Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ ೧೫ನೇ ವರ್ಷದ ನೂತನ ಅಧ್ಯಕ್ಷರಾಗಿ ಮಹೇಶ ಗಾಣಿಗ ಅಬ್ಬಿ, ಕಾರ್ಯದರ್ಶಿಯಾಗಿ ಸೀತಾರಾಮ ಪೂಜಾರಿ ತೆಂಕೊಡಿಗೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವಿಠಲ ಆಚಾರ್ಯ, ಉಪಾಧ್ಯಕ್ಷರಾಗಿ ಉದಯ ಕೆ.ನಾಯ್ಕ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ವಿ.ಕೆ.ಶಿವರಾಮ ಶೆಟ್ಟಿ, ರುದ್ರಯ್ಯ ಆಚಾರ್ಯ, ಶಶಿಧರ ಶೆಟ್ಟಿ ಕೊರಾಡಿಮನೆ, ಜತೆ ಕಾರ್ಯದರ್ಶಿಯಾಗಿ ವಿಜಯ ಎಚ್.ಪೂಜಾರಿ ತೆಂಕೊಡಿಗೆ, ಖಜಾಂಚಿಯಾಗಿ ಗುಂಡು ಪೂಜಾರಿ ಹರಾವರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತರಾಜ ಶೆಟ್ಟಿ, ಶರತ್ ಬಿಲ್ಲಾ, ಕ್ರೀಡಾಕಾರ್ಯದರ್ಶಿಯಾಗಿ ಹನೀಫ್ ಸಾಹೇಬ್ ವಂಡ್ಸೆ, ಅಬಿಜಿತ್ ಶಾರ್ಕೆ, ಲೆಕ್ಕ ಪರಿಶೋಧಕರು-ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಸಂಘಟನಾ ಕಾರ್ಯದರ್ಶಿಗಳಾಗಿ ಸಂಜೀವ ಪೂಜಾರಿ, ಸುಧಾಕರ ಪೂಜಾರಿ, ಎಲ್.ಎನ್.ಆಚಾರ್ ಆತ್ರಾಡಿ, ಶಂಕರ ಆಚಾರ್ಯ ವಂಡ್ಸೆ, ವಾಸು ಜಿ.ನಾಯ್ಕ, ಗಣೇಶ ದೇವಾಡಿಗ ಅಡಿಕೆಕೊಡ್ಲು, ಸತೀಶ ಚಂದನ್, ಗೌರವ ಸಲಹೆಗಾರರು- ಶಶಿಧರ್ ಶೆಟ್ಟಿ ಪಠೇಲರಮನೆ, ಗೋಪಾಲ ಶೆಟ್ಟಿ ಕೊಳ್ತಾ, ಗೋವರ್ಧನ್ ಜೋಗಿ, ಮಂಜುನಾಥ ಗಾಣಿಗ ಅಡಿಕೆಕೊಡ್ಲು, ರಾಜು ಸೀತಾ-ಗೀತಾ, ದಾಮೋದರ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟಿಗೆ ಸಂಬಂಧಿಸಿದಂತೆ ಆಳ್ವಾಸ್ ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಪ್ರಾರಂಭಿಸಲಿದೆ. ಸಂಪೂರ್ಣ ಎರಡು ವರ್ಷಗಳ ಉಚಿತ ಶಿಕ್ಷಣದ ಪೂರ್ಣಾವಧಿ ಡಿಪ್ಲೋಮ ಕೋರ್ಸ್ ಇದಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು ಅಥವಾ ೧೬ರಿಂದ೨೫ ವರ್ಷದೊಳಗಿನ ವಯೋಮಿತಿಯವರಿಗೆ ಅವಕಾಶ ಕಲ್ಪಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಮಾಡುತ್ತಾ ಕಾಲೇಜು ಶಿಕ್ಷಣವನ್ನು ಪಡೆಯುವ ಹಂಬಲವಿದ್ದವರಿಗೆ ದೂರ ಶಿಕ್ಷಣದಡಿಯಲ್ಲಿ ಉಚಿತವಾಗಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಕೋರ್ಸ್‌ನ್ನು ಮಾಡುವ ಸದವಕಾಶವನ್ನು ತೆರೆದಿಟ್ಟಿದೆ. ಸಂಸ್ಥೆಯಿಂದ ಮಾಸಿಕ ವಿದ್ಯಾರ್ಥಿ ವೇತನವನ್ನು ಪಡೆಯುವುದರ ಜೊತೆಗೆ ತೆಂಕುತಿಟ್ಟು ಮತ್ತು ಬಡಗುತಿಟ್ಟನ್ನು ಪ್ರತ್ಯೇಕವಾಗಿ ಕಲಿಯುವ ಕೋರ್ಸ್ ಇದಾಗಿದೆ. ಪ್ರಸಕ್ತ ಯಕ್ಷಗಾನ ಡಿಪ್ಲೋಮ ಕೋರ್ಸ್‌ನಲ್ಲಿ ಯಕ್ಷಗಾನದ ಹಿಮ್ಮೇಳ-ಮುಮ್ಮೇಳಜ್ಞಾನ, ಯೋಗ-ಪ್ರಾಣಾಯಾಮ,ಪುರಾಣಜ್ಞಾನ ಪರಿಚಯ, ಪ್ರಾತ್ಯಕ್ಷಿಕೆಗಳು, ಕೋರಿಯೋಗ್ರಫಿಯ ಅಧ್ಯಯನ, ಯಕ್ಷಗಾನ ಛಂದಸ್ಸು ಸೇರಿದಂತೆ ಯಕ್ಷಗಾನಕ್ಕೆ ಪೂರಕವಾಗಿ ಕನ್ನಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಪ್ರಸಿದ್ಧ ಕಾರಣಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭಾನುವಾರ ಸಂಜೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ್ದ ರಾಷ್ಟ್ರಪತಿಯವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ಆದರದಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯದ ಸಚಿವರುಗಳಾದ ರುದ್ರಪ್ಪ ಲಮಾಣಿ, ಕೆ.ಜೆ ಜಾರ್ಜ್, ಪ್ರಮೋದ್ ಮಧ್ವರಾಜ್, ಬೈಂದೂರು ಕ್ಷೇತ್ರ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಅರ್ಚಕರುಗಳು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ. ಉಡುಪಿಯಿಂದ ಕೊಲ್ಲೂರು ತನಕ ಬೀಗಿ ಭದ್ರತೆ: ಬೆಳಿಗ್ಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ್ದ ರಾಷ್ಟ್ರಪತಿಗಳು ಉಡುಪಿಯಲ್ಲಿ ಆಸ್ಪತ್ರೆಗೆ ಶಂಕುಸ್ಥಾಪನೆ ಹಾಗೂ ಉಡುಪಿ ಶ್ರೀ ಕೃಷ್ಟ ಮಠದ ದರ್ಶನ ಪಡೆದರು. ವಿಶ್ರಾಂತಿ ಪಡೆದ ಬಳಿಕ ಅಲ್ಲಿಂದ ಕೊಲ್ಲೂರಿಗೆ ಆಗಮಿಸಿ ಮರಳಿ ರಸ್ತೆ ಮಾರ್ಗವಾಗಿ ಉಡುಪಿಗೆ ಬಳಿಕ ಅಲ್ಲಿಂದ ಬೆಂಗಳೂರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕುಂದಾಪುರದ ರಾಯಪ್ಪನಮಠ ರಸ್ತೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ ಹಾಗೂ ಸಪರಿವಾರ ದೇವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಬಸ್ರೂರು ಮಹಾಲಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆಯವರನ್ನು ಗೌರವಿಸಲಾಯಿತು. ದೇವಸ್ಥಾನದ ಅರ್ಚಕರಾದ ಪ್ರಸಾದ ಐತಾಳ, ಪಾತ್ರಿಗಳಾದ ರಾಮ ದೇವಾಡಿಗ, ಪ್ರಮುಖರಾದ ನಾಗರಾಜ ರಾಯಪ್ಪನಮಠ, ಚಂದ್ರ ರಾಯಪ್ಪನಮಠ, ಮಂಜುನಾಥ ರಾಯಪ್ಪನಮಠ, ಸೂರ್ಯ ರಾಯಪ್ಪನಮಠ, ದಿನೇಶ ರಾಯಪ್ಪನಮಠ, ಗಣೇಶ, ಪ್ರಕಾಶ ದೇವಾಡಿಗ, ರಮೇಶ ದೇವಾಡಿಗ ಹಂಗಾರಕಟ್ಟೆ, ಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಪ್ಪುಂದ: ಅಂಬಾಗಿಲು ಶ್ರೀ ಅಶ್ವತ ನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ ಸಂಕಷ್ಟಿಯ ವಿಶೇಷ ದಿನದಂದು ರಾತ್ರಿ ದೇವರಿಗೆ ತೊಟ್ಟಿಲೋತ್ಸವ ಸೇವೆಯು ಯು. ಗಣೇಶ ಅವಧಾನಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು. ಸೇವಾದಾರರಾದ ಶ್ರೀಮತಿ ಸಿಯಾ ಲಲಿತ ಕಾಮತ ಯು.