ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಕೃಷಿಕರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಬೈಂದೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಇಲ್ಲಿನ ವಿಶೇಷ ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮಾತನಾಡಿ, ರಾಜ್ಯದ 160 ತಾಲೂಕುಗಳಲ್ಲಿ ಕಳೆದ ಆರು ವರ್ಷದಿಂದ ಭೀಕರ ಬರಗಾಲ ಎದುರಾಗಿದ್ದು ಬೆಳೆಯಿಲ್ಲದೇ ಕೃಷಿಕರು ಕಂಗಲಾಗಿದ್ದಾರೆ, ಜಾನುವಾರುಗಳಿಗೆ ಮೇವು, ನೀರಿಲ್ಲದೆ, ಪರಿತಪಿಸುವಂತಾಗಿದೆ. ಹೀಗಾಗಿ ಕೃಷಿಕರಿಗೆ ಬ್ಯಾಂಕುಗಳಲ್ಲಿ ಮಾಡಿದ ಸಾಲ ಮರುಪಾವತಿ ನಡೆಸಲು ಸಾಧ್ಯವಾಗದೇ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ಕೃಷಿಕರ ಸಂಕಷ್ಟ ಅರಿತ ರಾಜ್ಯ ಸರ್ಕಾರ ಕೃಷಿಕರ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಎಲ್ಲಾ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರ್ಕಾರದ ಸಾಲಮನ್ನಾದಿಂದಾಗಿ ರಾಜ್ಯದ ೫೫ ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದ ಅವರು ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲಮನ್ನಾ ಮಾಡುವಂತೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ರಾಜ್ಯದ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ತಲಾ 50 ಸಾವಿರ ರೂಪಾಯಿಯಂತೆ 24ಲಕ್ಷ ರೈತರ 8,100 ಕೋಟಿಗೂ ಮಿಕ್ಕಿ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿದ್ದು, ಅದೇ ರೀತಿಯಾಗಿ ಇನ್ನುಳಿದ ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರದ ಮೋದಿ ಸರಕಾರವನ್ನು ಒತ್ತಾಯಿಸಿ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕುಂದಾಪುರ ಶಾಖೆಯ ಎದುರು ಕುಂದಾಪುರ ಯುವಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಿ ಕುಂದಾಪುರ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಯುವ ಕಾಂಗ್ರೇಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಮಾತನಾಡಿ ಸ್ವಿಸ್ ಬ್ಯಾಂಕ್‌ನಲ್ಲಿನ ಕಪ್ಪು ಹಣವನ್ನು ತಂದು ದೇಶದ ಪ್ರಜೆಗಳಿಗೆ ತಲಾ ಹದಿನೈದು ಲಕ್ಷದಂತೆ ಹಂಚಲಾಗುವುದು. ಯುವಕರಿಗೆ ವರ್ಷಕ್ಕೆ ೨ಕೋಟಿ ಉದ್ಯೋಗಾವಕಾಶವನ್ನು ಸೃಷ್ಟಿಸಿಲಾಗುವುದು. ಈ ಮೂಲಕ ದೇಶಕ್ಕೆ ಅಚ್ಚೇದಿನ್ ಬರಲಿದೆ ಎಂದು ಮೋದಿಯವರು ಕಳೆದ ಲೋಕಸಭಾ ಚುನಾವಣೆಯ ವೇಳೆ ಹೇಳಿದ್ದರು. ಆದರೆ ಆ ಆಶ್ವಾಸನೆಗಳು ಕೇವಲ ಹೇಳಿಕೆಗಳಾಗಿಯೇ ಉಳಿದುಕೊಂಡವು. ಆದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೀವನದಲ್ಲಿ 20ರತನಕ ಕಲಿಕೆ, 40ರತನಕ ಗಳಿಕೆ, 60ರತನಕ ಬಳಕೆ ನಂತರ ಉಳಿಕೆ ಈ ಸಿದ್ಧಾಂತದಿಂದ ಬದುಕಿ ನಮ್ಮ ನಮ್ಮ ಜೀವನಕ್ಕೊಂದು ಶಿಸ್ತನ್ನು ತುಂಬಿಸಿ ಕೊಳ್ಳ ಬೇಕು. ಹಣದ ಸಂಪಾದನೆಯೊಂದೇ ಸಾರ್ಥಕತೆಯಲ್ಲ. ಜೀವನದಲ್ಲಿ ಆರ್ಥಿಕ ಅಸ್ಸೆಟ್ ಜತೆ ಸ್ನೇಹ ಪ್ರೀತಿ ಭಾಂದವ್ಯದ ಅಸ್ಸೆಟ್ ಇರದಿದ್ದರೆ ಎಂದಿಗೂ ಬದುಕಿನ ಬ್ಯಾಲೆನ್ಸ್ ಶೀಟ್ ತಾಳೆಯಾಗೋದಿಲ್ಲ. ನಮ್ಮ ಜೀವನದ ಮೌಲ್ಯ ಹೆಚ್ಚುವಂತಹ ಭಾವನಾತ್ಮಕ ಸಂಪತ್ತೂ ಸಹ ಅತೀ ಅಗತ್ಯ ಎಂದು ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದ ನಿರ್ವತ್ತ ಉಪನ್ಯಾಸಕ ಮೋಹನ್ ದಾಸ್ ಪೈಯವರು ಹೇಳಿದರು. ಇಲ್ಲಿನ ಕುಂಭಾಶಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗ ಮಂದಿರದಲ್ಲಿ ಜರಗಿದ ಭಂಡಾರ್ಕಾರ್ಸ್ ಕಾಲೇಜಿನ 1986ರ ಬಿಕಾಂ ವಿದ್ಯಾರ್ಥಿಗಳ ಪ್ರಪ್ರಥಮ ಪುನರ್ಮಿಲನದ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಆತ್ಮೀಯ ಮೇಳೈಸುವಿಕೆಯಿಂದ ಗುರು ಶಿಷ್ಯರ ಸಂಬಂಧಕ್ಕೆ ಅರ್ಥ ಹಾಗೂ ಸಾರ್ಥಕ್ಯ ಸಿಗುತ್ತದೆ ೩೧ ವರ್ಷದ ಬಳಿಕ ನಮಗೂ ಹಿಂದಿನ ದಿನವನ್ನು ಮೆಲುಕುವಂತೆ ಮಾಡಿ ಅಭಿಮಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಡಿಗ ಮಿತ್ರ ( ಕದಂ ) ದುಬೈ ಸದಸ್ಯರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರೂ ಇವರ ನೇತ್ರತ್ವದಲ್ಲಿ ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಜು ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ತುಂಗಾ ದೇವಾಡಿಗ ಉದ್ಯಮಿ ಮುಂಬೈ ಇವರು ನೆರವೇರಿಸಿದರು.ವೆಂಕಟರಮಣ ಭಟ್ ನೆಂಪೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು ಯೋಗೀಶ್ ಬಂಕೇಶ್ವರ ಕಿರುತೆರೆ ಕಲಾವಿದರು ಹಾಗೂ ಶ್ರೀಮತಿ ಅಂಬಿಕಾ ರಾಜು ದೇವಾಡಿಗ ತ್ರಾಸಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀ ಮುಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು. ರಾಧಿಕಾ ಎಮ್ ಪೈ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಂಜಿತಾ ಆಚಾರ್ಯ ಇವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮತ್ತು ಉದ್ಘಾಟನಾ ಸಮಾರಂಭ ಇತ್ತಿಚಿಗೆ ಶಾಲೆಯಲ್ಲಿ ನಡೆಯಿತು. ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಉಡುಪ, ಕಾರ್ಯದರ್ಶಿಯಾಗಿ ಕೆ. ವಿ. ಶಾಜಿ ಆಯ್ಕೆಯಾಗಿದ್ದಾರೆ. ಚಂದ್ರ ಬಳೆಗಾರ ಸಹಕಾರ್ಯದರ್ಶಿಯಾಗಿ, ಪವನ ಗಾಣಿಗ ಖಜಾಂಜಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಕೊಲ್ಲೂರು ಗ್ರಾಮ ಪಂಚಾಯತ್ ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೇತ್ರಾವತಿ ಆಚಾರ್ಯ, ಮಾಜಿ ಅಧ್ಯಕ್ಷ ಕೆ.ಎನ್ ವಿಶ್ವನಾಥ ಅಡಿಗ, ಸದಸ್ಯರಾದ ಎಸ್.