Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ದಿವಂಗತ ನಾಗರಾಜ ಹಂದೆ ಅವರು ಬಹಳಷ್ಟು ಕಾಲ ಸಾಲಿಗ್ರಾಮ ದೇಗುಲದಲ್ಲಿ ಮ್ಯಾನೆಜರ್ ಆಗಿ ದುಡಿದವರು. ಕಲಾಸಕ್ತಿಯಿಂದ ಹೆಚ್ಚು ಕಲಾ ತಂಡಗಳಿಗೆ ಸ್ಪೂರ್ತಿಯಾಗಿ ಕಾರ್ಯಕ್ರಮ ನೆರವೇರಿಸಿಕೊಡುವಲ್ಲಿ ಶ್ರಮಿಸಿದವರು. ಕಲಾ ತಂಡಗಳನ್ನು ಆಹ್ವಾನಿಸಿಕೊಂಡು ವಿಶೇಷ ಆಹ್ವಾನವೀಯುತ್ತಾ ಅತಿಥಿ ಸತ್ಕಾರದಿಂದ ಮನ ಗೆದ್ದವರು. ಅವರಿಲ್ಲ ಎಂಬುದು ಅತ್ಯಂತ ನೋವು ತಂದಿದೆ ಎಂದು ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ ಹೇಳಿದರು. ಅವರು ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಆಯೋಜಿಸಿಕೊಂಡ ’ಅರ್ಥಾಂಕುರ-27’ರಲ್ಲಿ ’ನಾಗರಾಜ ಹಂದೆ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಕೆ. ತಾರಾನಾಥ ಹೊಳ್ಳ ಮಾತನ್ನಾಡಿದರು. ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ ಮಾತನಾಡಿ, ಕುಟುಂಬದ ಸದಸ್ಯನಂತೆ ದೇಗುಲದ ಏಳ್ಗೆಗಾಗಿ ಶ್ರಮಿಸಿದ ನಾಗರಾಜ ಹಂದೆಯವರ ಅಕಾಲ ಮರಣ ಮನಸ್ಸಿಗೆ ಬೇಸರ ತಂದಿದೆ ಎಂದರು. ಮೃತರ ಸಹೋದರ ಭಾಸ್ಕರ ಹಂದೆ ಮಾತನ್ನಾಡಿ ಅನವರತವೂ ದೇಗುಲದ ಸಮಸ್ತ ಏಳ್ಗೆಗೆ ಶ್ರಮಿಸಿದ ಸಹೋದರನ ಸಾವಿನ ಬಾಧೆಯನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯುವಕ ಸಮಾಜ ಕುಂದಾಪುರ ಇದರ ವತಿಯಿಂದ ತಾಲೂಕಿನೊಳಗಿನ ಕಾಲೇಜುಗಳಲ್ಲಿ, ಪದವಿ ಪೂರ್ವ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ತರಗತಿಗಳಲ್ಲಿ ಕಲಿಯುತ್ತಿರುವ ಜಿ.ಎಸ್.ಬಿ. ಸಮಾಜದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಫಾರ್ಮ್‌ನ್ನು ಈ ಕೆಳಗಿನ ವಿಳಾಸದಲ್ಲಿ ಪಡೆಯಬಹುದು ಅಥವಾ ಸ್ವಂತ ವಿಳಾಸ ಬರೆದ ಹಾಗೂ ಸಾಕಷ್ಟು ಅಂಚೆ ಚೀಟಿ ಹಚ್ಚಿದ ಲಕೋಟೆಯನ್ನು ಲಗತ್ತಿಸಿ ಅರ್ಜಿ ಫಾರ್ಮ್‌ಗಳಿಗಾಗಿ ಬರೆದುಕೊಳ್ಳಬೇಕಾಗಿ ಪ್ರಕಟಿಸಲಾಗಿದೆ. ಭರ್ತಿ ಮಾಡಿದ ಅರ್ಜಿ ತಲುಪಲು ಕೊನೆಯ ದಿನಾಂಕ ತಾ. 31-08-2026 ಆಗಿರುತ್ತದೆ. ವಿಳಾಸ: ಕೆ. ವಿವೇಕ ಪೈ, ಜಾಂಬಾವಲಿ ಸ್ಟೋರ‍್ಸ್, ಮುನ್ಸಿಪಾಲ್ ರಸ್ತೆ, ಕುಂದಾಪುರ-576201.