ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ತೆಂಕುತಿಟ್ಟಿನ ಆಯ್ದ ೧೫೦ ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ವಿದಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಕಾರ್ಯಗಾರವನ್ನು ಉದ್ಘಾಟಿಸಿ, ನಮ್ಮ ಜೀವನದಲ್ಲಿ ಎದುರಾಗುವ ಪ್ರತಿ ಕ್ಷಣವು ಕಲಿಕೆಗೆ ಅವಕಾಶ ಮಾಡಿಕೊಡುತ್ತದೆ, ಅದರ ಸಂಪೂರ್ಣ ಲಾಭವನ್ನು ಪಡೆದುಕೊಂಡಾಗ ಬದುಕಿನಲ್ಲಿ ಉನ್ನತ ಸ್ಥಾನಕ್ಕೆರಲು ಸಾಧ್ಯ ಎಲ್ಲಾ ಒಳ್ಳೆಯ ವಿಚಾರಗಳೂ ನನ್ನ ಬಳಿಗೆ ಹರಿದು ಬರಲಿ ಎಂಬ ಮುಕ್ತ ಮನಸ್ಸು ನಮ್ಮಲ್ಲಿರಬೇಕು ಎಂದು ತಿಳಿಸಿದರು. ಭಗವಂತನಲ್ಲಿ ಪ್ರತಿ ಕ್ಷಣವೂ ತನ್ನ ಅಂತರಂಗ ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ನೀಡು ಎಂದು ಪ್ರಾರ್ಥಿಸಬೇಕು. ಸೌಂದರ್ಯ ಪ್ರಜ್ಞೆ ಇರುವ ವ್ಯಕ್ತಿ ತನ್ನ ಜೀವನದ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯಲು ಸಾಧ್ಯ ಸಾಂಸ್ಕೃತಿಕವಾದ ಎಲ್ಲಾ ಆಯಾಮಗಳಲ್ಲಿಯೂ ದಾಖಲೀಕರಿಸುವ ಪ್ರವೃತ್ತಿ ಬೆಳೆಯಬೇಕು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಗೌರವಿಸುವುದರಿಂದ ಇತರ ವಿದ್ಯಾರ್ಥಿಗಳು ಇದರಿಂದ ಪ್ರೇರಣೆ ಪಡೆದುಕೊಂಡು ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡಲು ಸಹಾಯಕವಾಗುತ್ತದೆ. ಇಂದಿನ ತಾಂತ್ರಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಗಂಗೊಳ್ಳಿಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪತ್ರಕರ್ತ ಬಿ.ರಾಘವೇಂದ್ರ ಪೈ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಗಂಗೊಳ್ಳಿ ಮ್ಯಾಂಗನೀಸ್ ಒಕ್ಕೂಟದ ವತಿಯಿಂದ ಭಾನುವಾರ ಜರಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮ್ಯಾಂಗನೀಸ್ ಒಕ್ಕೂಟದ ಅಧ್ಯಕ್ಷ ಗಣೇಶ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ಗಳಿಸಿದ ದಿಶಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಮ್ಮ ಸುತ್ತ ಮುತ್ತಲಲ್ಲೇ ದೊರಕುತ್ತಿರುವ ಮಾದಕ ವಸ್ತುಗಳ ಬಗೆಗೆ ನಾವು ಸದಾಕಾಲ ಜಾಗೃತಿಯಿಂದ ಇರಬೇಕು ಮತ್ತು ಈ ಕುರಿತಂತೆ ಸಮಾಜದಲ್ಲಿನ ಜನರಲ್ಲೂ ಜಾಗೃತಿ ಮೂಡಿಸುವಲ್ಲಿ ನಾವು ಪ್ರಯತ್ನಿಸಬೇಕು ಎಂದು ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಭಾಸ್ಕರ್ ಬೈಂದೂರು ಅಭಿಪ್ರಾಯಪಟ್ಟರು. ಅವರು ಅಂತರಾಷ್ಟ್ರೀಯ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅ೦ಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಾದಕ ದ್ರವ್ಯಗಳ ಬಗೆಗೆ ಕೆಟ್ಟ ಕುತೂಹಲವನ್ನು ಬೆಳೆಸಿಕೊಳ್ಳಬೇಡಿ. ಈ ವಿಷಯದಲ್ಲಿ ಒಮ್ಮೆ ಇಡುವ ತಪ್ಪು ಹೆಜ್ಜೆ ನಮ್ಮ ಇಡೀ ಜೀವನವನ್ನೇ ಬಲಿತೆಗೆದುಕೊಳ್ಳಬಹುದು. ಸ್ನೇಹಿತರನ್ನು ಆರಿಸಿಕೊಳ್ಳುವಾಗಲೂ ಎಚ್ಚರಿಕೆಯಿರಲಿ. ಮಾದಕ ವಸ್ತುಗಳು ನೀಡುವ ಸ೦ತೋಷ ಕೇವಲ ಭ್ರಮೆ.