Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಸ್ವಂತಿಕೆ ಹಾಗೂ ಅನನ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಯೋಚನೆಗಳ ಮೇಲೆ ಅನ್ಯ ಪ್ರಭಾವ ಜಾಸ್ತಿಯಾಗುತ್ತಿದೆ. ಪ್ರಭಾವಗಳಿಗೆ ಒಳಗಾಗಿ ವಿದ್ಯಾರ್ಥಿಗಳು ಬದುಕಿನ ನೈಜತೆಯನ್ನು ಕಳೆದುಕೊಳ್ಳಬಾರದು. ಎಲ್ಲವನ್ನು ಒಳಗೊಳ್ಳುತ್ತಾ ಒಡನಾಟದ ಮೂಲಕ ನಡೆಯುವ ಕಲಿಕೆಯೇ ದೊಡ್ಡ ಕಲಿಕೆ ಎಂದು ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕ ಉದಯ ಗಾಂವಕರ್ ಹೇಳಿದರು. ಅವರುಕುಂದಾಪುರದಡಾ. ಬಿ. ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ೨೦೧೭-೧೮ನೇ ಶೈಕ್ಷಣಿಕ ಸಾಲಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ ಮಾಹಿತಿಯನ್ನುಜ್ಞಾನಎಂದು ಪರಿಭಾವಿಸುತ್ತಾರೆ. ಮಾಹಿತಿಯೇ ಜ್ಞಾನವಲ್ಲ, ಜ್ಞಾನ ರಚನಾತ್ಮಕವಾಗಿದ್ದು, ಸ್ವಂತಿಕೆಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಒಳ್ಳೆದು ಕೆಟ್ಟದನ್ನು ಪರಾಮರ್ಶೆ ಮಾಡುವ ಮೂಲಕ ಮಾನವ ಪ್ರಜ್ಞೆ ಬೆಳೆಸಿಕೊಳ್ಳಿ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ್‌ಅಧ್ಯಕ್ಷತೆ ವಹಿಸಿದ್ದರು. ವಿವಿಧ ವೇದಿಕೆಗಳ ಮುಖ್ಯ ಸಂಯೋಜಕ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಉಪನ್ಯಾಸಕಿ ರಕ್ಷಾ ಎಸ್. ಶೆಟ್ಟಿ ವಿವಿಧ ವೇದಿಕೆಗಳ ಧ್ಯೆಯೋದ್ಧೇಶಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಮೊಂಟೆಸರಿ ಮಕ್ಕಳಿಗೋಸ್ಕರ ಬೀಜದ ಉಂಡೆ (ಸೀಡ್ ಬಾಲ್) ತಯಾರಿಕೆಯ ವಿಶೇಷ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ’ಪಾಠದ ಜೋತೆಗೆ ಆಟ, ಆಟದೊಂದಿಗೆ ಪಾಠ’ ಎಂಬ ವಿಶೇಷ ಯೋಜನೆಯೊಂದಕ್ಕೆ ಇಂದು ಮಕ್ಕಳು ಚಾಲನೆ ನೀಡಿದರು. ಮೊದಲಿಗೆ ಕೆಂಪು ಮಣ್ಣಿಗೆ ನೀರನ್ನು ಸೇರಿಸಿ ಮಣ್ಣನ್ನು ಹದಗೊಳಿಸಿಕೊಳ್ಳಲಾಯಿತು. ನಂತರ ಮಕ್ಕಳನ್ನು ಸುತ್ತ ಕುಳ್ಳಿರಿಸಿ ಮಣ್ಣಿನ ಉಂಡೆಗಳನ್ನು ರಚಿಸುವಂತೆ ತಿಳಿಸಲಾಯಿತು. ತಮ್ಮ ಪುಟಾಣಿ ಕೈಗಳಿಂದ ವಿವಿಧ ಆಕಾರದ ಉಂಡೆಗಳನ್ನು ರಚಿಸಿ ಅದರ ಮಧ್ಯಭಾಗದಲ್ಲಿ ವಿವಿಧ ತರಕಾರಿ (ಬೆಂಡೆಕಾಯಿ, ಸೌತೆಕಾಯಿ, ಕುಂಬಳಕಾಯಿ ) ಬೀಜಗಳನ್ನು ಇಟ್ಟು ವೃತ್ತಾಕಾರದ ಉಂಡೆಗಳನ್ನು ರಚಿಸಲಾಯಿತು. ಈ ಕ್ರಿಯಾತ್ಮಕ ಚಟುವಟಿಕೆಯ ಜೊತೆಯಲ್ಲಿ ಇವುಗಳ ಮಹತ್ವವನ್ನು ಶಿಕ್ಷಕಿಯರು ಮಕ್ಕಳಿಗೆ ತಿಳಿಸಿದರು. ಮುಖ್ಯವಾಗಿ ಈ ಚಟುವಟಿಕೆಯಿಂದಾಗಿ ಪುಟಾಣಿಗಳ ಕೈಬೆರಳುಗಳಿಗೆ ಉತ್ತಮ ವ್ಯಾಯಾಮ ಸಿಕ್ಕಿದಂತಾಗುತ್ತದೆ. ಒಟ್ಟಿನಲ್ಲಿ ಬಹು ಉಪಯೋಗದ ಸೀಡ್ ಬಾಲ್ ತಯಾರಿಕೆಯನ್ನು ಮಾಡುವ ಮೂಲಕ ಪುಟಾಣಿಗಳು ಮತ್ತು ಶಿಕ್ಷಕಿಯರು ಆನಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ನಿರ್ದೇಶಕಿ ಅನುಪಮಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಜರಗಿತು. ದಾನಿಗಳಾದ ಪ್ರಕಾಶ ಎಂ.ಪೂಜಾರಿ ಮತ್ತು ಅರುಣ ಬುತ್ತೆಲ್ಲೊ ಅವರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮೂಲಕ ಕೊಡ ಮಾಡಿದ ಪುಸ್ತಕಗಳನ್ನು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಿದ ಪ್ರಕಾಶ ಎಂ.ಪೂಜಾರಿ ಮತ್ತು ಅರುಣ ಬುತ್ತೆಲ್ಲೊ ಶುಭ ಹಾರೈಸಿದರು. ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀಧರ ಮೇಸ್ತ, ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಶಿಕ್ಷಕಿ ಪವಿತ್ರ ಮೇಸ್ತ, ಸಂಘದ ಕಾರ್ಯದರ್ಶಿ ರಾಘವೇಂದ್ರ ಡಿ., ಸದಸ್ಯ ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆರ್ಗಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯ್ಕನಕಟ್ಟೆ ಜಿಎಸ್‌ಬಿ ಸಮಜದವರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ವೈಭವದಿಂದ ಜರುಗಿತು. ಬೆಳಿಗ್ಗೆ ಹೋಮ, ಹವನಾದಿಗಳು ಹಾಗೂ ಇತರ ಧಾರ್ಮಿಕ ಕಾರ್ಯಕ್ರಗಳು ನಡೆದವು. ಉತ್ಸವದ ಪ್ರಯುಕ್ತ ಸಂಜೆ ಶ್ರೀ ವೆಂಕಟರಮಣ ಸೇವಾ ಟ್ರಸ್ಟ್ ಆಯೋಜಿಸಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪ್ಪುಂದದ ಯುವಪ್ರತಿಭೆ ಶೃದ್ಧಾ ಓಂಗಣೇಶ್ ಕಾಮತ್ ಇವರಿಂದ ನಡೆದ ’ಭಜನ್ ಸಂಧ್ಯಾ’ ಮೆಚ್ಚುಗೆಗೆ ಪಾತ್ರವಾಯಿತು. ಹಾರ್ಮೋನೀಯಂನಲ್ಲಿ ಉಪ್ಪುಂದ ವಿನಾಯಕ ಪ್ರಭು, ತಬಲಾ ಸಾಥಿಯಾಗಿ ಉಪ್ಪುಂದ ಗೋಪಾಲಕೃಷ್ಣ ಜೋಷಿ ಹಾಗೂ ಮಿಶ್ರವಾದ್ಯದಲ್ಲಿ ವಿಠಲದಾಸ ಕಾಮತ್ ಮತ್ತು ವಿಜಯಾ ಓಂಗಣೇಶ್ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಧ್ವನಿ-ಬೆಳಕು ಸಂಯೋಜಕರ ಸಂಘಟನೆ ರಿ. ಉಡುಪಿ ಜಿಲ್ಲೆ ಬೈಂದೂರು ವಲಯದ 6ನೇ ವಾರ್ಷಿಕ ಮಹಾಸಭೆ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ನಡೆಯಿತು. ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಬೈಂದೂರು ವಲಯಾಧ್ಯಕ್ಷ ಶಶಿಧರ್ ಶೆಣೈ ಸಭೆಯ ಅಧ್ಯಕ್ಷತೆ ವಹಿಸಿದರು, ಗೌರವ ಉಪಸ್ಥಿತಿಗಳಾಗಿ ಎಚ್.ಉದಯ್ ಆಚಾರ್ ಜಿಲ್ಲಾಧ್ಯಕ್ಷರು ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಉಡುಪಿ, ದಾಮೋದರ್ ಉಡುಪಿ ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಪ್ರದಾನಕಾರ್ಯದರ್ಶಿ, ರೋನಿ ಬೆರೆಟ್ಟೊ ಕುಂದಾಪುರ, ಪುಂಡಲೀಕ ಕಾಮತ್ ಸಾಸ್ತಾನ, ಅನಿಲ್ ಕುಮಾರ್ ಉಡುಪಿ, ಅರೆಹಾಡಿ ಮಂಜು ದೇವಾಡಿಗ, ಅನ್ವಿ ಸೇಲ್ಯೂಶನ್ ಉಡುಪಿ ಇದರ ಮಾಲಿಕ ವಿನಯ ಕುಮಾರ್, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧ್ವನಿ-ಬೆಳಕು ಸಂಘಟನೆ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್, ಕೊಡೆ ವಿತರಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಉದಯ್ ಆಚಾರ್ ಪ್ರಾಸ್ತಾವಿಕ ಮಾತಗಳನ್ನಾಡಿದರು, ಪ್ರಭಾಕರ ಜಿ ನಾಯ್ಕನಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು, ಬೈಂದೂರು ವಲಯದ ಕಾರ್ಯದರ್ಶಿ ವಿನಾಯಕ ಪ್ರಭು ವಾರ್ಷಿಕ ವರದಿ ವಾಚನ ಮತ್ತು ಲೆಕ್ಕಪತ್ರ ಮಂಡಿಸಿದರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಹಿರಿಯ ಪತ್ರಕರ್ತ, ಉಡುಪಿ ಜಿಲ್ಲಾ ಕಾರ್ಯ ಪತ್ರಕರ್ತರ ಸಂಘದ ಪ್ರಥಮ ಅಧ್ಯಕ್ಷ, ಬಳಕೆದಾರರ ವೇದಿಕೆ ಸಂಚಾಲಕ ಕೆ.ದಾಮೋದರ ಐತಾಳರಿಗೆ ಪತ್ರಕರ್ತರ ವೇದಿಕೆ ನೀಡುವ ಪತ್ರಿಕಾ ದಿನದ ಗೌರವವನ್ನು ದಿನಾಚರಣೆಯ ಮುನ್ನಾ ದಿನ ಜೂನ್ ೩೦ ರಂದು ಅವರ ನಿವಾಸದಲ್ಲಿ ಮಧ್ಯಾಹ್ನ ೨.೦೦ ಗಂಟೆಗೆ ಪ್ರದಾನಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಗೌರವ ಪ್ರದಾನ ಮಾಡಲಿದ್ದಾರೆ., ನಾದವೈಭವಂ ಉಡುಪಿ ವಾಸುದೇವ ಭಟ್, ವಿಶ್ವ ತುಳುವೆರೆ ಆಯನೋದ ಪ್ರಧಾನ ಸಂಚಾಲಕ ಡಾ. ರಾಜೇಶ ಆಳ್ವ ಬದಿಯಡ್ಕ , ಮಾಧ್ಯಮ ಉಪನ್ಯಾಸಕ ಮಂಜಪ್ಪ ದ್ಯಾ ಗೋಣಿ ಸಹಿತ ಗಣ್ಯರು ಉಪಸ್ಥಿತರಿರುವರು. ರಾಜೇಶ ಶಿಬಾಜೆ ಪ್ರಶಸ್ತಿ ಪುರಸ್ಕೃತ ಸುಭಾಶ್ಚಂದ್ರ ವಾಗ್ಳೆ ಅಭಿನಂದನೆಗೈಯುವರು. ವೇದಿಕೆಯ ಹಿರಿಯರೆಡೆಗೆ ನಮ್ಮ ನಡಿಗೆ ಧ್ಯೇಯದೊಂದಿಗೆ ಹತ್ತು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿದ್ದು ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ ರಾವ್ ಎಕ್ಕಾರು, ರಾಘವ ನಂಬಿಯಾರ್, ಎ.