ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಳದ ಮಹನವರಾತ್ರಿ ಮಹೋತ್ಸವಕ್ಕೆ ಗುರುವಾರ ಶಾಸ್ತ್ರೋಕ್ತ ವಿದಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ 7.30ಕ್ಕೆ ಗಣಪತಿ ಪ್ರಾರ್ಥನೆ, ಬೆಳಿಗ್ಗೆ 8.45ಕ್ಕೆ ನವರಾತ್ರಿ ಕಲಶ ಸ್ಥಾಪನೆಯೊಂದಿಗೆ ಮಹಾನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರಕಿತು. ದೇವಳದ ತಂತ್ರಿ ಡಾ. ಕೆ.ರಾಮಚಂದ್ರ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ಈ ಸಂದರ್ಭ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ದೇವಳದ ವ್ಯವಸ್ಥಾಪನಾ ಸಮಿತಿ ಆದ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ದೇವಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ಗೋಪಾಲಕೃಷ್ಣ ನಾಡ, ಗಣೇಶ ಕಿಣಿ, ಡಾ. ಅತುಲ್ಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಕೆ.ಪಿ ಶೇಖರ್,ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶರವನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ದೇವಸ್ಥಾನದ ಸೇವಾಸಮಿತಿ ವ್ಯವಸ್ಥಾಪನಾ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಉತ್ಸವಕ್ಕೆ ಚಾಲನೆ ನಿಡಿದರು. ಪ್ರದಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವುಡ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು ಈ ಸಂದರ್ಭದಲ್ಲಿ ಸೇವಾಸಮಿತಿ ವ್ಯವಸ್ಥಾಪನಾ ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ಶ್ರೀನಿವಾಸ ಕುಮಾರ್, ಸತ್ಯ ಪ್ರಸನ್ನ, , ದೊಟ್ಟಯ್ಯ ಪೂಜಾರಿ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ ಹಾಗೂ ಭಕ್ತಾದಿಗಳು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.07: ರಾಜ್ಯ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹಾಗೂ ಪತ್ನಿ ವೀಣಾ ನಾಗೇಶ್ ಅವರು ಎಳಜಿತ ಶ್ರೀ ರಾಮಕೃಷ್ಣ ಕುಟೀರಕ್ಕೆ ಬುಧವಾರ ಭೇಟಿ ನೀಡಿದರು. ಶ್ರೀ ರಾಮಕೃಷ್ಣ ಕುಟೀರದ ಕಾರ್ಯಗಳ ಬಗ್ಗೆ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರಿಂದ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕುಟೀರದಲ್ಲಿ ನಿರಂತರವಾಗಿ ಗ್ರಾಮೀಣ ಪ್ರದೇಶ ಎಲ್ಲಾ ವರ್ಗದ ವಿದ್ಯಾರ್ಥಿಗಳು ನಿತ್ಯಸ್ತೋತ್ರ, ವೇದಮಂತ್ರಗಳ ಪಠಣ, ಸಂಗೀತಾಭ್ಯಾಸ ಮಾಡುತ್ತಿರುವುದು ಹಾಗೂ ಉನ್ನತ ವಿದ್ಯಾಭ್ಯಾಸದ ತನಕವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೋಟ್ ಪುಸ್ತಕ ವಿತರಣೆ ಮೊದಲಾದ ಕಾರ್ಯಗಳನ್ನು ಪ್ರತಿವರ್ಷ ಮಾಡುತ್ತಾ ಬರಲಾಗುತ್ತಿರುವ ಬಗ್ಗೆ ತಿಳಿದು ಸೇವಾ ಕಾರ್ಯ ಮುಂದುವರಿಸುವಂತೆ ತಿಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಅ.7: ಕೋವಿಡ್ ಎರಡನೇ ಅಲೆಯ ಸಂದರ್ಭ ಆಕ್ಸಿಜನ್ ಅಗತ್ಯ ಹೆಚ್ಚಿಗೆ ಕಂಡುಬಂದು ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಕುಂದಾಪುರದಲ್ಲಿ ನಿಮಿಷಕ್ಕೆ 500 ಲೀ. ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯದ ಆಕ್ಸಿಜನ್ ಘಟಕ ಆರಂಭವಾಗಿದ್ದು ಸಕಾಲದಲ್ಲಿ ಜನರ ಜೀವ ಉಳಿಸುವಲ್ಲಿ ನೆರವಾಗಲಿದೆ ಎಂದು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಹೇಳಿದರು. ಅವರು ಗುರುವಾರ ಇಲ್ಲಿನ ಸರಕಾರಿ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿ ಘಟಕದಿಂದ ಮೂರು ಜಿಲ್ಲೆಯ ಜನರಿಗೆ ಪ್ರಯೋಜನ ಸಿಗಲಿದೆ. ಘಟಕ ಸ್ಥಾಪನೆಗೆ ಹೆಚ್ಚಿನ ಅನುದಾನ ನೀಡಿದ ಸಚಿವೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಡಳಿತ, ಅಧಿಕಾರಿವರ್ಗಕ್ಕೆ ಸಾರ್ವಜನಿಕರು ಅಭಾರಿಯಾಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಪವಿಭಾಗ ಸಹಾಯಕ ಆಯುಕ್ತ ಕೆ. ರಾಜು, ಮಾತನಾಡಿ ಕೋವಿಡ್ 2ನೆ ಅಲೆ ಸಂದರ್ಭ ಆಕ್ಸಿಜನ್ ಇಲ್ಲದೆ ತೊಂದರೆ ಅನುಭವಿಸಿದ್ದೇವೆ. ಹಾಗಿದ್ದರೂ ಕುಂದಾಪುರ ಆಸ್ಪತ್ರೆ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪಂಚಕರ್ಮ ಸ್ನಾತಕೋತ್ತರ ವಿಭಾಗದ ವತಿಯಿಂದ ಆಕ್ಟೊಬರ್ 7ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ವಿರೇಚನ ಶಿಬಿರಕ್ಕೆ ಡಾ. ಎಂ. ಮೋಹನ್ ಆಳ್ವ ಚಾಲನೆ ನೀಡಿದರು. ಶರತ್ ಋತುವಿನಲ್ಲಿ ಕಂಡುಬರುವ ದೇಹದ ಅತಿಯಾದ ಪಿತ್ತದೋಷವನ್ನು ನಿವಾರಿಸಲು ವಿರೇಚನ ಶಿಬಿರ ಅಯೋಜಿಸಲಾಗಿದ್ದು, ಪಿತ್ತ ದೋಷ, ಮಲಬದ್ಧತೆ, ಚರ್ಮರೋಗಗಳಾದ ಸೋರಿಯಾಸಿಸ್, ಇಸುಬು, ಹುಳಕಡ್ಡಿ, ಮೊಡವೆ, ಕಾಮಾಲೆ, ಮಧುಮೇಹ, ಮುಟ್ಟಿನ ಸಮಸ್ಯೆ ಸೇರಿದಂತೆ ದೇಹದ ಸ್ವಾಸ್ಥ್ಯ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಸಾರ್ವಜನಿಕರು ವಿರೇಚನಾ ಚಿಕಿತ್ಸೆ ಪಡೆಯಬಹುದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಆಸ್ಪತ್ರೆಯ ಪಂಚಕರ್ಮ ಹೊರರೋಗಿ ವಿಭಾಗ ಅಥವಾ ದೂರವಾಣಿ 962048೦722, 9663555378ನ್ನು ಸಂಪರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರು ನೆನಪಿನಂಗಳದಲ್ಲಿ ನಿತ್ಯನೂತನ, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರ ತನಕವೂ ಮೆಚ್ಚುವ ಸಾಹಿತಿಯಾದವರು, ತನ್ನ ಸಾಧನೆಗೆ ಕ್ಷೇತ್ರದ ಮಿತಿಯಿಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ ಕಾರಂತರು ಸಮಾಜಕ್ಕೆ ಬದುಕಿನ ನಿರೂಪಣೆಯನ್ನು ನೀಡಿದವರು. ಅವರ ಸಾಹಿತ್ಯ ಕೃಷಿ ಹಾಗೂ ಸೃಜನಶೀಲ ವ್ಯಕ್ತಿತ್ವದಿಂದ ಕಾರಂತರು ನಮಗೆ ಸ್ಪೂರ್ತಿ. ಕಾರಂತರು ನೋಬೆಲ್ ಪ್ರಶಸ್ತಿಗೆ ಆರ್ಹರು, ಅವರು ತೋರಿಸಿದ ಬಾಳ್ವೆಯ ಬೆಳಕಿನ ಹಾದಿಯಲ್ಲಿ ಬದುಕುವುದು ನಮ್ಮ ಜವಾಬ್ದಾರಿ ಎಂದು ಕಾರಂತ ಪ್ರತಿಷ್ಠಾನದ ಟ್ರಸ್ಟಿ, ಉಪನ್ಯಾಸಕ ಜಿ. ಸಂಜೀವ್ ಅವರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ)ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-೨೦೨೧(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಆರನೇ ದಿನದ ಕಾರಂತ ಚಿಂತನ ಹಾಗೂ ತಂತ್ರಾಡಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾರಂಗ ಇವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ 35ನೇ ವರ್ಷದ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನಕರ ಪಟ್ವಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ದಡ್ಡು ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವ ಅಧ್ಯಕ್ಷರಾಗಿ ಗುರುರಾಜ ಹೋಬಳಿದಾರ್, ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್. ತಗ್ಗರ್ಸೆ, ಉಪಾಧ್ಯಕ್ಷರಾಗಿ ಗುರುದಾಸ್ ಹೆಚ್, ಸುಬ್ರಹ್ಮಣ್ಯ ಮದ್ದೋಡಿ(ಶಮ್ಮೀ), ಸುರೇಶ ಬಿಜೂರು, ಕೆ.ವಿ ಸತೀಶ, ವೆಂಕಟರಮಣ ಟಿ., ಕೆ.ಟಿ ರಾಜೇಶ್, ರಾಜೇಶ್ ಕಲ್ಲುಕಂಠ, ಜೊತೆ ಕಾರ್ಯದರ್ಶಿಯಾಗಿ ದಿನಕರ ಜಿ., ಸುರೇಶ ನಾಯ್ಕ, ಮಾಣಿಕ್ಯ ಹೋಬಳಿದಾರ್, ವಿಠಲ ರೊಕ್ಕನ್ ಗಿರೀಶ ಕೆ., ಸುಬ್ರಹ್ಮಣ್ಯ ಹೋಬಳಿದಾರ್, ರಾಮಚಂದ್ರ ಆರ್.ವಿ., ಪವನ ಡಿ., ರಿತೇಶ್ ಪಟ್ವಾಲ್, ರಾಜೇಶ ಬಟ್ವಾಡಿ, ಗಣೇಶ ಕೆ., ಸುಬ್ರಹ್ಮಣ್ಯ ಬಿಜೂರು, ಕೋಶಾಧಿಕಾರಿಯಾಗಿ ರಾಜೇಶ ನೀಲಪ್ಪನಮನೆ, ಗೌರವ ಲೆಕ್ಕ ಪರಿಶೋಧಕರಾಗಿ ಸತೀಶ್ ಹೋಬಳಿದಾರ್ ಆಯ್ಕೆಯಾಗಿದ್ದಾರೆ. ಅ.12ರಿಂದ ಶಾರದೋತ್ಸವ:ಅ.12ರಿಂದ 15ರ ತನಕ ಬೈಂದೂರು ಶ್ರೀ ಸಿತಾರಾಮಚಂದ್ರ ದೇವಸ್ಥಾನದಲ್ಲಿ 35ನೇ ವರ್ಷದ ಶಾರದೋತ್ಸವ ಸಮಾರಂಭ ನಡೆಯಲಿದ್ದು, ಅ.12ರಂದು ಶಾರದ ದೇವಿಯ ವಿಗ್ರಹ ಪ್ರತಿಷ್ಠಾಪನೆ,…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಅಭಿವೃದ್ದಿಗೆ 20 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಹತ್ವಾಕಾಂಕ್ಷೆಯ ಯೋಜನೆ:2006-07ನೇ ಸಾಲಿನಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಸಾಕಾರಗೊಂಡ ಈ ಮಹತ್ವಾಕಾಂಕ್ಷೆಯ ಯೋಜನೆ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು. ಆರಂಭದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಂಗ್ರೋಡ್ ಆನಂತರ ದಿನಗಳಲ್ಲಿ ನಿರ್ವಹಣೆ ಕಾಣದೆ ವರ್ಷಗಳೇ ಸಂದುಹೋಗಿವೆ. ಪೂರ್ಣ ಪ್ರಮಾಣದಲ್ಲಿ ರಿಂಗ್ರೋಡ್ ನಿರ್ಮಾಣದ ಅವಶ್ಯವನ್ನು ಶಾಸಕರು ಮನಗಂಡಿದ್ದರು. ಆದರೆ ನಾನಾ ಕಾರಣಗಳಿಂದ ಅನೇಕ ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ಮಂಜೂರಾತಿ ವಿಳಂಬವಾಗುತ್ತಿತ್ತು. ಕುಂದಾಪುರದ ಸಂಗಮ್ನಿಂದ ಮೊದಲ್ಗೊಂಡು ಪಂಚಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್ ರೋಡ್ ಚರ್ಚ್ ರಸ್ತೆಯನ್ನು ಸಂಧಿಸುತ್ತದೆ. ಸಂಚಾರ ದಟ್ಟಣ ತಗ್ಗಲಿದೆ:ರಿಂಗ್ರೋಡ್ ನಿರ್ಮಾಣವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೇ ಕೋಡಿ ಮೊದಲಾದ ಭಾಗಗಳಿಗೆ ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಪರಿಚಯ ದೃಶ್ಯಿಕೆಯನ್ನು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಬಿಡುಗಡೆಗೊಳಿಸಿದರು. ಬಿಡುಗಡೆಗೊಳಿಸಿದ ನಂತರ ಸಂಸ್ಥೆಯ ವತಿಯಿಂದ ಸಚಿವರನ್ನು ಗೌರವಿಸಿ ಸಮ್ಮಾನಿಸಲಾಯಿತು. ಈ ಸಂದರ್ಭ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ, ಬೈಂದೂರು ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಉಪನ್ಯಾಸಕರಾದ ರಕ್ಷಿತ್ ರಾವ್, ಶಿವರಾಜ್ ಸಿ., ಪ್ರವೀಣ್ ಗಂಗೊಳ್ಳಿ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ನೈಕಂಬ್ಳಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.06: ರೈತರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ Former Registration unified Beneficiary Information System (FRUITS) ಎಂಬ ತಂತ್ರಾಂಶದಲ್ಲಿ ರೈತರ ಮಾಹಿತಿಯನ್ನು ತಕ್ಷಣ ದಾಖಲಿಸುವ ಅಗತ್ಯವಿದ್ದು, ಅದಕ್ಕಾಗಿ ರೈತರು ತಮ್ಮ ಆಧಾರ್ ನಂಬರ್, ಬ್ಯಾಂಕ್ ಖಾತೆಯ ನಂಬರ್ ಹಾಗೂ ರೈತರಿಗೆ ಸಂಬಂಧಪಟ್ಟ ಎಲ್ಲಾ ಕೃಷಿ ಜಮೀನುಗಳ ಸರ್ವೆ ನಂಬರ್ ಅಗತ್ಯವಿದೆ. ಆದುದರಿಂದ ಬೈಂದೂರು ತಾಲೂಕಿನ ಸಮಸ್ತ ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಮತ್ತು ಎಲ್ಲಾ ಕೃಷಿ ಜಮೀನುಗಳ ಮಾಹಿತಿಯನ್ನು ಎರಡು ದಿನಗಳ ಒಳಗೆ ತಮ್ಮ ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಿಗರ ಕಛೇರಿಗೆ ತಲುಪಿಸುವಂತೆ ಬೈಂದೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
