ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಣಯಿಸುವುದು ವ್ಯಕ್ತಿಯ ಮನಸ್ಥಿತಿ ಇಂತಹ ಮನಸ್ಥಿತಿಯನ್ನು ಉತ್ತಮ ಹಾದಿಗೆ ಕರೆದೊಯ್ಯುವುದು ರಾಷ್ಡ್ರೀಯ ಸೇವೆ ಎನ್ನುವ ಮನೋಭಾವನೆ ಇದಕ್ಕೆ ತಕ್ಕ ವೇದಿಕೆಯೇ ಈ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿಗಳು ಇಂದಿನ ಸಮಾಜದ ನೈಜ ಚಿತ್ರಣವನ್ನು ತಿಳಿದುಕೊಳ್ಳಬೇಕು. ನಮ್ಮದು ಭಾರತ ಮಾತೆ ಎಂದು ಕರೆಯಲ್ಪಡುವ ರಾಷ್ಟ್ರ ಇಲ್ಲಿ ಅನೇಕ ಧರ್ಮ ಜಾತಿಯಿಂದ ಕೊಡಿದೆ. ನಮ್ಮಲ್ಲಿ ಜಾತಿ ಬೇಧವಿಲ್ಲದೇ ಒಗ್ಗೂಡಿ ರಾಷ್ಟ್ರದ ಅಭಿವೃಧ್ದಿಗೆ ಶ್ರಮಿಸಬೇಕು. ನಮ್ಮ ರಾಷ್ಟ್ರೀಯಾ ಸೇವಾ ಯೋಜನೆಯಂತಹ ಘಟಕಗಳನ್ನು ಉಪಯೋಗಿಸಿ ಕೊಂಡು ಸಾಕಷ್ಟು ಸೇವಾ ಮನೋಭವದಿಂದ ಸೇವೆ ಸಲ್ಲಿಸಿ ದೇಶದ ಅಭಿವೃದ್ದಿಯ ಕಡೆ ಗಮನ ಹರಿಸಿ ಎಂದು ಬ್ಯಾರೀಸ್ ಕಾಲೇಜಿನ ರಾಷ್ಟ್ರೀಯಾ ಸೇವಾ ಯೋಜನಾ ಘಟಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಲಹ ಸಮಿತಿಯ ಸದಸ್ಯ, ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣದ ಪ್ರಾಂಶುಪಾಳ ಡಾ. ಉದಯ್ ಕುಮಾರ್ ಶೆಟ್ಟಿ ಹೇಳಿದರು. ಅವರು ಗಿಡಕ್ಕೆ ನೀರುಣಿಸುವುದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ಮೇಲಿನ ದೌರ್ಜನ್ಯಕ್ಕೆ ನಿಮ್ಮ ಮುಂದೆ ನಿಂತ ನಾನೇ ಸಾಕ್ಷಿ! ಭೂಮಿ ಒಡಲು ಬಗೆದು ಕಲ್ಲು ತೆಗೆದು ಹಣಮಾಡಿಕೊಂಡು, ಹೊಂಡ ಮಾತ್ರಾ ಹಾಗೆ ಬಿಟ್ಟು ಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಆಜುಬಾಜು ಬರುವ ಶಾಲಾ ಮಕ್ಕಳು ರಸ್ತೆ ದಾಟುವುದು ಒಂದು ಸಾಹಸ. ಭೂಮಿ ಬಗೆದು ಗಣಿಗಾರಿಕೆ ನಡೆಸಿರೋದು ಯಾರೋ, ಅಪಾಯಕಾರಿ ಹೊಂಡ ಮುಚ್ಚಲು ಸರಕಾರಿ ದುಡ್ಡು! ಇದು ಜಿಲ್ಲಾಡಳಿತ, ತಾಲೂಕ್ ಪಂಚಾಯತ್, ಸಿಡಬ್ಲ್ಯೂಸಿ ಸಂಸ್ಥೆ, ಮಕ್ಕಳ ಸಂಘ, ಮಕ್ಕಳ ಹಾಗೂ ಮಹಿಳಾ ಮಿತ್ರರು ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಕ್ಕಳು ಮತ್ತು ಮಹಿಳಾ ಹಕ್ಕು ಹಾಗೂ ರಕ್ಷಣೆ ಕುರಿತು ನಡೆದ ಸಂವಹನದಲ್ಲಿ ಮಕ್ಕಳು ಸಮಸ್ಯೆಗಳ ಅನಾವರಣ ಮಾಡಿದ ಪರಿ. ಮಕ್ಕಳ ಮಿತ್ರ ಪ್ರತಿನಿಧಿ ಪವನ್ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಇರುವ ಅಪಾಯಕಾರಿ ಕಲ್ಲುಕ್ವಾರೆ ಹೊಂಡಗಳು ಮಕ್ಕಳ ಪಾಲಿನ ಯಮಧೂತನಂತಿವೆ. ಕಲ್ಲು ಕಡಿದು ಹಣ ಮಾಡಿಕೊಳ್ಳುವುದು ಯಾರೋ. ಬಲಿಯಾಗುವುದು ಮಕ್ಕಳು. ಅಪಾಯಕಾರಿ ಕಲ್ಲುಕೋರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಂಕೇಶ್ವರದ ಮಹಾಕಾಳಿ ಲೇಔಟ್ ನಿವಾಸಿ ಬೈಂದೂರಿನ ರೋಶನ್ ಹೋಮಿಯೋ ಕ್ಲಿನಿಕ್ನ ವೈದ್ಯ ಡಾ. ರೋಶನ್ ಪಾಯಸ್ ಇವರ ಪತ್ನಿ ಶಾಂತಿ ಪಾಯಸ್ (40) ಗುರುವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಕಳೆದ ನಾಲ್ಕು ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆಯನ್ನು ಮಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಗುರುವಾರ ಬೆಳಿಗ್ಗೆ ಇದ್ದಕ್ಕಿಂದಂತೆ ನಾಪತ್ತೆಯಾಗಿದ್ದು, ಹುಡುಕಾಟ ಮಾಡುವಾಗ ಮನೆಯ ಬಾವಿಯಲ್ಲಿ ಶಾಂತಿ ಪಾಯಸ್ ಶವ ದೊರೆತಿದೆ. ಕೆಲವು ದಿನಗಳ ಹಿಂದೆ ಕುಂದಾಪುರದ ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆದಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಕೃಷಿಕರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಬೈಂದೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಇಲ್ಲಿನ ವಿಶೇಷ ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮಾತನಾಡಿ, ರಾಜ್ಯದ 160 ತಾಲೂಕುಗಳಲ್ಲಿ ಕಳೆದ ಆರು ವರ್ಷದಿಂದ ಭೀಕರ ಬರಗಾಲ ಎದುರಾಗಿದ್ದು ಬೆಳೆಯಿಲ್ಲದೇ ಕೃಷಿಕರು ಕಂಗಲಾಗಿದ್ದಾರೆ, ಜಾನುವಾರುಗಳಿಗೆ ಮೇವು, ನೀರಿಲ್ಲದೆ, ಪರಿತಪಿಸುವಂತಾಗಿದೆ. ಹೀಗಾಗಿ ಕೃಷಿಕರಿಗೆ ಬ್ಯಾಂಕುಗಳಲ್ಲಿ ಮಾಡಿದ ಸಾಲ ಮರುಪಾವತಿ ನಡೆಸಲು ಸಾಧ್ಯವಾಗದೇ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ಕೃಷಿಕರ ಸಂಕಷ್ಟ ಅರಿತ ರಾಜ್ಯ ಸರ್ಕಾರ ಕೃಷಿಕರ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಎಲ್ಲಾ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರ್ಕಾರದ ಸಾಲಮನ್ನಾದಿಂದಾಗಿ ರಾಜ್ಯದ ೫೫ ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದ ಅವರು ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲಮನ್ನಾ ಮಾಡುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ರಾಜ್ಯದ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ತಲಾ 50 ಸಾವಿರ ರೂಪಾಯಿಯಂತೆ 24ಲಕ್ಷ ರೈತರ 8,100 ಕೋಟಿಗೂ ಮಿಕ್ಕಿ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿದ್ದು, ಅದೇ ರೀತಿಯಾಗಿ ಇನ್ನುಳಿದ ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರದ ಮೋದಿ ಸರಕಾರವನ್ನು ಒತ್ತಾಯಿಸಿ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕುಂದಾಪುರ ಶಾಖೆಯ ಎದುರು ಕುಂದಾಪುರ ಯುವಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಿ ಕುಂದಾಪುರ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಯುವ ಕಾಂಗ್ರೇಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಮಾತನಾಡಿ ಸ್ವಿಸ್ ಬ್ಯಾಂಕ್ನಲ್ಲಿನ ಕಪ್ಪು ಹಣವನ್ನು ತಂದು ದೇಶದ ಪ್ರಜೆಗಳಿಗೆ ತಲಾ ಹದಿನೈದು ಲಕ್ಷದಂತೆ ಹಂಚಲಾಗುವುದು. ಯುವಕರಿಗೆ ವರ್ಷಕ್ಕೆ ೨ಕೋಟಿ ಉದ್ಯೋಗಾವಕಾಶವನ್ನು ಸೃಷ್ಟಿಸಿಲಾಗುವುದು. ಈ ಮೂಲಕ ದೇಶಕ್ಕೆ ಅಚ್ಚೇದಿನ್ ಬರಲಿದೆ ಎಂದು ಮೋದಿಯವರು ಕಳೆದ ಲೋಕಸಭಾ ಚುನಾವಣೆಯ ವೇಳೆ ಹೇಳಿದ್ದರು. ಆದರೆ ಆ ಆಶ್ವಾಸನೆಗಳು ಕೇವಲ ಹೇಳಿಕೆಗಳಾಗಿಯೇ ಉಳಿದುಕೊಂಡವು. ಆದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೀವನದಲ್ಲಿ 20ರತನಕ ಕಲಿಕೆ, 40ರತನಕ ಗಳಿಕೆ, 60ರತನಕ ಬಳಕೆ ನಂತರ ಉಳಿಕೆ ಈ ಸಿದ್ಧಾಂತದಿಂದ ಬದುಕಿ ನಮ್ಮ ನಮ್ಮ ಜೀವನಕ್ಕೊಂದು ಶಿಸ್ತನ್ನು ತುಂಬಿಸಿ ಕೊಳ್ಳ ಬೇಕು. ಹಣದ ಸಂಪಾದನೆಯೊಂದೇ ಸಾರ್ಥಕತೆಯಲ್ಲ. ಜೀವನದಲ್ಲಿ ಆರ್ಥಿಕ ಅಸ್ಸೆಟ್ ಜತೆ ಸ್ನೇಹ ಪ್ರೀತಿ ಭಾಂದವ್ಯದ ಅಸ್ಸೆಟ್ ಇರದಿದ್ದರೆ ಎಂದಿಗೂ ಬದುಕಿನ ಬ್ಯಾಲೆನ್ಸ್ ಶೀಟ್ ತಾಳೆಯಾಗೋದಿಲ್ಲ. ನಮ್ಮ ಜೀವನದ ಮೌಲ್ಯ ಹೆಚ್ಚುವಂತಹ ಭಾವನಾತ್ಮಕ ಸಂಪತ್ತೂ ಸಹ ಅತೀ ಅಗತ್ಯ ಎಂದು ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದ ನಿರ್ವತ್ತ ಉಪನ್ಯಾಸಕ ಮೋಹನ್ ದಾಸ್ ಪೈಯವರು ಹೇಳಿದರು. ಇಲ್ಲಿನ ಕುಂಭಾಶಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗ ಮಂದಿರದಲ್ಲಿ ಜರಗಿದ ಭಂಡಾರ್ಕಾರ್ಸ್ ಕಾಲೇಜಿನ 1986ರ ಬಿಕಾಂ ವಿದ್ಯಾರ್ಥಿಗಳ ಪ್ರಪ್ರಥಮ ಪುನರ್ಮಿಲನದ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಆತ್ಮೀಯ ಮೇಳೈಸುವಿಕೆಯಿಂದ ಗುರು ಶಿಷ್ಯರ ಸಂಬಂಧಕ್ಕೆ ಅರ್ಥ ಹಾಗೂ ಸಾರ್ಥಕ್ಯ ಸಿಗುತ್ತದೆ ೩೧ ವರ್ಷದ ಬಳಿಕ ನಮಗೂ ಹಿಂದಿನ ದಿನವನ್ನು ಮೆಲುಕುವಂತೆ ಮಾಡಿ ಅಭಿಮಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಡಿಗ ಮಿತ್ರ ( ಕದಂ ) ದುಬೈ ಸದಸ್ಯರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರೂ ಇವರ ನೇತ್ರತ್ವದಲ್ಲಿ ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಜು ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ತುಂಗಾ ದೇವಾಡಿಗ ಉದ್ಯಮಿ ಮುಂಬೈ ಇವರು ನೆರವೇರಿಸಿದರು.ವೆಂಕಟರಮಣ ಭಟ್ ನೆಂಪೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು ಯೋಗೀಶ್ ಬಂಕೇಶ್ವರ ಕಿರುತೆರೆ ಕಲಾವಿದರು ಹಾಗೂ ಶ್ರೀಮತಿ ಅಂಬಿಕಾ ರಾಜು ದೇವಾಡಿಗ ತ್ರಾಸಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀ ಮುಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು. ರಾಧಿಕಾ ಎಮ್ ಪೈ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಂಜಿತಾ ಆಚಾರ್ಯ ಇವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮತ್ತು ಉದ್ಘಾಟನಾ ಸಮಾರಂಭ ಇತ್ತಿಚಿಗೆ ಶಾಲೆಯಲ್ಲಿ ನಡೆಯಿತು. ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಉಡುಪ, ಕಾರ್ಯದರ್ಶಿಯಾಗಿ ಕೆ. ವಿ. ಶಾಜಿ ಆಯ್ಕೆಯಾಗಿದ್ದಾರೆ. ಚಂದ್ರ ಬಳೆಗಾರ ಸಹಕಾರ್ಯದರ್ಶಿಯಾಗಿ, ಪವನ ಗಾಣಿಗ ಖಜಾಂಜಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಕೊಲ್ಲೂರು ಗ್ರಾಮ ಪಂಚಾಯತ್ ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೇತ್ರಾವತಿ ಆಚಾರ್ಯ, ಮಾಜಿ ಅಧ್ಯಕ್ಷ ಕೆ.ಎನ್ ವಿಶ್ವನಾಥ ಅಡಿಗ, ಸದಸ್ಯರಾದ ಎಸ್.ಕುಮಾರ್, ಪ್ರೇಮ, ಎಸ್ಡಿಎಂಸಿ ಕೆ.ಎನ್ ಚಂದ್ರ ಶೇಖರ್ ಅಡಿಗ, ಉಪಾಧ್ಯಕ್ಷೆ ಹೇಮಾವತಿ, ಸದಸ್ಯರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಪೂರ್ವಪ್ರಾಥಮಿಕ ಪುಟಾಣಿಗಳು ಶೇರಿಂಗ್ ಡೇ ಯನ್ನು ಸಾಂಕೇತಿಕವಾಗಿ ಆಚರಿಸಿದರು. ಆ ಪ್ರಯುಕ್ತವಾಗಿ ಪುಟಾಣಿಗಳಿಂದ ಹಲವಾರು ಬಗೆಯ ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ ಕಲಿಕಾ ಸಾಮಗ್ರಿಗಳನ್ನು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ, ಸಹ ಶಿಕ್ಷಕಿಯರಾದ ಶ್ವೇತಾ, ವೀಣಾ ಹಾಗೂ ಪುಟಾಣಿಗಳ ಜೊತೆ ಸೇರಿ ಬೇಳೂರು ಸ್ಪೂರ್ತಿಧಾಮಕ್ಕೆ ಕೊಡುಗೆಯಾಗಿ ನೀಡಲಾಯಿತು. ಕೊಡುಗೆಯನ್ನು ಸ್ವೀಕರಿಸಿದ ಸ್ಪೂರ್ತಿಧಾಮದ ಸಿಬ್ಬಂದಿ ವರ್ಗದವರಾದ ಶಶಿಕಲಾ, ಶಾರದಾ ಹಾಗೂ ಶೀನ ಭಂಡಾರಿಯವರು ಮಕ್ಕಳೆಲ್ಲರಿಗೂ ಮನತುಂಬಿ ಹಾರೈಸಿ, ಕೃತಜ್ಞತೆ ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು ಭಾಗದ ಅಭಿವೃದ್ಧಿಯ ಕನಸುಗಾರ, ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ದುಬೈ ಉದ್ಯಮಿ ಸೈಯದ್ ಅಬ್ದುಲ್ ಖಾದರ್ ಬಾಶು (55) ಇಂದು ಹೃದಯಾಘಾತದಿಂದ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೈಯದ್ ಅಬ್ದುಲ್ ಖಾದರ್ ಬಾಶು ಮೂಲತ: ಶಿರೂರಿನವರು. ಅಂತರಾಷ್ಟ್ರೀಯ ಗುಣಮಟ್ಟದ ಗ್ರೀನ್ ವ್ಯಾಲಿ ಪ. ಪೂ ಕಾಲೇಜು ಶಿರೂರು, ದೀನಾ ಶಿಕ್ಷಣ ಸಂಸ್ಥೆ, ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣದ ಮೂಲಕ ಶೈಕ್ಷಣಕ ರಂಗದಲ್ಲಿ ತೊಡಗಿಸಿಕೊಂಡಿದ್ದರೇ, ಬಡವರಿಗೆ ಉಚಿತ ಅಂಬ್ಯುಲೆನ್ಸ್ ಸೇವೆ, ಪ್ರತಿ ಮನೆಗೂ ನೀರಿನ ಸೌಲಭ್ಯ, ಬೀದಿ ದೀಪದ ಸೌಕರ್ಯ ಮುಂತಾದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾಲೇಜು ದಿನಗಳಲ್ಲಿ ಸಂಘಟನಾ ಚಾತುರ್ಯದಿಂದ ನಾಯಕತ್ವ ಗುಣ ಮೈಗೂಡಿಸಿಕೊಂಡವರು. ದುಬೈನಲ್ಲಿ ಉದ್ಯಮಿಯಾಗಿ ಬೆಳೆದ ನಂತರ ತನ್ನೂರಿನ ನಂಟು ಬಿಟ್ಟಿರಲಿಲ್ಲ. ಸರಕಾರಿ ಯೋಜನೆಯನ್ನು ಶಿರೂರು ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಶಿರೂರು ಕರಾವಳಿ ರಸ್ತೆಯ ಸೇತುವೆಗೆ ರಾಜ್ಯ ಸಭಾ ಸದಸ್ಯ ಆಸ್ಕರ್…