ಅದಕ್ಕಾಗಿ ಜೀವನದ ನಿಜವಾದ ಆನ೦ದವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು. ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಅಗಸ್ಟಿನ್, ಹೆಡ್ ಕಾನಸ್ಟೇಬಲ್ ಸುರೇಂದ್ರ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೂರು ಗ್ರಾಮದ ಬವಳಾಡಿಯ ಸಮೀಪ ಹಾದು ಹೋಗುವ ರಸ್ತೆಯ ಮಾರ್ಗದಲ್ಲಿ ೧೦೦ ಮೀಟರ್ ದೂರದಷ್ಟು ಪೊದೆಗಳಿಂದ ರಸ್ತೆಯ ಅರ್ಧಭಾಗದಷ್ಟು ಸಂಪೂರ್ಣ ಮುಚ್ಚಿಹೊಗಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತುಂಬ ಅನಾನೂಕುಲ ಮತ್ತು ಭಯದ ವಾತವರಣ ನಿರ್ಮಾಣವಾಗಿದನ್ನು ಮನಗೊಂಡು ಸ್ಥಳಿಯ ಸಂಘ ಸಂಸ್ಥೆಯಾದ ಶ್ರೀ ಸತ್ಯಸಾಯಿಬಾಬ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಒಂದು ದಿನ ಶ್ರಮದಾನ ನಡೆಸಿದರು. ಶಿಕ್ಷಕ ಗಣೇಶ ಪೂಜಾರಿ ಶ್ರಮದಾನದ ನೇತೃತ್ವ ವಹಿಸಿದ್ದರು. ಶೇಖರ, ಮಂಜುಪೂಜಾರಿ, ಗೋಪಾಲ, ಗಣೇಶ, ಗೊವಿಂದ, ಉದಯ ಮೊದಲಾದ ಪ್ರಮುಖರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ 350ನೇ ಪ್ರತಿಷ್ಠಾ ಮಹೋತ್ಸವದ ಸವಿನೆನಪಿಗಾಗಿ ಗಂಗೊಳ್ಳಿಯ ಗೌಡ ಸಾರಸ್ವತ ಸಮಾಜದ ಹನ್ನೊಂದು ಮಂದಿ ಗಂಗೊಳ್ಳಿಯಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯಾತ್ರಾರ್ಥಿಗಳು ತಿರುಪತಿಯ ಶ್ರೀ ತಿಮ್ಮಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ 350ನೇ ಪ್ರತಿಷ್ಠಾ ಮಹೋತ್ಸವದ ಸವಿನೆನಪಿಗಾಗಿ, ಗೌಡ ಸಾರಸ್ವತ ಸಮಾಜದ ಉನ್ನತಿ, ಗ್ರಾಮದ ಶ್ರೇಯೋಭಿವೃದ್ಧಿ, ಮತ್ಸ್ಯಕ್ಷಾಮ ನಿವಾರಣೆ ಹಾಗೂ ಗ್ರಾಮದಲ್ಲಿ ಸರ್ವರಿಗೂ ಸುಖಶಾಂತಿ ಲಭಿಸುವಂತಾಗಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕರಮಣ ಆಚಾರ್ಯ ನೇತೃತ್ವದಲ್ಲಿ ಮಹಾಪ್ರಾರ್ಥನೆ ನಡೆಯಿತು. ದೇವಳದ ಆಡಳಿತ ಮಂಡಳಿಯ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಬಿ.ರಾಘವೇಂದ್ರ ಪೈ, ಎನ್.ರವೀಂದ್ರ ನಾಯಕ್, ಎಂ.ಜಿ.ರಾಘವೇಂದ್ರ ಭಂಡಾರ್ಕಾರ್, ಕೆ.ಶಾಂತಾರಾಮ ನಾಯಕ್, ಜಿ.ರವೀಂದ್ರ ಶೆಣೈ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರೀಸ್ ಯುವ ರೆಡ್ ಕ್ರಾಸ್ ಘಟಕ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ ವತಿಯಿಂದ ಆರೋಗ್ಯಕರ ಜೀವನ ಶೈಲಿ ಎಂಬ ವಿಷಯದ ಬಗ್ಗೆ ಉಪನ್ಯಾಸವ ಬ್ಯಾರೀಸ್ ಕನ್ವೆನ್ಶನ್ ಹಾಲ್ನಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಆತಿಥಿಯಾಗಿ ಭಾಗವಹಿಸಿದ ಡಾ. ಸೋನಿ ಮೆಡಿಕಲ್ ಪ್ರಾಕ್ಟೀಶನರ್ ಕುಂದಾಪುರ ಇವರು ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಕ್ಕಾಗಿ ಯಾವ ರೀತಿಯ ಮಾರ್ಗವನ್ನು ಅನುಸರಿಸಬೇಕು ಎಂಬ ಕುರಿತಾಗಿ ಮಾಹಿತಿಯನ್ನು ನೀಡದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ. ಮಾಸ್ಟರ್ ಮಹಮ್ಮೂದ್ ಇವರು ವಹಿಸಿದರು. ಅಥಿತಿಗಳಾಗಿ ಎಸ್. ಜಯಕರ ಶೆಟ್ಟಿ, ಅಧ್ಯಕ್ಷರು ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರ, ಸೀತಾರಾಮ ಶೆಟ್ಟಿ ಕಾರ್ಯದರ್ಶಿ ಯುವ ರೆಡ್ಕ್ರಾಸ್ , ಶಿವರಾಮ ಶೆಟ್ಟಿ ಕೋಶಾಧಿಕಾರಿ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮತ್ತು ಗಣೇಶ್ ಆಚಾರ್ಯ, ಮುತ್ತಯ್ಯ ಶೆಟ್ಟಿ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು. ಬ್ಯಾರೀಸ್ ಯುವ ರೆಡ್ಕ್ರಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಭಾನುವಾರ ಬೆಳಿಗ್ಗೆ ಉಡುಪಿಯ ಅಜ್ಜರಕಾಡು ಮೈದಾನದ ಸಮೀಪದಲ್ಲಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ಕೇಂದ್ರ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರೀಯೆಯಲ್ಲಿ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ಪ್ರತಿನಿಧಿಯಾಗಿ ಮಾಜಿ ಶಾಸಕ ಯು.ಆರ್.ಸಭಾಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಪತ್ರಕರ್ತ ರಾಜೇಶ್ ಕೆ.ಸಿ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆರೂರು ತಿಮ್ಮಪ್ಪ ಶೆಟ್ಟಿ, ಕೋಶಾಧ್ಯಕ್ಷರಾಗಿ ಟಿ.ಗೋಪಾಲಕೃಷ್ಣ ಶೆಟ್ಟಿ ಉಡುಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಉಪನಿಬಂಧಕರಾದ ಪ್ರವೀಣ್ ನಾಯಕ್ ಅವರ ನೇತ್ರತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾ ಭಾರತ್ ಸೇವಾದಳದ ಜಿಲ್ಲಾ ಸಮಿತಿಯ ಸದಸ್ಯರಾದ ಅಂಡಾರು ದೇವಿಪ್ರಸಾದ ಶೆಟ್ಟಿ, ಸುವರ್ಧನ್ ನಾಯಕ್ ಉಡುಪಿ, ಮೇಟಿ ಮುದಿಯಪ್ಪ, ಎಂ.ಸಿ.ಆಚಾರ್ಯ ಕಾರ್ಕಳ, ಗಿರೀಶ್ ಅಂಚನ್ ಉಡುಪಿ, ಸಂಜೀವ ದೇವಾಡಿಗ ಕಾರ್ಕಳ ಹಾಗೂ ಅಶೋಕ ಮಾಡ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವು ಚಿಕ್ಕವರಿದ್ದಾಗ ಋತುಗಳ ಕಲ್ಪನೆಯನ್ನು ಹಿರಿಯರು ಸೊಗಸಾಗಿ ತಿಳಿಸುತ್ತಿದ್ದರು. ಮಗ್ಗಿ ಪುಸ್ತಕದಲ್ಲಿ ಎಲ್ಲಾ ಮಾಹಿತಿಯೂ ದೊರೆಯುತ್ತಿತ್ತು. ಆದರೆ ಈಗ ಅದೆಲ್ಲವೂ ಮರೆಯಾಗುತ್ತಿದೆ. ಋತುಗಳ ವಿಶೇಷತೆಯನ್ನು ತಿಳಿದುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಋತುಗಳ ಮಹತ್ವನ್ನು ಹಾಗೂ ಅದಕ್ಕೆ ತಕ್ಕಂತೆ ನಾವು ಅಳವಡಿಸಿಕೊಳ್ಳಬಹುದಾದ ಜೀವನ ಶೈಲಿಯನ್ನು ರೂಡಿಸಿಕೊಳ್ಳಲು ಪುಸ್ತಕದ ಮೂಲಕ ಜ್ಞಾನ ಪಸರಣ ಅಗತ್ಯ ಎಂದು ಸಾಹಿತಿ ಯು. ವರಮಹಾಲಕ್ಷ್ಮೀ ಹೊಳ್ಳ ಹೇಳಿದರು. ಅವರು ಉಪ್ಪುಂದ ಶಂಕರ ಕಲಾಮಂದಿರದ ಕುಂದ ಅಧ್ಯಯನ ಕೇಂದ್ರದಲ್ಲಿ ಜರುಗಿದ ಸುವಿಚಾರ ಬಳಗದ ತಿಂಗಳ ಕಾರ್ಯಕ್ರಮದಲ್ಲಿ ವೈದ್ಯೆ ಹಾಗೂ ಲೇಖಕಿ ಡಾ. ಅನುರಾಧಾ ಕಾಮತ್ ಅವರು ಬರೆದಿರುವ ’ಋತು ವೈಭವ’ ಋತು ಸಂಬಂಧಿ ವಿಶೇಷತೆಗಳು ಹಾಗೂ ಆರೋಗ್ಯ ಮಾಹಿತಿಯುಳ್ಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಋತುಗಳು ನಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಯಾವ ಖಾಯಿಲೆ ಬರಬಹುದು, ನಮ್ಮ ಆಹಾರ ವಿಹಾರ ಹೇಗಿರಬೇಕು. ಈ ಸಂದರ್ಭದಲ್ಲಿ ಯಾವ ಯೋಗಾಭ್ಯಾಸ ಉತ್ತಮ. ಯಾವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ನೃತ್ಯ ವಸಂತ ನಾಟ್ಯಾಲಯದ ವಿದ್ಯಾರ್ಥಿನಿ ಬಿ. ಯುಕ್ತಿ ಉಡುಪ ಅವರು ಗೋಪೀನಾಥದಾಸ ನ್ಯಾಸ’ ನೃತ್ಯ ಮತ್ತು ಸಂಗೀತ ಸಂಸ್ಥೆ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಯುಕ್ತಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ತರಗತಿಯಲ್ಲಿ ಓದುತ್ತಿದ್ದು, ನೃತ್ಯ ವಸಂತ ನಾಟ್ಯಾಲಯ ಕುಂದಾಪುರದ ವಿದೂಷಿ ಪ್ರವಿತಾ ಅಶೋಕ್ ಅವರ ಶಿಷ್ಯೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಸರ್ಕಾರ ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿಯನ್ನು ಆರ್ಟಿಜಿಎಸ್ ಮೂಲಕ ಜಮೆ ಮಾಡಲು ಉದ್ದೇಶಿಸಿದ್ದು, ಇದರಿಂದ ಬಡ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಖರೀದಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಈ ಹಿಂದೆ ನೀಡುತ್ತಿದ್ದ ಸೀಮೆಎಣ್ಣೆ ಸಬ್ಸಿಡಿಯನ್ನು ಮುಂದುವರೆಸುವಂತೆ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಸಮ್ಮುಖದಲ್ಲಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಉಪಾಧ್ಯಕ್ಷ ಗುರುನಾಥ ಪಟೇಲ್, ನಾಗಪ್ಪಯ್ಯ ಪಟೇಲ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ., ಮಾಜಿ ಅಧ್ಯಕ್ಷ ಬಿ.ಎಚ್.ಕುಮಾರ್, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ ನೇತೃತ್ವದ ಮೀನುಗಾರರ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವರ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ…