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಕಾರ್ಯವು ಸಮರ್ಪಕವಾಗಿ ನಡೆಯುತ್ತಿದ್ದು ಈವರೆಗೆ ಜಿಲ್ಲೆಯಾದ್ಯಂತ 100% ರಷ್ಟು ಏನ್ಯೂಮರೇಷನ್ ನಮೂನೆಗಳನ್ನು ವಿತರಿಸಲಾಗಿದೆ. ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಈ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮಗೆ ತಲುಪಿಸಲಾಗಿರುವ ನಮೂನೆಗಳಲ್ಲಿರುವ ವಿವರಗಳನ್ನು ಪರಿಶೀಲಿಸಿ, ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ ಭರ್ತಿ ಮಾಡಿದ ನಮೂನೆಗಳನ್ನು ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಗಳಿಗೆ ಹಿಂತಿರುಗಿಸಬೇಕು. ನಮೂನೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲಗಳಿದ್ದರೆ, ಹತ್ತಿರದ BLO Facilitation Centre (BFC) ಮತ್ತು Voter facilitation Centre (VFC) ಗೆ ಭೇಟಿ ನೀಡಿದಲ್ಲಿ ಅಲ್ಲಿನ ಸಿಬ್ಬಂದಿಗಳು ನಮೂನೆಗಳನ್ನು ಭರ್ತಿ ಮಾಡುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಅಥವಾ ನಿಮ್ಮ ವ್ಯಾಪ್ತಿಯ BLO ಮತ್ತು BLO Facilitation Centre ಗಳ ವಿವರಗಳನ್ನು ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ https://udupi.nic.in/en/special-intensive-revision…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಅಖಂಡ ಭಾರತಕ್ಕಾಗಿ ಒಂದೆಡೆ ಹೋರಾಟಗಳು ತೀವ್ರಗೊಳ್ಳುತ್ತಿದೆ. ಇತ್ತ ಕಾಕ್ರೋಚ್ ಗಳೆಂಬ ಮುತಾಂದ ಶಕ್ತಿಗಳು ದೇಶವನ್ನು ವಿಭಜಿಸುವ ಷ್ಯಡಂತರ ಮಾಡುತ್ತಿದೆ. ಇದಕ್ಕೆ ಈ ದೇಶದ ಹಿಂದೂಗಳು ಅವಕಾಶ ನೀಡುವುದಿಲ್ಲ. ಯಾವ ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್ ಈ ದೇಶವನ್ನು ಅಸ್ಥಿರಗೊಳಿಸಿ ತುಂಡಾಗಲು ಕಾರಣಿಭೂತರಾದರೋ ಅದೇ ತುಂಡಾದ ದೇಶಗಳು ಮತ್ತೆ ಅಖಂಡ ಭಾರತಕ್ಕಾಗಿ ಹಪಹಪಿಸುವ ಸನ್ನಿವೇಶವು ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆದರ್ಶ ಕೆಲ ಹೇಳಿದರು. ಅವರು ಭಾನುವಾರ ಕೋಟದಲ್ಲಿ ಹಿಂದೂ ಜಾಗರಣ ವೇದಿಕೆ ಕೋಟ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ‘ಪಂಜಿನ ಮೆರವಣಿಗೆ’ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತನಾಡಿದರು. ದೇಶ ಒಡೆಯುವ ಹುನ್ನಾರಕ್ಕೆ ಈ ಹಿಂದೂ ಸಮಾಜ ಸಿಡಿದ್ದೆದ್ದು ನಿಲ್ಲಲಿದೆ ಅಲ್ಲದೆ ಯಾವ ಅಸ್ಥಿರಗೊಂಡ ವಿಚಾರಗಳು ಮತ್ತೆ ಒಂದುಗೂಡಲು ಆರಂಭಿದೆ ಇದಕ್ಕೆ ಇತ್ತೀಚಿಗಿನ ವಂದೇ ಮಾತರಂ ಗೀತೆಯೇ ಸಾಕ್ಷಿ ಎಂದು ಇನ್ನು ಕೆಲವೆ ವರ್ಷಗಳಲ್ಲಿ ತುಂಡುತುಂಡಾದ ನಮ್ಮ ಅಖಂಡತೆಯ ಕನಸು ನನಾಸಗಲಿದೆ ಬಲಿಷ್ಠ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮಂಗಳೂರು: ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ದೂರದರ್ಶನವು ಏರ್ಪಡಿಸುವ ಉನ್ನತ ಶ್ರೇಯಾಂಕದ ಭರತನಾಟ್ಯ ಪರೀಕ್ಷೆಯಲ್ಲಿ ಬಿ-ಹೈ ಸ್ಥಾನ ಪಡೆದಿದ್ದಾರೆ. ಇದೊಂದು ಪ್ರತಿಷ್ಠಿತ ಸ್ಥಾನವಾಗಿದ್ದು ಭಾರತದಾದ್ಯಂತ ಉನ್ನತ ಪ್ರದರ್ಶನಗಳನ್ನು ನೀಡಲು ಅರ್ಹತೆ ಪಡೆಯುವ ಮಾನದಂಡವಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಭರತನಾಟ್ಯ ಕಲಿಯುತ್ತ ದೇಶಾದ್ಯಂತ ಪ್ರದರ್ಶನ ನೀಡುತ್ತಿರುವ ವಿದುಷಿ ಅಯನಾ ಪೆರ್ಲ ಮಂಗಳೂರಿನ ನೃತ್ಯವಿದುಷಿಯರಾದ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಅವರ ಶಿಷ್ಯೆಯಾಗಿ, ಪ್ರಸ್ತುತ ಚೆನ್ನೈಯ ವರ್ಷಾ ಅಕ್ಹೌರಿ ಅವರ ಬಳಿ ಭರತನಾಟ್ಯದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದುಷಿ ಅಯನಾ ಪೆರ್ಲ ಕವಿ – ಸಾಹಿತಿ ದಂಪತಿಗಳಾದ ಡಾ. ವಸಂತಕುಮಾರ ಪೆರ್ಲ ಮತ್ತು ಕೆ. ಶೈಲಾಕುಮಾರಿ ಅವರ ದ್ವಿತೀಯ ಪುತ್ರಿಯಾಗಿದ್ದು ಯೋಗ ಪರಿಣಿತೆಯೂ ಆಗಿದ್ದಾರೆ. ಎಂಜಿನಿಯರಿಂಗ್ ಶಿಕ್ಷಣ ಪಡೆದು ಸದ್ಯ ಚೀನಾದಲ್ಲಿ ವೃತ್ತಿಯಲ್ಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಉಡುಪಿ ಜಿಲ್ಲೆ, ಯುವ ಮನಸ್ಸುಗಳಿಗೆ ಸ್ಫೂರ್ತಿ, ನೊಂದವರಿಗೆ ನೆರವಿನ ದಾರಿ ದೀಪ ಧ್ಯೇಯೋದ್ದೇಶದಿಂದ ಕಳೆದ ಹತ್ತು ವರ್ಷಗಳಿಂದ 200ಕ್ಕೂ ಹೆಚ್ಚು ಸೇವಾ ಯೋಜನೆ, ಅನಾರೋಗ್ಯ ಪೀಡಿತರಿಗೆ ಸಹಾಯ ಧನ, ಲಾಕ್ ಡೌನ್ ಸಮಯದಲ್ಲಿ ಒಂದು ಹೊತ್ತಿನ ಅನ್ನದಾನ ಸೇವೆ, ಅಂಗನವಾಡಿ, ಶಾಲೆಗಳಿಗೆ ನೆರವು, ದೇವರ ಮಕ್ಕಳ ಆಶ್ರಮಗಳಿಗೆ ಮತ್ತು ನೆರೆಪೀಡಿತ ಪ್ರದೇಶಗಳಿಗೆ ಸಾಮಾಗ್ರಿ ವಿತರಣೆ, ರಕ್ತ ದಾನ ಮತ್ತು ರಕ್ತದಾನ ಶಿಬಿರ ಆಯೋಜನೆ ಹೀಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಹಾಯ ಹಸ್ತ ಚಾಚುತ್ತಿರುವ ಸಾಮಾಜ ಸೇವಾ ಸಂಸ್ಥೆ ಹತ್ತು ವರ್ಷಗಳ ಸಾಮಾಜಿಕ ಪಯಣದಲ್ಲಿ ಜೈ ಕುಂದಾಪ್ರ ಸಮ್ಮಿಲನ 2026 ಹಾಗೂ ಅಭಿನಂದನಾ ಕಾರ್ಯಕ್ರಮ ಭಾನುವಾರ ಶ್ರೀ ಶಾಂತಮೂರ್ತಿ ಶನೀಶ್ವರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಿರಂತರವಾಗಿ ಸಮಾಜಮುಖಿ ಸೇವೆ ತೊಡಗಿಕೊಂಡಿರುವ ಸಂಸ್ಥೆ ಸಂಚಲನ ರಿ. ಬ್ರಹ್ಮಾವರ ಇದರ ಅಧ್ಯಕ್ಷರಾದ ನಂದಕಿಶೋರ್ ಹಾಗೂ ಜಾತ್ರೆಗಳಲ್ಲಿ ವಿಶೇಷ ವೇಷ ಧರಿಸಿ ದೇಣಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ “ಬೆಳಕು – ಸರಣಿ 1” ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಸಿ (SSC) ಅಭಿವಿನ್ಯಾಸ ಕಾರ್ಯಕ್ರಮವನ್ನು ಜುಲೈ 31ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರೊಬೇಷನರಿ ಪಿಎಸ್‌ಐ ಆಶ್ರಿತಾ ಎ. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್‌ಎಸ್‌ಸಿ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ವಿವಿಧ ವೃತ್ತಿ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಸಮಯ ನಿರ್ವಹಣೆ, ನಿರಂತರ ಅಧ್ಯಯನ ಹಾಗೂ ಆತ್ಮವಿಶ್ವಾಸ ಅತ್ಯಂತ ಮುಖ್ಯವೆಂದು ಅವರು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಶರತ್ ಕುಮಾರ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ವಂದಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ತನುಜಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನಲ್ಲಿ ಪ್ಲೇ ಸ್ಕೂಲ್, ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳು ಬ್ಲೂ ಕಲರ್ ಡೇಯನ್ನು ಆಚರಿಸಿದರು. ಮಕ್ಕಳಲ್ಲಿ ಬಣ್ಣಗಳನ್ನು ಗುರುತಿಸಿ ನೆನಪಿನಲ್ಲಿಟ್ಟುಕೊಳ್ಳುವ ಕೌಶಲ್ಯವನ್ನು ವೃದ್ದಿಸುವ ಸಲುವಾಗಿ ಪ್ರತಿ ತಿಂಗಳು ವಿವಿಧ ಬಣ್ಣಗಳ ದಿನಾಚರಣೆಯನ್ನು ಮಾಡಿ ಮಕ್ಕಳಿಗೆ ಬಣ್ಣಗಳ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆ ಪ್ರಯುಕ್ತ ವಿದ್ಯಾರ್ಥಿಗಳು ಬ್ಲೂ ಬಣ್ಣದ ವಸ್ತುಗಳ ಅಲಂಕಾರವನ್ನು ಮಾಡಿ, ಜೊತೆಗೆ ಬಣ್ಣದ ವಿಶೇಷತೆಗಳನ್ನು ತಿಳಿದು ವಿದ್ಯಾರ್ಥಿಗಳು ನಲಿದಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬ್ಲೂ ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ : ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮೂಲನಿವಾಸಿಗಳ ದೈನಂದಿನ ಜೀವನಕ್ಕೆ ಆಸರೆಯಾಗುವ ಉದ್ದೇಶದಿಂದ ಮತ್ತು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಈ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರೋಟರಿ ಕ್ಲಬ್ ಗಂಗೊಳ್ಳಿ ಇದರ ಅಧ್ಯಕ್ಷೆ ಮಾಲಾಶ್ರೀ ಖಾರ್ವಿ ಹೇಳಿದರು. ಅವರು ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನದ ಅಂಗವಾಗಿ ಸ್ಥಳೀಯ ಬಡ ಮೂಲನಿವಾಸಿ ಕುಟುಂಬಕ್ಕೆ ಅಗತ್ಯ ದಿನಬಳಕೆಯ ಆಹಾರ ಧಾನ್ಯಗಳ ಕಿಟ್ ಹಾಗೂ ಆರ್ಥಿಕ ಧನಸಹಾಯವನ್ನು ವಿತರಿಸಿ ಮಾತನಾಡಿದರು. ಗಂಗೊಳ್ಳಿ ರೋಟರಿಯ ಸದಸ್ಯ ಉಮೇಶ್ ಮೇಸ್ತ, ಪ್ರದೀಪ ಡಿ. ಕೆ., ಚಂದ್ರಕಲಾ ತಾಂಡೇಲ, ನಿವೃತ್ತ ಶಿಕ್ಷಕ ದೇವು ಎಚ್., ರೋಟರಿ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: “ಕ್ರೀಡೆಯ ಮೂಲಕ ಯುವಜನರನ್ನು ಆರೋಗ್ಯಕರ ಚಟುವಟಿಕೆಗೆ ಕೊಂಡೊಯ್ಯುವುದೇ ನಮ್ಮ ಮುಖ್ಯ ಉದ್ದೇಶ. ಗಾಂಧಿ ಮೈದಾನದಲ್ಲಿ ನಿರ್ಮಾಣವಾಗಿರುವ ಈ ವಾಲಿಬಾಲ್ ಕೋರ್ಟ್‌ನಿಂದ ಕುಂದಾಪುರದ ಯುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಪಡೆಯಲು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಸ್ಥಳೀಯ ಕ್ರೀಡಾ ಸಂಘಗಳು ಮತ್ತು ಯುವಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಕರೆ ನೀಡಿದರು. ಅವರು ನಗರದ ಗಾಂಧಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾದ ವಾಲಿಬಾಲ್ ಕೋರ್ಟ್‌ನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಂದಾಪುರ ಫ್ರೆಂಡ್ಸ್‌ನ ಗೌರವಾಧ್ಯಕ್ಷ ರಾಜೇಶ್ ಕಾವೇರಿ ಅವರು ಸ್ವಾಗತಿಸಿ, ಮಾತನಾಡಿ, “ಇಂತಹ ಕ್ರೀಡಾ ಮೂಲಸೌಕರ್ಯಗಳು ನಮ್ಮ ಊರಿನ ಯುವಕರ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗಲಿವೆ. ಮುಂದೆಯೂ ಇದೇ ರೀತಿ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕುಂದಾಪುರ ಗ್ಯಾರಂಟಿ ಸಮಿತಿ ಅಧ್ಯಕ್ಷ ಹರಿಕೃಷ್ಣ ಶೆಟ್ಟಿ ಕಾನ್ಮಕ್ಕಿ…

Read More