ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಿತ್ರ ರಂಗದ ಟಿಕೆಟ್ ದರದಲ್ಲಿ ಜಿಎಸ್ಟಿಯಿಂದಾಗಿ ಉಂಟಾಗುವ ಹೆಚ್ಚಳ ಹಾಗೂ ಸಿನೆಮಾ ನಿರ್ಮಾಪಕರು ಸಲ್ಲಿಸಬೇಕಾದ ತೆರಿಗೆ ಸಮೇತ ಸರಿಯಾದ ಮಾಹಿತಿ ಈವರೆಗೆ ಲಭ್ಯವಾಗದೇ ಇರುವುದರಿಂದ ಫಿಲ್ಮ್ಚೇಂ ಬರ್ ಜಿಎಸ್ಟಿ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುವುದಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹೇಳಿದರು. ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಪತ್ನಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಆಕೆಗೆ ಬೆಂಬಲಿಸಿದ್ದೆ. ರಾಹುಲ್ ಗಾಂಧಿಯವರು ನಮ್ಮ ಮನೆಗೆ ಆಗಮಿಸಿರುವ ವಿಚಾರವು ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿರಬಹುದು, ಆದರೆ ನನ್ನ ತಾಯಿಯ ನಿಧನದ ಬಗ್ಗೆ ಸಾಂತ್ವನ ಹೇಳಲು ಅವರು ಆಗಮಿಸಿದ್ದರು ಎಂದರು. ತೆರೆ ಕಾಣಲಿರುವ ಶಿವರಾಜ್ ಕುಮಾರ್ ನಟನೆಯ ಲೀಡರ್ ಚಿತ್ರದ ಬಗ್ಗೆ ಗಮನ ಸೆಳೆದಾಗ ಇದೊಂದು ಕಮರ್ಶಿಯಲ್ ಚಿತ್ರವಾಗಿದ್ದು ಇದರಲ್ಲಿ ದೇಶ ಪ್ರೇಮ ಹಾಗೂ ಕೌಟುಂಬಿಕ ಕಥೆ ಹೊಂದಿದೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಮೂಡುಬಗೆಯಲ್ಲಿ ಬೈಕ್ ಸವಾರರಿಗೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಹಳ್ಳಿಹೊಳೆ ಶಾಡಬೇರು ನಿವಾಸಿ ಶಿವಕುಮಾರ್ ರಾವ್ (28) ಹಾಗೂ ಗಾಯಾಳುವನ್ನು ಕೊಕ್ಕಡದ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಹಳ್ಳಿಹೊಳೆಗೆ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮೂಡುಬಗೆ ರಸ್ತೆಯಲ್ಲಿ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಶಿವಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ ರವಿ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಪಘಾತ ನಡೆಸಿದ ಟಿಪ್ಪರ್ ನಿಲ್ಲಿಸದೇ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ. ಶಾಡಬೇರು ನಿವಾಸಿ ಮಂಜುನಾಥ್ ಅವರ ಒಬ್ಬನೇ ಮಗನಾಗಿದ್ದ ಶಿವಕುಮಾರ್ ಬೆಂಗಳೂರಿನಿಂದ ಕೆಲವು ತಿಂಗಳ ಹಿಂದಷ್ಟೇ ಊರಿಗೆ ಮರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ರವಿ ಶಿವಕುಮಾರ್ ಅವರ ಸಂಬಂಧಿಯಾಗಿದ್ದು ಇಬ್ಬರು ಮಧ್ಯಾಹ್ನ ಕುಂದಾಪುರದಲ್ಲಿ ಕೃಷಿ ಸಲಕರಣೆಗಳನ್ನು…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪವಿತ್ರತೀರ್ಥ ಎಂದು ಬೊಗಸೆ ತುಂಬಿಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಚಕ್ರಾನದಿ ನೀರು ಅಪವಿತ್ರ! ಕೈಯಲ್ಲಿ ನೀರು ಮುಟ್ಟಲು ಹೇಸಿಗೆ ಆಗುತ್ತದೆ. ಚಕ್ರಾ ನದಿ ಪಾತ್ರ ತ್ಯಾಜ್ಯಗಳ ಗೊಬ್ಬರಗುಂಡಿ. ಸತ್ತ ಪ್ರಾಣಿಗಳ ಕಳೇಬರ, ಜಲ ಮಾಲಿನ್ಯದಿಂದ ಸತ್ತಜಲಚರ, ಮೊಟ್ಟೆಗಳ ಓಡು, ಥರಹೇವಾರಿ ತ್ಯಾಜ್ಯ ತೊಟ್ಟಿ! ಒಂದುಕಾಲದಲ್ಲಿ ವಂಡ್ಸೆ ಬಳಿ ಪವಿತ್ರಚಕ್ರಾ ನದಿಯಲ್ಲಿ ಸ್ನಾನ ಮಾಡಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಾತ್ರೆಗೆ ಹೋಗುತ್ತಿದ್ದರು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಭಕ್ತರು ಚಕ್ರಾ ನದಿಯಲ್ಲಿ ಮಿಂದು, ಬಟ್ಟೆ ಒಣಗಿಸಿ, ಮುಂದೆ ಹೋಗುತ್ತಿದ್ದರಿಂದ ವಂಡ್ಸೆ ಎಂಬ ಹೆಸರು ಬರಲು ಕಾರಣ. ಒಣಸೆ ಸಂಕುಚತಗೊಂಡು ವಂಡ್ಸೆ ಆಗಿದೆ ಎನ್ನೋದು ಸ್ಥಳೀಯರ ನಂಬಿಕೆ. ಇಂತಾ ಪವಿತ್ರತೀರ್ಥದಲ್ಲಿ ಈಗ ಸ್ನಾನ ಮಾಡಿದರೆ ಚರ್ಮರೋಗ ಖಂಡಿತ. ಚಕ್ರಾ ನದಿಗೆ ಇಳಿಯೋದಕ್ಕೂ ಭಯವಾಗುತ್ತದೆ. ಚಕ್ರಾ ನದಿಯ ಒಡಲಲ್ಲಿ ಇಂತಾದ್ದೇ ತ್ಯಾಜ್ಯ ಬೀಳುತ್ತದೆ ಎನ್ನೋದಕ್ಕೆ ಬರೋದಿಲ್ಲ. ಮೊಟ್ಟೆ ಚಿಪ್ಪಿಂದ ಹಿಡಿದು, ಮಳಿ ಓಡಿನತನಕ, ಪ್ಲಾಸ್ಟಿಕ್, ಅಂಗಡಿ ಮುಂಗಟ್ಟು, ಹೋಟೆಲ್ ಸಮುಚ್ಛಯದ ಗೊಬ್ಬರಗುಂಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರು ದೇವಳಕ್ಕೆ ತೆರಳುತ್ತಿದ್ದ ಕೇರಳದ ಯಾತ್ರಿಕರ ಕಾರನ್ನು ಅಡ್ಡಗಟ್ಟಿ ಪುಡಿಗೈದು ದರೋಡೆಗೆ ಯತ್ನಿಸಿದ ಪ್ರಕರಣದ ಐವರು ಆರೋಪಿಗಳಾದ ವಾಮಂಜೂರು ಮೂಡುಶೆಡ್ಡೆ ನಿವಾಸಿಗಳಾದ ಫೈಝಲ್ (24), ಮಹಮ್ಮದ್ ರಿಜ್ವಾನ್ (28), ಮಹಮ್ಮದ್ ಅಲಿ (25), ಸೈಪುದ್ಧಿನ್ (23) ಹಾಗೂ ಕುಲಶೇಖರ ನಿವಾಸಿ ಹರ್ಷಿತ್ ಶೆಟ್ಟಿ(25)ಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂಟು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ತಲಾ ರೂ. 40,000 ದಂಡ ವಿಧಿಸಿರುವುದಲ್ಲದೇ ದೂರುದಾರ ಶ್ಯಾಮಕುಮಾರ್ ಅವರಿಗೆ ತಲಾ 3.000ರೂ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ತೀರ್ಪು ನೀಡಿದೆ. 2013ರ ಡಿಸೆಂಬರ್ 15ರಂದು ಕೇರಳದ ಏಷ್ಯಾನೆಟ್ ಸುದ್ಧಿವಾಹಿಯಲ್ಲಿ ಕ್ಯಾಮರಾಮನ್ ಶ್ಯಾಮಕುಮಾರ್ ಹಾಗೂ ಅದೇ ವಾಹಿನಿಯ ಇನ್ನೋರ್ವ ಸಿಬ್ಬಂಧಿ ಹಾಗೂ ಅವರ ಕುಟುಂಬಿಕರು ಸ್ವಿಫ್ಟ್ ಕಾರಿನಲ್ಲಿ ರಾತ್ರಿ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಹಿಂಬಾಲಿಸಿ ಬಂದಿದ್ದ ದರೋಡೆಕೋರರು ಇಡೂರು ಕುಂಜ್ಞಾಡಿ ಬಳಿ ಯಾತ್ರಿಕರ ಕಾರನ್ನು ಅಡ್ಡಗಟ್ಟಿ ರಾಡಿನಿಂದ ಕಾರಿನ ಹಿಂಬದಿಯ ಗಾಜು ಪುಡಿಗೈದಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಸಮಾಜದಲ್ಲಿ ನಡೆಯುವ ಕೆಲವೊಂದು ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ವಾತಾರವರಣ ನಿರ್ಮಾಣವಾದರೆ ಅಪರಾಧ ಚಟುವಟಿಕೆಗಳು ಕಡಿಮೆಯಾಗಲಿದೆ. ಹೀಗಾಗಿ ಸರಕಾರ ಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಇದು ಸಹಕಾರಿಯಾಗಲಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಅಭಿಪ್ರಾಯಪಟ್ಟರು. ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ವತಿಯಿಂದ ಜರುಗಿದ ನಾಗರಿಕರ ಸಭೆಯಲ್ಲಿ ಮಾತನಾಡಿದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ನೂತನ ಬೀಟ್ ವ್ಯವಸ್ಥೆಯ ಬಗ್ಗೆ ಹಾಗೂ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಫಲಕವನ್ನು ಆಯ್ದ ಸ್ಥಳಗಳಲ್ಲಿ ಅಳವಡಿಸಬೇಕು. ಕೆಲವೊಂದು ಕಡೆಗಳಲ್ಲಿ ಪೊಲೀಸರು ಗುಪ್ತವಾಗಿ ಸಂಚರಿಸುತ್ತಿರಬೇಕು. ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಸಂಚರಿಸುವ ಅಧಿಕ ಭಾರದ ಮತ್ತು ಅಪಾಯಕಾರಿಯಾಗಿ ಸಂಚರಿಸುತ್ತಿರುವ ಶಿಲೆಕಲ್ಲುಗಳ ಲಾರಿಗಳನ್ನು ನಿಯಂತ್ರಿಸಬೇಕು. ಬಸ್ಸುಗಳಲ್ಲಿ ಅತಿ ಹೆಚ್ಚು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸೊಳ್ಳೆಗಳಿಂದ ಹರಡುವ ಮಲೇರಿಯಾ ಹಾಗೂ ಡೆಂಗಿ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಮನೆಯ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಂಡರೆ ಅನೇಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು. ಅವರು ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ರಾಷ್ಟ್ರೀಯ ರೋಗವಾಹನ ಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಸ್ಪೂರ್ತಿ ಮಹಿಳಾ ಘಟಕ ದೊಡ್ಡಹಿತ್ಲು ಗಂಗೊಳ್ಳಿ ಇವರ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರೇಮಾನಂದ ಮಾತನಾಡಿ ಸೊಳ್ಳೆ ನಿಯಂತ್ರಣ ಕ್ರಮಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ರಾಜಕೀಯ ಪರಿಸ್ಥಿತಿ, ಕೇಂದ್ರ ರಾಜ್ಯ ಸರಕಾರದ ಆರ್ಥಿಕ ನೀತಿ ದುಡಿಯುವ ವರ್ಗ ಕಾರ್ಮಿಕರ ಪರವಾಗಿಲ್ಲ. ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮದವರು ಸಂವಿದಾನ ಬದ್ಧ ಧಾರ್ಮಿಕ ಆಚರಣೆಯ ಹಕ್ಕು ಹೊಂದಿದ್ದಾರೆ. ಆದರೆ ಪ್ರಧಾನಿ ಮೋದಿಯವರ ಸರ್ಕಾರ ಧರ್ಮದ ಹೆಸರಿನಲ್ಲಿ ಯುವ ಮನಸ್ಸನ್ನು ಒಡೆಯುತ್ತಿದೆ, ದೇಶದ ರಾಜಕೀಯ ಬಲಪಂಥವಾಗದ ಕಡೆಗೆ ಸಾಗುವ ಸೂಚನೆ ಇದೆ. ಧರ್ಮದ ಹೆಸರಿನಲ್ಲಿ ಸಮಾಜ ಸ್ವಾಸ್ಥ್ಯ ಕದಡುವ ಶಕ್ತಿಗಳ ವಿರುದ್ಧ ಕಟ್ಟಡ ಕಾರ್ಮಿಕರು ಧ್ವನಿ ಏರಿಸಬೇಕು. ಕಟ್ಟಡ ಕಾರ್ಮಿಕರಿಗಾಗಿ ನಮ್ಮ ದೇಶದಲ್ಲಿ ಸುಮಾರು ೨೭ಕ್ಕಿಂತ ಹೆಚ್ಚು, ಆರ್ಥಿಕ/ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಭಾರತ ಸರ್ಕಾರದಿಂದ ಜ್ಯಾರಿ ಮಾಡಲಾಗಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕವಾದರೂ ಈ ಕಾನೂನುಗಳು ಶೇ. ೯೦ ರಷ್ಟು ಕಟ್ಟಡ ಕಾರ್ಮಿಕರಿಗೆ ಜ್ಯಾರಿಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಈಗಲೂ ಬಹುಸಂಖ್ಯಾತ ಕಟ್ಟಡ ಕಾರ್ಮಿಕರು ಯಾವೊಂದು ಕಾರ್ಮಿಕ ಸಂಘಗಳಿಗೂ ಸೇರದಿರುವುದು ಮತ್ತು ಕಾರ್ಮಿಕ ಸಂಘಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಿದ ಯಶಸ್ವೀ ಕಾರ್ಯಕ್ರಮವಾದ ತಿಂಗಳ ಕಲಿಕಾ ಪ್ರದರ್ಶನದ ೨೦೧೭-೧೮ನೇ ಸಾಲಿನ ಮೊದಲ ಕಾರ್ಯಕ್ರಮ, ೭ನೇ ತರಗತಿಯ ಸಂಪತ್ ಹುಟ್ಟು ಹಬ್ಬದ ಪ್ರಯುಕ್ತ ತಾಯಿ ತಂದೆ ಸುಜಾತ ಸಂತೋಷ್ ಅವರು ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ೫ನೇ ಸಂಚಿಕೆ ಅನಾವರಣ ಹಾಗೂ ಸರ್ವಪೋಷಕರ ಸಭೆಯು ಇತ್ತೀಚೆಗೆ ಶಾಲಾ ನೋಟ್‌ಪುಸ್ತಕದ ದಾನಿಗಳಾದ ಶ್ರೀ ಎಂ.ದಿನೇಶ ಹೆಗ್ಡೆಯವರ ಗೌರವ ಉಪಸ್ಥಿತಿಯಲ್ಲಿ ಜರುಗಿತು. ಚಾರಣ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಹತ್ತಾರು ಚಟುವಟಿಕೆಗಳ ಮೂಲಕ ಶಾಲೆ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಂದಲೇ ಶಾಲಾ ದಾಖಲಾತಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮನೋಜ್‌ಕುಮಾರ್ ಶೆಟ್ಟಿ, ಎಸ್.ಡಿ.ಎಂ,ಸಿ ಅಧ್ಯಕ್ಷರಾದ ಶ್ರೀ ಶಾಂತರಾಮ, ಉಪಾಧ್ಯಕ್ಷರಾದ ಸುಧಾಕರ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಉಡುಪ, ಸಹಶಿಕ್ಷಕರುಗಳಾದ…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಸಾಂಪ್ರದಾಯಿಕ ಕಾರ್ಯ ಚಾಲನೆ ನೀಡುವ ವೇಳೆಗೆ ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಗ್ರಾಪಂ ಸದಸ್ಯ ಕಂಠದಮನೆ ಬಾಲಕೃಷ್ಣ ಹೆಗ್ಡೆ, ಕಂಠದಮನೆ ಸುಬಾಶ್ಚಂದ್ರ ಶೆಟ್ಟಿ, ಉದಯ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಸಾಂಪ್ರದಾಯಿಕ ಕೃಷಿ ಕಾರ್ಯ: ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಿಂದಿನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಶ್ವಿ ಚೆಸ್ ಸ್ಕೂಲ್ ಕುಂದಾಪುರದಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಸಹಿಪ್ರಾ ಶಾಲೆ ಕಾಳವಾರದ ನಿಹಾಲ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಾರ್ಕಡ ಸಹಿಪ್ರಾ ಶಾಲೆ ಕಾರ್ತಿಕ್ ದ್ವಿತೀಯ ಸ್ಥಾನವನ್ನೂ, ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಅನಿರುದ್ಧ ತೃತೀಯ ಸ್ಥಾನವನ್ನೂ ಹಾಗೂ ಕುಂದಾಪುರ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿ ಶ್ರೇಯಸ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಕಶ್ಚಿ ಚೆಸ್ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದಾರೆ. ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಆಚಾರ್ಯ ಕೋಟೇಶ್ವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸ್ರೂರು ಶಾರದಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಶೆಟ್ಟಿ, ಕಶ್ವಿ ಸ್ಕೂಲ್ ತರಬೇತುದಾರ ಗುರುರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಚಿನ್ ಶೆಟ್ಟಿ, ಪ್ರದೀಪ್ ರಾವ್ ಹಾಗೂ ದೀಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
