Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯಲ್ಲಿ ಪೂರ್ವ ಪ್ರಾರ್ಥಮಿಕ ಮಕ್ಕಳ ಮೊದಲ ದಿನದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಪುಟಾಣಿಗಳೆಲ್ಲರೂ ಬೇಸಿಗೆಯ ರಜೆಯನ್ನು ಕಳೆದು ತಮ್ಮ ಪುಟ್ಟ-ಪುಟ್ಟ ಹೆಜ್ಜೆಯೊಂದಿಗೆ ಶಾಲೆಯತ್ತಾ ಬರಲಾರಂಭಿಸಿದ್ದರು. ಆದರೆ ಕೆಲವು ಮಕ್ಕಳು ನಗುತ್ತಿದ್ದರೆ, ಇನ್ನು ಕೆಲವರು ತಮ್ಮ ಅಮ್ಮನ ತೋಳಿನಿಂದ ಕೆಳಗಿಳಿಯಲು ಅಳುತ್ತಿದ್ದರು. ಅವರನೆಲ್ಲ ಸಮಾಧಾನಿಸಿ ಮೊಂಟೆಸ್ಸರಿ ಬಳಿ ಕರೆತಂದಾಗ ಒಮ್ಮಗೆ ಎಲ್ಲರೂ ಸ್ತಬ್ಧರಾಗಿ ನಿಂತುಕೊಂಡು ಶಾಲಾ ಕಟ್ಟಡವನ್ನು ನೋಡಲಾರಂಭಿಸಿದರು. ಕಾರಣ ಇಷ್ಟೇ, ಅವರೆಲ್ಲರನ್ನು ಸ್ವಾಗತಿಸಲು ಶಾಲಾ ಕಟ್ಟಡವನ್ನು ರಂಗು-ರಂಗಿನ ಬಣ್ಣಗಳಿಂದ ಅಲಂಕೃತಗೊಳಿಸಲಾಗಿತ್ತು. ನಗುಮುಖದ ಶಿಕ್ಷಕಿಯರು ಪುಟಾಣಿಗಳನ್ನು ಪ್ರೀತಿಯಿಂದ ಒಳಗಡೆ ಬರಮಾಡಿಕೊಡರು. ಪುಟಾಣಿಗಳು ಒಳಾವರಣ ಪ್ರವೇಶಿಸುತ್ತಿದ್ದಂತೆ ಸುಮಧುರ ಶಿಶುಗೀತೆಗಳ ಸಂಗೀತದ ಸಿಂಚನದ ಜೊತೆಗೆ ಸುಂದರವಾಗಿ ಜೋಡಿಸಲಾಗಿದ್ದ ಆಟಿಕೆಗಳನ್ನು ನೋಡುತ್ತಿದ್ದಂತೆ ತಮ್ಮ ಅಳುವನ್ನು ನಿಲ್ಲಿಸಿ ಆಟದಲ್ಲಿ ತಲ್ಲೀನರಾದರು. ಅದೇ ಸಮಯಕ್ಕೆ ಶಾಲಾ ವತಿಯಿಂದ ಪುಟಾಣಿಗಳಿಗೆ ಸಿಹಿತಿನಿಸು ಹಂಚಲಾಯಿತು, ಹಾಗೂ ಶಿಕ್ಷಕಿಯರು ಮಕ್ಕಳೊಂದಿಗೆ ಸೇರಿ ಹಾಡುತ್ತಾ, ನೃತ್ಯ ಮಾಡುತ್ತಾ ಮೊದಲ ದಿನದ ಸಂಭ್ರಮವನ್ನು ಆಚರಿಸಿದರು. ಈ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಪತಿ-ಪತ್ನಿಯರ ಸಂಬಂಧ ಪಾವಿತ್ರತೆಯ ಭಾವವಿದ್ದು, ಮೌಲ್ಯಾಧಾರಿತವಾಗಿದೆ. ವಿವಾಹ ಇಲ್ಲದಿದ್ದರೆ ಕುಟುಂಬ ಕಳಚುವ ಸಾಧ್ಯತೆಗಳಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ ೧೨ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ, ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಧರ್ಮದ ಕೇಂದ್ರವಾದ ಕುಟುಂಬವು ನಿಜವಾದ ವ್ಯವಸ್ಥೆಯ ಹೆಬ್ಬಾಗಿಲು. ಗ್ರಹಸ್ಥ ಜೀವನದಲ್ಲಿ ಧರ್ಮದ ಮೂಲಕ ಸಾಗಿದಾಗ ಸುಖ, ಶಾಂತಿ ಹಾಗೂ ನೆಮ್ಮದಿ ಶಾಶ್ವತವಾಗಿರುತ್ತದೆ. ಶ್ರೀರಾಮನ ಆದರ್ಶ ಅನುಕರಣೀಯವಾಗಿದ್ದು, ರಾಮದೇವರ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಇದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಮಳೆ ನೀರಿನ ಸಂರಕ್ಷಣೆ ಬಗ್ಗೆ ಕಾರ್ಯಕ್ರಮ ಮಂಗಳವಾರ ಜರುಗಿತು. ’ಅಡಿಕೆ’ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆರವರು ’ಮಳೆ ನೀರಿನ ಸಂರಕ್ಷಣೆ ’ ಹೇಗೆ ಸಾಧ್ಯ ಅದರ ವಿಧಿ ವಿಧಾನವನ್ನು ’ಮುತ್ತಿನ ಸರದ ಪೋಣಿಕೆ’ಯಂತೆ ವಿವರಿಸಿದರು. ಪ್ರತಿಯೊಂದು ಮನೆಯ ಮೇಲೆ ಚಾವಣಿಯಿಂದ ಬಂದ ನೀರಿನ ಸಂರಕ್ಷಣೆ ಹೇಗೆ ಮಾಡಬೇಕು. ಇದರಿಂದ ಕೆಲವು ವರ್ಷಗಳ ವರೆಗೆ ಬಳಸಲು ಸಾಧ್ಯ ಎಂದು ತಿಳಿಸಿದರು. ಸಿಮೆಂಟ್ ರೋಡ್‌ನಿಂದ ಆಗುವ ಅನಾನುಕೂಲಕೂಲಗಳೊಂದಿಗೆ ಅಲ್ಲಿಯೇ ನೀರಿನ ಇಂಗುವಿಕೆಯ ಮಾರ್ಗವನ್ನು ಕಂಡುಕೊಳ್ಳುವ ಸಲಹೆಯನ್ನು ಕೊಟ್ಟು ಪ್ರತಿಯೊಂದು ಸ್ಥಳದಲ್ಲಿ ಇಂಗು ಗುಂಡಿಯನ್ನು ಅಳವಡಿಸಿದರೆ ನೀರಿನ ಸಂರಕ್ಷಣೆ ಸಾಧ್ಯ. ಹಾಗೆಯೇ ನಿಮ್ಮ ಮನೆಗಳಲ್ಲಿಯ ನೀರಿನ ಸಂರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಕಿವಿ ಮಾತನ್ನು ಹೇಳಿದರು. ಮಕ್ಕಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ. ಮಕ್ಕಳಲ್ಲಿರುವ ಮಳೆ ನೀರಿನ ಸಂರಕ್ಷಣೆ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಳೆ ನೀರಿನ ಸಂರಕ್ಷಣೆ ಅತ್ಯಮೂಲ್ಯವಾದುದು, ಇದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ವತಿಯಿಂದ ಕೋಡಿಯ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕ್ರೀಡಾ ಸಾಮಾಗ್ರಿಯನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಧ್ಯಾಯಿನಿ ಮಮತಾ ಅವರಿಗೆ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ಅವರು ಕ್ರೀಡಾ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಪೂರ್ವಾಧ್ಯಕ್ಷ ಗಿರೀಶ್ ಹೆಬ್ಬಾರ್, ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಇನ್ನಿತರರು ಉಪಸ್ಥಿತರಿದ್ದರು.

