Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಆವರಣದಲ್ಲಿ ಕುಂದಾಪುರ ತಾಲೂಕಿನ ಉಪ ಅರಣ್ಯ ವಿಭಾಗ ಅಧಿಕಾರಿಗಳಾದ ಎಮ್.ವಿ.ಅಮರನಾಥರವರ ಉಪಸ್ಥಿತಿಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಈ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ೪೦೦ ಕ್ಕೂ ಹೆಚ್ಚು ಮೆಡಿಸಿನ್ ಯುಕ್ತ ಸಸ್ಯಗಳು ಇರುವುದನ್ನು ತಿಳಿದು ಅರಣ್ಯಾದಿಕಾರಿಗಳು ಸಂತಸ ವ್ಯಕ್ತ ಪಡಿಸಿದರು. ಹಸಿರಿನ ಹಬ್ಬಕ್ಕೆ ಚಾಲನೆ ನೀಡಿದ ಎಮ್.ವಿ.ಅಮರನಾಥರವರು ಪರಿಸರದಲ್ಲಿ ಅಸಮತೋಲನ ಉಂಟಾದರೆ ಪ್ರಾಕೃತಿಕ ವಿಕೋಪಗಳಿಗೆ ಹಾಗು ರೋಗರುಜಿನಗಳಿಗೆ ಕಾರಣವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಸಂರಕ್ಷಣೆಗೆ ಹಾಗು ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು. ’ಹಸಿರು ಮಕ್ಕಳ ಉಸಿರು ’ ಎಂಬಂತೆ ಪರಿಸರ ಜಾಗೃತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹ ಸಂತೋಷ ತಂದಿದೆ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಉತ್ತಮ ಸಂದೇಶ ನೀಡುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಮುಂದಾಳತ್ವ ವಹಿಸಿ ತಮ್ಮ ಮನೆ ಶಾಲೆ ಓಣಿಗಳಲ್ಲಿ ಸ್ವಚ್ಛತೆ ಮತ್ತು ಪರಿಸರ ಸ್ನೇಹಿ ಕೆಲಸಕ್ಕೆ ಮುಂದಾಗುವಂತೆ ಮಾರ್ಗದರ್ಶನ ನೀಡಿದರು. ’ಮಗುವಿಗೊಂದು ಮರ-ಶಾಲೆಗೊಂದು ವನ ’ ಎಂಬ ಮಾತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತ ಮಾಹಿತಿ ಕಾರ್ಯಕ್ರಮ ನಡೆಯಿತು. ಕನ್ನಡ ಪ್ರಾಧ್ಯಾಪಕರಾದ ಕಾಳಾವರ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಬ್ಬ ವ್ಯಕ್ತಿಯ ಸರ್ವೋತೋಮುಖ ಬೆಳವಣಿಗೆಗೆ ರಾಷ್ಟ್ರೀಯ ಸೇವಾ ಯೋಜನೆಯು ಸಹಕಾರಿಯಾಗಿದೆ. ಶಿಸ್ತು, ಸಂಘಟನಾ ಶಕ್ತಿ, ಸಂಪೂರ್ಣ ಮಾಡುವಂತಹ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಗೆ ಇದೆ. ನಾಯಕತ್ವ, ಸಂಹ್ಗಟನೆ, ಭಾವೈಕ್ಯತೆಯನ್ನು ಅಳವಿಡಿಸಿಕೊಳ್ಳಿ ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಆರ್.ಸಂಕೇತ್ ಘನತ್ಯಾಜ್ಯ ನಿರ್ವಹಣೆ ಕುರಿತು, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ವಿದ್ಯಾರ್ಥಿಗಳಾದ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ತಿಕ್ ಸ್ವಾಗತಿಸಿದರು. ಅವಿನಾಶ್ ಶೆಣೈ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನಾಯ್ಕನಕಟ್ಟೆ ಕೆರ್ಗಾಲ್ ಬಳಿ ಕುಂದಾಪುರ ಭಟ್ಕಳ ಸರಕಾರಿ ಬಸ್ ನಿಲುಗಡೆ ಮಾಡುವಂತೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬೇಡಿಕೆಯಿಟ್ಟಿದ್ದು ಅದರಂತೆ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರ ಶಿಪಾರಸ್ಸಿನ ಮೇರೆಗೆ ಕೆರ್ಗಾಲಿನಲ್ಲಿ ಇಂದಿನಿಂದ ಬಸ್ ನಿಲುಗಡೆಗೊಳ್ಳಲಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಹಲವಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಸರಕಾರಿ ಬಸ್ ಪಾಸ್ ಸೌಲಭ್ಯದಿಂದ ವಂಚಿತರಾಗಿದ್ದರು. ಈ ಸಂಬಂಧ ಸಾರ್ವಜನಿಕರು ಸರಕಾರಿ ಬಸ್ ನಿಲುಗಡೆಗೆ ಬೇಡಿಕೆಯಿಟ್ಟಿದ್ದರು. ಇದಕ್ಕೆ ಸ್ಪಂದಿಸಿದ್ದ ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ ಅವರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿ ಕುಂದಾಪುರ ಡಿಪೋ ಮ್ಯಾನೆಜರ್ ಅವರ ಗಮನಕ್ಕೆ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದರು. ಇಂದು ಮೊದಲ ಭಾರಿಗೆ ಬಸ್ ನಿಲುಗಡೆ ಮಾಡಲಾಗಿದ್ದುಸಾರ್ವಜನಿಕರು ಸಂತಸಗೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ಜಗದೀಶ ದೇವಾಡಿಗ, ಕೆರ್ಗಾಲ್ ಗ್ರಾಪಂ ಅಧ್ಯಕ್ಷ ಸೋಮ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿಯಲ್ಲಿ ನಡೆದ ದಕ್ಷ ಆವಾರ್ಡ್ ಕಾರ್ಯಕ್ರಮದಲ್ಲಿ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವರ್ಷದ ಸಾಧನೆಗೆ ಗೊಲ್ಡನ್ ಪ್ರಶಸ್ತಿ, ಅತ್ಯುತ್ತಮ ಸ್ಮಾರ್ಟ್ ಕ್ಲಾಸ್ ಪ್ರಶಸ್ತಿ, ಗೊಲ್ಡನ್ ಎಮ್ ಆರ್ ಅಭಿಯಾನ ಪ್ರಶಸ್ತಿ ಹಾಗು ಔಟ್ ಸ್ಟಾಂಡಿಂಗ್ ಕ್ಲಬ್ ಪ್ರಶಸ್ತಿ ಪಡೆದುಕೊಂಡಿದೆ. ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಯನ್ ಡಾ. ವೆಂಕಟೇಶ್ ಉಪ್ಪುಂದ, ಪೂರ್ವಾಧ್ಯಕ್ಷ ಜಿ. ಗೊಕುಲ್ ಶೆಟ್ಟಿ, ಲಯನ್, ಸುರೇಂದ್ರ ಶೆಟ್, ನೂತನ ಲಯನ್ಸ್ ಅಧ್ಯಕ್ಷ ಲಯನ್ ಕುಶಾಲ್ ಶೆಟ್ಟಿ ಮತ್ತಿತರರು ಪಾಲ್ಗೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ರಾಷ್ಟ್ರೀಯಮಟ್ಟದಲ್ಲಿ ನಡೆದ ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ. 80.76 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನಿಯಾಗಿ ಮೂಡಿಬಂದಿದೆ. ರಾಷ್ಟ್ರಮಟ್ಟದಲ್ಲಿ 200ರಲ್ಲಿ 192 ಅಂಕವನ್ನು ಪಡೆದ ಇಂದೋರ್ನ ವಿದ್ಯಾರ್ಥಿ ಪ್ರಥಮಸ್ಥಾನಿಯಾಗಿದ್ದು, ಆಳ್ವಾಸ್ನ ವಿದ್ಯಾರ್ಥಿನಿ ತವಿಶಿ ದೇಚಮ್ಮ 191(ಶೇ.95.50)ಅಂಕಗಳನ್ನು ಪಡೆಯುವುದರೊಂದಿಗೆ ದೇಶದಲ್ಲಿ ದ್ವಿತೀಯ, ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗಿದ್ದಾಳೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ 130 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 105 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 61 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಮೂಲತಃ ಮಡಿಕೇರಿಯ ತವಿಶಿ ದೇಚಮ್ಮ ಅವರು ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಿದ್ದು, 591 ಅಂಕಗಳನ್ನು ಪಡೆದ್ದರು. ಶ್ರದ್ಧಾ ಎಂ.ಎನ್ 185(ಶೇ.92.5), ಶೃಂಗೇರಿ ಮೂಲದ ಅವಳಿ ಸಹೋದರಿಯರಾದ ಸ್ವಾತಿ ಹೆಗ್ಡೆ 186(93ಶೇ), ಭವ್ಯಶ್ರೀ ಎನ್.