Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಸಮೀಪದ ಪಾಣ್ತಿ ಗರಡಿ ಹೈಗುಳಿ ಮತ್ತು ಪರಿವಾರ ದೈವಸ್ಥಾನದ ಜೀಣೋದ್ಧಾರ ಕಾರ್ಯ ನಡೆಯುತ್ತಿದ್ದು, ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಬೈಂದೂರು ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು 5 ಲಕ್ಷ ರೂ. ದೇಣಿಗೆಯನ್ನು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಮೋಹನ ಪೂಜಾರಿ ಉಪ್ಪುಂದ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮದನ್‌ಕುಮಾರ್ ಉಪ್ಪುಂದ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾಗರಾಜ ಪಿ. ಯಡ್ತರೆ, ಸದಸ್ಯ ಮಹೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಸಿರಿ ಮಾಸ ಪತ್ರಿಕೆಯ ಸಂಪಾದಕ, ಲೇಖಕ ಸಂದೀಪ್ ಶೆಟ್ಟಿ ಹೆಗ್ಗದ್ದೆ ಯವರ ದುಬೈ ಪ್ರವಾಸ ಕಥನ ಕಿಂಗ್ ಕ್ಲೀನ್ ಕೃತಿ ಅ.5ರ ಶನಿವಾರ ಸಂಜೆ 4:30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಬೆಂಗಳೂರು ಇಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಮಚಂದ್ರ ಗುರೂಜಿ, ಪುಸ್ತಕ ಬಿಡುಗಡೆಯನ್ನು ಸಾಹಿತಿ ಪತ್ರಕರ್ತ ಜೋಗಿ, ಕೃತಿ ಪರಿಚಯವನ್ನು ಸಾಹಿತಿ ದೊಡ್ಡರಂಗೇಗೌಡ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ವಹಿಸಲಿದ್ದಾರೆ.ಅಲ್ಲದೇ ಕಾರ್ಯಕ್ರಮದಲ್ಲಿ ಕೆರಾಡಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಮತ್ತು ಸಿರಿ ಮಾಸ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸುರೇಶ್ ಚಿಕ್ಕಣ್ಣ ಕೂಡ ಭಾಗವಹಿಸಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದ ಸುರಕ್ಷತೆ ದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತುಕೊಂಡು, ಕೇಂದ್ರ ಸರಕಾರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಪಕ್ಷದ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದನ್ನು ಮೈಮರೆತರೆ ಜನರು ಅಪಪ್ರಚಾರಗಳಿಗೆ ಬಲಿಯಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಿನ್ನಡೆಯಾಗುವ ಸಾಧ್ಯತೆಗಳಿವೆ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರಕಾರದ ನಾಮಫಲಕ ಅಳವಡಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗುರುವಾರ ಸಂಜೆ ಜರಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಗಂಗೊಳ್ಳಿ ಸ್ಥಾನೀಯ ಸಮಿತಿ ಪದಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಕೇಂದ್ರ ಸರಕಾರ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಃ ಕಾರಣ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕೊಲೆ ಪ್ರಕರಣ ಹಿಂದೆ ಎಂದಿಗೂ ನಡೆದಿಲ್ಲ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಮಾಧ್ಯಮ ಅಥವಾ ವೈಯಕ್ತಿಕವಾಗಿ ಯಾರೇ ತನಿಖೆ ಮುಂದಾದರೂ ಯಾವುದೇ ತನಿಖೆ ನಾವು ಸಿದ್ಧರಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರತಿಕ್ರಿಯಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ. ಜುಲೈ 