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಮನೆಯ ತುಂಬೆಲ್ಲಾ ಪಟ ಪಟನೆ ಮಾತನಾಡುತ್ತಾ, ಓದಿನೊಂದಿಗೆ ಕೃಷಿ, ಹೈನುಗಾರಿಕೆಯಲ್ಲಿ ಅತ್ಯುತ್ಸಾಹದಿಂದ ತೊಡಗಿಕೊಂಡು ಕುಟುಂಬಕ್ಕೆ ಒತ್ತಾಸೆಯಾಗಿ ನಿಂತಿದ್ದ ಆ ಯುವತಿಯರೀರ್ವರೂ ಸಾವಿನಲ್ಲೂ ತನ್ನ ತಾಯಿಗೆ ಜೊತೆಯಾಗಿ ನಡೆದಿದ್ದಾರೆ. ಆ ಯುವತಿಯರೇ ಉಳುಮೆ ಮಾಡುತ್ತಿದ್ದ ಟಿಲ್ಲರ್, ದಿನವೂ ಹಾಲು ಕರೆಯುತ್ತಿದ್ದ ಆಕಳು ಮಾತ್ರ ಅವರು ಬಾರದ ಲೋಕಕ್ಕೆ ತೆರಳಿದ್ದಾರೆಂಬ ಅರಿವಿಲ್ಲದೇ ಮನೆಯ ಎದುರು ಕಾದು ಕುಳಿತಿವೆ. ಬೇಳೂರು ಗ್ರಾಮ ಪಂಚಾಯತ್ ದೇಲಟ್ಟು ನರಸಿಂಹ ಶೆಟ್ಟಿ ಅವರ ಕುಟುಂಬದಲ್ಲೀಗ ಅಕ್ಷರಶಃ ಸ್ಮಶಾನಮೌನ ಆವರಿಸಿಕೊಂಡಿದೆ. ಮಂಗಳವಾರ ಸಂಜೆಯ ತನಕವೂ ಮನೆಯಲ್ಲಿದ್ದ ಭಾರತಿ ಶೆಟ್ಟಿ ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಹಾಗೂ ಪ್ರಜ್ಞಾ, ತಾವು ಪ್ರೀತಿಯಿಂದ ಮಾಡುತ್ತಿದ್ದ ಕಾಯಕದೊಂದಿಗೆ ವಿಧಿಯ ಕ್ರೂರಲೀಲೆಗೆ ಬಲಿಯಾದಂತಾಗಿದೆ. ಗದ್ದೆಗೆ ಬಿತ್ತನೆ ಮಾಡಲೆಂದು ಕೃಷಿ ಹೊಂಡದಲ್ಲಿ ನೆನೆ ಹಾಕಿದ್ದ ಬೀಜವನ್ನು ಮೇಲೆತ್ತಲು ತಾಯಿಯೊಂದಿಗೆ ತೆರಳಿದ್ದ ಮಕ್ಕಳು 5 ಚೀಲಗಳನ್ನು ಮೇಲೆತ್ತಿ ಕೊನೆಯ ಚೀಲವನ್ನು ಎಳೆದು ತರುವಾಗ ಅವಘಡ ಸಂಭವಿಸಿತ್ತು. ಮೂವರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆರೆಯಲ್ಲಿ ನೆನೆಹಾಕಿದ್ದ ಭತ್ತದ ಚೀಲಗಳನ್ನು ಮೇಲೆತ್ತುವ ವೇಳೆ ಆಯತಪ್ಪಿ ಬಿದ್ದ ತಾಯಿ ಹಾಗೂ ಅವರ ರಕ್ಷಣೆಗೆ ಧಾಮಿಸಿದ ಇಬ್ಬರು ಮಕ್ಕಳು ನೀರಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಟ್ಟು ಎಂಬಲ್ಲಿ ನಡೆದಿದೆ. ದೇಲಟ್ಟು ದೇವಸ್ಥಾನ ಸಮೀಪದ ನರಸಿಂಹ ಶೆಟ್ಟಿ ಎಂಬುವವರ ಪುತ್ರಿ ಭಾರತಿ (45) ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಶೆಟ್ಟಿ(21) ಹಾಗೂ ಪ್ರಜ್ಞಾ ಶೆಟ್ಟಿ (19) ಮೃತ ದುರ್ದೈವಿಗಳು. ಕೃಷಿಕರಾದ ಭಾರತಿ ಅವರ ಕುಟುಂಬ ಮಳೆಗಾಲ ಸನ್ನಿಹಿತವಾದ ಬೆನ್ನಲ್ಲೇ ಬಿತ್ತನೆ ಮಾಡುವ ಉದ್ದೇಶದಿಂದ ಬೀಜದ ಭತ್ತವನ್ನು ಮೊಳಕೆ ಬರಿಸುವ ಸಲುವಾಗಿ ಮನೆಯ ಸಮೀಪದ ಕೆರೆಯಲ್ಲಿ ನೆನೆಹಾಕಿದ್ದರು. ಸಂಜೆ ವೇಳೆಗೆ ಮಳೆಯಾಗಿದ್ದರಿಂದ ಬೀಜಗಳು ಹಾಳಗಬಹುದು ಎಂಬ ಕಾರಣಕ್ಕೆ ಕೆರೆಯಲ್ಲಿ ಹಾಕಲಾಗಿದ್ದ ಚೀಲಗಳನ್ನು