ಹೆಗ್ಡೆ 184(ಶೇ.92) ಅಂಕಗಳೊಂದಿಗೆ ಸಾಧನೆ ಮಾಡಿದ್ದಾರೆ. ಸುಕೇಶ್ ಟಿ.ಎಸ್ 176, ಅಭಯಕಾಂತ್ 175,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಪೆರ್ಡೂರು ಮೇಳ ಮತ್ತು ತೆಂಕು ಬಡಗು ಕಲಾವಿದರ ಕೂಡುವಿಕೆಯಲ್ಲಿ, ಹಳೆ ಕಲಾವಿದರ ಅಪೂರ್ವ ಸಂಗಮದೊಂದಿಗೆ ಕೊಂಡಳ್ಳಿ ಸಂಯೋಜನೆಯಲ್ಲಿ ಮೇಘೋಲ್ಲಾಸ ರಾಗ – ರಾಧ – ರಂಜಿನಿ ಹಾಗೂ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ದಿಶಾ ಶೆಟ್ಟಿ ವರ್ಷಾ ಶೆಟ್ಟಿ ಇವರಿಂದ ರಾಧ – ವಿಲಾಸ ಹಾಗೂ ದೇವದಾಸ್ ಈಶ್ವರಮಂಗಲ ವಿರಚಿತ ಶಿವರಂಜಿನಿ ಎಂಬ ಮೂರು ಪ್ರಸಂಗಗಳನ್ನೊಳಗೊಂಡು ಯಕ್ಷಗಾನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ ೨೧, ಶುಕ್ರವಾರ ರಾತ್ರಿ ೯:೩೦ ಜರುಗಲಿದೆ. ಮಾಹಿತಿಗಾಗಿ: 9740002019, 8722176308

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸ್ವಚ್ಛತೆ ಎನ್ನುವುದು ಮೊದಲು ನಮ್ಮ ಮನೆ ಮನಗಳಿಂದಲೇ ಆರಂಭವಾಗಬೇಕು. ಸಮಾಜದ ಸ್ವಚ್ಛತೆಯ ಬಗೆಗೆ ಆಲೋಚಿಸುವ ಮೊದಲು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿರಂತರವಾಗಿ ಗಮನಹರಿಸಬೇಕು ಆಗಮಾತ್ರ ಸ್ವಚ್ಛ ಭಾರತದ ನಿರ್ಮಾಣ ನಿಜಾರ್ಥದಲ್ಲಿ ಯಶಗೊಳ್ಳಲು ಸಾಧ್ಯ ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹೆಚ್ ಭಾಸ್ಕರ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಚ್ಛ ಮನೆ ಮನ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಮನೆಗಳಲ್ಲಿನ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಅವರು ಹೇಳಿದರು. ವಿದ್ಯಾರ್ಥಿಗಳಾದ ಮಂಜುನಾಥ, ಕೃಷ್ಣ, ಸೃಷ್ಟಿ ಮತ್ತು ಗೌತಮಿ ಸ್ವಚ್ಛತೆಯ ಬಗೆಗೆ ತಮ್ಮ ವಿಚಾರಗಳನ್ನು ಮಂಡಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ಆಯೋಜಿಸಿದ್ದರು.ದೀಕ್ಷಾ ಪ್ರಾರ್ಥಿಸಿದರು. ವಿಜೇತ್ ಸ್ವಾಗತಿಸಿದರು. ಭರತ್ ಕಾರ‍್ಯಕ್ರಮ ನಿರೂಪಿಸಿದರು. ರೋಶನ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಚಿತ್ತೂರು: ಯಕ್ಷಗಾನ ಒಂದು ಸಮೃದ್ಧ ಕಲೆ. ನೃತ್ಯ, ಹಾಡುಗಾರಿಕೆ, ವೇಷಭೂಷಣ ಅಭಿನಯಗಳಿಂದ ಕೂಡಿದ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಕಲಾವಿದರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ ಜೀವನ ಪರ್ಯಂತ ಕಲಾ ಸೇವೆ ಮಾಡಿದ ಕಲಾವಿದರು ಕೊನೆಗಾಲದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಂತಹ ಕಲಾವಿದರಿಗೆ ಸರಕಾರ ಹಾಗೂ ಯಕ್ಷಪ್ರೇಮಿಗಳು ಸಹಕಾರ ನೀಡಬೇಕಾಗಿದೆ ಎಂದು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಘ್ನೇರ್ಶವರ ಮಂಜ ನುಡಿದರು. ಮಾರಣಕಟ್ಟೆ ವಾಸುಕಿ ಸಭಾಭವನದಲ್ಲಿ ಮಾರಣಕಟ್ಟೆ ವಿಪ್ರ ಯಕ್ಷಗಾನ ಅಭಿಮಾನಿ ಬಳಗದ ವತಿಯಿಂದ ಮಂದಾರ್ತಿ ಮೇಳದ ಹಾಸ್ಯಗಾರ ಮಹಾಬಲ ದೇವಾಡಿಗರಿಗೆ ನಡೆದ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ವಹಿಸಿ ಕಲಾವಿದ ಮಹಾಬಲ ದೇವಾಡಿಗರನ್ನು ಸನ್ಮಾನಿಸಿದರು. ಮಹಾಬಲ ದೇವಾಡಿಗರಿಗೆ ರೂ. ೫೦ ಸಾವಿರ ಆರ್ಥಿಕ ಮೊತ್ತ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಭಾಗವತ ವಿಶ್ವೇಶ್ವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೊಗವೀರ ಯುವ ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಕ್ರಿಯಶೀಲವಾಗಿ ಸಮಾಜದಲ್ಲಿ ತೊಡಗಿಸಿಕೊಂಡಾಗ ಸಮಾಜದ ಗೌರವವು ಸಂಘಟನೆಗೆ ದೊರಕಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ. ಹಾಗಾಗಿ ಯುವ ಸಂಘಟನೆಯಲ್ಲಿ ಸೇವಾ ಮನೋಭಾವ ಇರಬೇಕು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಡಾ|ಜಿ.ಶಂಕರ್ ಹೇಳಿದರು. ಬಗ್ವಾಡಿಯ ಶ್ರೀ ಮಹಿಷಾಸುರ ಸಭಾಭವನದಲ್ಲಿ ನಡೆದ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮೊಗವೀರ ಸಮಾಜದ ಹಿರಿಯ ಮುಖಂಡ ಗುಜ್ಜಾಡಿ ಮಂಜು ನಾಯ್ಕ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷರಾದ ಕೆ.ಕೆ.ಕಾಂಚನ್ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ, ಸಂಘಟನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಶ್ರಮಿಸಬೇಕು. ನನ್ನ ಅಧ್ಯಕ್ಷ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರನ್ನು ಕೃತಜ್ಞತೆಯಿಂದ ಅಭಿನಂದಿಸುತ್ತೇನೆ ಎಂದರು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ರಿ., ಅಧ್ಯಕ್ಷರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆಲವರ ದೇಹದ ಚರ್ಮದಲ್ಲಿ ಬಿಳಿಯಾಗಿ ಕಾಣುವ ತೊನ್ನು ರೋಗ ಶಾಪವಲ್ಲ. ಸಾಂಕ್ರಮಿಕ ಕಾಯಿಲೆಯೂ ಅಲ್ಲ. ಅನುವಂಶಿಯವೂ ಅಲ್ಲ. ಅದನ್ನು ಸುಲಭವಾಗಿ ಗುಣಪಡಿಸುವ ಚಿಕಿತ್ಸೆ ಲಭ್ಯವಿದೆ ಎಂದು ಜನಸಾಮಾನ್ಯರಿಗೆ ಅರಿವು ಮೂಡಿಸುವ ಜನಜಾಗೃತಿ ಅಭಿಯಾನ ಕುಂದಾಪುರಕ್ಕೆ ಅಗಮಿಸಿತು. ರಾಜ್ಯಮಟ್ಟದ ಅಭಿಯಾನದ 20 ನೇ ದಿನ ಕುಂದಾಪುರಕ್ಕೆ ಆಗಮಿಸಿದ ಅಭಿಯಾನದ ವಾಹನವನ್ನು ಚಿನ್ಮಯಿ ಆಸ್ಪತ್ರೆಯ ವಠಾರದಲ್ಲಿ ಸ್ವಾಗತಿಸಲಾಯಿತು. ಭಾರತೀಯ ಚರ್ಮ, ಲೈಂಗಿಕ ಹಾಗೂ ಕುಷ್ಠರೋಗಗಳ ತಜ್ಞರ ಸಂಘ, ಕರ್ನಾಟಕ ಶಾಖೆ ವತಿಯಿಂದ ಹೊರಟ ಈ ಅಭಿಯಾನದ ಕುರಿತು ಚಿನ್ಮಯಿ ಆಸ್ಪತ್ರೆಯ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಿವರಿಸಲಾಯಿತು. ಕುಂದಾಪುರ ಐ.ಎಂ.ಎ ಅಧ್ಯಕ್ಷ ಡಾ| ನಿಖಿಲ್ ರೈ ಮಾಹಿತಿ ಪತ್ರ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಉದಯಶಂಕರ ಅಧ್ಯಕ್ಷತೆ ವಹಿಸಿದ್ದರು. ಮನೋರೋಗ ತಜ್ಞ , ರಾಜ್ಯ ಐ.ಎಂ.ಎ ಯ ಮಾಜಿ ಉಪಾಧ್ಯಕ್ಷ ಡಾ.ಕೆ.ಎಸ್.ಕಾರಂತ್ , ಮೂಳೆ ತಜ್ಞ ಡಾ.ದಿನೇಶ್ ಶೆಟ್ಟಿ ,ಅರಿವಳಿಕೆ…

Read More