ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ೨೦೧೭-೧೮ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನವರಿಂದ ಬಂದ, ಎಲ್ಲರೂ ಒಂದಾಗಿ ಬಾಳೋಣ ಎಂಬ ಕಲ್ಪನೆಗಳು ಶಾಲೆಯಲ್ಲಿ ಮಾತ್ರ ಸಾಧ್ಯ. ಕಿವಿಯಿಂದ ಕೇಳಿದ ಪಾಠ ಮನಸ್ಸಿನೊಳಗೆ ಹೋಗದಿದ್ದರೆ ಏನೂ ಪ್ರಯೋಜನವಾಗದು. ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ ವ್ಯವಸ್ಥೆಯಿದೆ. ಪ್ರತಿಯೊಂದನ್ನು ಶೃದ್ಧೆಯಿಂದ ಕಲಿತು ವಿಷಯಗಳನ್ನು ಸ್ವೀಕರಿಸಿ ಪುನಃ ಜಗತ್ತಿಗೆ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ತನ್ನ ಅಧಿಕಾರದ ಅವಧಿಯಲ್ಲಿ ದೇವಳದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತೇನೆ ಎಂದರು. ಕಾಲೇಜಿನ ಪ್ರಾಂಶುಪಾಲ ಅರುಣಪ್ರಕಾಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಜಯಂತ್ ಮತ್ತು ವೀರೇಂದ್ರ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ…
Author: ನ್ಯೂಸ್ ಬ್ಯೂರೋ
ಡಿವಿಜಿ ಪುಸ್ತಕದಲ್ಲೊಂದು ಇಣುಕು ನೋಟ ಎಎಸ್‌ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ ಪತ್ರಿಕೋದ್ಯಮ ಬಹಳಷ್ಟು ದೂರ ಸಾಗಿ ಬಂದಿದೆ. ಶತಮಾನಗಳ ಇತಿಹಾಸ ಹೊಂದಿದ ಈ ಉದ್ಯಮ ಶತಮಾನಗಳ ನಂತರವೂ ಭೀತಿಯಿಂದ ಮುಕ್ತವಾಗಿಲ್ಲದಿರುವುದು ಒಂದು ದುರಂತ. ಇಂದಿಗೂ ಪತ್ರಿಕೆಗಳಿಗೆ ಮುಕ್ತವಾಗಿ ಬರೆಯಲು ಭೀತಿ ಇದೆ. ಸರಕಾರದ ಭೀತಿ, ಶಾಸಕಾಂಗದ ಭೀತಿ, ನ್ಯಾಯಾಂಗದ ಭೀತಿ. ಸರಕಾರಕ್ಕೆ ವಿರೋಧವಾಗಿ ಬರೆದರೆ ಗೊತ್ತೇ ಇದೆಯಲ್ಲ, ತಮಿಳುನಾಡಿನಲ್ಲಿ ಜಯಲಲಿತಾ ಆಡಳಿತ ಕಾಲದಲ್ಲಿ ಆದದ್ದು. ಪತ್ರಿಕೆಯ ಬಂಡಲುಗಳಿಗೆ ಬೆಂಕಿ, ಪತ್ರಿಕಾಲಯಗಳಿಗೆ ಪೋಲೀಸ್ ದಾಳಿ, ಮುದ್ರಣಾಲಯಗಳಿಗೆ ವಿದ್ಯುತ್ ಕಡಿತ! ಶಾಸಕಾಂಗದಲ್ಲಿ ನಡೆದದ್ದನ್ನು ನಡೆದಂತೆ ಬರೆದರೂ, ಹಕ್ಕುಚ್ಯುತಿಯ ಭಯ, ಛೀಮಾರಿಯ ಅಪಾಯ, ಬಂಧನದ ಭೀತಿ. ಇನ್ನು ನ್ಯಾಯಾಂಗದ ಕುರಿತಂತೂ ಬರೆಯಲು ಎಂಟೆದೆ ಬೇಕು. ನ್ಯಾಯಾಂಗ ನಿಂದನೆಯಡಿ ತತ್ತರಿಸಬೇಕು. ಒಟ್ಟಿನಲ್ಲಿ 21ನೇ ಶತಮಾನ ಬಂದರೂ ಪತ್ರಿಕೆಗಳು ನಿರ್ಭೀತಿಯಿಂದ, ಸ್ವತಂತ್ರವಾಗಿ ಬರೆಯುವಂತಿಲ್ಲ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ಮರುಭೂಮಿಯಲ್ಲಿನ ಮರೀಚಿಕೆಯಂತಾಗಿಬಿಟ್ಟದೆ. ಯಾರು ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದರೋ, ಅದೇ ರಾಜಕಾರಣಿಗಳ ದಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಸಂಯೋಜಕ ವೃತ್ತದಲ್ಲಿ 2016-17ರ ಅಂತ್ಯದಲ್ಲಿ ಮತ್ತು 2017-18ನೇ ಸಾಲಿನ ಆರಂಭದಲ್ಲಿ ನಿವೃತ್ತರಾದ ಐವರು ಮುಖ್ಯ ಶಿಕ್ಷಕರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತಿ ಹೊಂದಿದ ಸ.ಹಿ.ಪ್ರಾ.ಶಾಲೆ ಕೋಣಿಯ ರಘುವೀರ ಕೆ., ಸ.ಹಿ.ಪ್ರಾ.ಶಾಲೆ ಟಿ.ಟಿ.ರಸ್ತೆಯ ಶಂಕರ ಶೇರೇಗಾರ್, ಹಿಂದೂ ಮಾದರಿ ಹಿ.ಪ್ರಾ.ಶಾಲೆ ಬಸ್ರೂರಿನ ಇಂದಿರಾ ಆರ್.ಶೆಟ್ಟಿ, ಸ.ಹಿ.ಪ್ರಾ.ಶಾಲೆ ಬಳ್ಕೂರು-ಉತ್ತರದ ರೋಸಾ ಇವ್ಲಿನ್ ಮೊಂತೆರೋ, ಆರ್.ಸಿ.ಅನುದಾನಿತ ಹಿ.ಪ್ರಾ.ಶಾಲೆ ಬಸ್ರೂರಿನ ಲೀನಾ ಡಿ’ಸೊಜಾ ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆದೂರು ಸೀತಾರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಶಿಕ್ಷಣ ಸಂಯೋಜಕಿ ಶ್ರೀಮತಿ ದೇವಕುಮಾರಿ, ಮುಖ್ಯ ಶಿಕ್ಷಕಿ ಶ್ರಿಮತಿ ಸುಮನಾ ಅವರು ನಿವೃತ್ತರನ್ನು ಸನ್ಮಾನಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಮಾದರಿ ಹಿ.ಪ್ರಾ. ಶಾಲೆ ವಡೇರಹೋಬಳಿಯ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ವಂದಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೇಸಿಸ್ ನ ವಲಯ ೧೫ರ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಯುವ ಜೇಸಿ ಸದಸ್ಯರಿಗೆ ಟೆಕ್ ಆಫ್ ೨೦೧೭ ತರಬೇತಿ ಕಾರ್ಯಗಾರವನ್ನು ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಪರ್ಕಳ ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಬೆಳ್ಮಣ್ಣು ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಸಾಸ್ತಾನ ವೈರ್ಬೆಂಟ್ ಜ್ಯೂನಿಯರ್ ಜೇಸಿವಿಂಗ್ ಸಂಯುಕ್ತ ಆಶ್ರಯದಲ್ಲಿ ಯುವ ಜೇಸಿ ಸದಸ್ಯರಿಗೆ ಒಂದು ದಿನದ ಪರಿಣಾಮಕಾರಿಯಾಗಿ ಭಾಷಣ ಕಲೆ ಬಗ್ಗೆ ತರಬೇತಿ ಕಾರ್ಯಗಾರವು ರಂದು ಕುಂದಾಪುರ ಬಿ.ಆರ್.ರಾವ್ ಹಿಂದು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಲಯ ೧೫ರ ತರಬೇತಿ ವಿಭಾಗದ ಸಂಯೋಜಕ ಜೇಸಿ ವಿಷ್ಣು ಕೆ.ಬಿ, ಪೂರ್ವ ವಲಯಾಧಿಕಾರಿ ಜೇಸಿ ಶಕೀರ್ ಎಮ್.ಹಾವಂಜೆ, ಜೇಸಿಐ ಕುಂದಾಪುರ ಅಧ್ಯಕ್ಷೆ ಜೇಸಿ ಅsಕ್ಷತಾ ಗಿರೀಶ ಐತಾಳ ಜೇಸಿಐ ಪರ್ಕಳ ಅಧ್ಯಕ್ಷೆ ಜೇಸಿ ಆಶ.ಬಿ.. ತರಬೇತುದಾರರಾಗಿ ಜೇಸಿ ರಾಘವೇಂದ್ರ ಪ್ರಭು ಹಾಗೂ ಜೇಸಿ ಸುಬ್ರಹ್ಮಣ್ಯ ಜಿ ಜೇಸಿಐ ಸಾಸ್ತಾನ ವೈರ್ಬೆಂಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇಶದಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನವನ್ನು ಘೋಷಣೆ ಮಾಡಿದ ಸಂದರ್ಭ ಜೈಲುವಾಸ ಅನುಭವಿಸಿದ್ದ ಹುತಾತ್ಮರಿಗೆ ಗಂಗೊಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಗಂಗೊಳ್ಳಿಯ ಎಂ.ಪ್ರಭಾಕರ ಪೈ ಅವರ ನಿವಾಸಕ್ಕೆ ತೆರಳಿದ ಬಿಜೆಪಿ ಕಾರ್ಯಕರ್ತರು ಎಂ.ಪ್ರಭಾಕರ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿನಮನ ಅರ್ಪಿಸಿದರು. ಎಂ. ಪ್ರಭಾಕರ ನಾಗೇಂದ್ರ ಪೈ ಅವರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭ ಬಂಧನಕ್ಕೊಳಗಾದ ರಾಮ ದೇವಾಡಿಗ, ಎಂ.ಪ್ರಭಾಕರ ಪೈ, ಡಾ.ಎಸ್.ವಿ.ಪೈ, ದೇವದಾಸ ಗಾಣಿಗ, ಎಸ್.ವಿ.ಪೈ ಪಾಂಡು, ಎಂ.ಕಮಲಾಕ್ಷ ಪೈ ಮೊದಲಾದವರ ಸೇವೆಯನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಜನಸಂಘದ ಕಾಲದಲ್ಲಿ ಹಗಲಿರುಳು ಸಂಘಟನೆಗಾಗಿ, ಹಿಂದು ಸಮಾಜದ ಅಭಿವೃದ್ಧಿಗೆ ದುಡಿದ ಇಂತಹ ಮಹಾನುಭಾವರು ನಮಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕಡಲ್ಕೊರೆತಕ್ಕೆ ತುತ್ತಾಗಿರುವ ಗಂಗೊಳ್ಳಿ ಗ್ರಾಮದ ಬ್ಯಾಲಿಕೊಡೇರಿ ಪ್ರದೇಶಕ್ಕೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಲ್ಕೊರೆತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ಅವರು ಮುಂಜಾಗ್ರತಾ ಕ್ರಮವಾಗಿ ಕಡಲ್ಕೊರೆತ ತಡೆಯಲು ಕೂಡಲೇ ತಾತ್ಕಾಲಿಕ ತಡೆಗೋಡೆ ಕಾಮಗಾರಿಯನ್ನು ನಡೆಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗಂಗೊಳ್ಳಿ ಗ್ರಾಮದ ಬ್ಯಾಲಿಕೊಡೇರಿ, ಖಾರ್ವಿಕೇರಿ ಹಾಗೂ ಬಂದರು ಬೇಲಿಕೇರಿ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಸುಮಾಎಉ ೧೨ ಮನೆಗಳು ಅಪಾಯದಂಚಿನಲ್ಲಿದೆ. ಅನೇಕ ಮರಗಳು ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದೆ. ಆದ್ದರಿಂದ ಕಡಲ್ಕೊರೆತವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಡಲ್ಕೊರತದ ಹಾನಿಯ ಬಗ್ಗೆ ಹಾಗೂ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡುವುದಾಗಿ ಅವರು ಹೇಳಿದರು. ಗಂಗೊಳ್ಳಿ ಗ್ರಾಮದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನ 2016-17 ನೆ ಸಾಲಿನ ’ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿಯನ್ನು ಕುಂದಾಪುರ ತಾಲೂಕಿನ ಬಿಜೂರಿನ ಗೋವಿಂದ ಬಾಬು ಪೂಜಾರಿಯವರಿಗೆ ನೀಡಲಾಗಿದೆ. ಅವರನ್ನು ಪ್ರಶಸ್ತಿಯ ’ಆಹಾರ ಮತ್ತು ಅತಿಥಿ ಸತ್ಕಾರ’ ವಿಭಾಗದಲ್ಲಿ ಗುರುತಿಸಲಾಗಿದ್ದು, ಹೊಸದೆಹಲಿ ಲೋಧಿ ರಸ್ತೆಯಲ್ಲಿರುವ ಗುಲ್ಮೋಹರ್ ಹೆಬಿಟೆಟ್ ವರ್ಡ್, ಇಂಡಿಯಾ ಹೆಬಿಟೆಟ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಪಾಲ ಡಾ. ಭೀಷ್ಮ ನಾರಾಯಣ್ ಸಿಂಗ್ ಪ್ರಶಸ್ತಿ ಪ್ರದಾನಿಸಿದರು. ಈ ಸಂದರ್ಭ ಸಿಕ್ಕಿಂನ ಮಾಜಿ ರಾಜ್ಯಪಾಲ ಬಿ. ಪಿ. ಸಿಂಗ್, ಕಾಂಗ್ರೆಸ್‌ನ ಮಾಜಿ ಸಂಸದ ಹರಿಕೇಶ್ ಬಹಾದೂರ್, ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ವೇದಪ್ರಕಾಶ್, ಸುಪ್ರಿಂಕೋರ್ಟ್ ನ್ಯಾಯವಾದಿ ಚಂದ್ರ ರಾಮನ್, ಉದ್ಯಮಿ ಮೇಘಾ ವರ್ಮ ಉಪಸ್ಥಿತರಿದ್ದರು. ಫೌಂಡೇಶನ್ನಿನ ಉನಿಯಾಲ್ ಕಾರ್ಯಕ್ರಮ ಸಂಯೋಜಿಸಿದ್ದರು. ಗೋವಿಂದ ಬಾಬು ಪೂಜಾರಿ 2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದರು. ಇದನ್ನು 2015ರಲ್ಲಿ ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟ್ಯಾಲಿಟಿ ಪೈವೆಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಸ್ವಂತಿಕೆ ಹಾಗೂ ಅನನ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಯೋಚನೆಗಳ ಮೇಲೆ ಅನ್ಯ ಪ್ರಭಾವ ಜಾಸ್ತಿಯಾಗುತ್ತಿದೆ. ಪ್ರಭಾವಗಳಿಗೆ ಒಳಗಾಗಿ ವಿದ್ಯಾರ್ಥಿಗಳು ಬದುಕಿನ ನೈಜತೆಯನ್ನು ಕಳೆದುಕೊಳ್ಳಬಾರದು. ಎಲ್ಲವನ್ನು ಒಳಗೊಳ್ಳುತ್ತಾ ಒಡನಾಟದ ಮೂಲಕ ನಡೆಯುವ ಕಲಿಕೆಯೇ ದೊಡ್ಡ ಕಲಿಕೆ ಎಂದು ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕ ಉದಯ ಗಾಂವಕರ್ ಹೇಳಿದರು. ಅವರುಕುಂದಾಪುರದಡಾ. ಬಿ. ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ೨೦೧೭-೧೮ನೇ ಶೈಕ್ಷಣಿಕ ಸಾಲಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ ಮಾಹಿತಿಯನ್ನುಜ್ಞಾನಎಂದು ಪರಿಭಾವಿಸುತ್ತಾರೆ. ಮಾಹಿತಿಯೇ ಜ್ಞಾನವಲ್ಲ, ಜ್ಞಾನ ರಚನಾತ್ಮಕವಾಗಿದ್ದು, ಸ್ವಂತಿಕೆಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಒಳ್ಳೆದು ಕೆಟ್ಟದನ್ನು ಪರಾಮರ್ಶೆ ಮಾಡುವ ಮೂಲಕ ಮಾನವ ಪ್ರಜ್ಞೆ ಬೆಳೆಸಿಕೊಳ್ಳಿ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ್‌ಅಧ್ಯಕ್ಷತೆ ವಹಿಸಿದ್ದರು. ವಿವಿಧ ವೇದಿಕೆಗಳ ಮುಖ್ಯ ಸಂಯೋಜಕ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಉಪನ್ಯಾಸಕಿ ರಕ್ಷಾ ಎಸ್. ಶೆಟ್ಟಿ ವಿವಿಧ ವೇದಿಕೆಗಳ ಧ್ಯೆಯೋದ್ಧೇಶಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಮೊಂಟೆಸರಿ ಮಕ್ಕಳಿಗೋಸ್ಕರ ಬೀಜದ ಉಂಡೆ (ಸೀಡ್ ಬಾಲ್) ತಯಾರಿಕೆಯ ವಿಶೇಷ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ’ಪಾಠದ ಜೋತೆಗೆ ಆಟ, ಆಟದೊಂದಿಗೆ ಪಾಠ’ ಎಂಬ ವಿಶೇಷ ಯೋಜನೆಯೊಂದಕ್ಕೆ ಇಂದು ಮಕ್ಕಳು ಚಾಲನೆ ನೀಡಿದರು. ಮೊದಲಿಗೆ ಕೆಂಪು ಮಣ್ಣಿಗೆ ನೀರನ್ನು ಸೇರಿಸಿ ಮಣ್ಣನ್ನು ಹದಗೊಳಿಸಿಕೊಳ್ಳಲಾಯಿತು. ನಂತರ ಮಕ್ಕಳನ್ನು ಸುತ್ತ ಕುಳ್ಳಿರಿಸಿ ಮಣ್ಣಿನ ಉಂಡೆಗಳನ್ನು ರಚಿಸುವಂತೆ ತಿಳಿಸಲಾಯಿತು. ತಮ್ಮ ಪುಟಾಣಿ ಕೈಗಳಿಂದ ವಿವಿಧ ಆಕಾರದ ಉಂಡೆಗಳನ್ನು ರಚಿಸಿ ಅದರ ಮಧ್ಯಭಾಗದಲ್ಲಿ ವಿವಿಧ ತರಕಾರಿ (ಬೆಂಡೆಕಾಯಿ, ಸೌತೆಕಾಯಿ, ಕುಂಬಳಕಾಯಿ ) ಬೀಜಗಳನ್ನು ಇಟ್ಟು ವೃತ್ತಾಕಾರದ ಉಂಡೆಗಳನ್ನು ರಚಿಸಲಾಯಿತು. ಈ ಕ್ರಿಯಾತ್ಮಕ ಚಟುವಟಿಕೆಯ ಜೊತೆಯಲ್ಲಿ ಇವುಗಳ ಮಹತ್ವವನ್ನು ಶಿಕ್ಷಕಿಯರು ಮಕ್ಕಳಿಗೆ ತಿಳಿಸಿದರು. ಮುಖ್ಯವಾಗಿ ಈ ಚಟುವಟಿಕೆಯಿಂದಾಗಿ ಪುಟಾಣಿಗಳ ಕೈಬೆರಳುಗಳಿಗೆ ಉತ್ತಮ ವ್ಯಾಯಾಮ ಸಿಕ್ಕಿದಂತಾಗುತ್ತದೆ. ಒಟ್ಟಿನಲ್ಲಿ ಬಹು ಉಪಯೋಗದ ಸೀಡ್ ಬಾಲ್ ತಯಾರಿಕೆಯನ್ನು ಮಾಡುವ ಮೂಲಕ ಪುಟಾಣಿಗಳು ಮತ್ತು ಶಿಕ್ಷಕಿಯರು ಆನಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ನಿರ್ದೇಶಕಿ ಅನುಪಮಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಜರಗಿತು. ದಾನಿಗಳಾದ ಪ್ರಕಾಶ ಎಂ.ಪೂಜಾರಿ ಮತ್ತು ಅರುಣ ಬುತ್ತೆಲ್ಲೊ ಅವರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮೂಲಕ ಕೊಡ ಮಾಡಿದ ಪುಸ್ತಕಗಳನ್ನು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಿದ ಪ್ರಕಾಶ ಎಂ.ಪೂಜಾರಿ ಮತ್ತು ಅರುಣ ಬುತ್ತೆಲ್ಲೊ ಶುಭ ಹಾರೈಸಿದರು. ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀಧರ ಮೇಸ್ತ, ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಶಿಕ್ಷಕಿ ಪವಿತ್ರ ಮೇಸ್ತ, ಸಂಘದ ಕಾರ್ಯದರ್ಶಿ ರಾಘವೇಂದ್ರ ಡಿ., ಸದಸ್ಯ ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
