Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಮೇ 24: ರಾಜ್ಯ ಸರಕಾರದ ಅಧಿಸೂಚನೆಯಂತೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ಉಡುಪಿ ಜಿಲ್ಲೆಯೂ ಸೇರಿದಂತೆ ಕರ್ನಾಟಕ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರ ವರೆಗೆ ಒಟ್ಟು 61 ದಿನಗಳ ನಿಷೇಧವನ್ನು ಹೇರಿ ಆದೇಶವನ್ನು ಹೊರಡಿಸಿರುತ್ತದೆ. ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯ ವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ/ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿರುತ್ತದೆ. ಕೇಂದ್ರ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯದ ಆದೇಶದಂತೆ ರಾಜ್ಯವೂ ಸೇರಿದಂತೆ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳ ವಿಶೇಷ ಆರ್ಥಿಕ ವಲಯದ (12 ರಿಂದ 200 ನಾಟಿಕಲ್ ಮೈಲಿ) ಜಲಪ್ರದೇಶದಲ್ಲಿ ಜೂನ್ 1…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೋಮವಾರ 927 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 4 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 332, ಕುಂದಾಪುರ, ಬೈಂದೂರು ತಾಲೂಕಿನ 325, ಕಾರ್ಕಳ, ಹೆಬ್ರಿ ತಾಲೂಕಿನ 267 ಮಂದಿಗೆ ಹಾಗೂ ಹೊರ ಜಿಲ್ಲೆಯ 3 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 927 ಪ್ರಕರಣಗಳಲ್ಲಿ 21 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 906 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 56 ವರ್ಷದ ಪುರುಷ, 47 ವರ್ಷದ ಪುರುಷ, ಕುಂದಾಪುರದ 66 ವರ್ಷದ ವೃದ್ಧೆ, 72 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 845 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 5851 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 2692 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದು 2849 ಮಂದಿಗೆ ಮೊದಲನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಗ್ರಾಮ, ಗುಜ್ಜಾಡಿ, ತ್ರಾಸಿ, ಮೋವಾಡಿ ಗ್ರಾಮದಲ್ಲಿ 21 ಕೊರಗ ಸಮುದಾಯದ ಕುಟುಂಬಗಳಿಗೆ ಸೋಮವಾರ ಆಹಾರ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಚಿತ್ರನಟ ಚೇತನ್ ಅವರ ಚೇತನ್ ಫೌಂಡೇಶನ್ ಟ್ರಸ್ಟ್ ಹಾಗೂ ಬೆಂಗಳೂರು ಉದ್ಯಮಿಯಾದ ಕೆ.ವಿ ನಾಗರಾಜ್, ಉದ್ಯಮಿ ದಿನೇಶ್ ಮಂಗಳೂರು ಹಾಗೂ ಮುಳ್ಳಿಕಟ್ಟೆ ಸಂಕಲ್ಪ ಕ್ಲಿನಿಕ್ ಮಾಲಕ ಪುಷ್ಪರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಂಗೊಳ್ಳಿ ಶಾಖೆ ಸಹಯೋಗದೊಂದಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭ ನಟ ವಜ್ರಾಂಗ್ ಶೆಟ್ಟಿ (ಮಣಿ ಶೆಟ್ಟಿ), ದ.ಸಂ.ಸ ಗಂಗೊಳ್ಳಿ ಶಾಖೆ ಮುಖಂಡರಾದ ಜಗದೀಶ್ ಗಂಗೊಳ್ಳಿ, ಸದಸ್ಯರಾದ ಸಂಪತ್, ಸಚಿನ್, ವಿಶ್ವನಾಥ್, ರಾಘವೇಂದ್ರ, ಸತೀಶ್, ಮಿಥುನ್ ಮೊದಲಾದವರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಂದಾಗಿ ಕೋವಿಡ್ ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಮೇ.25ರಿಂದ ಜೂನ್.7ರ ತನಕ ಯಾವುದೇ ಮದುವೆ ಕಾರ್ಯಕ್ರಮ ನಡೆಸಲು ಹೊಸತಾಗಿ ಅನುಮತಿ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ. ಸೋಮವಾರ ಉಡುಪಿಯಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಕಾರ್ಯಕ್ರಮಗಳಿಗೂ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ ಮದುವೆ ಕಾರ್ಯಕ್ರಮಗಳನ್ನು 40 ಜನರ ಮಿತಿಯಲ್ಲಿ ನಡೆಸಬಹುದಾಗಿದ್ದು, ಹೊಸದಾಗಿ ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಆಯಾ ತಾಲೂಕುಗಳ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಕೋವಿಡ್ ನಿಷೇಧಾಜ್ಞೆ ಜಾರಿ ಇರುವ ಸಂದರ್ಭ ಮೆಹಂದಿ, ಎಂಗೆಜ್‌ಮೆಂಟ್ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅನಗತ್ಯವಾಗಿ ಗುಂಪುಗೂಡಿ ಆಟವಾಡುವುದು ಕಂಡಬರುತ್ತಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು. ಬೇಕರಿಗಳಲ್ಲಿರುವ ಕೆಲವು ಉತ್ಪನ್ನಗಳು ಹಾಳಾಗುತ್ತಿದ್ದು ಬೇಕರಿ ತೆರೆಯಲು ಅನುಮತಿ ನೀಡುವಂತೆ ಮನವಿ ಬಂದಿದ್ದು, ಅದರಂತೆ ಬುಧವಾರ ಒಂದು ದಿನ ಮಾತ್ರ ಬೆಳಿಗ್ಗೆ…

Read More

ರಾತ್ರಿಯೂ ಮೊಬೈಲ್‌ನಲ್ಲಿ ಚಾಟ್. ಬೆಳಗ್ಗೆ ಎದ್ದೂ ಮೊಬೈಲ್ ವೀಕ್ಷಣೆ. ಈ ಮಧ್ಯೆ ಎಲ್ಲಿಯೋ ತುಸು ನಿದ್ದೆ. ಈ ಜಂಜಾಟದಲ್ಲಿ. ದಣಿದ ದೇಹಕ್ಕೆ ಅಗತ್ಯ ವಿಶ್ರಾಂತಿಯೇ ಸಿಗೋಲ್ಲ. ದೇಹ ದಣಿದಿದೆ ಎಂದರೆ, ಬಾಯಿಗೆ ಏನೂ ರುಚಿಸೋಲ್ಲ. ಸಿಕ್ಕಿದ್ದು ತಿಂದು ಹೊರಟಿರೋ, ದೈಹಿಕ ಆರೋಗ್ಯಕ್ಕೂ ಕುತ್ತು, ಮಾನಸಿಕ ಆರೋಗ್ಯಕ್ಕೂ ಅಪಾಯ./ಕುಂದಾಪ್ರ ಡಾಟ್ ಕಾಂ/ ದಿನಪೂರ್ತಿ ಆರೋಗ್ಯವಾಗಿರಬೇಕೆಂದರೆ ಅಗತ್ಯದಷ್ಟು ಪೋಷಕಾಂಶಗಳು ನಮ್ಮ ದೇಹ ಸೇರಬೇಕು. ಅಗತ್ಯದಷ್ಟು ಪೌಷ್ಟಿಕಾಂಶಗಳು ನಮ್ಮ ದೇಹ ಸೇರುತ್ತಿಲ್ಲವೆಂದರೆ ಕೋಪ-ತಾಪ ಹೆಚ್ಚುತ್ತೆ. ಆತಂಕ, ಸಂತೋಷಗಳನ್ನು ತಹಬದಿಗೆ ತಂದುಕೊಳ್ಳಲು ಹೆಣಗಾಡಬೇಕು. ಈ ಸಮಸ್ಯೆಯಿಂದ ದೂರವಾಗಲು ಸಾಧ್ಯವಾದಷ್ಟು ಈ ಆಹಾರ ಸೇವಿಸಿ./ಕುಂದಾಪ್ರ ಡಾಟ್ ಕಾಂ/  ಆತಂಕ ದೂರ ಮಾಡಲು ಸೇಬು ಮತ್ತು ದಾಳಿಂಬೆ  ಶಾಂತ ಮನಸ್ಸಿಗೆ ಕಿತ್ತಲೆ ಶಕ್ತಿ ಹೆಚ್ಚಿಸಲು ಬಾಳೆಹಣ್ಣು ದುಃಖ ಕಡಿಮೆ ಮಾಡಲು ಸೊಪ್ಪು ಸುಳ್ಳು ಹೇಳಬಾರದೆಂದರೆ ಕಪ್ಪು ದ್ರಾಕ್ಷಿ  ಕಣ್ಣಿನ ದೃಷ್ಟಿ ಹೆಚ್ಚಿಸಲು ಪ್ಲಮ್