ಎಸ್.ಎ. ಕುಟುಂಬಸ್ಥರು ಹಾಗೂ ಸಾವಿರಾರು ಭಕ್ತಮಹಾಶಯರು ಶ್ರೀ ದೇವರ ದರುಶನ ಪಡೆದು ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಕಲಿಕಾ ಸಾಮಾಗ್ರಿ ವಿತರಣಾ ಸಮಾರಂಭ’ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷ ಪ್ರಭಾಕರ್ ಗಾಣಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತ್ ಸದಸ್ಯೆ ಭವಾನಿ, ಲಕ್ಷ್ಮೀ ಮತ್ತು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟರಮಣ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಧಾನ ಪೋಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಸಂಗೀತ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜ್ಯೋತಿ.ಎಚ್ ವಂದಿಸಿದರು. ಸಾರಿಕಾ ನಿರೂಪಿಸಿದರು. ಶಿಕ್ಷಕಿಯರಾದ ಭಾಗೀರಥಿ, ಅಂಬಾಬಾಯಿ ಮತ್ತು ಗೌರವ ಶಿಕ್ಷಕಿ ನಾಗರತ್ನ ಸಹಕರಿಸಿದ್ದರು.

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ | 17 ಜೂನ್ 2015. ಬೈಂದೂರಿನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನವದು. ಎಲ್ಲರಂತೆಯೇ ನೂರಾರು ಕನಸು ಹೊತ್ತ ಕಂಗಳು ಅಂದು ಕಮರಿ ಹೋಗಿದ್ದವು. ಮನುಷ್ಯರೂಪಿ ವ್ಯಾಫ್ರನ ಅಟ್ಟಹಾಸಕ್ಕೆ ಆ ಕುಗ್ರಾಮದ ಹುಡುಗಿ ನಲುಗಿ ಹೋಗಿದ್ದಳು. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ದಿಟ್ಟ ಹುಡುಗಿಯ ಬದುಕಿನ ದಾರಿಗೆ ಅಂತ್ಯ ಹಾಡಲಾಗಿತ್ತು. ಹೌದು. ಅಂದು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷತಾ ದೇವಾಡಿಗ ಎಂಬ ಹೆಣ್ಣಮಗಳು ತನ್ನ ಮನೆಗೆ ಸಾಗುವ ಹಾದಿಯಲ್ಲಿಯೇ ವಿಧಿಯ ಕ್ರೂರಲೀಲೆ ಬಲಿಯಾಗಿ ಹೋಗಿದ್ದಳು ಅಕ್ಷತಾಳ ಸಾವಿನ ಕರಾಳತೆಗೆ ಬೈಂದೂರಿನ ಜನತೆ ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿ ಸಮೂಹ ಅಕ್ಷರಶಃ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿಗಳೇ ತನಿಕೆಗೆ ಮುಂದಾದರು. ಕೊನೆಗೆ ಆರೋಪಿಯ ಬಂಧನವೂ ಆಯಿತು. ಆದರೆ ಅಕ್ಷತಾ ಮಾತ್ರ ಮರಳಿ ಬರಲಿಲ್ಲ! ಬದುಕಿದ್ದರೆ ಇಂಜಿನಿಯರಿಂಗ್ ಓದುತ್ತಿದ್ದಳು: ಹೇನಬೇರಿನ ಬಾಬು ದೇವಾಡಿಗ ಹಾಗೂ ರಾಧಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿಂದೂ ಹಿತರಕ್ಷಣಾ ವೇದಿಕೆ ಬೈಂದೂರು ಇದರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಸಚಿವ ರಮಾನಾಥ ರೈ ವಿರುದ್ಧ ಬೈಂದೂರು ಪೇಟೆಯಲ್ಲಿ ಜೂನ್ 20ರ ಮಂಗಳವಾರ ಬೆಳಿಗ್ಗೆ 10ಗಂಟೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಾಂದವರು ಭಾಗವಹಿಸುವಂತೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕನ್ನಡ ವಿಶ್ವವಿದ್ಯಾಲಯ, ಹಂಪಿ ಮಾನ್ಯತೆ ಪಡೆದಿರುವ ಕುಂದಾಪುರದ ರಂಗ ಅಧ್ಯಯನ ಕೇಂದ್ರವು ನಡೆಸುವ 2017-18 ರ ಸಾಲಿನ ಒಂದು ವರ್ಷದ ನಾಟಕ ಡಿಪ್ಲೋಮಾ ತರಗತಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಪೂರ್ಣಾವಧಿ ಕೋರ್ಸ್ ಆಗಿದ್ದು, ತರಗತಿಗಳು ಜುಲೈ 24 , 2017 ರಿಂದ 15 ಮೇ 2018 ರ ವರೆಗೆ ನಡೆಯಲಿದೆ. ತರಗತಿಗಳು ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವುದು. ಗರಿಷ್ಠ 20 ಮಂದಿಗೆ ಅವಕಾಶವಿದೆ. ಕೋರ್ಸಿನ ಅವಧಿಯಲ್ಲಿ ಪಾಶ್ಚಾತ್ಯ ರಂಗಭೂಮಿ, ಅಭಿಜಾತ ಭಾರತೀಯ ರಂಗಭೂಮಿ, ಆಧುನಿಕ ಭಾರತೀಯ ರಂಗಭೂಮಿ ಹಾಗೂ ಕನ್ನಡ ರಂಗಭೂಮಿಯ ಬಗ್ಗೆ ಸಮಗ್ರ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು. ನಾಲ್ಕು ಪೂರ್ಣ ಪ್ರಮಾಣದ ನಾಟಕಗಳನ್ನು ತಯಾರಿಸಲಾಗುವುದು. ನಟನೆ, ನಿರ್ದೇಶನ, ಬೆಳಕು, ವರ್ಣಾಲಂಕಾರ, ರಂಗವಿನ್ಯಾಸಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ರಂಗಭೂಮಿಯ ಬಗ್ಗೆ ಈಗಾಗಲೇ ತಿಳುವಳಿಕೆ ಹೊಂದಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ಊಟ ಮತ್ತು ವಸತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜು, ಕುಂದಾಪುರ ಮತ್ತು ಕಾರ್ಮಿಕ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜು ಕುಂದಾಪುರದ ಎ.ವಿ.ಹಾಲ್‌ನಲ್ಲಿ ಜರುಗಿತು. ಕುಂದಾಪುರದ ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಚಂದ್ರಶೇಖರ ಬಣಕಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಜೂನ್ ೧೨ ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸುತ್ತಿದ್ದು, ಚಿಕ್ಕ ಮಕ್ಕಳಿಂದ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ಕೈಬಿಟ್ಟು, ಮಗುವಿನ ದೈಹಿಕ, ಮಾನಸಿಕ ಮತ್ತು ಬೌಧ್ಧಿಕ ಬೆಳವಣಿಗೆ ಸಹಾಯವಾಗುವ ಪೂರಕ ಅಂಶಗಳನ್ನು ಪೂರೈಸಿ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವುದರ ಜೊತೆಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬದುಕುವ ಅವಕಾಶವನ್ನು ಕಲ್ಪಿಸಬೇಕು ಹಾಗೂ ಅಂತಹವರನ್ನು ಶಾಲೆಗಳಿಗೆ ಸೇರಿಸುವಲ್ಲಿ ಎಲ್ಲರೂ ಸಹಕರಿಸಿದಾಗ ಮಾತ್ರ…

Read More