Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುಂಭಾಶಿಯ ಯು. ಸಂಗೀತಾ ಶೆಣೈಗೆ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಪ್ರದಾನ ಮಾಡಿದೆ. ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್ ನಲ್ಲಿ ಅಧ್ಯಯನ ಮಾಡುತ್ತಿದ್ದ ಅವರು ಡಾ. ರಘು ರಾಧಾಕ್ರೃಷ್ಣನ್ ಹಾಗೂ ಡಾ. ಶ್ಯಾಮ ಪ್ರಸಾದ್ ಕೆ. ಅವರ ಮಾರ್ಗದರ್ಶನದಲ್ಲಿ “ಓರಲ್ ಕ್ಯಾನ್ಸರ್ ” ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದರು. ಈಕೆ ಕುಂದಪ್ರಭ ವಾರಪತ್ರಿಕೆ ಸಂಪಾದಕರಾದ ಯು.ಎಸ್. ಶೆಣೈ., ಸಾಧನಾ ಎಸ್. ಶೆಣೈ ಅವರು ದ್ವಿತೀಯ ಪುತ್ರಿ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ನಡೆಸುತ್ತಿರುವ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ 2026- 27ನೇ ಶೈಕ್ಷಣಿಕ ವರ್ಷದ  ಸಮವಸ್ತ್ರ ವಿತರಣಾ ಕಾರ್ಯಕ್ರಮ ಮತ್ತು ದ್ವಿತೀಯ ಪಾಲಕರ ಸಭೆ ಬುಧವಾರ ನಡೆಯಿತು. ಈ ಸಭೆಯಲ್ಲಿ ಮೊದಲು ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಪಾಲಕರೊಂದಿಗೆ ಚರ್ಚಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮಣಿಪಾಲ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿಮಿಟೆಡ್ ಇದರ ನಿರ್ದೇಶಕರಾದ ರಾಜಾರಾಮ್ ಭಟ್ ಅವರು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಿ ಮಾತನಾಡಿ, ವಿಶೇಷ ಮಕ್ಕಳಿಗಾಗಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಶಾಲಾ ಹಿತೈಷಿ ಹಾಗೂ ದಾನಿಗಳಾಗಿರುವ ಪ್ರಭು ಕೆನಡಿ ಪಿರೇರಾರವರು ಸಿಬ್ಬಂದಿ ವರ್ಗದವರ ಕಾರ್ಯವೈಖರಿಯನ್ನು ಶ್ಲಾಘಿಸುವುದರ ಜೊತೆಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಸದಾ ಸಹಾಯ ಹಸ್ತ ನೀಡುವುದಾಗಿ ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗೂ ಇಂದಿನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿರುವ ಶಾಂತಲಾ ಎನ್. ಹೆಗಡೆ ಅವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಬಹಳ ಮುಖ್ಯವಾದದ್ದು ಎಂದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2026ನೇ ವರ್ಷದ ವಿದ್ಯಾದೀವಿಗೆ’ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೂಚನೆಗಳು:1. ವಿದ್ಯಾರ್ಥಿಯು 2026ನೇ ವರ್ಷದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 60% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.2. ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.3. ಬಂಟ ಸಮುದಾಯವನ್ನು ಪ್ರತಿನಿಧಿಸುವ ಕುಂದಾಪುರ ತಾಲೂಕಿನ ನಿವಾಸಿಯಾಗಿರಬೇಕು. ಅವಿಭಜಿತ ಬೈಂದೂರು ತಾಲೂಕಿನ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.4. ಹೆತ್ತವರ (ಕುಟುಂಬದ) ವಾರ್ಷಿಕ ಆದಾಯ ಮಿತಿ ಒಂದು ಲಕ್ಷ ರೂಪಾಯಿ ಆಗಿರುತ್ತದೆ.5. ಪ್ರಸ್ತುತ ಪ್ರಥಮ ವರ್ಷದ ಪದವಿಪೂರ್ವ ತರಗತಿಯಲ್ಲಿ ಅಥವಾ ಯಾವುದೇ ವೃತ್ತಿಪರ ಶಿಕ್ಷಣ/ ತರಬೇತಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಪ್ರವೇಶ ಪಡೆದಿರಬೇಕು. ಅರ್ಜಿ ಸಲ್ಲಿಸುವ ವಿಧಾನ:ವಿದ್ಯಾರ್ಥಿಯು ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ‘ನಮೂನೆ-ಸಿ’…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಡಿ ಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಹಾಗೂ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ನೇತೃತ್ವದಲ್ಲಿ ಪಂಚವರ್ಣ ಸಂಘಟನೆ ಕೋಟ, ಗೀತಾನಂದ ಫೌಂಡೇಶನ್ ಮಣೂರು ಮಾರ್ಗದರ್ಶನದಲ್ಲಿ ಕೋಡಿ ಗ್ರಾಮದಲ್ಲಿ ಮೂರನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ಹೊಸಬೆಂಗ್ರೆಯಲ್ಲಿ ಜರಗಿತು. ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಮೆಂಡನ್ ಹಸಿರು ಹೆಜ್ಜೆಗೆ ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಮನೆಯಿಂದ ಚಾಲನೆ ನೀಡಿದರು. ಕಾರ್ಯಕ್ರಮ ಸಂಯೋಜಕರಾಗಿ ಮಾಜಿ ಅಧ್ಯಕ್ಷೆ ಗೀತಾಖಾರ್ವಿ, ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಶ್ಮಣ ಕುಂದರ್ ಮನೆಗೊಂದು ಗಿಡ ನೆಟ್ಟು ಜಾಗೃತಿ ಮೂಡಿಸಿದರು. ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷೆ ಶಾಂತ ಮೆಂಡನ್, ಹಾಲಿ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷೆ ದೀಪಾ ಆರ್ ಖಾರ್ವಿ ಮತ್ತು ಪೂರ್ಣಿಮಾ, ಸ್ತ್ರಿಶಕ್ತಿ ಸಂಘದ ಸದಸ್ಯರು ಸುಜಾತಾ ಖಾರ್ವಿ, ಜ್ಯೋತಿ, ಸವಿತಾ ಎಸ್, ಭಾರತಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಟ್ರಕ್‌ವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೋಟೇಶ್ವರ ಕಿನಾರಾ ಜಂಕ್ಷನ್ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುರುವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಇಡೂರು-ಕುಂಜ್ಞಾಡಿ ಜನ್ನಾಲು ಸಮೀಪದ ಕೊಳ್ತ ನಿವಾಸಿ ಭರತ್ ಶೆಟ್ಟಿ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೇರಳದಿಂದ ನಾಸಿಕ್ ಕಡೆಗೆ ಫ್ಲೈವುಡ್ ಸಾಗಿಸುತ್ತಿದ್ದ ಟ್ರಕ್ ಉಡುಪಿಯಿಂದ ಕುಂದಾಪುರದೆಡೆಗೆ ಸಾಗುವಾಗ ಅದೇ ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ಭರತ್ ಅವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಭರತ್ ಕೋಟೇಶ್ವರ ಸಮೀಪದಲ್ಲಿನ ಪೈಂಟ್ ಶೋರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ವರ್ಷವಷ್ಟೇ ವಿವಾಹವಾಗಿತ್ತು ಎನ್ನಲಾಗಿದೆ. ಮನೆಯಿಂದ ಕೆಲಸಕ್ಕೆ ಬಹುತೇಕ ಕಾರಿನಲ್ಲಿ ಬಂದುಹೋಗುತ್ತಿದ್ದ ಭರತ್ ಗುರುವಾರ ಬೈಕಿನಲ್ಲಿ ಬಂದಿದ್ದರು. ಟ್ರಕ್ ಚಾಲಕನ ಅಜಾಗರುಕತೆ ಹಾಗೂ ನಿರ್ಲಕ್ಷ್ಯತನದ ಚಾಲನೆ ಜೀವವೊಂದನ್ನು ಬಲಿಪಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕುಂದಾಪುರ ಸಂಚಾರ ಠಾಣೆ ಉಪನಿರೀಕ್ಷಕರಾದ ಅನೂಪ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಆಜ್ರಿ ಗ್ರಾಮದ ಎಡ್ನಳಿ, ಹಕ್ಲ್ ಮನೆ ಹಾಗೂ ಮಕ್ಕಿಮನೆ ಭಾಗಗಳಲ್ಲಿ ನಿನ್ನೆ ಸುರಿದ ಭಾರೀ ಗಾಳಿ-ಮಳೆಯಿಂದ ಅಡಿಕೆ, ತೆಂಗು ಹಾಗೂ ಬಾಳೆ ಬೆಳೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿದರು. ಈ ವೇಳೆ ಸಂಬಂಧಿತ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹಾಗೂ ಸರ್ಕಾರದ ನಿಯಮಾನುಸಾರ ಅರ್ಹ ರೈತರಿಗೆ ಶೀಘ್ರ ಪರಿಹಾರ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚಿಗೆ ನಡೆದ ‘ಕಾಸ್ಟ್ ಅಂಡ್ ಮ್ಯಾನೇಜ್ ಮೆಂಟ್ ಅಕೌಂಟೆಂಟ್’ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸುಜೀತ್ ಯು. ನಾಯಕ್ (296),ಆದ್ಯ ಎಸ್. ಪಾಡ್ರೆ (292), ಭೂಮಿಕ ಸುಬ್ಬರಾಯ್ ಹೆಗ್ಡೆ (282),ವರುಣ್ ಚಂದ್ರಶೇಖರ್ ಕಚತ್ತಿ(280), ಅಕ್ಷರ್ ಎಸ್ ನಾಯಕ್(270), ಅನಿರುದ್ಧ ಕೆ.ಕೆ (270), ಸೃಷ್ಠಿ (252), ಹಿತ ರವಿ ಶೆಟ್ಟಿ (240), ಅನ್ವಿತ್ ಪ್ರಶಾಂತ್ ಮೂಲೆ (230), ಸಮೃತಿ ಎಂ. ಗೌಡ (230), ಚಿನ್ಮಯ್(226), ಅನ್ನಿಕ(224), ವೃದ್ಧಿ ಎಸ್. ಶೆಟ್ಟಿ (208), ಅನುಷ್ಕ ಶರಣಗೌಡ ಬಿರದಾರ್ (200) ಅಂಕ ಪಡೆದು ಅರ್ಹತೆಗಳಿಸಿದ್ದಾರೆ. ಒಟ್ಟು 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 14 ಮಂದಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಈ ಬಾರಿ ಸಿಎಂಎ ಫೌಂಡೇಶನ್ ತೇರ್ಗಡೆ ಫಲಿತಾಂಶ ಪ್ರಮಾಣ ಶೇ. 25% ರಷ್ಟಿದ್ದರೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ.77.77%ರಷ್ಟು ಮಂದಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇಲ್ಲಿನ ರೋಟರಿ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾದ ಅರುಣ್ ಕುಮಾ‌ರ್ ಶಿರೂರು, ಕಾರ್ಯದರ್ಶಿಯಾಗಿ ಮಣಿಕಂಠ ದೇವಾಡಿಗ ಅಧಿಕಾರ ಸ್ವೀಕರಿಸಿದರು. ಪೂರ್ವ ಅಸಿಸ್ಟೆಂಟ್ ಗವರ್ನರ್, ಕುಂದಾಪುರ ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಪದಪ್ರಧಾನ ಕಾರ್ಯಕ್ರಮ ನೆರವೇರಿಸಿ ಬಳಿಕ ಮಾತನಾಡಿ, ರೋಟರಿ ಸ್ವಸ್ಥ ಸಮಾಜ ನಿರ್ಮಾಣದ ಧ್ಯೇಯ ಹೊಂದಿದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಇದರ ಮೂಲಕ ಜಗತ್ತಿನಾದ್ಯಂತ ಅತ್ಯುನ್ನತ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ ಎಂದರು. ಮುಖ್ಯ ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಶ್ರೀನಾಥ ರಾವ್, ವಲಯ ಸೇನಾನಿ ಪ್ರಶಾಂತ ಹವಾಲ್ದಾರ್, ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ, ನಿಕಟಪೂರ್ವ ಕಾರ್ಯದರ್ಶಿ ಪ್ರದೀಪ ಕುಮಾ‌ರ್ ಶೆಟ್ಟಿ ಕಾರಿಕಟ್ಟೆ, ಉಪಸ್ಥಿತರಿದ್ದರು. ಈ ವೇಳೆ ಬೈಂದೂರು ಭಾಗದ ಎಸ್.ಎಸ್.ಎಲ್.ಸಿ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇತ್ತೀಚಿಗೆ ಸುರಿದ ಬಾರಿ ಗಾಳಿ ಮಳೆಗೆ ಸಾಸ್ತಾನದ ಸಮೀಪ ಗುಂಡ್ಮಿ ಪಾತಾಳ ಬೆಟ್ಟು ಪರಿಸರದಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ವಿದ್ಯುತ್ ಕಂಬದ ಮೇಲೆರಗಿ ರಸ್ತೆ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತು. ಈ ಹಿನ್ನಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಶೌರ್ಯ ಟೀಮ್‌ನ ಸದಸ್ಯರು ಮತ್ತು ಮೆಸ್ಕಾಂ ಸಿಬ್ಬಂದಿಗಳ ಮೂಲಕ ತೆರವುಗೊಳಿಸಿ, ವಿದ್ಯುತ್ ತಂತಿ ಹಾಗೂ ರಸ್ತೆ ಸರಿಪಡಿಸಿ, ವಾಹನಗಳು ಸಂಚಾರ ಮುಕ್ತ ಅವಕಾಶ ಕಲ್ಪಿಸಲಾಯಿತು. ಈ ಸೇವಾ ಕಾರ್ಯದಲ್ಲಿ ಶೌರ್ಯ ತಂಡದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಯೋಗೀಶ ಆಚಾರ್ಯ, ಸತೀಶ್, ರೇಣುಕಾ, ವಿಜಯಶ್ರೀ, ಘಟಕ ಪ್ರತಿನಿಧಿ ಶೋಭಾ ಮತ್ತು ಮೆಸ್ಕಾಂ ಸಿಬ್ಬಂದಿ ಅನಿಲ್, ಕುಮಾರ ಹಾಗೂ ಸ್ಥಳೀಯರಾದ ಸುಂದರ, ಸಂತೋಷ ಸಹಕರಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 202-27ರ ಸ್ಪರ್ಧೆಗಳ ಅಂಗವಾಗಿ ಶಿವಮೊಗ್ಗದ ಸೈಂಟ್ ಜೋಸೆಪ್ಸ್ ಅಕ್ಷರಧಾಮ ಸಿಐಎಸ್‌ಸಿ ನೆಹರೂ ಕ್ರೀಡಾಂಗಣದಲ್ಲಿ ವಲಯಮಟ್ಟದ ಖೋ ಖೋ ಸ್ಪರ್ಧೆಗಳು ನಡೆದಿದ್ದವು. ಈ ಸ್ಪರ್ಧೆಗಳಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, 18 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. 17 ವರ್ಷದೊಳಗಿನ ವಯೋಮಿತಿಯ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. 14 ವರ್ಷದೊಳಗಿನ ವಯೋಮಿತಿಯ ಹುಡುಗ ಮತ್ತು ಹುಡುಗಿಯರ ವಿಭಾಗದಲ್ಲಿ, 17 ವರ್ಷದೊಳಗಿನ ವಯೋಮಿತಿಯ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಹರ್ಷವನ್ನು ವ್ಯಕ್ತಪಡಿಸಿ ಮಾತನಾಡಿ, ನಮ್ಮ ಶಾಲೆಯ ದೈಹಿಕ ಶಿಕ್ಷಕರಿಂದ ತರಬೇತಿಗೊಂಡ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದು, ಅವರು ಹೀಗೆ ಉತ್ತಮವಾಗಿ ಸಾಧಿಸಿ ಶಾಲೆಗೂ ಹೆತ್ತವರಿಗೂ ಕೀರ್ತಿತರುವಂತವರಾಗಲಿ ಎಂದು ಹಾರೈಸಿದರು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ,…

Read More