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಡಲ್ಕೊರೆತ ಮತ್ತು ಚಂಡಮಾರುತದ ಕಾರಣದಿಂದ ಕಡಿದುಹೋದ ಮರವಂತೆ ಕರಾವಳಿ ಮಾರ್ಗದ ಸಂಪರ್ಕವನ್ನು ತಾತ್ಕಾಲಿಕ ನೆಲೆಯಲ್ಲಿ ಮರುಸ್ಥಾಪಿಸುವ ಕಾಮಗಾರಿ ಈಗ ಭರದಿಂದ ಸಾಗಿದೆ. ಇನ್ನು ಒಂದು ವಾರದಲ್ಲಿ ಕೆಲಸ ಮುಗಿದು, ಜನ, ವಾಹನ ಸಂಚಾರ ಸುಗಮವಾಗಲಿದೆ. ಮರವಂತೆಯಲ್ಲಿ ಅರ್ಧದಲ್ಲಿ ಸ್ಥಗಿತವಾಗಿರುವ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ ತೀರದಲ್ಲಿ ಬಿಟ್ಟುಬಿಟ್ಟು ಕಡಲ್ಕೊರೆತ ಸಂಭವಿಸಿತ್ತು. ಅದರಿಂದ ಒಂದಷ್ಟು ಭೂಭಾಗ, ತೆಂಗಿನ ಮರಗಳು ಸಿಲುಕಿ ಸಮುದ್ರ ಸೇರಿದ್ದುವು. ಅದರ ಬೆನ್ನಲ್ಲಿ, ಉರಿಯುವ ಬೆಂಕಿಗೆ ತೈಲ ಸುರಿದಂತೆ ಕಳೆದ ವಾರ ಅಪ್ಪಳಿಸಿದ ತೌತೆ ಚಂಡಮಾರುತ ಸಮುದ್ರದ ಮಟ್ಟವನ್ನು ಹೆಚ್ಚಿಸಿತು. ತೆರೆಗಳು ರುದ್ರನರ್ತನ ನಡೆಸಿದುವು. ಅದರ ಪರಿಣಾಮವಾಗಿ ಸುಮಾರು 350 ಮೀಟರು ಉದ್ದ, 50 ಮೀಟರು ಅಗಲದ ಭೂಭಾಗ, ನೂರಾರು ತೆಂಗಿನ ಮರಗಳು, ಹತ್ತಾರು ಮೀನುಗಾರಿಕಾ ಶೆಡ್‌ಗಳು ನೋಡನೋಡುತ್ತಿದ್ದಂತೆ ಕಡಲು ಪಾಲಾದುವು. ಅಷ್ಟೇ ಉದ್ದದ ಕಾಂಕ್ರೀಟ್ ರಸ್ತೆ ತುಂಡಾಗಿ, ಛಿದ್ರಗೊಂಡಿತು. ಅದರೊಂದಿಗೆ ಮೀನುಗಾರರ ವಸತಿ ಪ್ರದೇಶದ ಏಕೈಕ ಸಂಪರ್ಕದ ಕೊಂಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಭಾನುವಾರ 909 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 4 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 486, ಕುಂದಾಪುರ, ಬೈಂದೂರು ತಾಲೂಕಿನ 273, ಕಾರ್ಕಳ, ಹೆಬ್ರಿ ತಾಲೂಕಿನ 148 ಮಂದಿಗೆ ಹಾಗೂ ಹೊರ ಜಿಲ್ಲೆಯ 2 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 909 ಪ್ರಕರಣಗಳಲ್ಲಿ 20 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 889 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 65 ವರ್ಷದ ವೃದ್ಧ, 53 ವರ್ಷದ ಪುರುಷ, 53 ವರ್ಷದ ಪುರುಷ, ಕುಂದಾಪುರದ 79 ವರ್ಷದ ವೃದ್ಧ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 772 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 5773 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 4018 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೂಚನೆ: ಕುಂದಾಪುರ & ಬೈಂದೂರು ತಾಲೂಕನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶನಿವಾರ 849 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 5 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 324, ಕುಂದಾಪುರ, ಬೈಂದೂರು ತಾಲೂಕಿನ 303, ಕಾರ್ಕಳ, ಹೆಬ್ರಿ ತಾಲೂಕಿನ 216 ಮಂದಿಗೆ ಹಾಗೂ ಹೊರ ಜಿಲ್ಲೆಯ 6 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 849 ಪ್ರಕರಣಗಳಲ್ಲಿ 29 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 820 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 74 ವರ್ಷದ ವೃದ್ಧ, 76 ವರ್ಷದ ವೃದ್ಧೆ, ಕುಂದಾಪುರದ 80 ವರ್ಷದ ವೃದ್ಧೆ, 65 ವರ್ಷದ ವೃದ್ಧ, 42 