ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಫೋಟೊ ಕಾನ್ಸೈರ್ಜ್ ಸಂಸ್ಥೆಯು ಆಯೋಜಿಸಿದ್ದ ದಿ ಬಿಗ್ ಸಫ್ ಪೋಟೋ ಕಂಟೆಸ್ಟ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಿತೀಶ್ ಪಿ. ಬೈಂದೂರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಲವು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿತೀಶ್ ಬೈಂದೂರು ಈವರೆಗೂ ಹಲವಾರು ಪೋಟೋಗ್ರಫಿ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ. Read this ► ನಿತೀಶ್ ಸಾಧನೆಯ ಓಘಕ್ಕೆ ವೇಗ ಹೆಚ್ಚಿಸಿದ ಬೆಳದಿಂಗಳ ಗೌರವ – http://kundapraa.com/?p=1460
Author: ನ್ಯೂಸ್ ಬ್ಯೂರೋ
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಸರಕಾರಿ ಪದವಿ ಕಾಲೇಜುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸಬೇಕು ಎಂದು ಹೊರಡಿಸಿರುವ ಆದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಆದೇಶ ಹಿಂಪಡೆಯಬೇಕೆಂಬ ಆಗ್ರಹ ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ. ಕಳೆದ ವಾರ ಕಾಲೇಜು ಶಿಕ್ಷಣ ಆಯುಕ್ತರು ಬೆಳಿಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸಬೇಕು ಎಂದು ಆದೇಶಿಸಿದ್ದರು. ಈ ಆದೇಶದಿಂದಾಗಿ ನಗರ ಭಾಗದ ವಿದ್ಯಾರ್ಥಿಗಳಿಗೆ ಅಂತಹ ತೊಂದರೆ ಆಗದಿದ್ದರೂ ಹತ್ತಾರು ಕಿ.ಮೀ ಬಳಸಿ ಬರಬೇಕಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ. ಇನ್ನು ಶೇ.80ರಷ್ಟು ಅತಿಥಿ ಉಪನ್ಯಾಸಕರೇ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಉಪನ್ಯಾಸಕರ ಸಂಬಳ ಹಾಗೂ ನೇಮಕಾತಿಯ ವಿಚಾರವೇ ಅತಂತ್ರವಾಗಿರುವಾಗ, ಬೆಳಿಗ್ಗೆ 8 ರಿಂದಲೇ ತರಗತಿ ಆರಂಭಿಸಬೇಕೆಂದು ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳಿಗ್ಗೆ ಬಸ್ ಸಂಪರ್ಕವಿಲ್ಲ, ಸುರಕ್ಷಿತವೂ ಅಲ್ಲ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇಶ್ವರದ ಕಾವೇರಿ ಮಾರ್ಗದಲ್ಲಿ ಮಧ್ಯದಂಗಡಿಯನ್ನು ತೆರೆಯಲು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸೋಮವಾರ ಮಧ್ಯದಂಗಡಿಗಾಗಿ ನಿಗದಿಪಡಿಸಿದ ಕಟ್ಟಡದ ಎದುರಿನಲ್ಲಿಯೇ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವೇರಿ ಮಾರ್ಗದ ನಿವಾಸಿ ನಾಗರಾಜ ಗಾಣಿಗ ಬಂಕೇಶ್ವರ ಮಾತನಾಡಿ ಕಾವೇರಿ ಮಾರ್ಗದಲ್ಲಿ ಎಲ್ಲಾ ಸಮುದಾಯದವರೂ ಈವರೆಗೆ ಶಾಂತಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಪ್ರತಿನಿತ್ಯವೂ ಹತ್ತಾರು ಮಕ್ಕಳು, ಮಹಿಳೆಯರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಸಮೀಪದಲ್ಲಿ ದೇವಸ್ಥಾನ, ಅಂಗನವಾಡಿ ಕೇಂದ್ರ ಹಾಗೂ ಹತ್ತಾರು ಮನೆಗಳಿದ್ದು ಇಲ್ಲಿಯೇ ಮಧ್ಯದಂಗಡಿ ತೆರೆಯುವುದು ಸೂಕ್ತವಲ್ಲ. ಕಿರಿದಾದ ರಸ್ತೆಗೆ ತಾಕಿಕೊಂಡಿರುವ ಕಟ್ಟಡದಲ್ಲಿ ಅಂಗಡಿ ತೆರೆದರೆ ಈ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟವಾಗಲಿದೆ. ತಹಶೀಲ್ದಾರರು, ಸ್ಥಳೀಯ ಪಂಚಾಯತ್ ಹಾಗೂ ಅಬಕಾರಿ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಮಧ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ. ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯಿಸಿ ಸಾರ್ವಜನಿಕರಿಗೆ ತೀವ್ರ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ತಾಲೂಕಿನ ಪ್ರಸಿದ್ಧ ಸೌಕೂರು ದೇವಸ್ಥಾನಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕಾವ್ರಾಡಿ ಹಾಗೂ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ದುರಸ್ತಿ ಕಾಣದೇ ವರ್ಷಗಳೇ ಸಂದಿದ್ದು ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚಾರವೇ ದುಸ್ತರವಾಗಿದ್ದು ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಸಮಸ್ಯೆಯ ಪರಿಹಾರಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ವಾಹನ ಸವಾರರು ಪರಿತಪಿಸುವಂತಾಗಿದೆ. ಕಂಡ್ಲೂರಿನಿಂದ ಸೌಕೂರಿಗೆ ಸಾಗುವ ಸುಮಾರು 1.5 ಕಿ.ಮೀ ಡಾಮರು ರಸ್ತೆ ಸಂಪೂರ್ಣ ಮಾಯವಾಗಿ ಕೆಸರು ಮಯವಾಗಿದೆ. ಮಳೆಗಾಳದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಈ ಹಿಂದೆ ಬಸ್ಸು ಸಂಪರ್ಕವನ್ನು ಹೊಂದಿದ್ದು ರಸ್ತೆಯ ಅವ್ಯವಸ್ಥೆಯನ್ನು ಕಂಡು ಕಳೆದ ಒಂದೂವರೆ ವರ್ಷದಿಂದ ಬಸ್ಸುಗಳೂ ಸಹ ಬರುವುದನ್ನು ನಿಲ್ಲಿಸಿವೆ. ಇಲ್ಲಿನ ಜನರು ಮುಖ್ಯ ರಸ್ತೆಯನ್ನು ತಲುಪಬೇಕಾದರೆ ನಡೆದುಕೊಂಡೇ ಸಾಗಬೇಕಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಕಷ್ಟಕರವಾದರೆ ರಸ್ತೆ ಸಮಸ್ಯೆಯಿಂದ ಆಟೋ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಇಷ್ಟು ಪಡುತ್ತಿಲ್ಲ. ಈವರೆಗೆ ಜನಪ್ರತಿನಿಧಿಗಳು ರಸ್ತೆ ದುರಸ್ತಿಯ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಳೆಗಾಲ ಆರಂಭವಾದ ಬೆನ್ನಲ್ಲೇ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳ ಆಗಮನವಾಗುತ್ತದೆ. ಈ ಹಿನ್ನಲೆಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗಿದೆ. ಸೊಳ್ಳೆಗಳು ಈ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದ್ದು ಸೊಳ್ಳೆಗಳು ಉತ್ಪತ್ತಿಯಾಗದ ಹಾಗೇ ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿದರು. ಅವರು ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆ ವಹಿಸಿ ಮಲೇರಿಯಾ ವಿರೋಧಿ ಮಾಸಾಚರಣೆಯ ಕರಪತ್ರ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಬಿಸಿಎಂ ವಿಸ್ತರಣಾಧಿಕಾರಿ ಬಸವರಾಜ್, ಫ್ರೆಂಡ್ಸ್ ಸರ್ಕಲ್ ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇದರ ಗೌರವಾಧ್ಯಕ್ಷ ಶೀನ ಖಾರ್ವಿ, ಸಂಪನ್ಮೂಲ ವ್ಯಕ್ತಿ ತಾಲೂಕು ಎನ್.