ಅದರ ನಿರ್ಮೂಲನೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಹಾಗಿದ್ದಾಗ ಮಾತ್ರ ನಿರ್ಮೂಲನೆ ಸಾಧ್ಯವಾಗಬಹುದು. ಪ್ರತಿಯೊಬ್ಬರೂ ತಾನೂ ಆಮಿಷಗಳನ್ನು ನೀಡಿ ಕೆಲೆಸ ಮಾಡಿಸಿಕೊಳ್ಳಬಾರದು ಎಂಬುದನ್ನು ಮನಗಾಣಬೇಕು. ಭ್ರಷ್ಟಾಚಾರವನ್ನುಬೇರು ಸಹಿತ ಕಿತ್ತೊಗೆಯಲು ಪಣತೊಡಬೇಕು. ಯಾರಾದರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ನಿಮ್ಮ್ ಗಮನಕ್ಕೆ ಬಂದಾಗ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತರಬೇಕು. ಎಂದು ಎಂದ ಹೇಳಿದರು. ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಜಿಲ್ಲೆಯೆ ನಿರೀಕ್ಷಕರಾದ…

Read More

ಕೈಗೆಟಕುವ ಬೆಲೆ, ಉತ್ಕೃಷ್ಟ ದರ್ಜೆ, ನಗರಕ್ಕೆ ಸುಲಭ ಸಂಪರ್ಕ ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿರುವ ಬೈಂದೂರು ಆಧುನಿಕ ಜೀವನಶೈಲಿಗೆ ತೆರೆದುಕೊಳ್ಳುತ್ತಿದೆ. ಜನರ ಅಗತ್ಯಕ್ಕೆ ತಕ್ಕಂತೆ ಸವಲತ್ತುಗಳನ್ನು ಒಳಗೊಂಡು ಹೊಸತನದ ಹೆಜ್ಜೆಹಾಕಿ ಮಾದರಿ ನಗರವಾಗಿ ರೂಪುಗೊಳ್ಳುತ್ತಿದೆ. ಇಂತಹ ಕಾಲಘಟ್ಟದಲ್ಲಿ ಬೈಂದೂರಿನಲ್ಲಿಯೇ ಪ್ರಥಮ ಭಾರಿಗೆ ಸರ್ವ ಸುಸಜ್ಜಿತವಾದ ವಸತಿ ಸಮುಚ್ಚಯವೊಂದು ತಲೆಯೆತ್ತುತ್ತಿದ್ದು, ಹುಟ್ಟೂರಿನಲ್ಲಿಯೇ ಸ್ವಂತ ಮನೆ ಕನಸು ಕಾಣುತ್ತಿದ್ದವರು ನನಸಾಗಿಸಿಕೊಳ್ಳುವ ದಿನ ಸಮೀಪಿಸಿದೆ. ಶ್ರೀ ಸೌಪರ್ಣಿಕಾ ಡೆವೆಲಪರ್ಸ್ ಹಾಗೂ ಮಹಾವೀರ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ನೂತನ ಓಂ ಮಹಾವೀರ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್ ನಿಮ್ಮ ಕೈಗೆಟಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಲಭ್ಯವಿರಲಿದೆ. ನಗರದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗಲಿರುವ 1 ಬಿಹೆಚ್‌ಕೆ ಹಾಗೂ 2 ಬಿಹೆಚ್‌ಕೆ ಅಪಾರ್ಟ್‌ಮೆಂಟ್‌ಗಳು ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದೆ. ನೂತನ ಅಪಾರ್ಟ್‌ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500ಮೀಟರ್ ದೂರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್‌ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1.5ಕಿ.ಮೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಸ್ಯಗಳು ಪ್ರಕೃತಿಯ ದೊಡ್ಡ ಕೊಡುಗೆ. ಸಸ್ಯ ಸಂವರ್ಧನೆಯಿಂದ ಮನುಷ್ಯನ ಬದುಕು ಹಸನಾಗುತ್ತದೆ. ಕರಾವಳಿಯು ಸಕಲ ರೀತಿಯ ಶ್ರೇಷ್ಠ ಸಸ್ಯ ಸಂಪತ್ತನ್ನು ಒಳಗೊಂಡಿದ್ದು ಅವುಗಳ ಶಾಸ್ತ್ರೀಯ ಅಧ್ಯಯನ ಇಂದಿಗೂ ಅವಶ್ಯಕತೆಯಾಗಿದೆ ಎಂದು, ಕುಂದಪ್ರಭ ಪತ್ರಿಕೆಯ ಸಂಪಾದಕರು ಶ್ರೀ ಯು.ಎಸ್ ಶೆಣೈ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ.ರಾಮಚಂದ್ರ, ಗೋ ಗ್ರೀನ್ ಕ್ಲಬ್ ಇಅದರ್ ಸಂಯೋಜಕರಾದ ಪ್ರೊ. ಮಂಜುನಾಥ ಉಪಸ್ಥಿತರಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಗಾಯತ್ರಿ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಚೇತನಾ ಸ್ವಾಗತಿಸಿದರು. ದಶಮಿ ವಂದಿಸಿದರು. ಸೌಮ್ಯ ಕಾಯಕ್ರಮ ನಿರ್ವಹಿಸಿದರು. ನಂತರ ಕಾಲೇಜಿನ ಸಸ್ಯೋದ್ಯಾನದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು. ವಿದ್ಯಾರ್ಥಿಗಳಿಗೆ ಬೀಜದುಂಡೆಗಳನ್ನು ವಿತರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ಸಂಪನ್ನವಾದ ಶ್ರವಣ ನಕ್ಷತ್ರದ ಶುಭ ಘಳಿಗೆಯಲ್ಲಿ ಕುಂದಾಪುರ ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಬಳಿಯ ಕಡಲತಡಿಯಲ್ಲಿ ಸಾಂಪ್ರದಾಯಿಕ ಸಮುದ್ರ ಪೂಜೆ ನಡೆಯಿತು. ಮರಳದಂಡೆಯಲ್ಲಿ ಸಮುದ್ರ ದೇವತೆಯ ಲಿಂಗ ರಚಿಸಿ ಅದಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಮುದ್ರ ಪೂಜೆ ನಡೆಸಿ, ಬುಧವಾರದಿಂದ ಆರಂಭವಾಗುವ ಮೀನುಗಾರಿಕಾ ಋತುವಿನಲ್ಲಿ ಸುರಕ್ಷಿತ ಮತ್ತು ಸಮೃದ್ಧ ಮೀನುಗಾರಿಕೆ ಕರುಣಿಸೆಂಬ ಪ್ರಾರ್ಥನೆಯೊಂದಿಗೆ ಸಮುದ್ರಕ್ಕೆ ಬಾಗಿನ ಸಮರ್ಪಿಸಲಾಯಿತು. ವರಾಹ ದೇವಸ್ಥಾನದ ಅರ್ಚಕ ಪಡುಕೋಣೆ ನರಸಿಂಹ ಅಡಿಗ ಪೂಜಾವಿಧಿಗಳನ್ನು ನೆರವೇರಿಸಿದರು. ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಬೈಂದೂರು ಸಂಘದ ಅಧ್ಯಕ್ಷ ಕೆ. ಎಂ. ಸೋಮಶೇಖರ ಖಾರ್ವಿ ಪೂಜೆಯ ನೇತೃತ್ವ ವಹಿಸಿದ್ದರು. ತಾಲೂಕಿನ ಮೀನುಗಾರ ಪ್ರಮುಖರಾದ ಕಂಚಗೂಡು ಚಂದ್ರ ಖಾರ್ವಿ, ಮೋಹನ ಖಾರ್ವಿ, ರಘುನಾಥ ಪಟೇಲ್, ನಾಗಪ್ಪ ಪಟೇಲ್, ಚೌಕಿ ವಿಠಲದಾಸ್, ಕೇಶವ ಕೊಡೇರಿ, ಉಪ್ಪುಂದ ವೆಂಕಟರಮಣ ಖಾರ್ವಿ, ಗಣೇಶ ಖಾರ್ವಿ, ಅಣ್ಣಯ್ಯ ಖಾರ್ವಿ, ಮರವಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ತರಗತಿಗಳನ್ನು ಬೆಳಿಗ್ಗೆ ಎಂಟು ಗಂಟೆಯಿಂದಲೇ ಆರಂಭಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಲಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೋಟೇಶ್ವರ ಘಟಕದಿಂದ ಕುಂದಾಪುರ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮಯದ ಬದಲಾವಣೆಯಿಂದ ತೊಂದೆರೆಯಾಗಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಷ್ಟು ಬೇಗ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಬೆಳಗ್ಗಿನ ತರಗತಿಗಳು ತಪ್ಪಿಹೋಗುವ ಸಂದರ್ಭವೇ ಹೆಚ್ಚು. ಹಾಗಾಗಿ ಕೂಡಲೇ ಸಮಯವನ್ನು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕುಂದಾಪುರ ತಹಶೀಲ್ದಾರ್ ಅವರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ಉಡುಪಿ ಸಂಘಟನಾ ಕಾರ್ಯದರ್ಶಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

Read More