ಕುಮಾರ್, ಪ್ರೇಮ, ಎಸ್‌ಡಿಎಂಸಿ ಕೆ.ಎನ್ ಚಂದ್ರ ಶೇಖರ್ ಅಡಿಗ, ಉಪಾಧ್ಯಕ್ಷೆ ಹೇಮಾವತಿ, ಸದಸ್ಯರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಪೂರ್ವಪ್ರಾಥಮಿಕ ಪುಟಾಣಿಗಳು ಶೇರಿಂಗ್ ಡೇ ಯನ್ನು ಸಾಂಕೇತಿಕವಾಗಿ ಆಚರಿಸಿದರು. ಆ ಪ್ರಯುಕ್ತವಾಗಿ ಪುಟಾಣಿಗಳಿಂದ ಹಲವಾರು ಬಗೆಯ ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ ಕಲಿಕಾ ಸಾಮಗ್ರಿಗಳನ್ನು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ, ಸಹ ಶಿಕ್ಷಕಿಯರಾದ ಶ್ವೇತಾ, ವೀಣಾ ಹಾಗೂ ಪುಟಾಣಿಗಳ ಜೊತೆ ಸೇರಿ ಬೇಳೂರು ಸ್ಪೂರ್ತಿಧಾಮಕ್ಕೆ ಕೊಡುಗೆಯಾಗಿ ನೀಡಲಾಯಿತು. ಕೊಡುಗೆಯನ್ನು ಸ್ವೀಕರಿಸಿದ ಸ್ಪೂರ್ತಿಧಾಮದ ಸಿಬ್ಬಂದಿ ವರ್ಗದವರಾದ ಶಶಿಕಲಾ, ಶಾರದಾ ಹಾಗೂ ಶೀನ ಭಂಡಾರಿಯವರು ಮಕ್ಕಳೆಲ್ಲರಿಗೂ ಮನತುಂಬಿ ಹಾರೈಸಿ, ಕೃತಜ್ಞತೆ ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು ಭಾಗದ ಅಭಿವೃದ್ಧಿಯ ಕನಸುಗಾರ, ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ದುಬೈ ಉದ್ಯಮಿ ಸೈಯದ್ ಅಬ್ದುಲ್ ಖಾದರ್ ಬಾಶು (55) ಇಂದು ಹೃದಯಾಘಾತದಿಂದ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೈಯದ್ ಅಬ್ದುಲ್ ಖಾದರ್ ಬಾಶು ಮೂಲತ: ಶಿರೂರಿನವರು. ಅಂತರಾಷ್ಟ್ರೀಯ ಗುಣಮಟ್ಟದ ಗ್ರೀನ್ ವ್ಯಾಲಿ ಪ. ಪೂ ಕಾಲೇಜು ಶಿರೂರು, ದೀನಾ ಶಿಕ್ಷಣ ಸಂಸ್ಥೆ, ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣದ ಮೂಲಕ ಶೈಕ್ಷಣಕ ರಂಗದಲ್ಲಿ ತೊಡಗಿಸಿಕೊಂಡಿದ್ದರೇ, ಬಡವರಿಗೆ ಉಚಿತ ಅಂಬ್ಯುಲೆನ್ಸ್ ಸೇವೆ, ಪ್ರತಿ ಮನೆಗೂ ನೀರಿನ ಸೌಲಭ್ಯ, ಬೀದಿ ದೀಪದ ಸೌಕರ್ಯ ಮುಂತಾದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾಲೇಜು ದಿನಗಳಲ್ಲಿ ಸಂಘಟನಾ ಚಾತುರ್ಯದಿಂದ ನಾಯಕತ್ವ ಗುಣ ಮೈಗೂಡಿಸಿಕೊಂಡವರು. ದುಬೈನಲ್ಲಿ ಉದ್ಯಮಿಯಾಗಿ ಬೆಳೆದ ನಂತರ ತನ್ನೂರಿನ ನಂಟು ಬಿಟ್ಟಿರಲಿಲ್ಲ. ಸರಕಾರಿ ಯೋಜನೆಯನ್ನು ಶಿರೂರು ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಶಿರೂರು ಕರಾವಳಿ ರಸ್ತೆಯ ಸೇತುವೆಗೆ ರಾಜ್ಯ ಸಭಾ ಸದಸ್ಯ ಆಸ್ಕರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಕಾಡುತ್ತಿದ್ದು ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ. ಅಪಘಾತ ಅಥವಾ ಹೆರಿಗೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ನೀಡಿದ ರಕ್ತವನ್ನು ರೋಗಿಗಳಿಗೆ ನೀಡಲಾಗುತ್ತದೆ. ಕುಂದಾಪುರದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮೂಲಕ ಸುಮಾರು ೧.