ಎಸ್ ಎನ್ ಹೆಬ್ಬಾರ್, ಎಂ.ವಿ.ಕಾಮತ್, ಕು.ಗೋ, ನಾದವೈಭವಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ಧಾಪುರ: ಇತಿಹಾಸ ಪ್ರಸಿದ್ದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕರ್ಣಾಟಕ ಬ್ಯಾಂಕ್ ಚೇರ್‌ಮೆನ್ ಪಿ. ಜಯರಾಮ್ ಭಟ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳಕ್ಕೆ ಭೇಟಿ ನೀಡಿದ ಕರ್ಣಾಟಕ ಬ್ಯಾಂಕ್ ಚೇರ್‌ಮೆನ್ ಪಿ. ಜಯರಾಮ್ ಭಟ್ ಅವರನ್ನು ದೇವಳದ ಸಹ ಮೋಕ್ತೇಸರರಾದ ಬಿ. ಶ್ರೀನಿವಾಸ ಚಾತ್ರ ಅವರು ಬರಮಾಡಿಕೊಂಡು ದೇವಳದ ವತಿಯಿಂದ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಜಯರಾಮ್ ಭಟ್ ಅವರ ಪತ್ನಿ ಶುಭಾ ಭಟ್, ಪುತ್ರಿ ಚೈತ್ರಾ ಭಟ್, ಕರ್ಣಾಟಕ ಬ್ಯಾಂಕ್ ಎಜಿಎಂ. ವಿದ್ಯಾಲಕ್ಷ್ಮೀ, ಹೆಮ್ಸ್ ಫುಡ್ಸ್‌ನ ಆಡಳಿತ ನಿರ್ದೇಶಕ ರಾಘವೇಂದ್ರ ಹೆಮ್ಮಣ್ಣ, ನಿರ್ದೇಶಕಿ ಆಶಾಕಿರಣ ಹೆಮ್ಮಣ್ಣ, ನಾಗರಾಜ ಚಾತ್ರ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ೨೦೧೭-೧೮ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಅಜಿತ್ ಕೆ. ಆಯ್ಕೆಯಾಗಿದ್ದಾರೆ. ಕುಂದಾಪುರ ರಾಮಕ್ಷತ್ರೀಯ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ರಾಣುಮಕ್ಕಿ ನಾಗಬನ ಸಮಿತಿಯ ಅಧ್ಯಕ್ಷರಾಗಿ, ರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾಗಿ, ರೋಯಲ್ ಕ್ಲಬ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸನ್‌ರೈಸ್‌ನ ಕಾರ್ಯದರ್ಶಿಯಾಗಿ ಗಣೇಶ್ ಸಿ.ಎಚ್. ಆಯ್ಕೆಯಾದರು. ಜು.02 ಪದಪ್ರದಾನ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪದಪ್ರದಾನ ಸಮಾರಂಭ ಜುಲೈ 02ರಂದು ಸಂಜೆ 7 ಗಂಟೆಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ. ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಮದ್ದೋಡಿ ಪದಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ. ಕಾಂಚನ್, ಜೋನಲ್ ಲೆಫ್ಟಿನೆಂಟ್ ಜಯಪ್ರಕಾಶ್ ಶೆಟ್ಟಿ ವೈ. ಭಾಗವಹಿಸಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಕಡಲ ಕಿನಾರೆಯಲ್ಲಿ ಕಡಲಾಮೆಯೊಂದು ಪತ್ತೆಯಾಗಿದ್ದು, ಸ್ಥಳೀಯರು ಕಡಲಾಮೆಯನ್ನು ಸಂರಕ್ಷಿಸಿ ಕಡಲಿಗೆ ಬಿಟ್ಟಿದ್ದಾರೆ. ಬುಧವಾರ ಸಂಜೆ ಗಂಗೊಳ್ಳಿಯ ಬ್ಯಾಲಿಕೊಡೇರಿ ಸಮೀಪದ ಕಡಲ ತೀರದಲ್ಲಿ ಮೂರು ಕಾಲಿನ ಅಪರೂಪದ ಕಡಲಾಮೆಯೊಂದು ಕಂಡು ಬಂದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಕಡಲ ತೀರದ ಕಲ್ಲಿಗೆ ಬಡಿಯುತ್ತಿತ್ತು. ಇದನ್ನು ಗಮನಿಸಿದ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಪೂಜಾರಿ ಅವರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ತೆರಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದ ಕಡಲಾಮೆಯನ್ನು ಸ್ಥಳೀಯರ ಯುವಕರ ಸಹಾಯದಿಂದ ಈ ಸಂರಕ್ಷಿಸಿ ಸ್ವಲ್ಪ ಸಮಯದ ಬಳಿಕ ಇದನ್ನು ಸಮುದ್ರಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Read More

ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಿಂದ ಬದುಕು ಉಜ್ವಲ: ದೀಪಕ್‌ಕುಮಾರ್ ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರೋಟರಿ ಭವನದಲ್ಲಿ ಭಾರತ್ ಗ್ಯಾಸ್ ವಿತರಣ ಸಂಸ್ಥೆ ಶ್ರೀ ಶಾಂತೇರಿ ಕಾಮಾಕ್ಷಿ ಎಂಟರ್‌ಪ್ರೈಸೆಸ್ ಬೈಂದೂರು ಇವರ ಸಹಯೋಗದಲ್ಲಿ ಪ್ರಧಾನಮಂತ್ರಿ ಉಜ್ವಲಾ ಹೊಸ ಅನಿಲ ಸಂಪರ್ಕ ಮೇಳ ಹಾಗೂ ಸುರಕ್ಷಿತಾ ಶಿಬಿರ ಜರುಗಿತು. ಶಿಬಿರವನ್ನು ಉದ್ಘಾಟಿಸಿದ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಮಾತನಾಡಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಮಹತ್ವಾಕಾಂಕ್ಷಿ ಇದು ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ ದೂರದೃಷ್ಠಿತ್ವದ ಚಿಂತನೆಗಳಿಂದ ಸ್ವಚ್ಛ ಇಂದನ-ಉತ್ತಮ ಜೀವನ ಎಂಬ ಯೋಜನೆ ಯಶಸ್ವಿಯಾಗಿ ಜಾರಿಗೊಳ್ಳುತ್ತಿದೆ. ದೇಶದ ಶ್ರೀಮಂತರು ಮೋದಿಯವರ ಮನವಿ ಮೇರೆಗೆ ಅಡುಗೆ ಅನಿಲದ ಸಬ್ಸಿಡಿಯನ್ನು ಹಿಂತಿರುಗಿಸಿವುದರಿಂದ ಬಡವರಿಗೆ ಉಚಿತವಾಗಿ ಸಂಪರ್ಕ ನೀಡಲು ಅನುಕೂಲವಾಗಿದೆ ಎಂದು ಹೇಳಿದರು. ಕಳೆದ ಐವತ್ತು ವರ್ಷಗಳಿಂದಾಗದ ಕೆಲಸಗಳು ಈ ಮೂರು ವರ್ಷಗಳಿಂದಾಗುತ್ತಿದೆ. ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ…

Read More