ಮೇಲೆತ್ತಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕಾಲು ಜಾರಿ ಬಿದ್ದ ತಾಯಿ ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ್ದ ಮಕ್ಕಳಿಬ್ಬರೂ ಕೆರೆಯಲ್ಲಿ ಬಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲೂ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುವುದರ ಮೂಲಕ ಶೈಕ್ಷಣಿಕವಾಗಿ ಯಶಸ್ಸನ್ನು ಗಳಿಸಿದೆ. ಕೇಂದ್ರಿಯ ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ ಹದಿನಾಲ್ಕನೆಯ ಬಾರಿಗೆ ಶೇ. ೧೦೦ ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲ್ಲೂಕಿನ ರಾಜ್ಯ, ಸಿಬಿಎಸ್ಸಿ ಮತ್ತು ಐಸಿಎಸ್ಸಿ ಈ ಮೂರು ಪಠ್ಯಕ್ರಮಗಳ ಶಾಲೆಗಳ ಪೈಕಿ ಇಂತಹ ಸಾಧನೆಗೆ ಕೇವಲ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಭಾಜನವಾಗಿದೆ. ಪ್ರಸ್ತುತ ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ಮೂಲ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣದಲ್ಲಿ ತನ್ನದೇ ಆದ ಅದ್ವಿತೀಯ ಛಾಪನ್ನು ಮೂಡಿಸಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ರಾಜ್ಯದ ಅಗ್ರಪಂಕ್ತಿಯ ವಿದ್ಯಾಲಯವಾಗಿ ಬೆಳೆದು ಬಂದಿದೆ. ರಾಜ್ಯದ ಹಾಗೂ ಹೊರರಾಜ್ಯದ ಸುಮಾರು ೧೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯು ಸತತವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿ, ಮೂಲತಃ ಕೋಲಾರದ ನಂದಿನಿ ಕೆ.ಆರ್ ಯುಪಿಎಸ್‌ಸಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ. 2006ರಲ್ಲಿ ಕೋಲಾರದ ಚಿಣ್ಮಯಿ ಹೈಸ್ಕೂಲಿನಲ್ಲಿ ಶೇ.೯೬.೮೦ ಅಂಕಗಳಿಸಿ, ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್‌ಗೆ ಸೇರಿದ ಈಕೆ 2008ರಲ್ಲಿ ಶೇ.94.83ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ ಎಂ.ಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಒಂದು ಲಕ್ಷ ಬಹುಮಾನ ಘೋಷಣೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿ ನಂದಿನಿ ಯುಪಿಎಸ್‌ಸಿ ಮೊದಲ ರ‍್ಯಾಂಕ್ ಪಡೆದಿರುವುದು ಸಂತಸ ತಂದುಕೊಟ್ಟಿದೆ. ಈಕೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ 1ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಆಗಸ್ಟ್ ೧೫ರಂದು ಆಳ್ವಾಸ್ ಸಂಸ್ಥೆಯಿಂದ ನಡೆಯುವ ಸ್ವಾತಂತ್ರೋತ್ಸವದಲ್ಲಿ ನಂದಿಯವರನ್ನು ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಘೋಷಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಟ್ಲದಲ್ಲಿ ನಡೆದ ಜೇಸಿ ವಲಯ ೧೫ರ ಮಧ್ಯಂತರ ವಲಯ ಸಮ್ಮೇಳನದಲ್ಲಿ ಜೇಸಿಐ ಕುಂದಾಪುರದ ಅಧ್ಯಕ್ಷ ಶ್ರೀಧರ ಸುವರ್ಣ ಅವರು ಔಟ್‌ಸ್ಟ್ಯಾಂಡಿಂಗ್ ಲೋಮ್ ಪ್ರೆಸಿಡೆಂಟ್ ರನ್ನರ್ ಅವಾರ್ಡ್‌ನ್ನು ಪಡೆದುಕೊಂಡಿದ್ದಾರೆ. ಜೇಸಿಐ ಕುಂದಾಪುರ ಸಿಟಿ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ವಲಯದಲ್ಲಿ ಅತ್ಯುತ್ತಮ ಕ್ಲಬ್‌ಗಳಲ್ಲಿ ಒಂದು ಎಂಬ ಹೆಗ್ಗೆಳಿಕೆಗೆ ಪಾತ್ರವಾದ ಹಿನ್ನಲೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷರಾದ ನಿತಿನ್ ಅವಭೃತ್, ಗಿರೀಶ್ ಹೆಬ್ಬಾರ್, ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ವಿ ಪಾಟೀಲ್ ಅವರನ್ನು ಕುಂದಾಪುರ ಬಾರ್ ಅಸೋಷಿಯೇಶನ್ ರಿ. ಕುಂದಾಪುರ ಇದರ ವತಿಯಿಂದ ಬೀಳ್ಕೊಡಲಾಯಿತು. ಕುಂದಾಪುರದ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅವರು ಇದೀಗ ಬೆಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುತ್ತಾರೆ. ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ನನ್ನ ಅವಧಿಯಲ್ಲಿ ಬಹಳಷ್ಟು ಕಸ್ಟಡಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿದ ಸಮಾಧಾನ ಇದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರಾದವರು ಸಾಕಷ್ಟು ಪರಿಶೀಲಿಸಿ ನ್ಯಾಯಾದಾನ ಮಾಡೋ ಅವಶ್ಯಕತೆ ಬಹಳಷ್ಟು ಇದೆ ಎಂದರಲ್ಲದೆ, ಕುಂದಾಪುರ ವಕೀಲರ ಸಹಕಾರವನ್ನು ಸ್ಮರಿಸಿದರು. ಕುಂದಾಪುರ ಬಾರ್ ಅಸೋಷಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ ನಾನು ಕಂಡ ಮೇಧಾವಿ ಜಡ್ಜ್‌ಗಳಲ್ಲಿ ಪಾಟೀಲ್ ಕೂಡಾ ಒಬ್ಬರು. ಮಾನವೀಯತೆಯ ಜೊತೆಗೆ ಪ್ರಕರಣಗಳನ್ನು ಸುಲಭವಾಗಿ ಪರಿಶೀಲಿಸಿ ನ್ಯಾಯದಾನ ಮಾಡುವ ಶಕ್ತಿ ಪಾಟೀಲ್‌ರಿಗೆ ಇದೆ. ಎಲ್ಲರನ್ನು…

Read More