ಬಿ.ಡಿ.ಸಿ.ಸಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ದೇಶದ ಅಭಿವೃದ್ಧಿಯ ಬಗೆಗಿನ ಚಿಂತನೆ, ಸಾಮಾಜಿಕ ಜೀವನ, ಸಾಮಾಜಿಕ ಬದ್ಧತೆ ರೋಟರಿ ಕಲಿಸುತ್ತದೆ. ರೋಟರಿಯಲ್ಲಿ ಎಲ್ಲ ವರ್ಗದ ಹಾಗೂ ವಿವಿಧ ಕೆಲಸ ಮಾಡುವ ಜನರು ಇರುತ್ತಾರೆ. ಅವರೆಲ್ಲ ಸಮಾಜ ಸೇವಾ ಕಾರ್ಯ ಮಾಡುತ್ತಾರೆ. ಈ ರೀತಿಯ ಚಿಂತನೆಗಳ ಬಗ್ಗೆ ಯಾವ ಪದವಿ ಹಾಗೂ ಶಿಕ್ಷಣ ಕಲಿಸದ ಶಿಕ್ಷಣ ರೋಟರಿ ಕಲಿಸುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಹೇಳಿದರು. ಅವರು ಅಂಪಾರಿನ ಶ್ರೀ ಮಹಿಷಮರ್ದಿನಿ ಸಭಾ ಭವನದಲ್ಲಿ ನಡೆದ ಅಂಪಾರು ರೋಟರಿ ಕ್ಲಬ್ನ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಕುಂದಾಪುರದಲ್ಲಿ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕವಾಗಿ ನಿರ್ಮಾಣದಿಂದ ಅನೇಕರು ಪ್ರಾಣ ಕಳೆದು ಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬದಿ ಯಲ್ಲಿರುವ ಅನೇಕ ಸರಕಾರಿ ಶಾಲೆಗಳು ಅನಿ ವಾರ್ಯವಾಗಿ ಮುಚ್ಚುವ ಹಂತಕ್ಕೆ ಬಂದಿವೆ. ಈ ಬಗ್ಗೆ ರೋಟರಿಯಂಥ ಸಂಸ್ಥೆಗಳು ಗಂಭೀರ ವಾಗಿ ಚರ್ಚೆಗಳನ್ನು ನಡೆಸಬೇಕು ಎಂದರು. ಅಂಪಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಯಕ್ಷಗಾನ ಕಲೆಯ ಪ್ರಭಾವ ಸಮಾಜದಲ್ಲಿ ಜನರನ್ನು ಬುದ್ಧಿವಂತರನ್ನೂ, ವಿಚಾರ ವಂತರನ್ನಾಗಿ ಮಾಡಿಸಿದೆ. ಧಾರ್ಮಿಕ ಪ್ರಜ್ಞೆವುಳ್ಳವರನ್ನಾಗಿಯೂ, ನಾಗರಿಕ ಪ್ರಜ್ಞಾವಂತರನ್ನಾಗಿಯೂ ಎಚ್ಚರಗೊಳಿಸಿದ್ದು ಯಕ್ಷಗಾನ ಕಲೆ. ಬಹಳ ಹಿಂದಿನ ದಿನವನ್ನು ಯೋಚಿಸುವಾಗ ವಿದ್ಯಾವಂತರನ್ನೊಳ ಗೊಂಡ ಸಮಾಜವಾಗಿರಲಿಲ್ಲ. ಆದರೂ ವಿದ್ಯಾವಂತರಾಗಿಯೇ ಜನರು ಜೀವನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಯಕ್ಷಗಾನ ತಾಳಮದ್ದಲೆಯ ಕೊಡುಗೆ ಅಪಾರ. ಈ ಕಲೆಗೆ ಪ್ರೋತ್ಸಾಹಕವಾಗಿ ದೇವಸ್ಥಾನದ ಆಡಳಿತ ಮಂಡಳಿಗಳ ನೆರವು ಅಗತ್ಯವಿರುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಶಸ್ವಿ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಇವರ ಸಹಯೋಗದೊಂದಿಗೆ ನಡೆದ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುಜಯೀಂದ್ರ ಹಂದೆ, ಹವ್ಯಾಸಿ ಕಲಾವಿದ ದಿವಾಕರ ಶೆಟ್ಟಿ, ಸುದರ್ಶನ ಉರಾಳ, ಲಂಬೋದರ ಹೆಗಡೆ, ಅಶೋಕ್ ಕೆರೆಕಟ್ಟೆ, ಉಪಸ್ಥಿತರಿದ್ದರು.ಶ್ರೀ ನಿವಾಸ ಮಾಸ್ಟರ್ ವಂದಿಸಿದರು. ಸತೀಶ್ಚಂದ್ರ ಕಾಳವಾರ್ಕರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿ ವಿದ್ಯಾರ್ಥಿ ಪರಿಷತ್ನ್ನು ಉದ್ಘಾಟನೆ ಆದಿತ್ಯ ಆಡಿಟೋರಿಯಂನಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್ ಜಿ ಬಾನಾವಾಳಿಕರ್ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಂಕರ ಪೂಜಾರಿಯವರು ಭಾಗವಹಿಸಿದರು. ವಿದ್ಯಾರ್ಥಿ ಪರಿಷತ್ ನಾಯಕಿಯಾಗಿ ಕುಮಾರಿ ಶಿಲ್ಪಾ, ವಿದ್ಯಾರ್ಥಿ ಪರಿಷತ್ ಉಪನಾಯಕಿಯಾಗಿ ಕುಮಾರಿ ಸ್ವೀಕೃತಿ. ಹಾಗೂ ವಿದ್ಯಾರ್ಥಿ ಪರಿಷತ್ನ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಹಾಗೂ ಕುಮಾರಿ ಪುಣ್ಯಶ್ರೀ ಇವರು ಪ್ರಮಾಣ ವಚನ ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗೋವಿಂದರಾಜು ಪ್ರಮಾಣ ವಚನ ಭೋಧೀಸಿದರು ರೇಷ್ಮಾ ಹಾಗೂ ವಾಣಿ ಕರ್ತವ್ಯಗಳನ್ನು ತಿಳಿಸಿದರು. ಕುಮಾರಿ ರೂಪಾ ಸ್ವಾಗತಿಸಿ, ಕುಮಾರಿ ಚಂದ್ರಾವತಿ ವಂದಿಸಿ, ಕುಮಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನೂತವಾಗಿ ನಿರ್ಮಿಸಿದ ಶ್ರೀ ವಿ.ಎನ್ ಭಂಡಾರ್ಕರ್ ಮತ್ತು ಶ್ರೀಮತಿ ಲಕ್ಷ್ಮಿದೇವಿ ಭಂಡಾರ್ಕರ್ ಐ.ಸಿ.ಟಿ ಆಧಾರಿತ ತರಗತಿ ಕೊಠಡಿಯನ್ನು ಡಾ. ಎ.ಎಸ್. ಭಂಡರ್ಕರ್ ಕುಟುಂಬದವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ವಿವೇಕ್ ಭಂಡಾರ್ಕರ್ ಮಾತನಾಡಿ ಕಾಲೇಜಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅಧ್ಯಯನ ಮಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬರುವ ಸವಾಲುಗಳನ್ನು ಎದುರಿಸಿ ಗುರಿಯತ್ತ ಗಮನ ಹರಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕರ್ ಕುಟುಂಬದ ಶಾಂತಾ ಭಂಡಾರ್ಕರ್ ಸುಧಾ ಭಂಡಾರ್ಕರ್, ವಿದ್ಯಾ ಭಂಡಾರ್ಕರ್ಶರ್ಮಿಳಾ ಭಂಡಾರ್ಕರ್ ಉಪಸ್ಥಿತರಿದ್ದರು. ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಪ್ರಜ್ನೇಶ್ ಪ್ರಭು, ವಿಜಯಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ನಾಗರಾಜ್ ವಿಜಯಲಕ್ಷ್ಮಿ ಶಾಂತಾರಾಮ್ ಮುಂತಾದವರು ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳ ಬದುಕಿನ ತತ್ವಾದರ್ಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ಪಷ್ಟವಾದ ಗುರಿ, ಛಲ ಹಾಗೂ ಇಚ್ಛಾಶಕ್ತಿಯಿಂದ ಮುನ್ನಡೆದಿದ್ದಲ್ಲಿ ವಿದ್ಯಾರ್ಥಿಗಳು ಎಂತಹ ಸಾಧನೆಯನ್ನಾದರೂ ಮಾಡಬಹುದು. ಇಂದಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯದ ನಾಯಕರು ಎಂದು ಕಿರಿಮಂಜೇಶ್ವರದ ಉದ್ಯಮಿ, ದಾನಿ ಎನ್. ವಿ. ಪ್ರಕಾಶ್ ಐತಾಳ್ ಹೇಳಿದರು. ಕಿರಿಮಂಜೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದ ಸಮಾರಂಭದಲ್ಲಿ ಶಾಲಾ 2017-18ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಶಿಕ್ಷಕ ಶಂಕರ ಮೊಗವೀರ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿಕೆಯಲ್ಲಿ ವಿದ್ಯಾರ್ಥಿಗಳ ಬದ್ಧತೆ ಅತ್ಯಗತ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಲಭ್ಯ ಅವಕಾಶಗಳನ್ನು ಚಾಚೂ ತಪ್ಪದೇ ಬಳಸಿಕೊಂಡು ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಶಾಲಾ ಸರಕಾರದ ನೂತನ ಪ್ರತಿನಿಧಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಸರಕಾರದ ಮಾರ್ಗದರ್ಶಕರಾದ ಶಿಕ್ಷಕ ಬೊಮ್ಮಯ್ಯ ಬಿ.…
