Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಗಂಗೊಳ್ಳಿ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಕಾರ್ಯಕರ್ತರು ಗಂಗೊಳ್ಳಿಯ ದುರ್ಗಾಕೇರಿಯ ಹಿಂದು ರುದ್ರಭೂಮಿಯನ್ನು ಸ್ವಚ್ಛತೆ ಮಾಡಿ ವೀರ ಸಾವರ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಖಾರ್ವಿ ದಾಮನಮನೆ ಮತ್ತು ನಿತ್ಯಾನಂದ ಖಾರ್ವಿ ಮ್ಯಾಂಗನೀಸ್ ರೋಡ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಎಲ್ಲಾ ಕಾರ್ಯಕರ್ತರು ಭಾರತ ಮಾತೆಯ ಮತ್ತು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಾಮೂಹಿಕವಾಗಿ ದೀಪ ಬೆಳಗಿ ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ದುರ್ಗಾಕೇರಿಯ ಹಿಂದು ರುದ್ರಭೂಮಿಯನ್ನು ಸ್ವಚ್ಛಗೊಳಿಸಿ ಸಾವರ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ನವೀನ್ ದೊಡ್ಡಹಿತ್ಲು, ರಾಘವವೇಂದ್ರ ಖಾರ್ವಿ, ರವಿ ಖಾರ್ವಿ, ರಂಜಿತ್ ಖಾರ್ವಿ, ವೆಂಕಟೇಶ ಬೇಲಿಕೇರಿ, ಮಂಜುನಾಥ ಖಾರ್ವಿ, ದಿಲೀಪ ಪೂಜಾರಿ, ಅನುಪ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಇಲ್ಲಿನ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಹೊಸೂರಿನ ಮುಲ್ಲಿಬಾರು ಶಾಲೆಯಲ್ಲಿ ಶಾಲೆ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲೆಗೆ ತಳಿರು ತೋರಣಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕ ನೀಡಿ ಪಾಯಸದೂಟದೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯವನ್ನು ಹೊಂದಿರುವ ಸರಕಾರಿ ಶಾಲೆಗೆ ಬರುವಂತೆ ಶಿಕ್ಷಕ ವೃಂದ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಪೂಜಾರಿ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಗಿರೀಶ್ ಪಿ. ಮೇಸ್ತ ಶಿಕ್ಷಕರಾದ ರಾಮನಾಥ ಮೇಸ್ತ, ಸುಧಾಕರ ಪಿ. ಬೈಂದೂರು, ಹಾಲೇಶಪ್ಪ ಡಿ. ಆರ್., ವಿನಾಯಕ ಪಟಗಾರ್ ಹಾಗೂ ರವೀಂದ್ರ ಮತ್ತು ಊರ ಮಹನೀಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಬೀಟ್ ಪೊಲೀಸ್ ಜೊತೆ ದಲಿತ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು, ಏನಾದರೂ ಸಮಸ್ಯೆ ಇದ್ದರೆ ಬೀಟ್ ಪೊಲೀಸರ ಗಮನಕ್ಕೆ ತನ್ನಿ ಠಾಣೆಗೆ ಹೋಗುವ ಸಂದರ್ಭ ಬಂದರೆ ಬೀಟ್ ಪೊಲೀಸರ ಜೊತೆ ಹೋದರೆ ಅವರು ನಿಮ್ಮ ಸಮಸ್ಯೆ ಪರಿಹಾರ ನೀಡಲು ಸಹಕಾರ ಮಾಡುತ್ತಾರೆ ಎಂದು ಕುಂದಾಪುರ ಡಿಎಸ್ಪಿ ಪ್ರವೀಣ್ ಹೆಚ್. ನಾಯ್ಕ್ ಹೇಳಿದರು. ಅವರು ಕುಂದಾಪುರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದಲ್ಲಿ ಅಕ್ರಮ ಸಾರಾಯಿ ದಂದೆ ನಡೆಯುತ್ತಿದ್ದು, ಅಬಕಾರಿ ಇಲಾಖೆ ಗಮನಕ್ಕೆ ತಂದರೆ ಅವರು ಅಕ್ರಮ ಮದ ಮಾರಾಟ ಮಾಡುವವವರಿಗೆ ಮಾಹಿತಿ ನೀಡಿ, ದಾಳಿ ನಡೆಸುವುದರಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ನಾರಾಯಣ ಕಿರಿಮಂಜೇಶ್ವರ ಆರೋಪಿಸಿದ್ದು, ಉತ್ತರಿಸಿದ ಡಿಎಸಿ,ಅಬಕಾರಿ ಇಲಾಖೆ ಗಮನಕ್ಕೆ ತಂದು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ತಲ್ಲೂರು ಗ್ರಾಮ ಉಪ್ಪಿನಕುದ್ರು ದಲಿತ ಕುಟುಂಬ ಕಳೆದ ೨೦ ವರ್ಷದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ, ಆಸ್ಪತ್ರೆಯ ಬೆಳವಣಿಗೆಯಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದ್ದ ಔಷಧ ವಿತರಕಿ (ಫಾರ್ಮಾಸಿಸ್ಟ್) ಕೆ. ಗೀತಾ ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಡಿಗ ಹೇಳಿದರು. ಅರೆಹೊಳೆ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆ ನಾವುಂದದಲ್ಲಿ ೩೨ ವರ್ಷಗಳ ಕಾಲ ಔಷಧ ವಿತರಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಗೀತಾ ಅವರಿಗೆ ಇಲಾಖೆಯ ವತಿಯಿಂದ ಎರ್ಪಡಿಸಲಾದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ಈ ಆಸ್ಪತ್ರೆಯಿಂದ ಅನೇಕರಿಗೆ ಅನುಕೂಲವಾಗಿದೆ. ಗ್ರಾಪಂದಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದ್ದು, ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ವೈದ್ಯರು, ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು. ನಿವೃತ್ತರಾಗುತ್ತಿರುವ ಕೆ. ಗೀತಾ ಅವರು ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಸರಕಾರಿ ಅಧಿಕಾರಿಗಳಿಗೆ ಎಲ್ಲಿ ಕಠಿಣವಾಗಿರಬೇಕು, ಮೃದುವಾಗಿರಬೇಕು ಎಂದು ತಿಳಿದಿರಬೇಕು. ಸರಕಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರ ಪ್ರಶಸ್ತಿ ವಿಜೇತ ರಿಸರ್ವೇಶನ್ ಕನ್ನಡ ಸಿನೆಮಾ ಮೇ.30ರ ಮಂಗಳವಾರ ಕೋಟೇಶ್ವರ ಯುವ ಮೆರಿಡಿಯನ್‌ನಲ್ಲಿ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿದೆ. ಸಿನೆಮಾ ಪ್ರಿಯರು ಮುಕ್ತವಾಗಿ ಪಾಲ್ಗೊಂಡು ಸಿನೆಮಾ ಪ್ರದರ್ಶನ ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಗುಲ್ವಾಡಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಕುಂದಗನ್ನಡದ ಸೊಗಡಿನ, ಮೀಸಲಾತಿಯ ಹಿಂದಿನ ತಲ್ಲಣಗಳನ್ನು ತೆರೆದಿಟ್ಟ ಪ್ರಾದೇಶಿಕ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ಕುಂದನಾಡಿಗರ ಸಾಧನೆಯ ಮುಕುಟದಲ್ಲೊಂದು ಗರಿ ಮೂಡಿದಂತಾಗಿದೆ. ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯು ಮಧ್ಯಮ ವರ್ಗದ ಕುಟುಂಬದ ಮೇಲೆ ಬೀರಬಹುದಾದ ಪ್ರಭಾವ – ತಲ್ಲಣಗಳು ಹಾಗೂ ಅದರಾಚೆಗಿನ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡ ’ರಿಸರ್ವೆಶನ್’ ಕಲಾತ್ಮಕ ಚಿತ್ರವನ್ನು ಖ್ಯಾತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶಿಸಿದ್ದರು. ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ನಟ, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ ಚಿತ್ರ ನಿರ್ಮಾಣ ಮಾಡಿದ್ದರು. ಶ್ರೀಲಲಿತೆ ಅವರ ಕಥೆಯನ್ನಾಧರಿಸಿದ ಚಿತ್ರಕ್ಕೆ ಬಿ. ಶಿವಾನಂದ್ ಸಂಭಾಷಣೆ ಬರೆದಿದ್ದರೇ, ಪ್ರದೀಪ್ ಶೆಟ್ಟಿ ಕೆಂಚನೂರು, ನಿಖಿಲ್ ಮಂಜು ಹಾಗೂ ಬಿ. ಶಿವಾನಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:15ದಿನಗಳೊಳಗಾಗಿ ಅಪೂರ್ಣ ಯುಜಿಡಿ ಕಾಮಗಾರಿಗಳನ್ನು ಪೂರ್ಣಮಾಡಿ. ಮಳೆಗಾಲ ಸಮೀಪಿಸಿರುವುದರಿಂದ ನಗರದ ವಿವಿದೆಡೆ ಕಟ್ಟಿಂಗ್ ಮಾಡಲಾಗಿರುವ ರಸ್ತೆಗಳನ್ನು ಯಥಾ ಸ್ಥಿತಿಗೆ ತನ್ನಿ. ಮಳೆಗಾಲ ಮುಗಿಯುವವರೆಗೆ ಯಾವ ಸಿಮೆಂಟ್ ರಸ್ತೆಗಳನ್ನು ಕಟ್ಟಿಂಗ್ ಮಾಡಕೂಡದು. ಕುಂದಾಪುರ ಪುರಸಭೆ ಡಾ. ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿ ಬಗೆಗೆ ನಡೆದ ಚರ್ಚೆಯಲ್ಲಿ ಪಕ್ಷಭೇದ ಮರೆದು ಸದಸ್ಯರು ಯುಜಿಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ವಿವಿಧೆಡೆ ಯುಜಿಡಿ ಕಾಮಗಾರಿಗಳು ಅಪೂರ್ಣಗೊಂಡಿದ್ದು ನಾಗರಿಕರು ತೀವ್ರ ತೊಂದರೆ ಉಂಟಾಗುತ್ತಿದೆ. ಶ್ರೀಘ್ರವೇ ಅಪೂರ್ಣ ಕಾಮಗಾರಿಗಳನ್ನು ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದರು. ರಿಂಗ್ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಸಾಧ್ಯವಿಲ್ಲ ಎನ್ನುತ್ತಿರಿ ಆದರೆ ಖಾಸಗಿ ಜಾಗದಲ್ಲಿ ನಿರ್ಮಾಣಗೊಂಡ ಸಮುಚ್ಚಯದ ಜಾಗದಲ್ಲಿ ಕಾಮಗಾರಿ ನಡೆದಿದೆ ಎಂದು ಆಕ್ಷೇಪಿಸಿದ ಸದಸ್ಯರು, ರಿಂಗ್‌ರೋಡಿನಲ್ಲಿಯೂ ಕಾಮಗಾರಿ ಮಾಡುವಂತೆ ಆಗ್ರಹಿಸಿದರು. ಸಂಗಮ್ ಪರಿಸರದಲ್ಲಿ ವೆಟ್‌ವೆಲ್ ನಿರ್ಮಾಣಕ್ಕೆ ನದಿ ಪಾತ್ರದ ಸರಕಾರಿ ಸ್ಥಳ ಗುರುತಿಸಿ ಅಂತಿಮಗೊಳಿಸಿದ್ದು, ಯುಜಿಡಿಗೆ ಬಿಟ್ಟುಕೊಡಲಾಗುವುದು ಎಂದರು. ವೆಟ್‌ವೆಲ್ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವಾ ಕಾರ್ಯದಲ್ಲಿ ಹೊಂದಿರುವ ಪ್ರೀತಿಗೆ ಸಮಾನವಾದ ತೃಪ್ತಿ, ಮಾಡಿದವನಿಗೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಉಪ್ಪುಂದ ಗಾಣಿಗ ಸೇವಾ ಸಂಘ ಸಮುದಾಯದ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ತೋರುತ್ತಿರುವ ಕಾಳಜಿ ಅನುಕರಣೀಯ. ಸಮಾಜಮುಖಿ ಕಾರ್ಯಗಳಲ್ಲಿ ಫಲಾಪೆಕ್ಷೆ ನುಸುಳದಿದ್ದರೆ ಮಾತ್ರ ಅವುಗಳು ಸೇವೆ ಎನಿಸುತ್ತವೆ ಎಂದು ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಎಚ್. ಸುಬ್ಬಯ್ಯ ಗಾಣಿಗ ಹೇಳಿದರು. ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ನಡೆದ ಉಪ್ಪುಂದ ಘಟಕದ ಗಾಣಿಗ ಸೇವಾ ಸಂಘದ ಚತುರ್ಥ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿ ವಿತರಣೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಹಿಂದಿನ ಕಷ್ಟದ ಪರಿಸ್ಥಿತಯಲ್ಲಿಯೂ ಕೂಡಾ ತಮ್ಮ ಜೀವನವನ್ನು ಗಂಧದ ಕೊರಡಿನ ಹಾಗೆ ಸೆವೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ವಿದ್ಯೆಯನ್ನು ನೀಡಿದ್ದರ ಫಲವಾಗಿ ನಮ್ಮ ಸಮಾಜವು ಇಂದು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ. ಈ ನೆಲೆಯಲ್ಲಿ ಇಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಶ್ರೀಮದ್ ಸ್ವರ್ಣವಲ್ಲಿ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಕಟ್ಟೆ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ ೧೨ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಮತ್ತು ಶ್ರೀ ಸೀತಾರಾಮಚಂದ್ರ ದೇವರ ಬ್ರಹ್ಮಕಲಶೋತ್ಸವ ಜರುಗಿತು. ಸೇವಾಕರ್ತರಾಗಿ ಶಾರದಾ ಮತ್ತು ಕರ್ನಲ್ ಡಿ. ನರಸಿಂಹ ನಾಯಕ್ (ವಧುವಿನ ಕಡೆ) ಹಾಗೂ ಜಯಂತಿ ಮತ್ತು ದಿನಕರ್ ರಾವ್ ಹೈದರಾಬಾದ್ (ವರನ ಕಡೆ) ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಉದ್ಯಮಿ ಬಿಜೂರು ರಾಮಕೃಷ್ಣ ಶೇರೆಗಾರ್ ದಂಪತಿಗಳು ಮಧ್ಯಾಹ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಡಾ. ಹರಾ ನಾಗರಾಜಾಚಾರ್ಯ ಮತ್ತು ಬಳಗದವರಿಂದ ನೃತ್ಯರೂಪ ದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಮಹಾಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಶ್ರೀ ಗಂಗಾಧರೇಂದ್ರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಮಾಜಿ ಶಾಸಕ ಕೆ. ಲಕ್ಷ್ಮೀನರಾಯಣ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಪ್ರತಿಭೆಗಳು, ಎಲೆಮರೆಯ ಕಾಯಿಯಂತಿದ್ದವರು ಭಾಗವಹಿಸಿ ಹಾಡಿದ್ದಾರೆ. ಚಂದನ ವಾಹಿನಿಯ ಈ ಕಾರ್ಯಕ್ರಮದ ಮೂಲಕ ಅದೆಷ್ಟೋ ಬೆಳಕಿಗೆ ಬಾರದ ಪ್ರತಿಭೆಗಳು ಮೈಕ್ ಹಿಡಿಯುವಂತಾಗಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್ ಜೋಶಿ ಹೇಳಿದರು. ಅವರು ದೂರದರ್ಶನ ಕೇಂದ್ರ ಬೆಂಗಳೂರು, ಬೈಲೂರು ಎಜುಕೇಶನ್ ಟ್ರಸ್ಟ್ ಕುಂದಾಪುರ, ಆಕಾಶವಾಣಿ ಮಂಗಳೂರು, ಇಸಿಆರ್ ಏವಿಏಷನ್ ಅಕಾಡೆಮಿ ಕೋಟೇಶ್ವರ, ಯುವ ಇನ್‌ಫ್ರಾಸ್ಟ್ರಕ್ಚರ್ ಕುಂದಾಪುರ ಆಶ್ರಯದಲ್ಲಿ ಕೋಟೇಶ್ವರ ಯುವ ಮೆರಿಡಿಯನ್ ಕನ್ವೆನ್‌ಶನ್ ಸೆಂಟರ್ ಮಧುರ ಮಧುರವೀ ಮಂಜುಳಗಾನ ಅಂದಿನ ಇಂದಿನ ನಾಯಕ ನಟರ ಖ್ಯಾತ ಹಾಡು ಹಾಗೂ ನೃತ್ಯಾವಳಿಗಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರಾವಳಿಯ ಜನರಲ್ಲಿ ಸೌಹಾರ್ದತೆ ಇದೆ. ಅವರು ಓದುವಂತೆ ಬರೆಯುತ್ತಾರೆ. ಬರೆದಂತೆ ಮಾತನಾಡುತ್ತಾರೆ ಮತ್ತು ಮಾತಿನಂತೆ ನಡೆದುಕೊಳ್ಳುತ್ತಾರೆ ಇದು ಈ ಭಾಗದ ಹೆಚ್ಚುಗಾರಿಕೆ. ಕುಂದಾಪುರ ಜನರ ಪ್ರೀತಿ ನಾಲ್ಕನೇ ಭಾರಿಗೆ ಇಲ್ಲಿಯೇ ಕಾರ್ಯಕ್ರಮ ಆಯೋಜಿಸುವಂತೆ ಮಾಡಿದೆ ಎಂದರು. ಮಾಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಮಾಡುತ್ತಾ ಬಂದಿದ್ದು, ಮುಂದೆಯೂ ಕೂಡಾ ಸಜಮಾದ ಬೆನ್ನಿಗೆ ಟ್ರಸ್ಟ್ ನಿಲುತ್ತದೆ. ವಿದ್ಯೆ ಅಪಹರಿಸಲಾಗದ ಸಂಪತ್ತಾಗಿದ್ದು, ಎಲ್ಲಾ ಆಸ್ತಿಗಿಂತಲೂ ವಿದ್ಯೆ ಬದುಕಿನಲ್ಲಿ ಗಣಿಸಬಹುದಾದ ದೊಡ್ಡ ಆಸ್ತಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿಂ.ಶಂಕರ್ ಹೇಳಿದರು. ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಕುಂದಾಪುರ ರೋಟರಿ ಲಕ್ಷೀನರಸಿಂಹ ಸಭಾಭವನದಲ್ಲಿ ನಡೆದ ಉಚಿತ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಉದ್ಘಾಟಿಸಿ ಮಾತಾನಾಡುತ್ತಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾರ್ಥಿಗಳಿಗೆ ಶಾಲಾರಂಭಕ್ಕೂ ಮುನ್ನಾ ನೋಟ್ ಬುಕ್ ಸಿಕ್ಕರೆ ಉತ್ತಮ ಎನ್ನುವ ಹಿನ್ನೆಲೆಯಲ್ಲಿ ಹೊಸನಗರ, ಸಾಗರ, ಶಿವಮೊಗ್ಗೆ, ಉಡುಪಿ ಹಾಗೂ ಕುಂದಾಪುರದಲ್ಲಿ ಪ್ರತಿಭಾಮವಂತ ಸುಮಾರು 10ಸಾವಿರ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷೆ ಗಣೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಬಗ್ವಾಡಿ…

Read More