20ರಂದು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅಪರಾಧ ನಡೆದರೆ ಅದು ಪೊಲೀಸ್ ತನಿಖೆಯಾಗಬೇಕು. ಆದರೆ ಸಮಾಜದಲ್ಲಿ ಗೊಂದಲ ಸೃಷ್ಠಿಸಿ, ಜವಾಬ್ದಾರಿಯು ಸ್ಥಾನದಲ್ಲಿರುವ ನನ್ನನು ಹಾಗೂ ಕಳೆದ ಎರಡುವರೆ ದಶಕಗಳಿಂದ ಪಾರದರ್ಶಕವಾಗಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆಯನ್ನು ಟಾರ್ಗೆಟ್ ಮಾಡುವುದರ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ವಿಭಾಗದ ನೂತನ ಅಧ್ಯಕ್ಷರಾಗಿ ಯುವ ನಾಯಕ ತಾಲೂಕಿನ ಮಡಾಮಕ್ಕಿ ವಿಶ್ವಾಸ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಶಿಪಾರಸ್ಸಿನ ಮೇರೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಅವರು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಈ ನೂತನ ಅಧ್ಯಕ್ಷರನ್ನು  ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಅವರು ಅಭಿನಂದಿಸಿದ್ದಾರೆ. ಯುವ ಉದ್ಯಮಿಯಾಗಿರುವ ವಿಶ್ವಾಸ್ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಪಕ್ಷ ಸಂಘಟನೆಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ೨೦೧೭ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ಯಡ್ತರೆ ಹಾಗೂ ಕಾರ್ಯದರ್ಶಿಯಾಗಿ ಚಂದ್ರ ಪೂಜಾರಿ ಯಡ್ತರೆ ಮರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹೆರಿಯ ದೇವಾಡಿಗ, ಗುರುಪ್ರಕಾಶ್, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪಿ. ಯಡ್ತರೆ, ಶಿವ, ಸುಬ್ರಹ್ಮಣ್ಯ ಶೆಟ್ಟಿ, ಗೌರವ ಲೆಕ್ಕ ಪರಿಶೋಧಕರಾಗಿ ಸುರೇಶ ಬಟ್ವಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಶಾಂ ಶೇಟ್, ರವೀಂದ್ರ ಜೆ, ರವೀಂದ್ರ ಶಾನುಭೋಗ್, ಕಾರ್ಯಕ್ರಮ ಉಸ್ತುವಾರಿಯಾಗಿ ಬಿ. ಅಣ್ಣಪ್ಪಯ್ಯ ಕಾರಂತ್, ಸಂಜಯ ಬೈಂದೂರು, ಶಂಕರ ಮೊಗವೀರ, ಸುಶಾಂತ್ ಆಚಾರ್ಯ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. shortcode ► ಬೈಂದೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ► ಕುಂದಾಪ್ರ ಡಾಟ್ ಕಾಂ ಸುದ್ದಿ – http://kundapraa.com/?p=16345 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘದ 12ನೇ ವಾರ್ಷಿಕ ಸಮಾವೇಶವು ಬ್ರಹ್ಮಾವರ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಎ. ನಾರಾಯಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಮುಂದಿನ ಎರಡು ವರ್ಷಗಳಿಗೆ ನೂತನ ಅಧ್ಯಕ್ಷರಾಗಿ ಹೆಚ್. ವಸಂತ ಹೆಗ್ಡೆ, ಉಪಾಧ್ಯಕ್ಷರಾಗಿ ಎಸ್. ಅಣ್ಣಪ್ಪ ಶೆಟ್ಟಿ, ಕಾರ್ಯದರ್ಶಿಯಾಗಿ ಸಿ. ಸಚ್ಚಿದಾನಂದ ಶೆಟ್ಟಿ, ಕೋಶಾಧಿಕಾರಿಯಾಗಿ ಕೆ. ಜಯಕುಮಾರ್, ಜೊತೆ ಕಾರ್ಯದರ್ಶಿಯಾಗಿ ವೇಣುಗೋಪಾಲ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿ. ಟಿ. ಹೆಗ್ಡೆ, ಎನ್ ಜಯರಾಮ ಶೆಟ್ಟಿ, ಕೆ. ರವೀಂದ್ರನಾಥ ಶೆಟ್ಟಿ, ಶ್ರೀಮತಿ ಮಾಲಿನಿ ಶೆಟ್ಟಿ, ಎ. ಭುಜಂಗ ಶೆಟ್ಟಿ, ಕೆ. ಸದಾನಂದ ಹೆಗ್ಡೆ, ಎ. ಜಯಕರ ಶೆಟ್ಟಿ, ಎಸ್ ಜಯರಾಮ ಹೆಗ್ಡೆ ಮತ್ತು ಯು. ಪ್ರಭಾಕರ ಶೆಟ್ಟಿಯವರು ಅಯ್ಕೆಯಾದರು. ಸಂಸ್ಥೆಯ ಕಳೆದ ಎರಡು ವರ್ಷಗಳ ಸೇವಾ, ಸೌಹಾರ್ದ ಚಟುವಟಿಕೆಗಳು, ಮನೋರಂಜನಾ ಕಾರ್ಯಕ್ರಮಗಳು, ಆರೋಗ್ಯ ಮಾಹಿತಿ ಗೋಷ್ಠಿಗಳ ಬಗ್ಗೆ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರಾಹಿ ಯೋಜನೆ ಸಂತ್ರಸ್ಥರಿಗೆ ಒಂದು ವಾರದೊಳಗೆ ಪರಿಹಾರ ನೀಡಿ, ವಾರಾಹಿ ಯೋಜನೆ ಸಂಬಂಧ ಇದುವರೆಗೂ ಬಾಕಿ ಇರುವ ಪ್ರಕರಣ ಮತ್ತು ಇಂದು ಸ್ವೀಕರಿಸಿರುವ ದೂರುಗಳ ಅ.೨೮ ರೊಳಗೆ ಮುಕ್ತಾಯಗೊಳಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತವಾರಿ ಸಚಿವ ಪ್ರಮೋದ್ ಮಧ್ವಾರಜ್ ತಾಕೀತು ಮಾಡಿದ್ದಾರೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಾರಾಹಿ ಯೋಜನಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಕ್ಕುಂಜೆ ಗ್ರಾಮದ ಸಾದಮ್ಮ ಶೆಡ್ತಿ 24  ಸೆಂಟ್ಸ್ ಜಮೀನು ಈ ಹಿಂದೆ ಭೂ ಸ್ವಾಧೀನದಿಂದ ಕೈಬಿಡಲಾಗಿದ್ದರೂ ಪ್ರಸ್ತುತ ಅವರಿಗೆ ಯಾವುದೇ ಮಾಹಿತಿ ನೀಡದೆ ಅವರ ಜಮೀನಿನಲ್ಲಿ ಕಾಮಗಾರಿ ನೆಡೆಯುತ್ತಿದೆ. ವಾರಾಹಿ ಮುಖ್ಯ ಇಂಜಿನಿಯರರು ಪರಿಶೀಲನೆ ನೆಡಸಿ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು. ವಾರಾಹಿ ಯೋಜನೆಗೆ ಸಂಬಂದಪಟ್ಟ ಸಾರ್ವಜನಿಕರ ವಿವಿಧ ದೂರು, ಸೂಕ್ತ ಪರಿಹಾರ ನೀಡುವ ಕುರಿತಂತೆ ಎಲ್ಲಾ ಪ್ರಕರಣ ಒಂದು ವಾರದೊಳಗೆ ಇತ್ಯರ್ಥ ಪಡಿಸುವಂತೆ ಹಾಗೂ ಅಧಿಕಾರಿಗಳಿಗೆ ಬಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ವಡೇರಹೋಬಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ ೧೪-೭-೨೦೧೭ ನೇ ಬುಧವಾರದಂದು ಹೋಟೆಲ್ ನಿಸರ್ಗದ ಆರ್.ಸಿ ಕನ್‌ವೆನ್ಸ್‌ನ್ ಹಾಲ್ ಹಟ್ಟಿಯಂಗಡಿ ಕ್ರಾಸಿನಲ್ಲಿ ನೆರವೇರಿಸಲಾತು. ಇದರ ಪದಗ್ರಹಣವನ್ನು ಲಯನ್ ವಿ.ಜಿ.ಶೆಟ್ಟಿ ಎಂ.ಜೆ.ಎಫ್.೨ನೇ ಉಪ ಜಿಲ್ಲಾ ಗವರ್ನರ್ ರವರು ನೆರವೇರಿಸಿರಿತ್ತಾರೆ. ನೂತನ ಅಧ್ಯಕ್ಷರಾಗಿ ಲಯನ್ ಜಯಂತ್ ಶಟ್ಟಿ, ಕಾರ್ಯದರ್ಶಿಯಾಗಿ ಲಯನ್ ಜಗದೀಶ ಶೇರೆಗಾರ ಹಾಗೂ ಖಜಾಂಚಿಯಾಗಿ ಲಯನ್ ಶಾಂತಿ ಸಾಗರ್ ಶೆಟ್ಟಿಯವರನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಲಯನ್ ಅರುಣ ಕುಮಾರ್ ಹೆಗ್ಡೆ ಹಾಗೂ ಪ್ರಾಂತೀಯ ಅಧ್ಯಕ್ಷರಾದ ಲಯನ್ ಬಿ.ಎಸ್.ಪ್ರತಾಪ್‌ಚಂದ್ರ ಶೆಟ್ಟಿಯವರು ಹಾಜರಿರುತ್ತಾರೆ. ಅತಿಥಿಗಳಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಆಗಮಿಸಿದಂತಹ ಅತಿಥಿಗಳನ್ನು ಲಯನ್ನ್‌ನ ಅಧ್ಯಕ್ಷರು ಸ್ವಾಗತಿಸಿ, ಕಾರ್ಯದರ್ಶಿಯವರು ಧನ್ಯವಾದವನ್ನು ಮಂಡಿಸಿರುತ್ತಾರೆ ಹಾಗೂ ಲಯನ್ ರಂಜನ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಪ್ರತಿಶ್ಟಿತ ಮುಕಾಂಬಿಕಾ ರೈಲು ನಿಲ್ದಾಣವನ್ನು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಿ ಹೆರಿಟೇಜ್ ನಿಲ್ದಾಣವಾಗಿ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ. ಎಸ್ ಯಡಿಯೂರಪ್ಪ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ. ಅವರು ದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಈ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಮಂಗಳ ಮತ್ತು ಪೂರ್ಣ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಕೂಡ ಸಚಿವರನ್ನು ಆಗ್ರಹಿಸಿದರು. ಈ ಸಂದರ್ಭ ಬೈಂದೂರಿನ ಮೂಕಾಂಬಿಕ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಮತ್ತು ಉದ್ಯಮಿ ಗೋಪಾಲಕೃಷ್ಣ ಉಪಸ್ಥಿತರಿದ್ದರು

Read More