೭೫ ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಿರುವ ರಕ್ತನಿಧಿ ಕೇಂದ್ರದ ಮೂಲಕ ಸುಮಾರು ೧೦೦ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರೋಗಿಗಳಿಗೆ ರಕ್ತವನ್ನು ನೀಡುವ ಕಾರ್ಯ ನಡೆಸುತ್ತಿದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಘಟಕದ ಚೇರ್‌ಮೆನ್ ಎಸ್.ಜಯಕರ ಶೆಟ್ಟಿ ಹೇಳಿದರು. ಅವರು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ. ವಿಠಲ ಭಾಸ್ಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿಯರ ಕಛೇರಿ ಬೈಂದೂರು ಹಾಗೂ ಕ್ಷೇತ್ರ ನಮನ್ವಯಾಧಿಕಾರಿಯವರ ಕಛೇರಿ ಬೈಂದೂರು ಮತ್ತು ರತ್ತುಬ್ಯಾ ಪ್ರೌಢಶಾಲೆ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಇವರ ಸಹಯೋಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬೈಂದೂರಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಣೆಗೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್ ಮಾತನಾಡಿ ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ನೀಡಿದೆ ಅದಕ್ಕಾಗಿ ಪ್ರಕೃತಿಗೆ ಸದಾ ಋಣಿಯಾಗಿರಬೇಕು ಅದು ಗಿಡಗಳನ್ನು ನೆಡುವುದರ ಮೂಲಕ ಸಲ್ಲಿಸಬೇಕು ಎಂದರು. ಸಮರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಯವರಾದ ಅಬ್ದೂಲ್ ರವೂಪ್ ವಲಯ ಉಪ ಅರಣ್ಯಾಧಿಕಾರಿಯವರಾದ ಸದಾಶಿವ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಅಧಿಕ್ಷಕರಾದ ಕೃಷ್ಣಮೂರ್ತಿ ನಾಯಕ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಸುಧಾಕರ ದೇವಾಡಿಗ, ಮಾದರಿ ಶಾಲೆ ಬೈಂದೂರಿನ ಪದವೀಧರ ಮುಖೋಪಾಧ್ಯಾಯರಾದ ಜನಾರ್ಧನ ಶಿಕ್ಷಕರಾದ ಗಣಪತಿ ಹೋಬಳಿದಾರ್ ಅರಣ್ಯ ರಕ್ಷಕರಾದ ಸವಿತಾ, ಅರಣ್ಯ ವೀಕ್ಷಕರಾದ ರವಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ರತ್ತುಬ್ಯಾ ಪ್ರೌಢಶಾಲೆಯ ಗ್ರೀನ್ ಲ್ಯಾಂಡ್ ಇಕೋ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯ ತಿಂಗಳ ಕಾರ್ಯಕ್ರಮದಲ್ಲಿ ೨೦೧೬-೧೭ ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಮಾಸ್ಟರ್ ಪ್ರಜ್ವಲ್ (೬೧೨ / ೬೨೫) ರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಎಮ್. ರತ್ನಾಕರ ಪೈ ವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್, ಪ್ರಭಾಕರ ಮಧ್ಯಸ್ತ, ಶ್ರೀಮತಿ ವಸಂತಿ ಆರ್. ಪಂಡಿತ್ ಉಪಸ್ಥಿತರಿದ್ದರು. ಪಿ. ಜಯವಂತ ಪೈ ವಂದಿಸಿದರು. ಅನಂತರ ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿ, ಕುಂದಾಪುರ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಅಕಾಡೆಮಿ ಬಳಗದ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು.