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 1164 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 5640 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 1164 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು ಗ್ರಾಮದ ನಾಗಿನಗದ್ದೆ, ಕೋಟೆಮನೆ ಮುಂತಾದ ಪ್ರದೇಶಗಳ ಕೊರೋನಾ ಸೊಂಕಿತರ ಮನೆಗಳಿಗೆ ಶನಿವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕುಟುಂಬಿಕರಿಗೆ ಧೈರ್ಯ ತುಂಬಿದರು. ಶಿರೂರು ಗ್ರಾಮದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಮಾಡಿಕೊಳ್ಳಲಾದ ಸಿದ್ಧತೆಯನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿನ ಸಿದ್ದತೆ ಪರಿಶೀಲನೆ ಮತ್ತು ಧೈರ್ಯ ತುಂಬಲು ಖುದ್ದು ಮನೆಗಳಿಗೆ ಭೇಟಿ ನೀಡಲಾಗಿದೆ. ಈಗಾಗಲೇ ಜಿಲ್ಲಾಡಳಿತ ಕೊರೋನಾ ಕುರಿತಂತೆ ಪೂರ್ಣ ಸಿದ್ದತೆ ಮಾಡಿಕೊಂಡಿದೆ. ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಚಿಕಿತ್ಸೆ ತಕ್ಷಣದಲ್ಲಿ ದೊರೆಯಲಿದೆ. ಜನರು ಆತಂಕಪಡುವಂತ ಅವಶ್ಯಕತೆಯಿಲ್ಲ. ಬ್ಲ್ಯಾಕ್ ಫಂಗಸ್ ಬಗ್ಗೆ ಭಯಪಡುವಂತ ಅವಶ್ಯಕತೆಯಿಲ್ಲ. ಕೊರೋನಾ ಸೋಂಕಿತರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದು ಉಸಿರಾಟದ ತೊಂದರೆಯಿದ್ದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಅನಗತ್ಯ ಸಂಚಾರ ಮಾಡಬಾರದು ಎಂದರು. ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ., ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಹೆಚ್.…

Read More

ಬೆಳಗ್ಗೆ ಉಪಹಾರ ಸೇವನೆ ಮಾಡುವುದು ತುಂಬಾನೆ ಮುಖ್ಯವಾಗಿದೆ. ಆದರೆ ಹೆಚ್ಚಿನ ಜನರು ತಮ್ಮ ಕೆಲಸದ ಒತ್ತಡದ ಜೀವನ ಶೈಲಿ ಹಾಗು ಆಫೀಸ್ಗೆ ಅಥವಾ ಕಾಲೇಜಿಗೆ ತಡವಾಗುವುದರಿಂದ ಬ್ರೇಕ್ ಫಾಸ್ಟ್ ಅರ್ಧದಲ್ಲೇ ಬಿಟ್ಟು ಅಥವಾ ತಿನ್ನದೇ ಹೊರಡುತ್ತಾರೆ. ಇದರಿಂದ ಏನು ಸಮಸ್ಯೆ ಇಲ್ಲ ಎಂದು ಅಂದ್ಕೊತ್ತಾರೆ. ಆದರೆ ಉಪಹಾರ ಸೇವಿಸದಿರುವುದರಿಂದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ./ಕುಂದಾಪ್ರ ಡಾಟ್ ಕಾಂ/  ಬ್ರೇಕ್ ಫಾಸ್ಟ್ ಮಾಡದೆ ಇದ್ದರೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬ್ರೇಕ್ ಫಾಸ್ಟ್ ಮಿಸ್ ಮಾಡಿದರೆ ಟೈಪ್ 2 ಮಧುಮೇಹದ ಹೆಚ್ಚಿನ ಅಪಾಯ ಇರುತ್ತದೆ, ಇನ್ಸುಲಿನ್ ಪ್ರತಿರೋಧ ಮತ್ತು ಹಾರ್ಮೋನ್ ನಿಯಂತ್ರಣದಿಂದ ಸ್ಥೂಲಕಾಯದ ಅಪಾಯ, ಮತ್ತು ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಹೆಚ್ಚಾಗಿರುತ್ತದೆ ಎಂದು ಕಂಡುಬಂದಿದೆ.  ದಿನವಿಡೀ ಬೇಕಾಗುವ ಫೈಬರ್ ಮತ್ತು ವಿಟಮಿನ್ ಗಳು ಸೇರಿದಂತೆ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ಬ್ರೇಕ್ ಫಾಸ್ಟ್ ಉತ್ತಮ ಆಹಾರವಾಗಿದೆ. ಆದ್ದರಿಂದ, ಉಪಾಹಾರವನ್ನು ಬಿಟ್ಟುಬಿಡುವುದರಿಂದ ದೇಹಕ್ಕೆ ಸಾಕಷ್ಟು…

Read More